Breaking News

ಜಿಲ್ಲೆ

ಸತೀಶ ಜಾರಕಿಹೊಳಿ ಪೌಂಡೇಶನ್‌ ದಿಂದ ಸ್ಪರ್ಧಾತ್ಮಕ ಪರೀಕ್ಷೆಗೆ ಉಚಿತ ತರಬೇತಿ

ಬೆಳಗಾವಿ: ಕೆಪಿಸಿಸಿ ಕಾರ್ಯಾಧ್ಯಕ್ಷ , ಶಾಸಕ ಸತೀಶ್‌ ಜಾರಕಿಹೊಳಿ  ಬಡ ವಿದ್ಯಾರ್ಥಿಗಳ ಶಿಕ್ಷಣ, ಕ್ರೀಡೆಗೆ ವಿಶೇಷ ಒತ್ತು ನೀಡಿದ್ದಾರೆ. ಈ ನಿಟ್ಟಿನಲ್ಲಿ ಬಡವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಸತೀಶ್‌ ಜಾರಕಿಹೊಳಿ ಪೌಂಡೇಶನ್‌ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ತರಬೇತಿ ನೀಡುವ  ಮಹತ್ವದ  ಕಾರ್ಯವನ್ನು ಹಮ್ಮಿಕೊಂಡಿದ್ದಾರೆ. ದ್ವೀತಿಯ ಪಿಯುಸಿ ತೇರ್ಗಡೆಯಾಗಿ ಸೈನಿಕರಾಗಿ ದೇಶಸೇವೆ  ಮತ್ತು  ಪೊಲೀಸ್‌  ಇಲಾಖೆಗೆ ಸೇರಿ ರಾಜ್ಯದಲ್ಲಿ ಸೇವೆ ಸಲ್ಲಿಸಬೇಕು ಎನ್ನುವವರಿಗೆ ಈ ತರಬೇತಿ ನೀಡಲಾಗುತ್ತಿದೆ. ತರಬೇತಿ ಅವಧಿಯಲ್ಲಿ ಲಿಖಿತ  …

Read More »

ಹೆಬ್ಬಾಳ ಜಿಪಂ. ವ್ಯಾಪ್ತಿಯ ಹಲವು ಗ್ರಾಮಗಳ ವಿವಿಧ ಕಾಮಗಾರಿಗೆ ಸತೀಶ್‌ ಜಾರಕಿಹೊಳಿ ಚಾಲನೆ

ಬೆಳಗಾವಿ : ಹೆಬ್ಬಾಳ ಜಿಲ್ಲಾ ಪಂಚಾಯ್ತಿ  ವ್ಯಾಪ್ತಿಯ ಅರ್ಜುನವಾಡ, ಕುರಣಿವಾಡಿ, ಹಂಚನಾಳ ಸೇರಿದಂತೆ ಹಲವು ಗ್ರಾಮಗಳ ವಿವಿಧ ಕಾಮಗಾರಿ ಹಾಗೂ ನೂತನ ಕಟ್ಟಡಗಳ ಉದ್ಘಾಟನೆಯನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್‌ ಜಾರಕಿಹೊಳಿ ಸೋಮವಾರ  ನೆರವೇರಿಸಿದರು. ಅರ್ಜುನವಾಡ ಗ್ರಾಮದಲ್ಲಿ ಶಾಸಕರ ಅನುದಾನದಡಿಯಲ್ಲಿ ನಿರ್ಮಾಣಗೊಂಡ ಸಮುದಾಯ ಭವನ, ಅಂಗನವಾಡಿ ನೂತನ ಕಟ್ಟಡ ಉದ್ಘಾಟಿಸಿದರು. ಬಳಿಕ ಹುಕ್ಕೇರಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು. ತದನಂತರ ಅಂಬೇಡ್ಕರ್‌ ಸಮುದಾಯ ಭವನಕ್ಕೆ ಕುರ್ಚಿ, ಸೌಂಡ್‌ ಸಿಸ್ಟಮ್‌ ವಿತರಿಸಿದರು. …

Read More »

ಜೋಡೆತ್ತುಗಳ ಪ್ರದರ್ಶನಕ್ಕೆ ಚಾಲನೆ ನೀಡಿದ ರಾಹುಲ್ ಜಾರಕಿಹೊಳಿ

ಗೋಕಾಕ : ತಾಲ್ಲೂಕಿನ ಬೆನಚಿನಮರಡಿ ಗ್ರಾಮದಲ್ಲಿ ಭೀರಸಿದ್ದೇಶ್ವರ ಜಾತ್ರಾ ಮಹೋತ್ಸದ ಅಂಗವಾಗಿ ಏರ್ಪಡಿಸಿದ ಜೋಡು ಎತ್ತುಗಳ ಪ್ರದರ್ಶನಕ್ಕೆ ಯುವ ನಾಯಕ ರಾಹುಲ್ ಜಾರಕಿಹೊಳಿ ಸೋಮವಾರ ಚಾಲನೆ ನೀಡಿದರು. ತಾಲ್ಲೂಕಿನ ಸುತ್ತಮುತ್ತಲಿನ  ಗ್ರಾಮದ ರೈತರು ಪ್ರದರ್ಶನಕ್ಕೆ ತಂದಿರುವ ಎತ್ತುಗಳನ್ನು ಯುವ ನಾಯಕ ರಾಹುಲ್‌ ಜಾರಕಿಹೊಳಿ ವೀಕ್ಷಣೆ ಮಾಡಿದರು. ಬಳಿಕ ಮಾತನಾಡಿದ ಅವರು, ರೈತರು ಎತ್ತುಗಳನ್ನು ದೇವರು ರೂಪದಲ್ಲಿ ಪೂಜಿಸುತ್ತಾರೆ. ಅವುಗಳನ್ನು ತಮ್ಮ ಮಕ್ಕಳ ರೀತಿಯಲ್ಲಿ ಸಾಕಿದ್ದಾರೆ ಎಂದರು. ರೈತರು ತಮ್ಮ ಎತ್ತುಗಳನ್ನು …

Read More »

ಶೈಕ್ಷಣಿಕ ಅಭಿವೃದ್ಧಿಗೆ ಜೀವನವನ್ನೇ ಮುಡಿಪಾಗಿಟ್ಟ ಅಕ್ಷರ ತಾಯಿ ಸಾವಿತ್ರಿ ಬಾಯಿ ಫುಲೆ: ವಿವೇಕ್ ಜತ್ತಿ

ಗೋಕಾಕ: ಭಾರತ ದೇಶದ ಪ್ರಪ್ರಥಮ ಮಹಿಳಾ ಶಿಕ್ಷಕಿ ,  ಅಕ್ಷರ ತಾಯಿ ಸಾವಿತ್ರಿ ಬಾಯಿ ಫುಲೆಯವರ  191 ನೇ ಜಯಂತಿಯನ್ನು ಇಂದು ಇಲ್ಲಿನ ಹಿಲ್‌ ಗಾರ್ಡನ್‌ ನಲ್ಲಿ  ಆಚರಿಸಲಾಯಿತು. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ಭಾವಚಿತ್ರಕ್ಕೆ  ಪುಷ್ಟ ಅರ್ಪಿಸಿ, ಗೌರವ ಸಲ್ಲಿಸಲಾಯಿತು. ಈ ವೇಳೆ ಕಾಂಗ್ರೆಸ್‌ ಮುಂಖಡ   ವಿವೇಕ್ ಜತ್ತಿ ಮಾತನಾಡಿ,   ಆಗಿನ ಕಾಲದ ಸಾಮಾಜಿಕ, ಸಮಾನತೆ, ದೀನ ದಲಿತರ, ಹಿಂದುಳಿದವರ ಶೈಕ್ಷಣಿಕ ಅಭಿವೃದ್ಧಿಗೆ ತಮ್ಮ ಜೀವನವನ್ನೇ …

Read More »

ನೂತನ ವಿಧಾನ ಪರಿಷತ್‌ ಸದಸ್ಯ ಲಖನ್‌ ಜಾರಕಿಹೊಳಿ ಮನೆಗೆ ಶ್ರೀಪ್ರಸನ್ನಾನಂದಪುರಿ ಸ್ವಾಮೀಜಿ ಭೇಟಿ

ಗೋಕಾಕ :  ನೂತನ ವಿಧಾನಪರಿಷತ್‌ ಸದಸ್ಯ ಲಖನ್‌ ಜಾರಕಿಹೊಳಿ ನಿವಾಸಕ್ಕೆ ಹರಿಹರ ತಾಲ್ಲೂಕಿ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀಪ್ರಸನ್ನಾನಂದಪುರಿ ಸ್ವಾಮೀಜಿ ಭಾನುವಾರ ಭೇಟಿ ನೀಡಿ, ಸತ್ಕರಿಸಿ ಆಶೀರ್ವಾದ ಮಾಡಿದರು. ಸಣ್ಣ ವಯಸ್ಸಿನಲ್ಲಿಯೇ ವಿಧಾನಪರಿಷತ್‌ ಪ್ರವೇಶ ಮಾಡಿರುವುದು ಸಂತಸದ ವಿಷಯ. ಬಡವರ ಪರ ಕೆಲಸ ಮಾಡುವ ಅವಕಾಶ ದೊರೆತು ಬಂದಿದೆ. ಜನರು ತಮ್ಮ ಮೇಲೆ ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದಾರೆ, ಬಡ ಜನರ ಪರ ಕೆಲಸ ಮಾಡುವಂತೆ ಸಲಹೆ ಸ್ವಾಮೀಜಿ ನೀಡಿದರು. ಎಲ್ಲ …

Read More »

ಕೇವಲ ತುರ್ತು ಸಂದರ್ಭದಲ್ಲಿ ಅಲ್ಲದೆ ಜೀವನದ ಪ್ರತಿ ಹಂತದಲ್ಲೂ ಮಾನವೀಯ ಗುಣಗಳನ್ನು ಅಳವಡಿಕೊಳ್ಳಿ: ಬಸವರಾಜ ಜವರಗಿ.

*ಶ್ರೀ ಸಿದ್ದಲಿಂಗೇಶ್ವರ ಬಿಸಿಎ ಮಹಾವಿದ್ಯಾಲಯ ವತಿಯಿಂದ ಅಲೆಮಾರಿ ಜನಾಂಗದ ಬಡ ಜನರಿಗೆ ಬಟ್ಟೆ ವಿತರಣೆ* ಗೋಕಾಕ: ನಗರದ ಶ್ರೀ ಚೆನ್ನಬಸವೇಶ್ವರ ವಿದ್ಯಾಪೀಠ ಆವರಣದಲ್ಲಿ ಶ್ರೀ ಸಿದ್ದಲಿಂಗೇಶ್ವರ ಬಿಸಿಎ ಮಹಾವಿದ್ಯಾಲಯ ವತಿಯಿಂದ ಅಲೆಮಾರಿ ಜನಾಂಗದ ಬಡ ಜನರಿಗೆ ಬಟ್ಟೆ ವಿತರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಕೇವಲ ತುರ್ತು ಸಂದರ್ಭದಲ್ಲಿ ಅಲ್ಲದೆ ಜೀವನದ ಪ್ರತಿ ಹಂತದಲ್ಲೂ ಮಾನವೀಯ ಗುಣಗಳನ್ನು ಅಳವಡಿಕೊಳ್ಳುವುದು ಒಳಿತು. ಈ ಮೂಲಕ ಉತ್ತಮ ಉದಾತ್ತಾ ಗುಣಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಎಂದು ಸಂಸ್ಥೆಯ ನಿರ್ದೇಶಕರಾದ …

Read More »

ಮುಖಂಡರು-ಕಾರ್ಯಕರ್ತರ ಒಗ್ಗಟ್ಟು ಹೆಚ್ಚಿನ ಅಭ್ಯರ್ಥಿಗಳ ಗೆಲುವಿಗೆ ಕಾರಣ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ

ಬೆಳಗಾವಿ: ವಿಧಾನ ಪರಿಷತ್‍ ಚುನಾವಣೆಯಲ್ಲಿ ಬಿಜೆಪಿಗೆ ಪೈಪೋಟಿ ನೀಡಿ, ನಗರಸಭೆ, ಪಟ್ಟಣ ಪಂಚಾಯಿತಿ, ಪುರಸಭೆ, ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶದಲ್ಲಿಯೂ ಕೂಡ ನಾವು ಮೇಲುಗೈ ಸಾಧಿಸಿದ್ದೇವೆ  ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಡೆದ  ನಗರಸಭೆ, ಪಟ್ಟಣ ಪಂಚಾಯಿತಿ, ಪುರಸಭೆ ಚುನಾವಣೆಯಲ್ಲಿಒಟ್ಟಾರೆ 1,185 ವಾರ್ಡ್‍ಗಳಲ್ಲಿ501 ಕಾಂಗ್ರೆಸ್  ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ ಎಂದರು. ಜಿಲ್ಲೆಯಲ್ಲಿಕೂಡ ನಿರೀಕ್ಷೆಗೆ ಮೀರಿ ಬಿಜೆಪಿಕ್ಕಿಂತ ಹೆಚ್ಚು ಸ್ಥಾನ ಗೆದ್ದಿದ್ದು, ಪಕ್ಷದ …

Read More »

ಮಕ್ಕಳಿಗೆ ಉತ್ತಮ ಸಂಸ್ಕೃತಿ ಮನೆಯಿಂದಲೇ ಪ್ರಾರಂಭವಾಗಬೇಕು:ಸೋಮಶೇಖರ ಮಗದುಮ್ಮ

ಗೋಕಾಕ ಡಿ 27 :ಪತಿ ಪತ್ನಿಯರಲ್ಲಿ ಪರಸ್ಪರ ಪ್ರೀತಿ, ವಿಶ್ವಾಸಗಳು ಗಟ್ಟಿಯಾಗಿದ್ದರೆ ದಾಂಪತ್ಯ ಜೀವನವು ಭದ್ರವಾಗುವುದು,ಪತಿಗೆ ಪತ್ನಿ ಮತ್ತು ಪತ್ನಿಗೆ ಪತಿಯೇ ಆದರ್ಶರಾಗಿದ್ದರೆ ಅವರು ಸಮಾಜದಲ್ಲಿ ಆದರ್ಶ ದಂಪತಿಗಳಾಗುತ್ತಾರೆ ಎಂದು  ಸೋಮಶೇಖರ ಮಗದುಮ್ಮ ಹೇಳಿದರು. ಶನಿವಾರದಂದು ನಗರದ ಕೆಎಲ್ಇ ಶಾಲಾ ಆವರಣದಲ್ಲಿ ಇಲ್ಲಿನ ಕನಸು ಫೌಂಡೇಶನ್ ನವರು ಹಮ್ಮಿಕೊಂಡ ಆದರ್ಶ ದಂಪತಿಗಳು ಕಾರ್ಯಕ್ರಮದಲ್ಲಿ ವಿಜೇತ ದಂಪತಿಗಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು. ಸಂಸಾರದಲ್ಲಿ ಸಾಮರಸ್ಯ ಕಾಯ್ದಕ್ಕೊಳ್ಳುವುದು ಅತೀ ಅಗತ್ಯ ಮತ್ತು …

Read More »

ಬಡವರ ಪರ ಕೆಲಸಗಳನ್ನು ಈ ಬಳಗದಿಂದ ಕೈಗೊಳ್ಳಬೇಕು: ರಾಹುಲ್ ಜಾರಕಿಹೊಳಿ

ಬೆಳಗಾವಿ : ಸಮಾಜದಲ್ಲಿ ಹೊಸ ಬದಲಾವಣೆ ತರುವ ನಿಟ್ಟಿನಲ್ಲಿ ರಾಹುಲ್ ಅಣ್ಣಾ ಜಾರಕಿಹೊಳಿ ಅಭಿಮಾನಿ ಬಳಗ  ಕಾರ್ಯವನ್ನು ಮಾಡಬೇಕು. ಬಡವರ ಪರ ಕೆಲಸಗಳನ್ನು ಈ ಬಳಗದಿಂದ ಕೈಗೊಳ್ಳಬೇಕು. ಅಂದಾಗ ಮಾತ್ರ ಸಂಘಟನೆಗೆ ಅರ್ಥ ಬರಲಿದೆ ಎಂದು ಯುವ ನಾಯಕ ರಾಹುಲ್ ಜಾರಕಿಹೊಳಿ ಹೇಳಿದರು. ಇಲ್ಲಿನ ಮಜಗಾವಿಯಲ್ಲಿ ಭಾನುವಾರ ನೂತನ ರಾಹುಲ್ ಅಣ್ಣಾ ಜಾರಕಿಹೊಳಿ ಅಭಿಮಾನಿ ಬಳಗ ಉದ್ಘಾಟಿಸಿ  ಅವರು ಮಾತನಾಡಿ, ನೂತನ ಅಭಿಮಾನಿ ಬಳಗದಿಂದ ಸಮಾಜದಲ್ಲಿ ಉತ್ತಮ ಕಾರ್ಯಗಳು ಆಗಬೇಕು. …

Read More »

ನ್ಯೂ ಗೋಕಾಕ ತಂಡದ ನೂತನ ಕ್ಯಾಲೆಂಡರ್ ಬಿಡುಗಡೆಗೊಳಿಸಿದ ಕೆಪಿಸಿಸಿ ಕಾರ್ಯಾಧಕ್ಷ ಸತೀಶ್ ಜಾರಕಿಹೊಳಿ ಹಾಗೂ ಯುವ ನಾಯಕ ರಾಹುಲ್ ಜಾರಕಿಹೊಳಿ.

ಗೋಕಾಕ: ನಗರದ ಹಿಲ್ ಗಾರ್ಡನ್ ಕಛೇರಿಯಲ್ಲಿ ಕೆಪಿಸಿಸಿ ಕಾರ್ಯಾಧಕ್ಷ ಸತೀಶ್ ಜಾರಕಿಹೊಳಿ ಅವರ ನೇತೃತ್ವದಲ್ಲಿ “ನ್ಯೂ ಗೋಕಾಕ” ತಂಡದ ನೂತನ 2022 ರ ದಿನದರ್ಶಿಕೆಯನ್ನು ಬಿಡುಗಡೆಗೊಳಿಸಲಾಯಿತು. ನ್ಯೂ ಗೋಕಾಕ ತಂಡದಿಂದ ತಯಾರಿಸಿದ ದಿನದರ್ಶಿಕೆಯನ್ನು ಇಂದು ತಂಡದ ಸದಸ್ಯರು ಕೆಪಿಸಿಸಿ ಕಾರ್ಯಾಧಕ್ಷ ಸತೀಶ್ ಜಾರಕಿಹೊಳಿ ಹಾಗೂ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರನ್ನು ಭೇಟಿಯಾಗಿ ದಿನದರ್ಶಿಕೆ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ನ್ಯೂ ಗೋಕಾಕ ತಂಡದ ಸದಸ್ಯರಾದ ಅಕ್ಷಯ್ ಕುರಬೇಟ, ವಿನಾಯಕ ಬನ್ನಿಶೆಟ್ಟಿ, …

Read More »