Breaking News

ಜಿಲ್ಲೆ

ರೈತರಿಗೆ ಕೂಡಲೇ ರಸಗೊಬ್ಬರ ಪೂರೈಸಿ: ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ’ ಕೃಷಿ ಅಭಿಯಾನಕ್ಕೆ ಹಸಿರು ನಿಶಾನೆ ತೋರಿಸಿದ ಶಾಸಕ ಬಾಲಚಂದ್ರ ಗೋಕಾಕ: ಗೋಕಾಕ ಮತ್ತು ಮೂಡಲಗಿ ತಾಲೂಕುಗಳಲ್ಲಿ ಈ ಬಾರಿ ಉತ್ತಮ ಮಳೆಯಾಗುತ್ತಿದ್ದು, ರೈತರಿಗೆ ಅಗತ್ಯವಿರುವ ರಸಗೊಬ್ಬರವನ್ನು ಸಮರ್ಪಕವಾಗಿ ಪೂರೈಕೆ ಮಾಡುವಂತೆ ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಕೃಷಿ ಇಲಾಖೆಯಿಂದ ಇತ್ತೀಚೆಗೆ ಗೋಕಾಕದಲ್ಲಿ ಹಮ್ಮಿಕೊಂಡಿದ್ದ “ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ” ಎಂಬ ಕೃಷಿ …

Read More »

ಯಡಿಯೂರಪ್ಪರನ್ನು ತೆಗೆದರೆ ಬಿಜೆಪಿ ಹಾಳಾಗುತ್ತದೆ ಅನ್ನೋಕೆ ಶಾಮನೂರು, ಎಂ.ಬಿ.ಪಾಟೀಲ ಯಾರು?: ಬಸನಗೌಡ ಪಾಟೀಲ ಯತ್ನಾಳ

ವಿಜಯಪುರ: ಯಡಿಯೂರಪ್ಪ ಪರವಾಗಿ ಮಾತನಾಡುವ ನೈತಿಕತೆ ಕಾಂಗ್ರೆಸ್ ಲಿಂಗಾಯತ ನಾಯಕರಿಗಿಲ್ಲ. ಯಡಿಯೂರಪ್ಪ ಅವರನ್ನು ತೆಗೆದರೆ ಬಿಜೆಪಿ ಹಾಳಾಗುತ್ತದೆ ಅನ್ನೋಕೆ ಶಾಮನೂರು, ಎಂ.ಬಿ.ಪಾಟೀಲ ಯಾರು? ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪ್ರಶ್ನಿಸಿದರು. ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬದಲಾವಣೆ ಮಾಡೋದು ಬಿಜೆಪಿ‌ ಹೈಕಮಾಂಡ್ ಕೈಯಲ್ಲಿದೆ. ಬಿಜೆಪಿ ನಾಯಕತ್ವ, ಆಂತರಿಕ ವಿಚಾರದ ಬಗ್ಗೆ ಮಾತನಾಡೋಕೆ‌ ಇವರ್ಯಾರು ಎಂದರು.‌ ಲಿಂಗಾಯತರ ಮೂಲಕ ಬಿಜೆಪಿಯನ್ನ ಮುಗಿಸುವುದಕ್ಕೆ ಕಾಂಗ್ರೆಸ್ ಯೋಜನೆ …

Read More »

ಜನರ ಸಮಸ್ಯೆಗೆ ಸ್ಪಂದಿಸುವುದೇ ನಮ್ಮ ಗುರಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ

ಸವದತ್ತಿ: ಲೋಕಸಭಾ ಉಪಚುನಾವಣೆಯಲ್ಲಿ ಸೋತರೂ ಕೂಡ ಜನರ ಮನಸ್ಸಿನಲ್ಲಿ ನಾವಿದ್ದೇವೆ. ಕ್ಷೇತ್ರದ ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಜನರ ಸಮಸ್ಯೆಗೆ ಸ್ಪಂದಿಸುವುದೇ ನಮ್ಮ ಗುರಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು. ಮತಕ್ಷೇತ್ರದ ಸತ್ತಿಗೇರಿ,ಸೊಪಡ್ಲಾ, ಯರಗಟ್ಟಿ ಹಾಗೂ ಇಟ್ನಾಳ ಗ್ರಾಮಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಇಂದು (ಮಂಗಳವಾರ) ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭ ಹಾಗೂ ಕುಂದುಕೊರತೆಗಳ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅವರು ಮಾತನಾಡಿದರು. ಗ್ರಾಮದ ಜನರಿಗೆ ಖುದ್ದಾಗಿ ಭೇಟಿಯಾಗಿ ಧನ್ಯವಾದ ಸಲ್ಲಿಸಲು …

Read More »

ಶ್ರೀದೇವಿ ಇನ್ಸೂರೆನ್ಸ್ ಜೋನ್ ಉದ್ಘಾಟಸಿದ ಸತೀಶ್ ಜಾರಕಿಹೊಳಿ

ಸವದತ್ತಿ:ಕೆಪಿಸಿಸಿ ಕಾರ್ಯಾಧಕ್ಷ ಸತೀಶ ಜಾರಕಿಹೋಳಿ ಅವರು ಹಾಗೂ ಸವದತ್ತಿ ತಾಲೂಕಿನ ಕಾಂಗ್ರೆಸ್ ಮುಖಂಡ ಪಂಚನಗೌಡ ದ್ಯಾಮನಗೌಡ ಅವರ ನೇತೃತ್ವದಲ್ಲಿ ಯರಗಟ್ಟಿಯಲ್ಲಿ ಶ್ರೀದೇವಿ ಇನ್ಸೂರೆನ್ಸ್ ಜೋನ್ ಉದ್ಘಾಟನೆಯ ಮಾಡಲಾಯಿತು ಹಾಗೂ ಹೊಲಸೇಲ್ ಕಿರಾಣಿ ಅಂಗಡಿಯನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಸವದತ್ತಿ ತಾಲೂಕಿನ ಕಾಂಗ್ರೆಸ್ ಮುಖಂಡರು ಪಂಚನಗೌಡ ದ್ಯಾಮನಗೌಡರ, ರವೀಂದ್ರ ಯಲಿಗಾರ, ವಿಶ್ವಾಸ ವೈದ್ಯ, ಸವದತ್ತಿ ತಾಲೂಕಿನ ಯುವ ನಾಯಕರು ಆಗಿರುವ ಗೌತಮ ದ್ಯಾಮನಗೌಡರ ಮಲ್ಲು ಜಕಾತಿ,D.D. ಟೋಪೋಜಿ, ಯಶವಂತ ಯಲಿಗಾರ, ಈರಣ್ಣ …

Read More »

ಗಣಿಗಾರಿಕೆಯಿಂದ ಬಿರುಕು ಬಿಟ್ಟಿರುವ ಮನೆಗಳು;ಪರಿಹಾರಕ್ಕೆ ಆಗ್ರಹ.

ಮದ್ದೂರು: ಕಲ್ಲು ಗಣಿಗಾರಿಕೆಯಿಂದ ಬಿರುಕು ಬಿಟ್ಟಿರುವ ಮನೆಗಳಿಗೆ ಡಿಬಿಎಲ್‌ ಕಂಪನಿ ವಿರುದ್ಧ ಪರಿಹಾರ ನೀಡುತ್ತಿಲ್ಲ ಎಂದು ಆರೋಪಿಸಿ ಚಂದಹಳ್ಳಿದೊಡ್ಡಿ ಗ್ರಾಮಸ್ಥರು ತಾಲೂಕು ಕಚೇರಿ ಬಳಿ ಪ್ರತಿಭಟನೆ ನಡೆಸಿ ಶಿರಸ್ತೇದಾರ್‌ ರೂಪಾ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಪಟ್ಟಣದ ತಾಲೂಕು ಕಚೇರಿ ಬಳಿ ಜಮಾಯಿಸಿದ ಗ್ರಾಮದಮಹಿಳೆಯರು ತಾಲೂಕು ಆಡಳಿತ ಹಾಗೂ ದಿಲೀಪ್‌ ಬಿಲ್ಡ್‌ ಖಾನ್‌ ಕಂಪನಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರಲ್ಲದೇ ಕೂಡಲೇ ಹಾನಿಗೊಳಗಾದ ಮನೆಗಳಿಗೆ ಪರಿಹಾರ ನೀಡುವಂತೆ ಆಗ್ರಹಿಸಿದರು. ಬೆಳೆ ಬೆಳೆಯಲು ಕಷ್ಟ: ಮೈಸೂರು, …

Read More »

ಬಿಎಸ್​ವೈ ಜಾತಿಯಿಂದ ಲಿಂಗಾಯತರು. ಆದರೆ ಅವರು ಮಾಸ್ ಲೀಡರ್; ಸಿಎಂ ಪರ ಮಠಾಧೀಶರು ಬ್ಯಾಟಿಂಗ್.

ಚಿತ್ರದುರ್ಗ: ಜಿಲ್ಲೆಯ ಮುರುಘಾಮಠದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವಿವಿಧ ಮಠಾಧೀಶರು ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪರ ಬ್ಯಾಟಿಂಗ್ ಬೀಸಿದ್ದಾರೆ. ಯಡಿಯೂರಪ್ಪ ಈ ನಾಡು ಕಂಡಂತಹ ಶ್ರೇಷ್ಠ ನಾಯಕ. ನಾಲ್ಕು ಭಾರಿ ಮುಖ್ಯಮಂತ್ರಿಯಾಗಿದ್ದಾರೆ. ಕೊರೊನಾ ಸಂದರ್ಭದಲ್ಲಿ ಉತ್ಸಾಹಭರಿತವಾಗಿ ಕೆಲಸ ಮಾಡಿದ್ದಾರೆ. ಕೊರೊನಾ ಕಾಲದ ಸಂಕಷ್ಟವನ್ನ ನಿಭಾಸಿದ್ದಾರೆ. ಕೇಂದ್ರ ಸರ್ಕಾರ ಬಿಎಸ್​ವೈ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ ಎಂದು ಮುರುಘಾ ಶ್ರೀಗಳು ಅಭಿಪ್ರಾಯಪಟ್ಟಿದ್ದಾರೆ. ಬಿಎಸ್​ವೈ ಜಾತಿಯಿಂದ ಲಿಂಗಾಯತರು. ಆದರೆ ಅವರು ಮಾಸ್ ಲೀಡರ್. ಅವರು ಯಾವುದೇ …

Read More »

ವಿದ್ಯಾಭ್ಯಾಸಕ್ಕಾಗಿ ಹುಟ್ಟುರು ಬಿಟ್ಟು ಬಂದಿದ ಅಣ್ಣ ತಂಗಿ, ರಾತ್ರೊ ರಾತ್ರಿ ಶವವಾದರು.

ನೆಲಮಂಗಲ: ಧಾರಾಕಾರ ಮಳೆಯಿಂದಾಗಿ ಮನೆ ಮೇಲೆ ಪಕ್ಕದ ಗೋಡೆ ಕುಸಿದು ಬಿದ್ದು, ಸ್ಥಳದಲ್ಲೇ ಅಣ್ಣ-ತಂಗಿ ಇಬ್ಬರೂ ಮೃತಪಟ್ಟ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ನಗರದ ಬಿನ್ನಮಂಗಲ ಗ್ರಾಮದಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ. ವೇಣುಗೋಪಾಲ(22) ಮತ್ತು ಕಾವ್ಯ(20) ಮೃತ ದುರ್ದೈವಿಗಳು. ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಸಿ.ಎಸ್.ಪುರ ಮೂಲದ ಅಣ್ಣ-ತಂಗಿ ಇಬ್ಬರೂ ವಿದ್ಯಾಭ್ಯಾಸದ ಸಲುವಾಗಿ ನೆಲಮಂಗಲದಲ್ಲಿ ಹನುಮಂತರಾಯಪ್ಪ ಎಂಬುವರಿಗೆ ಸೇರಿದ ಸೀಟಿನ ಮನೆಯಲ್ಲಿ ಬಾಡಿಗೆಗೆ ವಾಸವಿದ್ದರು. ಸೋಮವಾರ ರಾತ್ರಿ ಎಂದಿನಂತೆ ಊಟ …

Read More »

ಕೆಸರು ಗದ್ದೆಯಂತಿದ್ದ ರಸ್ತೆ ದಾಟಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು!

ಮೈಸೂರು: ಜುಲೈ 19ರಂದು ರಾಜ್ಯಾದ್ಯಂತ ಎಸ್‌ಎಸ್‌ಎಲ್ ಸಿ ಪರೀಕ್ಷೆಗಳು ಯಶಸ್ವಿಯಾಗಿ ನಡೆದಿವೆ. ಗಣಿತ, ಸಮಾಜ ವಿಜ್ಞಾನ ಮತ್ತು ವಿಜ್ಞಾನ ಪರೀಕ್ಷೆ ಮುಗಿದಿದ್ದು, ಜುಲೈ 22 ರಂದು ಕನ್ನಡ, ಹಿಂದಿ, ಇಂಗ್ಲಿಷ್ ಸೇರಿದಂತೆ ಭಾಷಾ ವಿಷಯಗಳ ಪರೀಕ್ಷೆ ನಡೆಯಲಿದೆ. ಸದ್ಯ ನಿನ್ನೆ ನಡೆದ ಪರೀಕ್ಷೆ ವೇಳೆ ಆದ ಘಟನೆಯೊಂದು ಭಾರಿ ಸುದ್ದಿಯಾಗಿದೆ. ಶಿಕ್ಷಣ ಸಚಿವರು, ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ. ನಿನ್ನೆ ಎಸ್‌ಎಸ್‌ಎಲ್ಸಿ ಪರೀಕ್ಷೆ ಯಶಸ್ವಿಯಾಗಿ ಮುಗಿದಿದೆ. ಆದರೆ …

Read More »

ಸಿಎಂ ಹುದ್ದೆಗೆ ಏರೋದಕ್ಕೆ ಲಾಭಿ ಆರಂಭ! ಈ ರೇಸ್ ನಲ್ಲಿ ಯಾರ ಇದ್ದಾರೆ ನೋಡಿ.

ಬೆಂಗಳೂರು : ರಾಜ್ಯದಲ್ಲಿ ಜುಲೈ.26ರ ಲೆಕ್ಕಾಚಾರ ಗರಿಗೆದರಿದೆ. ಸಿಎಂ ಬದಲಾವಣೆ ಬಹುತೇಕ ಫಿಕ್ಸ್ ಎಂದೇ ಹೇಳಲಾಗುತ್ತಿದೆ. ಈ ಹಿನ್ನಲೆಯಲ್ಲಿ ಸಿಎಂ ಹುದ್ದೆಗೆ ಏರೋದಕ್ಕೆ ಲಾಭಿ ಆರಂಭಗೊಂಡಿದ್ದು, ಈ ರೇಸ್ ನಲ್ಲಿ ಬಿಜೆಪಿಯ ಹಾಲಿ ಸಚಿವರು, ಶಾಸಕರು ತೆರೆ ಮರೆಯಲ್ಲಿ ಲಾಭಿ ನಡೆಸುತ್ತಿದ್ದಾರೆ. ಅದರಲ್ಲೂ ಲಿಂಗಾಯತ ಸಮುದಾಯದ ಅನೇಕ ಹೆಸರುಗಳು ಸಿಎಂ ಪಟ್ಟದ ರೇಸ್ ನಲ್ಲಿ ಮುಂಚೂಣಿಯಲ್ಲಿ ಕೇಳಿ ಬರುತ್ತಿದೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ದೆಹಲಿಯ ಪ್ರವಾಸದಲ್ಲಿ ಅನಾರೋಗ್ಯದ ನೆಪದಿಂದಾಗಿ ತಮ್ಮ …

Read More »

ಬೆಳಗಾವಿಯ ಬಿಜೆಪಿ ಗೌಪ್ಯ ಸಭೆಯಲ್ಲಿ ನಡಿತಾ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಚರ್ಚೆ?

ಬೆಳಗಾವಿ: ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲೇ ಆಡಳಿತಾರೂಢ ಬಿಜೆಪಿ ಪ್ರಮುಖರ ಸಭೆ ಇಲ್ಲಿ ಸೋಮವಾರ ಜರುಗಿದೆ. ಬೆಳಗಾವಿ ಹಾಗೂ ಚಿಕ್ಕೋಡಿ ಸಂಘಟನಾತ್ಮಕ ಜಿಲ್ಲೆಗಳ ಪಕ್ಷದ ಪ್ರಮುಖರ ಸಭೆ ಗೌಪ್ಯವಾಗಿ ನಡೆದಿರುವುದು ಹಲವು ವಿಶ್ಲೇಷಣೆಗೆ ಮತ್ತು ಚರ್ಚೆಗಳಿಗೆ ಗ್ರಾಸವಾಗಿದೆ. ಪಕ್ಷದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಅರುಣ್‌ಕುಮಾರ್ ನೇತೃತ್ವದಲ್ಲಿ ನಡೆದ ಚರ್ಚೆಯಲ್ಲಿ ಸಚಿವ ಉಮೇಶ ಕತ್ತಿ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಶಾಸಕರಾದ ಮಹೇಶ ಕುಮಠಳ್ಳಿ, ದುರ್ಯೋಧನ ಐಹೊಳೆ, …

Read More »