Breaking News

ಬೆಳಗಾವಿ

ಬೆಳಗಾವಿ ಲೋಕಸಭೆ ಉಪಚುನಾವಣೆ :ನೀವೇ ಸ್ಪರ್ಧಿಸಿ ಎಂದು ಸತೀಶ ಜಾರಕಿಹೊಳಿಗೆ ಪಟ್ಟು ಹಿಡಿದ ಕಾಂಗ್ರೆಸ್ ಮುಖಂಡರು

ಬೆಂಗಳೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರಿಗೆ ಬೆಳಗಾವಿ ಲೋಕಸಭೆ ಉಪ ಚುನಾವಣೆಗೆ ಸ್ಪರ್ಧೆ ಮಾಡುವಂತೆ ರಾಜ್ಯ ಕಾಂಗ್ರೆಸ್ ನಾಯಕರು ಪಟ್ಟು ಹಿಡಿದಿದ್ದಾರೆ. ಬೆಳಗಾವಿ ಲೋಕಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ನಿಟ್ಟಿನಲ್ಲಿ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಇಂದು ಕಾಂಗ್ರೆಸ್ ಹಿರಿಯ ನಾಯಕರ ಮಹತ್ವದ ಸಭೆ ನಡೆಯುತ್ತಿದೆ. ಸಭೆಯಲ್ಲಿ ಹಿರಿಯ ನಾಯಕ ದಿನೇಶ್ ಗುಂಡೂರಾವ್  ಅವರು ಸತೀಶ್ ಜಾರಕಿಹೊಳಿ ಅವರ ಹೆಸರನ್ನು ಪ್ರಸ್ತಾಪ ಮಾಡಿದರು. ಇದಕ್ಕೆ …

Read More »

ಅಭಿಮಾನಿಗಳಿಂದ ಕೆಎಮ್ಎಫ್ ನಿರ್ದೇಶಕರಾದ ಅಮರನಾಥ ಜಾರಕಿಹೊಳಿ ಅವರ ಹುಟ್ಟು ಹಬ್ಬ ಆಚರಣೆ.

ಗೋಕಾಕ: ಕೆಎಮ್ಎಫ್ ನಿರ್ದೇಶಕರಾದ ಅಮರನಾಥ ರ ಜಾರಕಿಹೊಳಿಯವರ ಹುಟ್ಟು ಹಬ್ಬದ ನಿಮಿತ್ಯವಾಗಿ ಇಂದು ನಗರದಲ್ಲಿ ಅಭಿಮಾನಿಗಳು ಅತ್ಯಂತ ಸರಳವಾಗಿ ಅವರ ಹುಟ್ಟು ಹಬ್ಬವನ್ನು ಆಚರಿಸಿದರು. ಅಮರನಾಥ ಜಾರಕಿಹೊಳಿ ಅವರು ತಾಲೂಕಿನ ಐದು ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಒಂದು ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಮಕ್ಕಳಿಗೆ ಅನುಕೂಲವಾಗುವಂತೆ ಎಲ್ಲ ರೀತಿಯ ಅಭಿವೃದ್ಧಿ ಮಾಡಲು ಮುಂದಾಗಿದ್ದಾರೆ. ಅದೇ ಅಮರನಾಥ ಜಾರಕಿಹೊಳಿ ಅವರ ಅನುಪಸ್ಥಿತಿಯಲ್ಲಿ ಗುರುಪ್ರಸಾದ್ ಪಾವಡೆ ಹಾಗೂ ಅನೇಕ ಅಭಿಮಾನಿಗಳು ಇಂದು ಸರಕಾರಿ …

Read More »

ನಿಂಬೆಹಣ್ಣು ಹಿಡಿದು ನಾಮಪತ್ರ ಸಲ್ಲಿಸಿದ ಗೋಕಾಕ ನಗರಸಭೆ ಅಭ್ಯರ್ಥಿ.!

ಗೋಕಾಕ: ನಗರಸಭೆ ಉಪಚುನಾವಣೆಗೆ ಸ್ಪರ್ಧಿಸಲು ಅಭ್ಯರ್ಥಿ ನಿಂಬೆಹಣ್ಣು ಕೈಯಲ್ಲಿ ಹಿಡಿದು ನಾಮಪತ್ರ ಸಲ್ಲಿಸಿ, ನಗರದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಮಾಜಿ ನಗರಸಭೆ ಸದಸ್ಯ ಗಿರೀಶ ಖೋತ ಅವರ ಅಕಾಲಿಕ ನಿಧನದಿಂದ ತೆರವಾದ ನಗರಸಭೆ ವಾರ್ಡ ನಂ13 ರ ಉಪಚುನಾವಣೆಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸಲು ಆಗಮಿಸಿದ್ದ ಅಭ್ಯರ್ಥಿ ಪ್ರವೀಣ ಪ್ರಭಾಕರ ಚುನಮರಿ ನಿಂಬೆಹಣ್ಣು ಹಿಡಿದು ನಾಮಪತ್ರ ಸಲ್ಲಿಸಿದ್ದಾರೆ. ಅಭ್ಯರ್ಥಿ ಪ್ರವೀಣ ಚುನಮರಿ ನಿಂಬೆಹಣ್ಣು ಹಿಡಿದು ನಾಮಪತ್ರ ಸಲ್ಲಿಸುವ ಪೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ …

Read More »

ಶಿವಯೋಗಿಗಳ ಸೇವೆ ಮಾಡಿದರೆ ಮನಸ್ಸಿಗೆ ತೃಪ್ಪಿ : ಶಿವಬಸವ ಸ್ವಾಮಿಜೀ

ನದಿ ಇಂಗಳಗಾಂವ: ಈ ನಾಡಿನಲ್ಲಿ ಸಾವಿರಾರು ಮಠಗಳು ಇವೆ ಅದರಲ್ಲಿ ಶಿವಯೋಗಿಗಳು ನೆನಪಿಸುವುದು ಅದು ಶ್ರೀ ಮುರಘೇಂದ್ರ ಶಿವಯೋಗಿಗಳ ಶಕ್ತಿ ಅಪಾರವಾದದ್ದುಎಂದು ಅಥಣಿಯ ಗಚ್ಚಿನಮಠ ಶಿವಬಸವ ಸ್ವಾಮಿಗಳು ಹೇಳಿದರು. ಅವರು ಅಥಣಿ ತಾಲೂಕಿನ ನದಿ ಇಂಗಳಗಾಂವ ಗ್ರಾಮದಲ್ಲಿ ನಡೆಯುತ್ತಿರುವ 60 ನೇ ಮಹಾಶಿವರಾತ್ರಿಯ ನಡೆಯುತ್ತಿರುವ ಶರಣ ಸಂಸ್ಕ್ರತಿ ಉತ್ಸವ 6 ನೇ ದಿನದ ಸಂಭ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಾ ನೂರಾರು ಹಳ್ಳಿಗಳ ಶಿವಯೋಗಿ‌ ಶ್ರೀಗಳಿಂದ ಮುರಘೇಂದ್ರ ಸ್ವಾಮಿಗಳ ಶತಮಾನೋತ್ಸವ ಅಂಗವಾಗಿ …

Read More »

ಪಾಮಲದಿನ್ನಿ ಗ್ರಾಮದಲ್ಲಿ ವಿವಿಧ ಕಟ್ಟಡ ಕಾಮಗಾರಿಗೆ ಪೂಜೆ

ಗೋಕಾಕ ತಾಲ್ಲೂಕಿನ ಪ್ರಮುಖ ಗ್ರಾಮ ಪಂಚಾಯಿತಿ ಪಾಮಲದಿನ್ನಿ ವ್ಯಾಪ್ತಿಯಲ್ಲಿ ಸುಮಾರು 1ಕೋಟಿ ರೂಪಾಯಿ ವೆಚ್ಚದಲ್ಲಿ ವಿವಿಧೆಡೆ 6 ಶಾಲಾ ಕೊಠಡಿ ಹಾಗೂ ರಾಜೀವ ಗಾಂಧಿ ಸೇವಾ ಕೇಂದ್ರದ ಕಟ್ಟಡ ಭೂಮಿ ಪೂಜೆಗೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಅಧ್ಯಕ್ಷರಾದ ಶ್ರೀ ಮಲ್ಲಪ್ಪ ಕಾಡಪ್ಪ ಕೌಜಲಗಿ,ಭೀಮಶಿ ನಿಲಜಗಿ,ಮಲ್ಲಪ್ಪ ಕಮತಿ, ತಾಲೂಕು ಪಂಚಾಯತ ಸದಸ್ಯರಾದ ಸಿದ್ದವ್ವ ಸಂಪಗಾರ, ಹಾಗೂ ಶಾಲಾ ಸುಧಾರಣ ಸಮೀತಿಯ ಸದಸ್ಯರು ಶಾಲಾ ಪ್ರದಾನ ಗುರುಮಾತೆ ಶ್ರೀಮತಿ ರೇಣುಕಾ ಹಿರೇಮನಿ ಶಾಲಾ …

Read More »

ಗೋಕಾಕ ನಗರ ಸಭೆ ವಾರ್ಡ ನಂ13ರ ಉಪಚುನಾವಣೆಯಲ್ಲಿ ಮಾವ ಅಳಿಯನ ಪೈಪೋಟಿ.

ಗೋಕಾಕ ನಗರದಲ್ಲಿ ಹಿರಿಯ ಸದಸ್ಯರಾದ ಕೋತ್ವಾಲ ಗೌಡರು ಹಾಗೂ ಗಿರೀಶ್ ಖೋತ ಅಕಾಲಿಕ ನಿಧನ ಹೊಂದಿದ ಕಾರಣ ನಗರ ವಾರ್ಡ ನಂ 13 ಮತ್ತು ವಾರ್ಡ ನಂ 26 ರಲ್ಲಿ ಉಪಚುನಾವಣೆ ಬಂದಿದೆ. ಹೌದು ವಾರ್ಡ ನಂ 13 ಕ್ಕೆ “ಸಾಮಾನ್ಯ” ಹಾಗೂ ವಾರ್ಡ ನಂ 26 ಕ್ಕೆ ಹಿಂದುಳಿದ ವರ್ಗಗಳ “ಅ” ಮೀಸಲಾತಿ ಪ್ರಕಟವಾಗಿದ್ದು. ನಾಮಪತ್ರಗಳನ್ನು ಸಲ್ಲಿಸುವ ಕೊನೆಯ ದಿನಾಂಕ 17-03-2021. ನಾಮಪತ್ರಗಳನ್ನು ಪರಿಶೀಲಿಸುವ ದಿನಾಂಕ 18-03-2021. ನಾಮಪತ್ರ …

Read More »

*ಮಹಿಳಾ ಮುಕ್ತ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಗೆ ರಾಹುಲ್ ಜಾರಕಿಹೊಳಿ ಚಾಲನೆ*

ಚಿಕ್ಕೋಡಿ : ತಾಲ್ಲೂಕಿನ ಮುಗಳಿ ಗ್ರಾಮದಲ್ಲಿ ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಬಸವಜ್ಯೋತಿ ಯೂತ್ ಫೆಡರೇಷನ್ ಸಹಯೋಗದಲ್ಲಿ ಆಯೋಜಿಸಿದ್ದ ಮಹಿಳಾ ಮುಕ್ತ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಗೆ ಯುವ ನಾಯಕ ರಾಹುಲ್ ಜಾರಕಿಹೊಳಿ ನಿನ್ನೆ ಚಾಲನೆ ನೀಡಿದರು. ಬಳಿಕ ರಾಹುಲ್ ಜಾರಕಿಹೊಳಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಕ್ರೀಡೆ ಸೇರಿ ಎಲ್ಲ ಕ್ಷೇತ್ರದಲ್ಲೂ ಸಾಧನೆ ಮಾಡುತ್ತಿದ್ದಾರೆ. ತಮ್ಮದೇಯಾದ ಚಾಪು ಮುಡಿಸುತ್ತಿದ್ದಾರೆ. ಪುರುಷರಿಗಿಂತ ನಾವೇನು ಕಡಿಮೆ ಇಲ್ಲ ಎಂಬುವುದನ್ನು ಸಾಭೀತು ಮಾಡುತ್ತಿದ್ದಾರೆ. …

Read More »

ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತಬೇಕು:ಪ್ರಿಯಾಂಕಾ ಜಾರಕಿಹೊಳಿ

ಯಮಕನಮರಡಿ: “ಮಹಿಳೆಯರು ಕಾಯ್ದೆ, ಕಾನೂನುಗಳನ್ನು ತಿಳಿದುಕೊಳ್ಳಬೇಕು. ಸಮಾಜದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಹಿಂದೇಟು ಹಾಕಬಾರದು” ಎಂದು ಯುವ ಮುಖಂಡರಾದ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು. ಗ್ರಾಮದಲ್ಲಿ ಸಂಜೀವಿನಿ ಗ್ರಾಮ ಪಂಚಾಯ್ತಿ ಮಟ್ಟದ ಒಕ್ಕೂಟಗಳು, ಯಮಕನಮರಡಿ, ಹತ್ತರಗಿ ಹಾಗೂ ಜಿಲ್ಲಾ ಸ್ತ್ರೀ ಒಕ್ಕೂಟ ಮತ್ತು ಹುಕ್ಕೇರಿ ತಾಲೂಕು ಸ್ತ್ರೀ ಶಕ್ತಿ ಒಕ್ಕೂಟ ಹಾಗೂ ವಿವಿಧ ಸರ್ಕಾರಿ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. “ಅಮೇರಿಕಾದಲ್ಲಿ 1914ರಲ್ಲಿ …

Read More »

ರಸ್ತೆ ಕಾಮಗಾರಿ ಪರಿಶೀಲಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷರು ಸತೀಶ ಜಾರಕಿಹೊಳಿ

ಬೆಳಗಾವಿ: ತಾಲೂಕಿನ ಕಾಕತಿ ಗ್ರಾಮದಲ್ಲಿ 70 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ರಸ್ತೆ ಕಾಮಗಾರಿಯನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಶಾಸಕ ಸತೀಶ ಜಾರಕಿಹೊಳಿ ಅವರು ಶುಕ್ರವಾರ ಪರಿಶೀಲಿಸಿದರು. “ಗುಣಮಟ್ಟದ ಕಾಮಗಾರಿ ಕೈಗೊಳ್ಳಿ, ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಿ” ಎಂದು ಸತೀಶ ಅವರು ಗುತ್ತಿಗೆದಾರರಿಗೆ ಸೂಚಿಸಿದರು. ಇದೇ ಸಂದರ್ಭದಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದರು. ಮುಖಂಡರಾದ ರಾಮಣ್ಣ ಗುಳ್ಳಿ, ಸುರೇಶ ನಾಯ್ಕ್, ಮಾರುತಿ ಮಸ್ತಿ, ಮಾರುತಿ ಚೌಗಲೆ, ಹನುಮಂತ …

Read More »

ಶರಣಸಂಸ್ಕೃತಿ ಉತ್ಸವದಲ್ಲಿ ಯುವ ಮುಖಂಡ ರಾಹುಲ್ ಜಾರಕಿಹೊಳಿಗೆ ಸತ್ಕಾರ

ಮೂಡಲಗಿ: “ಯೋಗದಿಂದ ರೋಗಮುಕ್ತ ಸಮಾಜ ನಿರ್ಮಾಣ ಸಾಧ್ಯವಿದೆ. ಪ್ರತಿಯೊಬ್ಬರು ಯೋಗವನ್ನು ರೂಢಿಸಿಕೊಳ್ಳಬೇಕು” ಎಂದು ಅಮೃತಾನಂದ ಸ್ವಾಮೀಜಿ ಹೇಳಿದರು. ತಾಲೂಕಿನ ವಡೇರಹಟ್ಟಿ ಗ್ರಾಮದ ಮಲ್ಲಿಕಾರ್ಜುನ ಮಠದಲ್ಲಿ ಬುಧವಾರ ಸಂಜೆ ಆಯೋಜಿಸಿದ್ದ ಶರಣಸಂಸ್ಕೃತಿ ಉತ್ಸವ, ವೇದಾಂತ ಕೇಸರಿ ಮಲ್ಲಿಕಾರ್ಜುನ ಶಿವಯೋಗಿಗಳ ಸ್ಮರಣೋತ್ಸವ ಹಾಗೂ ಸಿದ್ದಲಿಂಗ ಸ್ವಾಮೀಜಿಗಳ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಸ್ವಾಮೀಜಿಗಳು ಮಾತನಾಡಿದರು. “ಪ್ರತಿದಿನ ಯೋಗ ಮಾಡುವುದರಿಂದ ರೋಗಗಳನ್ನು ದೂರವಿಡಬಹುದು. ಯೋಗದಿಂದ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಸಾಧ್ಯವಿದೆ” ಎಂದರು. “ಮಾಟ-ಮಂತ್ರ, ಮೂಢನಂಬಿಕೆಗಳಿಂದ ಜನರು ಹೊರಬರಬೇಕು. …

Read More »