Breaking News

ಬೆಳಗಾವಿ

ಜನ ಕಲ್ಯಾಣಕ್ಕಾಗಿ ನವ ಚಂಡಿಕಾ ಹೋಮ ನೆರವೇರಿಸಿದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಗೋಕಾಕ : ಕ್ಷೇತ್ರದ ಜನರು, ಕೆಎಂಎಫ್ ಸಂಸ್ಥೆಯ ಪ್ರಗತಿ ಹಾಗೂ ಕುಟುಂಬಸ್ಥರ ಏಳ್ಗೆಗಾಗಿ ಕೆಎಂಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ತೆರಳಿ ನವ ಚಂಡಿಕಾ ಹೋಮ ನೆರವೇರಿಸಿದರು. ಕಳೆದ ಭಾನುವಾರ ಮತ್ತು ಸೋಮವಾರದಂದು ಎರಡು ದಿನಗಳವರೆಗೆ ಉಡುಪಿ ಜಿಲ್ಲೆಯ ನಾಡಿನ ಸುಪ್ರಸಿದ್ಧ ದೇವಸ್ಥಾನವಾಗಿರುವ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ವಿಶೇಷ ಪೂಜೆ ಮತ್ತು ಹೋಮ-ಹವನ ನೆರವೇರಿಸಿದರು. ಕಳೆದ ಎರಡು ವರ್ಷಗಳಿಂದ ಕೋವಿಡ್ ಮಹಾಮಾರಿಗೆ …

Read More »

ಆನಂದ ಚೋಪ್ರಾ ಪ್ರಥಮ ಪುಣ್ಯಸ್ಮರಣೆ; ಶಾಸಕ ರಮೇಶ ಜಾರಕಿಹೊಳಿ, ಯುವ ನಾಯಕ ರಾಹುಲ್ ಜಾರಕಿಹೊಳಿ ಭಾಗಿ

ಸವದತ್ತಿ: ಉದ್ಯಮಿ ಹಾಗೂ ರಾಜಕೀಯ ದುರೀಣರಾಗಿದ್ದ ದಿ.ಆನಂದ ಚೋಪ್ರಾ ಅವರ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮ ಇಲ್ಲಿನ ಎಪಿಎಮ್‍ಸಿ ಆವರಣದಲ್ಲಿ ರವಿವಾರ ಜರುಗಿತು. ಮಾಜಿ ಸಚಿವ ಹಾಗೂ ಶಾಸಕ ರಮೇಶ ಜಾರಕಿಹೊಳಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಆನಂದ ಚೋಪ್ರಾ ಭಾವಚಿತ್ರಕ್ಕೆ  ಪುಷ್ಪಾರ್ಚನೆ ಮಾಡಿದರು. ಕಾಂಗ್ರೆಸ್ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು. ಪುಣ್ಯಸ್ಮರಣೆ ಅಂಗವಾಗಿ ಕೊರೊನಾ ವಾರಿಯರ್ಸ ಗಳಾಗಿ ಸೇವೆ ಸಲ್ಲಿಸಿದ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, …

Read More »

ಕೋವಿಡ್ ವ್ಯಾಕ್ಸಿನ್ ಸುರಕ್ಷಿತ, ನಿರ್ಭಯದಿಂದ ಲಸಿಕೆ ಹಾಕಿಸಿಕೊಳ್ಳಿ :ಲಕ್ಷ್ಮಣ ಖಡಕಭಾಂವಿ

ಗೋಕಾಕ :  ಕೋವಿಡ್ ವ್ಯಾಕ್ಸಿನ್ ಸುರಕ್ಷತೆಯಿಂದ ಕೂಡಿದ್ದು, 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ನಿರ್ಭಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಲಕ್ಷ್ಮಣ ಖಡಕಭಾಂವಿ ಹೇಳಿದರು. ಸೋಮವಾರ ವಾರ್ಡ ನಂ19 ಹಾಗೂ 20 ರ ಮಾರ್ಕಂಡೇಯ/ಮಹಾಲಿಂಗೇಶ್ವರ ನಗರದಲ್ಲಿ ಲಸಿಕಾ ಕೇಂದ್ರದಲ್ಲಿ ಲಸಿಕಾ ಮೇಳ ಹಮ್ಮಿಕೊಂಡಿದ್ದರು. ನಂತರ ಮಾತನಾಡಿದ ಅವರು ನಾವು ಹಾಗೂ ನಮ್ಮ ಕುಟುಂಬದವರು ಎಲ್ಲರೂ ಕೋವಿಡ್ ಲಸಿಕೆ ಪಡೆದಿದ್ದು, ಉತ್ತಮ ಅನುಭವ ಹೊಂದಿದ್ದೇನೆ. ಆರೋಗ್ಯದ ಮೇಲೆ …

Read More »

ಮೂಡಲಗಿ ತಾಲ್ಲೂಕಿಗೆ ಹೊಸ ಕಾರ್ಮಿಕ ನಿರೀಕ್ಷಕರ ಕಛೇರಿ ಮಂಜೂರು : ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ : ಮೂಡಲಗಿ ತಾಲ್ಲೂಕಿಗೆ ಹೊಸ ಕಾರ್ಮಿಕ ನಿರೀಕ್ಷಕರ ಕಛೇರಿ ಮಂಜೂರಾಗಿದೆ ಎಂದು ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ. ಮೂಡಲಗಿ ಸೇರಿದಂತೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಹಾಗೂ ಕಾಗವಾಡ ಹೊಸ ತಾಲೂಕುಗಳಿಗೆ ಕಾರ್ಮಿಕ ನಿರೀಕ್ಷಕರ ಕಛೇರಿಗಳನ್ನು ಆರಂಭಿಸಲು ಈಗಾಗಲೇ ಸರ್ಕಾರ ಮಂಜೂರಾತಿ ನೀಡಿದೆ ಎಂದು ತಿಳಿಸಿದ್ದಾರೆ. ಮಂಡಳಿಯ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಹಾಗೂ ಕಟ್ಟಡ ಕಾರ್ಮಿಕರ ನೋಂದಣಿ ಮಾಡಲು ಅವರಿಗೆ ಸೌಲಭ್ಯಗಳನ್ನು ಸಮರ್ಪಕವಾಗಿ ವಿತರಿಸಲು ಅನುಕೂಲವಾಗುವಂತೆ …

Read More »

ಫಲಿಸದ ಪ್ರಾರ್ಥನೆ; ನಿನ್ನೆ ಕಾಣೆಯಾಗಿದ್ದ ಮಗು ಇಂದು ಶವವಾಗಿ ಪತ್ತೆ!

ಬೆಳಗಾವಿ : ಎರಡೂವರೆ ವರ್ಷದ ಮಗುವೊಂದು ತೆರೆದ ಬೋರ್ ವೆಲ್ ಗೆ ಬಿದ್ದ ಘಟನೆ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಅಲಖನೂರು ಗ್ರಾಮದಲ್ಲಿ ನಡೆದಿದ್ದು, ಇದೀಗ ಕೊಳವೆ ಬಾವಿಗೆ ಬಿದ್ದ ಮಗು ಶವವಾಗಿ ಪತ್ತೆಯಾಗಿದೆ. ಹೌದು, ಕೊಳವೆ ಬಾವಿಗೆ ಬಿದ್ದಂತಹ ಬಾಲಕ ಶರತ್ ಮೃತದೇಹ ಪತ್ತೆಯಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.ಎರಡೂವರೆ ವರ್ಷದ ಬಾಲಕ ಶರತ್ ಹಸಿವೆ 15 ಅಡಿ ಆಳದ ಬೋರ್ ವೆಲ್ ನಲ್ಲಿ ಬಿದ್ದಿದ್ದು, ಬಾಲಕನನ್ನು ಸುರಕ್ಷಿತವಾಗಿ ಹೊರಕ್ಕೆ …

Read More »

ವಿಜಯೇಂದ್ರಗೆ ದೇಶದ ಇತಿಹಾಸ ಗೊತ್ತಿಲ್ಲ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ತಿರುಗೇಟು

ಯಮಕನಮರಡಿ: ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರಗೆ ದೇಶದ ಇತಿಹಾಸ ಗೊತ್ತಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಟಾಂಗ್ ನೀಡಿದರು. ಮತಕ್ಷೇತ್ರದ ಪಾಶ್ಚಾಪುರ ಗ್ರಾಮದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ 50 ವರ್ಷಗಳ ಕಾಲ ದೇಶವನ್ನು ಆಳಿದೆ. ಅನೇಕ ಉದ್ಯೋಗಗಳನ್ನು ಸೃಷ್ಟಿಸಿದೆ. ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿದೆ. ಇದನ್ನು ವಿಜಯೇಂದ್ರಗೆ ತಿಳಿದುಕೊಳ್ಳಬೇಕು ಎಂದರು. ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಎಷ್ಟು ಉದ್ಯೋಗಗಳನ್ನು ನೀಡಲಾಗಿದೆ. ಬಿಜೆಪಿ ಸರ್ಕಾರದ 7 ವರ್ಷಗಳ ಆಡಳಿತಾವಧಿಯಲ್ಲಿ ಎಷ್ಟು …

Read More »

ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಅಂಗವಾಗಿ ಏರ್ಪಡಿಸಲಾದ ಲಸಿಕಾ ಮೆಗಾ ಮೇಳವನ್ನು ಯಶಸ್ವಿಗೊಳಿಸಿ : ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ : ಪ್ರಧಾನಿ ನರೇಂದ್ರ ಮೋದಿಯರವ ಹುಟ್ಟು ಹಬ್ಬದಂದು ರಾಜ್ಯ ಆರೋಗ್ಯ ಇಲಾಖೆ ಲಸಿಕೆ ಮೆಗಾ ಮೇಳ ಹಮ್ಮಿಕೊಂಡಿದ್ದು, ಲಸಿಕೆ ಮೆಗಾ ಮೇಳ ಕಾರ್ಯಕ್ರಮದ ಸದುಪಯೋಗವನ್ನು ಅರಭಾoವಿ ಮತಕ್ಷೇತ್ರದ ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ. ಸೆ.17 ಶುಕ್ರವಾರದಂದು ತಾಲೂಕಿನ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಗೂ ಆಯ್ದ ಅಂಗನವಾಡಿ ಕೇಂದ್ರಗಳಲ್ಲಿ ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದ್ದು, 18 ವರ್ಷ ಮೇಲ್ಪಟ್ಟ ಎಲ್ಲ ಸಾರ್ವಜನಿಕರು ನಿಮ್ಮ ಗ್ರಾಮದ …

Read More »

ಮೋದಿಜೀಯವರ ೭೧ನೇಯ ಜನ್ಮದಿನ ಅಂಗವಾಗಿ ವಿವಿಧ ಕಾರ್ಯಕ್ರಮ-ಭೀಮಶಿ ಭರಮಣ್ಣವರ.!

ಗೋಕಾಕ: ವಿಶ್ವದ ಅಗ್ರಗಣ್ಯ ನಾಯಕ, ದೇಶದ ನೆಚ್ಚಿನ ಪ್ರಧಾನ ಮಂತ್ರಿ ನರೇಂದ್ರ ಮೋದಿಜೀಯವರ ೭೧ನೇಯ ಜನ್ಮದಿನದ ಅಂಗವಾಗಿ ಬಿಜೆಪಿಯಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ದಿ.೧೭ ರಂದು ಮುಂಜಾನೆ ೧೦ ಗಂಟೆಗೆ ಶಾಸಕ ರಮೇಶ ಜಾರಕಿಹೊಳಿ ಅವರ ಗೃಹ ಕಚೇರಿಯಲ್ಲಿ ಮೋದಿಯವರ ಜನ್ಮದಿನದ ಆಚರಣೆ ನಡೆಸಿ, ನಗರದಲ್ಲಿರುವ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಾಗೂ ಶಿವಾ ಫೌಂಡೇಶನ್‌ನ ಮಕ್ಕಳಿಗೆ ಹಣ್ಣು ಹಂಪಲು ವಿತರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಭಾರತೀಯ ಜನತಾ ಪಾರ್ಟಿಯ ನಗರ ಹಾಗೂ …

Read More »

ಬೆಳಗಾವಿಯಲ್ಲಿ ಅನಧಿಕೃತ ಧಾರ್ಮಿಕ ಕೇಂದ್ರಗಳ ತೆರವಿಗೆ ಸಿದ್ಧತೆ!

ಬೆಳಗಾವಿ: ಅನಧಿಕೃತವಾಗಿ ನಿರ್ಮಾಣ ಗೊಂಡಿರುವ ಧಾರ್ಮಿಕ ಕೇಂದ್ರಗಳ ತೆರವಿಗೆ ಸುಪ್ರೀಂ ಕೋರ್ಟ್‌ ಆದೇಶ ಹಿನ್ನೆಲೆಯಲ್ಲಿ ಜಿಲ್ಲಾಡಳಿತವೂ ಕಾರ್ಯಾಚರಣೆಗೆ ಮುಂದಾಗಿದ್ದು, ಬೆಳಗಾವಿ ಮಹಾನಗರದಲ್ಲಿರುವ 39 ಧಾರ್ಮಿಕ ಕೇಂದ್ರಗಳ ತೆರವು ಆಗಲಿದೆ. ಆದರೆ ಇದಕ್ಕೆ ಹಿಂದೂ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ದೇಶಾದ್ಯಂತ ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವ ಹಾಗೂ ಸಂಚಾರ ದಟ್ಟಣೆಗೆ ಕಾರಣವಾಗಿರುವ ಧಾರ್ಮಿಕ ಕೇಂದ್ರಗಳನ್ನು ತೆರವು ಮಾಡಬೇಕೆಂಬ ಸುಪ್ರೀಂ ಕೋರ್ಟ್‌ ಆದೇಶ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿಯೂ ಜಿಲ್ಲಾಡಳಿತ ಕೇಂದ್ರಗಳನ್ನು ಗುರುತಿಸಿದೆ. ಅದರಂತೆ ಈಗ ಸದ್ಯ …

Read More »

ಗೋಕಾಕ ವಾರ್ಡ ನಂ 7ರಲ್ಲಿ ಗಣೇಶೋತ್ಸವ ಆಚರಣೆ !

ಗೋಕಾಕ: ನಗರದ ನಾಯಕ ಗಲ್ಲಿಯಲ್ಲಿ ಶ್ರೀ ಗಜಾನನ ಯುವಕ ಮಂಡಳಿ ವತಿಯಿಂದ ಸರಳವಾಗಿ ಗಣೇಶೋತ್ಸವ ಆಚರಿಸಿ, ರಂಗೋಲಿ ಸ್ಪರ್ಧೆ ಸಹ ಏರ್ಪಡಿಸಲಾಗಿತ್ತು. ನಂತರ ಗಜಾನನ ಯುವಕ ಮಂಡಳಿಯಿಂದ ರಂಗೋಲಿ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಎಸ್ಟಿ ಮೋರ್ಚಾ ಅಧ್ಯಕ್ಷ ರವಿ ಲಕ್ಕಪ್ಪ ಮುಡ್ಡಪ್ಪಗೋಳ ,ಎಸ್ಪಿ ಉಪಾಧ್ಯಕ್ಷರಾದ ಪುಂಡಲಿಕ ಪೂಜಾರಿ, ಪರಶುರಾಮ್ ಪೂಜಾರಿ, ಆನಂದ್ ಪೂಜೇರಿ ಲಕ್ಷ್ಮಣ್ ಮುಡ್ಡಪ್ಪಗೋಳ, ಭೀಮರಾಯ ಪೂಜೇರಿ, ಪ್ರದೀಪ್ ತಳವಾರ, ಜಿಲ್ಲಾ ರೈತ …

Read More »