Breaking News

ಬೆಳಗಾವಿ

ಸಮಾಜವನ್ನು ಒಗ್ಗೂಡಿಸುವ ಶಕ್ತಿ ಯುವಕರ‌ ಕೈಯಲ್ಲಿದೆ: ಯುವ ನಾಯಕ ರಾಹುಲ್‌ ಜಾರಕಿಹೊಳಿ

ಮಹರ್ಷಿ ಶ್ರೀ ವಾಲ್ಮೀಕಿ ಯುವಕ ಹಾಗೂ ರಾಹುಲ್ ಅಣ್ಣಾ ಅಭಿಮಾನಿ ಬಳಗದ ನಾಪಫಲಕ ಉದ್ಘಾಟಿಸಿದ ರಾಹುಲ್‌ ಜಾರಕಿಹೊಳಿ ಯಮಕನಮರಡಿ: “ಸಮಾಜದಲ್ಲಿ ತುಂಬಿದ್ದ ಅಜ್ಞಾನವನ್ನು ಹೊಗಲಾಡಿಸಲು ಶ್ರೀ ವಾಲ್ಮೀಕಿ ಅವರು ಅನೇಕ ಗ್ರಂಥಗಳನ್ನು ರಚನೆ ಮಾಡಿದ್ದಾರೆ. ಮನುಕುಲದ ಜ್ಞಾನ ಜ್ಯೋತಿಯಾಗಿರುವ ಮಹರ್ಷಿ ಶ್ರೀ ವಾಲ್ಮೀಕಿ ಅವರನ್ನು ಮನದಲ್ಲಿ ನೆನೆದಾಗ ಮಾತ್ರ ಯುವಕರ ಭವಿಷ್ಯ ಉಜ್ವಲವಾಗುವುದು” ಎಂದು ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಹೇಳಿದರು. ಯಮಕನಮರಡಿ ಮತಕ್ಷೇತ್ರದ ಜುಮನಾಳ ಗ್ರಾಮದಲ್ಲಿ ಇಂದು …

Read More »

*ಮಳೆಹಾನಿ ಪ್ರದೇಶಕ್ಕೆ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ಭೇಟಿ, ಪರಿಶೀಲನೆ!*

ಗೋಕಾಕ: ತಾಲೂಕಿನ ಮಾಣಿಕವಾಡಿ ಗ್ರಾಮದಲ್ಲಿ ಸೋಮವಾರ ಬೆಳಿಗ್ಗೆ ಸುರಿದ ಭಾರಿ ಮಳೆಯಿಂದಾಗಿ ಸುಮಾರು ನೂರಕ್ಕು ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸುರೀದ ಭಾರಿ ಮಳೆಗೆ ಮಾಣಿಕವಾಡಿ, ಮರಡಿಮಠ ಕ್ರಾಸ್ ಸೇರಿ ಕೊಣ್ಣೂರು ರಸ್ತೆಯ ಬದಿಯ ಮನೆಗಳಿಗೆ ಭಾರಿ ಪ್ರಮಾಣದ ನೀರು ನುಗ್ಗಿದ್ದು, ಮೇಲ್ಮಟ್ಟಿ ಗುಡ್ಡದ ಪ್ರದೇಶದಲ್ಲಿ ಮೇಘ ಸ್ಫೋಟಗೊಂಡಿರಬಹುದು ಎಂದು ಗ್ರಾಮಸ್ಥರು ಮಾತನಾಡಿಕೊಳ್ಳುತ್ತಿದ್ದಾರೆ. ಮಾಣಿಕವಾಡಿ, ಕೊಣ್ಣೂರ ರಸ್ತೆಯ …

Read More »

ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಪದವಿ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳ ಬಿಳ್ಕೋಡಿಗೆ!

ಗೋಕಾಕ: ವಿದ್ಯಾರ್ಥಿಗಳು ಪದವಿಯೊಂದಿಗೆ ಪ್ರಜ್ಞಾವಂತರಾಗಿ ತಮ್ಮ ಸುಂದರವಾದ ಬದುಕನ್ನು ರೂಪಿಸಿಕೊಳ್ಳುವಂತೆ ಎಸ್.ಎಲ್.ಜೆ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಎ ಬಿ ಪಾಟೀಲ ಹೇಳಿದರು. ಅವರು, ರವಿವಾರದಂದು ನಗರದ ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಪದವಿ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳ ಬಿಳ್ಕೋಡುವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ವಿದ್ಯಾರ್ಥಿಗಳು ನಿರ್ದಿಷ್ಟ ಗುರಿಯೊಂದಿಗೆ ತಾವು ಕಲಿತ ವಿದ್ಯೆ ಹಾಗೂ ತಮ್ಮಲ್ಲಿರುವ ಕೌಶಲ್ಯಗಳಿಂದ ಸಾಧಕರಾಗಿ ಉತ್ತಮ ಸಂಸ್ಕಾರವಂತರಾಗಿ, ಒಳ್ಳೆಯ ನಾಗರಿಕರಾಗಿ, ಸಮಾಜ ಗೌರವಿಸುವಂತಹ ವ್ಯಕ್ತಿಗಳಾಗಿರೆಂದು ಹಾರೈಸಿದರು. ವೇದಿಕೆಯ …

Read More »

ಪತ್ರಿಕಾ ವಿತರಕರ ಪಾದ ತೊಳೆದು ಸನ್ಮಾನಿಸಿದ ಪತ್ರಕರ್ತರು

ಪತ್ರಿಕಾ ವಿತರಕರ ದಿನಾಚರಣೆ ನಿಮಿತ್ಯ ವಿಶೇಷವಾಗಿ ಸನ್ಮಾನಿಸಿದ ಪತ್ರಕರ್ತರು, ಮೂಡಲಗಿ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ವಿತರಕರಿಗೆ ವಿಶೇಷ ಗೌರವ, ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕು ಪತ್ರಕರ್ತರಿಂದ ವಿತರಕರಿಗೆ ವಿಶೇಷ ಗೌರವ, ಮೂಡಲಗಿ ಪತ್ರಕರ್ತರ ಸಂಘದ ಅಧ್ಯಕ್ಷ ಕೃಷ್ಣಾ ಗಿರೆನ್ನವರ್ ಹಾಗೂ ವಿತರಕರ ಮುಖಂಡ ಶಿವಬಸು ಗಾಡವಿ ಅವರಿಂದ ಪಾದ ಪೂಜೆ, ಮೂಡಲಗಿ ಪಟ್ಟಣದ ಪ್ರೆಸ್ ಕ್ಲಬ್ ನಲ್ಲಿ ನಡೆದ ಸಮಾರಂಭದಲ್ಲಿ ಪಾದಪೂಜೆ, ಪತ್ರಿಕಾ ಸಂಪಾದಕರು, ಜಾಹೀರಾತು ವಿಭಾಗ, ಪ್ರಸಾರಂಗಣ …

Read More »

*ಆರ್‌ಡಿಪಿಆರ್‌ನಿಂದ ರಸ್ತೆಗಳ ಅಭಿವೃದ್ಧಿಗೆ ೧೬ ಕೋಟಿ ರೂ. ಬಿಡುಗಡೆ : ಶಾಸಕ ಬಾಲಚಂದ್ರ ಜಾರಕಿಹೊಳಿ*

ಮೂಡಲಗಿ : ಅರಭಾವಿ ವಿಧಾನಸಭಾ ಮತಕ್ಷೇತ್ರದ ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ (ಆರ್‌ಡಿಪಿಆರ್)ಯಿಂದ 16 ಕೋಟಿ ರೂ.ಗಳ ವಿಶೇಷ ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕ ಮತ್ತು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ. ಅರಭಾವಿ ಕ್ಷೇತ್ರದಲ್ಲಿ ಹದಗೆಟ್ಟ ರಸ್ತೆಗಳ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕ್ಷೇತ್ರಕ್ಕೆ ಆರ್‌ಡಿಪಿಆರ್ ನಿಂದ ೧೬ ಕೋಟಿ ರೂ.ಗಳ ವಿಶೇಷ ಅನುದಾನ ನೀಡಿದ್ದು, ಅದಕ್ಕಾಗಿ ಮುಖ್ಯಮಂತ್ರಿಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ಬಾಲಚಂದ್ರ …

Read More »

ನರೇಗಾ ಯೋಜನೆಯಿಂದ ಗ್ರಾಮೀಣಾಭಿವೃದ್ಧಿ ಸಾಧ್ಯ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ

ಬೆಳಗಾವಿ: ನರೇಗಾ ಯೋಜನೆಯಿಂದ ಸರ್ವ ಗ್ರಾಮಗಳ ಅಭಿವೃದ್ಧಿ ಸಾಧ್ಯವಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್‌ ಜಾರಕಿಹೊಳಿ ಅವರು ಹೇಳಿದರು.ಯಮಕನಮರಡಿ ಮತಕ್ಷೇತ್ರದ ಹೊಸ ವಂಟಮೂರಿ ಗ್ರಾಮದಲ್ಲಿ ನರೇಗಾ ಯೋಜನೆಯಡಿ 1 ಕೋಟಿ ರೂ. ವೆಚ್ಚದ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಸಮುದಾಯದ ಸಹಯೋಗದೊಂದಿಗೆ ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಗೆ ಮುಕ್ತ ಅವಕಾಶ ಕಲ್ಪಿಸುವ ನರೇಗಾ ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕು. ಗ್ರಾಮೀಣ ಪ್ರದೇಶದ ಜನರು ಉದ್ಯೋಗಕ್ಕಾಗಿ …

Read More »

*ಸೆ. 24ರಂದು ಜಿಲ್ಲಾ ಮಟ್ಟದ ಉಪ್ಪಾರ ಸಮಾಜದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ*

ಗೋಕಾಕ: ಹಿಂದುಳಿದ ಸಮುದಾಯವಾಗಿರುವ ಉಪ್ಪಾರ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಶೈಕ್ಷಣಿಕ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡಲು ಮಕ್ಕಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಇದೆ ದಿ.೨೪ರ ಶನಿವಾರದಂದು ಹಮ್ಮಿಕೊಳ್ಳಲಾಗಿದೆ ಎಂದು ಗೋಕಾಕ ತಾಲೂಕ ಭಗೀರಥ ಉಪ್ಪಾರ ಸಮಾಜದ ಅಧ್ಯಕ್ಷ ಶಿವಪುತ್ರ ಜಕಬಾಳ ಹೇಳಿದರು. ಅವರು ನಗರದ ಪ್ರವಾಸಿ ಮಂದಿರದಲ್ಲಿ ಕರೇದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗೋಕಾಕ ಮತ್ತು ಮೂಡಲಗಿ ಶ್ರೀ ಭಗೀರಥ ಉಪ್ಪಾರ ಸಂಘದ ಸಹಯೋಗದಲ್ಲಿ ದಿ.24ರಂದು …

Read More »

ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ಸಂಘಟನೆಯಿಂದ ರಬಕವಿ ಬನಹಟ್ಟಿ ಕಾರ್ಯಾಲಯಕ್ಕೆ ಮುತ್ತಿಗೆ!

ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮ ವಾದ ಜಿಲ್ಲಾ ಸಮಿತಿ ಪೌರಾಯುಕ್ತರು ನಗರಸಭೆ ರಬಕವಿ ಬನಹಟ್ಟಿ ಕಾರ್ಯಾಲಯ ಮುತ್ತಿಗೆ ಹಾಕ್ಕಿ ಪ್ರತಿಭಟನೆ ನಡೆಸಿದರು   ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ನಗರದ ನಿವೇಶನ ರಹಿತ ಫಲಾನುಭವಿಗಳಿಗೆ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿ ಭೀಮ ವಾದ ಸಂಘಟನೆ ಪ್ರತಿಭಟನೆ ಮುಖಾಂತರ ಮನವಿ ಮಾನ್ಯ ಪೌರಾಯುಕ್ತರು ನಗರಸಭೆ ಇವರಿಗೆ ಸಲ್ಲಿಸಲಾಯಿತು *ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮ ವಾದ ಜಿಲ್ಲಾ …

Read More »

*ಘಟಪ್ರಭಾ; ನಕಲಿ ನೋಟು ಮುದ್ರಿಸಿ ಚಲಾವಣೆಗೆ ಯತ್ನಿಸಿದವರ ಬಂಧನ!*

ಘಟಪ್ರಭಾ: ನಕಲಿ ನೋಟು ಮುದ್ರಿಸಿ ಚಲಾವಣೆಗೆ ಯತ್ನಿಸಿದ , ಮೂವರು ಆರೋಪಿಗಳನ್ನು ಘಟಪ್ರಭಾ ಠಾಣೆ ಪೊಲೀಸರು ಬಂಧಿಸಿದ್ದಾರೆ . ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಘಟಪ್ರಭಾ ಪಟ್ಟಣದಲ್ಲಿ ಘಟನೆ ನಡೆದಿದೆ. ರಾಯಚೂರು ಜಿಲ್ಲೆಯ ಸಿಂಧನೂರು ಮೂಲದ ಕಿರಣ್‌ಕುಮಾರ ರಂಗರೇಜ್ , ಕೊಪ್ಪಳ ಜಿಲ್ಲೆಯ ಕಾರಟಗಿ ಮೂಲದ ಸಾಗರ ನಿರಂಜನ್ , ಉಡುಪಿ ಜಿಲ್ಲೆಯ ಕೊಲ್ಲೂರು ಮೂಲದ ಶಶಿಧರ ಶೆಟ್ಟಿ ಬಂಧಿತ ಆರೋಪಿಗಳಾಗಿದ್ದಾರೆ . ಬಾರ್‌ನಲ್ಲಿ ನಕಲಿ ನೋಟು ಚಲಾವಣೆಗೆ ಮುಂದಾಗಿದ್ದ …

Read More »

ಬೀದಿ ನಾಯಿಗಳ ದಾಳಿ – ಯುವಕನಿಗೆ ಗಂಭೀರ ಗಾಯ ಜಲಾಲ್ ಗಲ್ಲಿಯಲ್ಲಿ ಘಟನೆ!

ಗೋಕಾಕ : ಯುವಕನ ಮೇಲೆ ಬೀದಿ ನಾಯಿ ದಾಳಿ ಮಾಡಿ ಗಾಯಗೊಳಿಸಿರುವ ಘಟನೆ ನಗರದ ಜಲಾಲ್ ಗಲ್ಲಿಯಲ್ಲಿ ಇಂದು ಮಂಗಳವಾರ ನಡೆದಿದೆ. ಯುವಕ ಆಟ ಆಡುವ ಸಂದರ್ಭದಲ್ಲಿ ಬೀದಿ ನಾಯಿಯು ಯುವಕನ ಕಾಲಿಗೆ ಕಚ್ಚಿ ಗಂಭೀರವಾಗಿ ಗಾಯಗೋಳಿಸಿದೆ. ಜಲಾಲ್ ಗಲ್ಲಿ ಸೇರಿದಂತೆ ನಗರದ ಇತರೆ ಬಡಾವಣೆಯಲ್ಲಿ ಬೀದಿನಾಯಿಗಳ ಹಾವಳಿ ಮಿತಿಮೀರಿದ್ದು ಪ್ರತಿನಿತ್ಯ ರಸ್ತೆಯಲ್ಲಿ ಜನರು ಓಡಾಡುವುದೇ ಕಷ್ಟವಾಗಿದೆ. ಮಕ್ಕಳು ಆಟ ಆಡುವಾಗ, ಶಾಲೆಯಿಂದ ಬರುವಾಗ, ಹಿರಿಯ ನಾಗರಿಕರು ವಾಹುವಿಹಾರಕ್ಕೆ ಹೋದಾಗ …

Read More »