Breaking News

ಜಿಲ್ಲೆ

ಲಂಚ ಪ್ರಕರಣ: ಬಿಸಿಎಂ ಇಲಾಖೆಯ ಅಧಿಕಾರಿ ಎಸಿಬಿ ಬಲೆಗೆ.

ಸುರಪುರ: ಇಲ್ಲಿಯ ಬಿಸಿಎಂ ಇಲಾಖೆಯ ಅಧಿಕಾರಿ ಹಣಮಂತ (ಬಾಬು) ಅವರು ಗುರುವಾರ ಸಿಂಧುತ್ವ ವಿಷಯಕ್ಕೆ ಸಂಬಂಧಪಟ್ಟಂತೆ ಲಂಚ ಪಡೆಯುತ್ತಿದ್ದಾಗ ಯಾದಗಿರಿಯ ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದಿದ್ದಾರೆ. ತಾಲ್ಲೂಕಿನ ಬೈಲಾಪುರ ಗ್ರಾಮದ ನಾಗರಾಜ ಮೇಟಿ ಅವರ ಸಿಂಧುತ್ವ ವಿಷಯಕ್ಕೆ ಸಂಬಂಧಪಟ್ಟಂತೆ ಬಿಸಿಎಂ ಅಧಿಕಾರಿ ₹5000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅಂತಿಮವಾಗಿ ₹2000 ಕೊಡುವಂತೆ ಒತ್ತಾಯಿಸಿದ್ದರು. ಹಣ ಪಡೆಯುತ್ತಿರುವ ಸಂದರ್ಭದಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ, ಅಧಿಕಾರಿಯನ್ನು ವಶಕ್ಕೆ ಪಡೆದಿದ್ದಾರೆ. ಶಾಂತಗೌಡ ಅಯ್ಯಣ್ಣ …

Read More »

ನಟಿ ರಾಗಿಣಿ ಸಿಸಿಬಿ ವಶಕ್ಕೆ…..!

ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ ಆರೋಪಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ ಅವರನ್ನು ಸಿಸಿಬಿ ವಶಕ್ಕೆ ಪಡೆದುಕೊಂಡಿದೆ. ಇಂದು ಬೆಳಗ್ಗೆ ಯಲಹಂಕದಲ್ಲಿರುವ ರಾಗಿಣಿ ನಿವಾಸದ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಪ್ರಶ್ನೋತ್ತರದ ಬಳಿಕ ಸಿಸಿಬಿ ಅಧಿಕಾರಿಗಳು ರಾಗಿಣಿ ಅವರನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಸ್ಯಾಂಡಲ್ ವುಡ್ ಗೆ ಡ್ರಗ್ಸ್ ನಶೆಯ ನಂಟಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ನಿನ್‌ಎ ನಟಿ ರಾಗಿಣಿ ದ್ವಿವೇದಿಯನ್ನು ವಿಚಾರಣೆಗೆ …

Read More »

ಆಶಾ ಕಾರ್ಯಕರ್ತೆಯರ ಕಾರ್ಯ ಶ್ಲಾಘನೀಯ : ಡಾ.ರಾಜೇಂದ್ರ ಸಣ್ಣಕ್ಕಿ .

ಜಿಲ್ಲಾ ಹಾಲು ಒಕ್ಕೂಟದಿಂದ ಮೂಡಲಗಿ ತಾಲೂಕಿನ 65 ಆಶಾ ಕಾರ್ಯಕರ್ತೆಯರಿಗೆ ತಲಾ 3 ಸಾವಿರ ರೂ.ಗಳ ಪ್ರೋತ್ಸಾಹಧನದ ಚೆಕ್‍ಗಳ ವಿತರಣೆ. ಗೋಕಾಕ : ಕೊರೊನಾದಂತಹ ಸಂಕಷ್ಟದ ಸಮಯದಲ್ಲಿ ತಮ್ಮ ಜೀವದ ಹಂಗು ತೊರೆದು ಕೆಲಸ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರ ಕಾರ್ಯ ಪ್ರಶಂಸನೀಯವೆಂದು ಮುಖಂಡ ಡಾ.ರಾಜೇಂದ್ರ ಸಣ್ಣಕ್ಕಿ ಹೇಳಿದರು. ಇಲ್ಲಿಯ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಗುರುವಾರ ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವು ಮೂಡಲಗಿ ತಾಲೂಕಿನ ಆಶಾ ಕಾರ್ಯಕರ್ತೆಯರಿಗೆ …

Read More »

ಗಣೇಶ ಪ್ರತಿಷ್ಠಾಪನೆಯಲ್ಲಿ ಹಾಕಿದ ಭಕ್ತಿಗೀತೆಗಳ ಧ್ವನಿವರ್ಧಕವನ್ನು ತೆಗೆಸುವ ಸಮಯದಲ್ಲಿ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರ ಮೇಲೆ ತಹಶೀಲ್ದಾರ ದೌರ್ಜನ್ಯ ಖಂಡಿಸಿ: ಹಿಂದೂ ಜಾಗರಣ ವೇದಿಕೆ ಪ್ರತಿಭಟನೆ

ರಾಯಚೂರು ನಗರದ ದೇವದುರ್ಗ ಜಿಲ್ಲೆಯಲ್ಲಿ ನಡೆದ ಶ್ರೀ ಗಣೇಶ ಪ್ರತಿಷ್ಠಾಪನೆಗೆ ಹಾಕಿದ್ದ ಭಕ್ತಿಗೀತೆಗಳ ಧ್ವನಿ ವರ್ಧಕ ತೆಗೆಯಲು ಪ್ರಯತ್ನಿಸಿದ ತಹಶೀಲ್ದಾರ್ ಅವರನ್ನು ಪ್ರಶ್ನಿಸಿದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರ ಮೇಲೆ ಅನಾವಶ್ಯಕವಾಗಿ ಕೇಸ್ ದಾಖಲಿಸಿದ್ದ ತಹಶೀಲ್ದಾರ ವಿರುದ್ದ ಖಂಡಿಸಿ ಗೋಕಾಕ್ ನಗರದ ಹಿಂದೂ ಜಾಗರಣ ವೇದಿಕೆಯ ಮುಖಂಡರು ಹಾಗೂ ಕಾರ್ಯಕರ್ತರು ಗೋಕಾಕ ನಗರದ ತಹಸೀಲ್ದಾರ್ ಮುಖಾಂತರ ಖಂಡಿಸಿ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಸಂಯೋಜಕರು ಸಮರ್ಥ್ ಖಾಸ್ನಿಸ್ …

Read More »

ಜೀವನದಲ್ಲಿ ಎಲ್ಲವನ್ನು ಮೆಟ್ಟಿ ನಿಂತಾಗ ಮಾತ್ರ ಯಶಸ್ಸು ಕಾಣಲು ಸಾಧ್ಯ:ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ

ಹುಕ್ಕೇರಿ :  ‘ಜೀವನದಲ್ಲಿ ಎಲ್ಲವನ್ನ ಮೆಟ್ಟಿ ನಿಂತಾಗ ಮಾತ್ರ ಯಶಸ್ಸು ಕಾಣಲು ಸಾಧ್ಯ. ಆದ ಕಾರಣ ಪ್ರಯತ್ನ ನಿಮ್ಮದಾದರೆ, ಪ್ರೋತ್ಸಾಹ ನಮ್ಮದಾಗಲಿದೆ’ ಎಂದು ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು. ತಾಲ್ಲೂಕಿನ ಬಗರನಾಳ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಗ್ರಾಮೀಣ ಅಭಿವೃದ್ಧಿ ಸಂಘ ಹಾಗೂ ಅಕ್ಕಮಹಾದೇವಿ ಮಹಿಳಾ ಗ್ರಾಮೀಣ ಅಭಿವೃದ್ಧಿ  ಸ್ವ-ಸಹಾಯ ಸಂಘವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು. ‘ಕಳೆದ ತಿಂಗಳೇ ಸಂಘಗಳ ಉದ್ಘಾಟನೆ ನಡೆಯಬೇಕಿತ್ತು. ಆದರೆ ಹಲವು ಕಾರಣಗಳಿಂದ ವಿಳಂಬವಾಯಿತು. …

Read More »

ಕಾರ್ಮಿಕರ ಕುಟುಂಬಕ್ಕೆ ಆಹಾರ ಕಿಟ್ ವಿತರಣೆ..!!

ಗೋಕಾಕ್: ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳನ್ನು ಫಲಾನುಭವಿಗಳು ಸರಿಯಾಗಿ ಸದುಪಯೋಗವನ್ನು ಮಾಡಿಕೊಳ್ಳಬೇಕೆಂದು ಜಿಪ ಸದಸ್ಯ ಟಿ ಆರ್ ಕಾಗಲ ಕರೆ ನೀಡಿದರು. ರವಿವಾರಂದು ಸಚಿವ ರಮೇಶ ಜಾರಕಿಹೊಳಿ ಕಚೇರಿಯಲ್ಲಿ ಕಾರ್ಮಿಕ ಇಲಾಖೆಯಿಂದ ದಿನನಿತ್ಯ ವಸ್ತು ಆಹಾರ ಕಿಟ್ ವಿತರಿಸಿ ಮಾತನಾಡಿದರು. ನಗರದಲ್ಲಿ ಸುಮಾರು 500 ಕಾರ್ಮಿಕ ಕುಟುಂಬಗಳಿಗೆ ಆಹಾರ ಕಿಟ್ ಅನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಜಿಪಂ ಸದಸ್ಯ ಮಡ್ಯಪ್ಪ ತೊಳಿನವರ, ಬಿಜೆಪಿ ನಗರ ಘಟಕ ಅಧ್ಯಕ್ಷ …

Read More »

ಅರಭಾವಿ ಬಿಜೆಪಿ ಮಂಡಲಕ್ಕೆ ವಿವಿಧ ಮೋರ್ಚಾಗಳಿಗೆ ಪದಾಧಿಕಾರಿಗಳ ನೇಮಕ..!!

ಶಾಸಕ ಬಾಲಚಂದ್ರ ಜಾರಕಿಹೊಳಿ ಮತ್ತು ಸಂಸದ ಈರಣ್ಣಾ ಕಡಾಡಿ ಮಾರ್ಗದರ್ಶನ ಬಿಜೆಪಿ ಅರಭಾವಿ ಮಂಡಲಕ್ಕೆ ವಿವಿಧ ಮೋರ್ಚಾಗಳಿಗೆ ಪದಾಧಿಕಾರಿಗಳ ನೇಮಕ ಮಾಡಿದ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ. ಗೋಕಾಕ : ಕೆಎಂಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹಾಗೂ ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಅವರ ಮಾರ್ಗದರ್ಶನದಲ್ಲಿ ಅರಭಾವಿ ಮಂಡಲಕ್ಕೆ ವಿವಿಧ ಮೋರ್ಚಾಗಳ ಪದಾಧಿಕಾರಿಗಳನ್ನಾಗಿ ಪಕ್ಷದ ಜಿಲ್ಲಾಧ್ಯಕ್ಷ ಮತ್ತು ಮಾಜಿ ಶಾಸಕ ಸಂಜಯ ಪಾಟೀಲ ಅವರು ನೇಮಕ ಮಾಡಿ …

Read More »

ಬೆಳಗಾವಿ ಜಿಲ್ಲೆಗೆ ಹದಿನೆಂಟು ನೀರಾವರಿ ಯೋಜನೆಗಳು* – *ಡಿಪಿಆರ್ ತಯಾರಿಸಲು ಅನುಮತಿಸಿದ ಸಚಿವ ರಮೇಶ್ ಜಾರಕಿಹೊಳಿ‌.

ಬೆಳಗಾವಿ ಜಿಲ್ಲೆಗೆ *11 ಹೊಸ ಏತ ನೀರಾವರಿ ಯೋಜನೆ* ಗಳನ್ನು ಜಾರಿಗೊಳಿಸುವ ಜಲಸಂಪನ್ಮೂಲ ಸಚಿವರಾದ  ರಮೇಶ್ ಜಾರಕಿಹೊಳಿ‌* ಅವರ ಪ್ರಸ್ತಾಪಗಳಿಗೆ ವಿಸ್ತೃತ ಯೋಜನಾ ವರದಿ ತಯಾರಿಸಲು ಕರ್ನಾಟಕ ನೀರಾವರಿ ನಿಗಮ ನಿಯಮಿತವು ಅನುಮತಿ ನೀಡಿದೆ. ನಿನ್ನೆ ನಡೆದ ನಿಗಮದ ಅಂದಾಜು ಪರಿಶೀಲನಾ ಸಭೆಯಲ್ಲಿ ಈ *11 ಏತ ನೀರಾವರಿ ಯೋಜನೆ* ಗಳ ಅನುಷ್ಠಾನಕ್ಕೆ ಸಂಬಂಧಿಸಿ ಚರ್ಚೆ ನಡೆಸಿ, ಈ ಯೋಜನೆಗಳಿಗೆ ಅವಶ್ಯವಿರುವ *9.91 ಟಿಎಂಸಿ ನೀರನ್ನು ಹಂಚಿಕೆ‌ ಮಾಡಲು* ಸಹಾ …

Read More »

ಲಂಚ ಸ್ವೀಕರಿಸುವಾಗ ತಹಶೀಲ್ದಾರ್‌ ಕಚೇರಿಯ ಸರ್ವೇ ಇಲಾಖೆ ಮೇಲ್ವಿಚಾರಕ ಎಸಿಬಿ ಬಲೆಗೆ….!

ಕೊಪ್ಪಳ: ಗಂಗಾವತಿ ಸರ್ವೇ ಮೇಲ್ವಿಚಾರಕ ಗಂಗಾಧರ ತೇಜಪ್ಪ ಎಸಿಬಿ ಬಲೆಗೆ ಬಿದ್ದಿದ್ದಾರೆ. ಗಂಗಾವತಿ ತಾಲೂಕು ಹೆಬ್ಬಾಳ ಕ್ಯಾಂಪ್‌ನ ರಾಜು.ಪಿ. ಅವರಿಂದ 4 ಸಾವಿರ ಲಂಚ ಪಡೆಯುತ್ತಿದ್ದಾಗ ದಾಳಿ ಮಾಡಿದ ಎಸಿಬಿ ಅವರನ್ನು ಹಣದ ಸಮೇತ ಬಂದಿಸಿದೆ. ತಾಯಿಯ ಆಸ್ತಿಯ 11ಬಿ/ಇ ನಕ್ಷೆ ನೀಡಲು ಗಂಗಾವತಿ ತಾಲೂಕಿನ ಹೆಬ್ಬಾಳ ಕ್ಯಾಂಪ್‌ನ ರಾಜು.ಪಿ. ಅವರಿಂದ 4 ಸಾವಿರ ಲಂಚ ಪಡೆಯುತ್ತಿದ್ದ ಗಂಗಾವತಿ ತಹಶೀಲ್ದಾರ್‌ ಕಚೇರಿಯ ಸರ್ವೇ ಮೇಲ್ವಿಚಾರಕ ಗಂಗಾಧರ ತೇಜಪ್ಪ ಅವರನ್ನು ಎಸಿಬಿ …

Read More »

ರೈತರ ಸಮಸ್ಯೆ ಪರಿಹಾರಕ್ಕೆ ಚಕ್ಕಡಿ ಏರಿ ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ್ ಜಾರಕಿಹೊಳಿ ಪ್ರತಿಭಟನೆ

ಧಾರವಾಡ: ಅತಿವೃಷ್ಟಿಯಿಂದ ರೈತರು ಸಮಸ್ಯೆ ಅನುಭವಿಸುತ್ತಿದ್ದಾರೆ. ಸರ್ಕಾರ ರೈತರ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಆಗ್ರಹಿಸಿ ಯಮಕನಮರಡಿ ಕ್ಷೇತ್ರ ಶಾಸಕ ಸತೀಶ್ ಜಾರಕಿಹೊಳಿ ನಗರದಲ್ಲಿ ಚಕ್ಕಡಿ ಏರಿ ಶುಕ್ರವಾರ ಪ್ರತಿಭಟನೆ ನಡೆಸಿದರು. ಇಲ್ಲಿನ ಗಾಂಧಿನಗರದಿಂದ ನವಲೂರು ಸೇತುವೆವರೆಗೂ ಚಕ್ಕಡಿ ಏರಿ ಪ್ರತಿಭಟನಾ ಮೆರವಣಿಗೆ ಕೈಗೊಂಡರು.  ಖಾನಾಪುರ ಕ್ಷೇತ್ರದ ಶಾಸಕಿ ಅಂಜಲಿ ನಿಂಬಾಳ್ಕರ್ ಕೂಡ ಪಾಲ್ಗೊಂಡಿದ್ದರು. ರಾಜ್ಯದ ರೈತರು  ಅತಿವೃಷ್ಟಿಯಿಂದ ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಬೆಳೆ ಹಾನಿಗೊಳಗಾದ ರೈತರಿಗೆ ಸರ್ಕಾರ ಕೂಡಲೇ ಪರಿಹಾರ ನೀಡಬೇಕು ಎಂದು …

Read More »