Breaking News

ಜಿಲ್ಲೆ

ಹೈಡ್/ಡೆಲಿಟ್ ಆದ ಫಲಾನುಭವಿಗಳಿಗೆ ವಸತಿ ಸೌಕರ್ಯಕ್ಕಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವಿರತ ಯತ್ನ

ಗೋಕಾಕ : 2019ರ ಅಗಸ್ಟ್ ತಿಂಗಳಲ್ಲಿ ಧಾರಾಕಾರ ಮಳೆ ಹಾಗೂ ಪ್ರವಾಹದಿಂದಾಗಿ ಅಪಾರ ಪ್ರಮಾಣದಲ್ಲಿ ಮನೆಗಳು ಸಂಪೂರ್ಣ ಕುಸಿತಗೊಂಡಿದ್ದು, ಅಂತಹ ಮನೆಗಳಿಗೆ ಪರಿಹಾರ ದೊರಕಿಸಿಕೊಡಲು ಶಾಸಕರು ಪ್ರಯತ್ನಿಸುತ್ತಿದ್ದಾರೆ. ಹೈಡ್/ಡೆಲಿಟ್ ಆದ ಫಲಾನುಭವಿಗಳ ಮನೆಗಳ ನಿರ್ಮಾಣಕ್ಕೆ ಪರಿಹಾರವನ್ನು ದೊರಕಿಸಿಕೊಡಲು ಬಾಲಚಂದ್ರ ಜಾರಕಿಹೊಳಿ ಅವರು ಈಗಾಗಲೇ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡಿದ್ದಾರೆಂದು ಜಿಪಂ ಸದಸ್ಯ ಗೋವಿಂದ ಕೊಪ್ಪದ ತಿಳಿಸಿದರು. ಈ ಬಗ್ಗೆ ರವಿವಾರ ನಗರದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಾಸಕ ಬಾಲಚಂದ್ರ ಜಾರಕಿಹೊಳಿ …

Read More »

ಗೋಕಾಕ ನಗರ ಠಾಣೆಗೆ ನೂತನವಾಗಿ ಆಗಮಿಸಿದ ಪಿಎಸ್ಐ ಅವರಿಗೆ ಮಾಧ್ಯಮ ಮಿತ್ರರಿಂದ ಸ್ವಾಗತ.

ಗೋಕಾಕ ನಗರ ಠಾಣೆಗೆ ನೂತನವಾಗಿ ಪಿಎಸ್ಐ ಆಗಿ ಆಗಮಿಸಿದ ಕೆ ವಾಲಿಕಾರ ಅವರಿಗೆ ಇಂದು ಗೋಕಾಕ ತಾಲೂಕಿನ ಮಾಧ್ಯಮ ಮಿತ್ರರು ಹೃತ್ಪೂರ್ವಕವಾಗಿ ಮಾಲಾರ್ಪಣೆ ಮಾಡುವ ಮೂಲಕ ಸ್ವಾಗತಿಸಿದರು. ನೂತನ ಪಿಎಸ್ಐ ಅವರು ಹಾಗೂ ಮಾಧ್ಯಮ ಮಿತ್ರರು ಕುಶಲೋಪಚಾರ ಮಾಡಿಕೊಂಡು ಆತ್ಮೀಯವಾಗಿ ಗೋಕಾಕ ನಗರಕ್ಕೆ ಸ್ವಾಗತವೆಂದು ಮಾಧ್ಯಮ ಮಿತ್ರರು ಹೇಳಿದರು. ಈ ಸಂದರ್ಭದಲ್ಲಿ ನೂತನ ಪಿಎಸ್ಐ ಅವರು ಮಾತನಾಡಿ ನಮ್ಮ ಸಮಾಜದಲ್ಲಿ ಮಾಧ್ಯಮ ಮಿತ್ರರ ಪಾತ್ರವು ಬಹುಮುಖ್ಯ ಎಂದು ಹೇಳಿದರು. ಗೋಕಾಕ …

Read More »

ಡಿಸಿಎಂ ಲಕ್ಷ್ಮಣ ಸವದಿಗೆ ತಿರುಗೇಟು ನೀಡಿದ ಸತೀಶ್ ಜಾರಕಿಹೊಳಿ

ಬೆಳಗಾವಿ : ಇತ್ತಿಚೇಗೆ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಮನೆಯೊಂದು ಮೂರು ಬಾಗಿಲು ಆಗಿದ್ದು, ಅವನತಿಯ ಅಂಚಿನಲ್ಲಿದೆ ಎಂಬ ಹೇಳಿಕೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ತಿರುಗೇಟು ನೀಡಿದ್ದಾರೆ. ನಗರದ ನಿವಾಸದಲ್ಲಿ ಶನಿವಾರ ಮಾತನಾಡಿದ ಅವರು, ಎಲ್ಲ ಪಕ್ಷದಲ್ಲಿ ಗುಂಪುಗಾರಿಕೆ ಇದ್ದೇ ಇರುತ್ತದೆ. ಅದೇನು ಹೊಸದಲ್ಲ. ಬಿಜೆಪಿ ಪಕ್ಷದಲ್ಲಿಯೂ ಸಹ ಮೂರು ಗುಂಪುಗಳು ಇವೆ. ದೆಹಲಿ ಅಲ್ಲಿ ಒಂದು ಗುಂಪು, ಕರ್ನಾಟಕದಲ್ಲಿ ಎರಡು ಇದಾವೆ ಎಂದು …

Read More »

ಗೋಕಾಕ ತಾಲೂಕಿನ ಇಬ್ಬರು ಬಾಲಕರಿಗೆ ಜೀವನ ರಕ್ಷಾ ಪದಕ ಪುರಸ್ಕೃತ

ಗೋಕಾಕ ತಾಲೂಕಿನ ಇಬ್ಬರು ಬಾಲಕರಿಗೆ ಜೀವನ ರಕ್ಷಾ ಪದಕ ಪುರಸ್ಕೃತ ದಿನಾಂಕ: 08/05/2018 ರಂದು ಗೋಕಾಕ ತಾಲೂಕಿನ ವಡೇರಹಟ್ಟಿ ಗ್ರಾಮದ ಇಂದ್ರವೇಣಿ ಹಳ್ಳದಲ್ಲಿ ಮಳೆ ನೀರು ಸಂಗ್ರಹವಾಗಿದ್ದು, ಇದರಲ್ಲಿ ಆಕಸ್ಮಿಕವಾಗಿ ಬಿದ್ದು ತೇಲಿ ಹೋಗುತ್ತಿದ್ದ ಹುಡುಗನ ಆಕ್ರಂದನ, ಚೀರಾಟ ಕೇಳಿ ಸ್ತಳಕ್ಕೆ ಧಾವಿಸಿ ನೀರಿನ ರಭಸಕ್ಕೆ ಭಯಪಡದೆ ಹಳ್ಳಕ್ಕೆ ಹಾರಿ ನೀರಿನಲ್ಲಿ ಮುಳುಗುತ್ತಿರುವ ಬಾಲಕನನ್ನು ಪ್ರಾಣಾಪಾಯದಿಂದ ರಕ್ಷಿಸಿ ಧೈರ್ಯ ಸಾಹಸ ಪ್ರದರ್ಶಿಸಿ ಸಮಯಪ್ರಜ್ಞೆ ತೋರಿದ ಬಗ್ಗೆ ಮಹಿಳಾ ಮತ್ತು ಮಕ್ಕಳ …

Read More »

ಪ್ರಭಾ ಶುಗರ್ ರೈತರಿಗೆ ಪ್ರತಿ ಟನ್ ಕಬ್ಬಿಗೆ 2400 ರೂ. ಮುಂಗಡ ಹಣ ಪಾವತಿ

ಗೋಕಾಕ : ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಗೆ ಪ್ರಸಕ್ತ ಹಂಗಾಮಿನಲ್ಲಿ ಕಬ್ಬು ಪೂರೈಸುತ್ತಿರುವ ರೈತರಿಗೆ ಪ್ರತಿ ಟನ್ ಕಬ್ಬಿಗೆ 2400 ರೂ.ಗಳನ್ನು ಮುಂಗಡ ಹಣವನ್ನಾಗಿ ಪಾವತಿಸಲು ನಿರ್ಧರಿಸಿದೆ ಎಂದು ಕಾರ್ಖಾನೆಯ ಮಾರ್ಗದರ್ಶಕ, ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ. ಶುಕ್ರವಾರದಂದು ಈ ಬಗ್ಗೆ ಹೇಳಿಕೆ ನೀಡಿರುವ ಅವರು, ಪ್ರತಿ 15 ದಿನಗಳಿಗೊಮ್ಮೆ ನಿರಂತರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಹಣವನ್ನು ಪಾವತಿಸಲಾಗುವುದು ಎಂದು ಅವರು ಹೇಳಿದ್ದಾರೆ. ಕೇಂದ್ರ ಸರ್ಕಾರವು …

Read More »

ಸಿಎಂ ಬದಲಾವಣೆ ಇಲ್ಲ – ರಮೇಶ್ ಜಾರಕಿಹೊಳಿ‌*

ವಿಪಕ್ಷ ನಾಯಕ ಸಿದ್ದರಾಮಯ್ಯ ಭ್ರಮೆಯಲ್ಲಿದ್ದಾರೆ.ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬದಲಾವಣೆ ಇಲ್ಲ ಎಂದು ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಬೆಳಗಾವಿ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಜಾರಕಿಹೊಳಿ‌, ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರಕಾರ ಸುಭದ್ರವಾಗಿದೆ. ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಸಾಧ್ಯವಿಲ್ಲ. ವಿಪಕ್ಷ ನಾಯಕ ಸಿದ್ದರಾಮಯ್ಯ ಭ್ರಮೆಯಲ್ಲಿದ್ದಾರೆ. ಇತ್ತೀಚೆಗೆ ಸಿಎಂ ಯಡಿಯೂರಪ್ಪನವರೇ ಸಿದ್ದರಾಮಯ್ಯನವರಿಗೆ ಉತ್ತರ ಕೊಟ್ಟಿದ್ದಾರೆ.ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಮಾಡುವುದಿಲ್ಲ ಎಂದು ರಮೇಶ್ …

Read More »

ರೂ.1.5 ಲಕ್ಷ ಲಂಚ ಪಡೆಯುತ್ತಿದ್ದ ಸಣ್ಣ ನೀರಾವರಿ ಭ್ರಷ್ಟ ಇಇ ಸೇರಿ ಇಬ್ಬರು ಬಂಧನ.

ಬೆಂಗಳೂರು: ಚೆಕ್‌ ಡ್ಯಾಮ್‌ ಕಾಮಗಾರಿ ನಿರ್ವಹಿಸಿದ್ದ ಗುತ್ತಿಗೆದಾರನಿಗೆ ಬಾಕಿ ಹಣ ಬಿಡುಗಡೆ ಮಾಡಲು ₹ 1.5 ಲಕ್ಷ ಲಂಚ ಪಡೆಯುತ್ತಿದ್ದ ಸಣ್ಣ ನೀರಾವರಿ ಇಲಾಖೆಯ ಬೆಂಗಳೂರು ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ಎಂ.ಎನ್‌. ಕಿಶೋರ್‌ ಮತ್ತು ಅವರ ಕಚೇರಿಯ ಲೆಕ್ಕ ಅಧೀಕ್ಷಕ ದತ್ತಾತ್ರೇಯ ನಾರಾಯಣಕರ್‌ ಅವರನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಸೋಮವಾರ ಬಂಧಿಸಿದೆ. ದೊಡ್ಡಬಳ್ಳಾಪುರ ನಿವಾಸಿಯಾದ ಗುತ್ತಿಗೆದಾರ ವೆಂಕಟೇಶ್‌ ಬಾಬು ಎಂಬುವವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆ …

Read More »

ನೂತನ ಕರ್ನಾಟಕ ರಕ್ಷಣಾ ವೇದಿಕೆ ವೀರ ಕನ್ನಡಿಗರ ಘರ್ಜನೆ ಸಂಘಟನೆ ಉದ್ಘಾಟನೆ

ನೂತನ ಕರ್ನಾಟಕ ರಕ್ಷಣಾ ವೇದಿಕೆ ವೀರ ಕನ್ನಡಿಗರ ಘರ್ಜನೆ ಸಂಘಟನೆಯ ಘಟಪ್ರಭಾ ಘಟಕ ಉದ್ಘಾಟನಾ ಕಾರ್ಯಕ್ರಮ ನಿನ್ನೆ ಜರುಗಿತು ಈ ಸಂದರ್ಭದಲ್ಲಿ ಸಂಘಟನೆಯ ಉತ್ತರ ಕರ್ನಾಟಕ ರಾಜ್ಯಾಧ್ಯಕ್ಷರಾದ ಗೀರಿಶ ದೊಡ್ಡಮನಿಯವರು ಸಂಘಟನೆಗೆ ನೂತನವಾಗಿ ಸೆರ್ಪಡೆಗೊಂಡವರಿಗೆ ಆದೇಶ ಪತ್ರ ನೀಡಿದರು ಈ ಸಂಧರ್ಭದಲ್ಲಿ ಗೋಕಾಕ ತಾಲೂಕಾ ಅಧ್ಯಕ್ಷರಾದ ದಯಾನಂದ ಪೂಜೇರಿ ಗೋಕಾಕ ತಾಲೂಕಾ ಕಾರ್ಯದರ್ಶಿಗಳಾದ ಬಾಹುಬಲಿ ಮುನ್ನೋಳಿ ಘಟಪ್ರಭಾ ಘಟಕ ಅಧ್ಯಕ್ಷರಾದ ಶ್ರೀಧರ ಹಳ್ಳೂರ ಶಿಂದಿಕುರಬೇಟ ಘಟಕ‌ ಅಧ್ಯಕ್ಷರಾದ ಪ್ರಕಾಶ ಬಿರನಾಳಿ …

Read More »

ರಸ್ತೆಗಳ ಅಭಿವೃದ್ಧಿಗೆ 20 ಕೋಟಿ ರೂ.ಅನುದಾನ: ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ : ಅರಭಾವಿ ಮತಕ್ಷೇತ್ರದ ರಸ್ತೆಗಳ ಸುಧಾರಣೆಗಾಗಿ ಪಿಎಂಜಿಎಸ್‍ವಾಯ್ ಯೋಜನೆಯಡಿ 20 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಉತ್ತಮ ಗುಣಮಟ್ಟದ ಕಾಮಗಾರಿಗಳನ್ನು ಕೈಗೊಳ್ಳುವಂತೆ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಪಟ್ಟಣದಲ್ಲಿ ಬುಧವಾರ ಸಂಜೆ ಇಲ್ಲಿಯ ತಹಶೀಲ್ದಾರf ಕಚೇರಿಯಲ್ಲಿ ಜರುಗಿದ ಮೂಡಲಗಿ ತಾಲೂಕಿನ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರವಾಹ ಹಾಗೂ ನಿರಂತರ ಮಳೆಯಿಂದ ರಾಜ್ಯ ಹೆದ್ದಾರಿಗಳು, ಜಿಲ್ಲಾ ಮುಖ್ಯ …

Read More »

ಮಾಜಿ ಸಚಿವ ವಿನಯ ಕುಲಕರ್ಣಿ ಬಂಧನಕ್ಕೆ ಜಯಮೃತ್ಯುಂಜಯ ಸ್ವಾಮೀಜಿ ಆಕ್ರೋಶ

ತುಮಕೂರು : ಮಾಜಿ ಸಚಿವ ವಿನಯ ಕುಲಕರ್ಣಿಯವರನ್ನ ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದ ಹಿನ್ನೆಲೆಯಲ್ಲಿ ಜಯಮೃತ್ಯುಂಜಯ ಸ್ವಾಮೀಜಿ ಪ್ರತಿಕ್ರಿಯಿಸಿದ್ದು,  ಏಕಾಏಕಿ ವಶಕ್ಕೆ ಪಡೆಯುವ ಮೂಲಕ ವಿನಯ್ ಕುಲಕರ್ಣಿಗೆ ಅವಮಾನ ಮಾಡಲಾಗಿದೆ ಎಂದಿದ್ದಾರೆ. ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಧಾರವಾಡದಲ್ಲಿ ದ್ವೇಷದ ರಾಜಕೀಯ ತುಂಬಿ ತುಳುಕುತ್ತಿದೆ. ಸಹ ಸಮಾಜದ ನಾಯಕರು, ಸಮಾಜದ ಮುಖಂಡರನ್ನು ಈ ರೀತಿ ನಡೆಸಿಕೊಳ್ಳುವುದು ಸರಿಯಲ್ಲ. ಸಿಎಂ ಯಡಿಯೂರಪ್ಪನವರು ಇದ್ದನ್ನು ಸರಿಪಡಿಸಬೇಕು ಎಂದಿದ್ದಾರೆ. ಪ್ರಾಥಮಿಕ ವರದಿಯಲ್ಲೂ ಅವರ ಹೆಸರು …

Read More »