ಗೋಕಾಕ : ತಾಲೂಕಿನ ಹಿರೇನಂದಿ ಗ್ರಾಮದ ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಕಾರ್ಖಾನೆಯಲ್ಲಿ ಆವರಣದಲ್ಲಿ ವಿಶ್ವಕರ್ಮ ಜಯಂತ್ಯೋತ್ಸವ ಆಚರಿಸಿದರು. ಕಾರ್ಖಾನೆಯಲ್ಲಿ ಆವರಣದಲ್ಲಿ ವಿಶ್ವಕರ್ಮ ಅವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಮೂಲಕ ಜಯಂತಿಯನ್ನು ಆಚರಿಸಿ ನಂತರ ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರಮನ್ ರಾದ ಸಂತೋಷ ಜಾರಕಿಹೊಳಿ ಅವರು ಮಾತನಾಡಿ ಸೃಷ್ಟಿ ಮತ್ತು ಸೃಷ್ಟಿಯ ಸಂಕೇತ, ಕರಕುಶಲತೆಯಲ್ಲಿ ಅತ್ಯುನ್ನತ, ಶಿಲ್ಪಿ, ವಿಶ್ವಕರ್ಮ ಜೀ ಅವರನ್ನು ನೆನೆಯೋಣ, ಮತ್ತು ರಾಷ್ಟ್ರ ನಿರ್ಮಾಣದಲ್ಲಿ ತೊಡಗಿಸಿಕೊಂಡಿರುವ ಕಠಿಣ …
Read More »ಮರಾಠಿ ಬಾಯ್ಸ್ 3 ಚಲನಚಿತ್ರ ಬಿಡುಗಡೆಗೆ ಕರವೇ ವಿರೋಧ! ಚಲನಚಿತ್ರ ಬಿಡುಗಡೆ ಮಾಡದಂತೆ ಆಗ್ರಹ.
ಘಟಪ್ರಭಾ : ಬಾಯ್ಸ್ 3 ಮರಾಠಿ ಚಲನಚಿತ್ರ ಬಿಡುಗಡೆಗೆ ಕರ್ನಾಟಕ ರಕ್ಷಣಾ ವೇದಿಕೆ ವಿರೋಧ ನಾಳೆ ಬಿಡುಗಡೆ ಆಗಲಿರುವ ವಿವಾದಾತ್ಮಕ ಮರಾಠಿ ಚಲನಚಿತ್ರ ಬಿಡುಗಡೆಗೆ ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲ್ಲೂಕು ಘಟಕ ವಿರೋಧಿಸಿ ಘಟಪ್ರಭಾ ಪೋಲಿಸ್ ಇನ್ಸಪೆಕ್ಟರ್ ರವರ ಮುಖಾಂತರ ಬೆಳಗಾವಿ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದರು ಕಾರ್ಯಕರ್ತರನ್ನು ಉಧ್ಧೆಸಿಸಿ ಕರ್ನಾಟಕ ರಕ್ಷಣಾ ವೇದಿಕೆಯ ರೈತ ಘಟಕದ ಜಿಲ್ಲಾಧ್ಯಕ್ಷ ರೆಹಮಾನ್ ಮೊಕಾಶಿ ಮಾತನಾಡಿ ವಿವಾದಾತ್ಮಕ ಮರಾಠಿ ಚಲನಚಿತ್ರ ಬಾಯ್ಸದಲ್ಲಿ …
Read More »ಸತೀಶ ಜಾರಕಿಹೊಳಿ ಹೆಸರಲ್ಲಿ ವಿವಾದಾತ್ಮಕ ಪೋಸ್ಟ್: ಕಿಡಿಗೇಡಿಗಳ ವಿರುದ್ಧ ದೂರು ದಾಖಲು
ಬೆಳಗಾವಿ: ಕೆಪಿಸಿಸಿ ಕಾರ್ಯಾಧ್ಯಕ್ಷ, ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಅವರ ಹೆಸರಿನಲ್ಲಿ ಬ್ರಾಹ್ಮಣವಾದ ರಾಮ ಮಂದಿರ ಹೋರಾಟದಲ್ಲಿ ಸತ್ತ ಹೆಚ್ಚಿನವರು ಓಬಿಸಿಗಳು, ಒಬ್ಬನೇ ಒಬ್ಬ ಬ್ರಾಹ್ಮಣ ಸಾಯಲಿಲ್ಲ. ಆದರೆ ಈಗ ಮಂದಿರದ ಟ್ರಸ್ಟ್‌ನ ಪದಾಧಿಕಾರಿಗಳೆಲ್ಲ ಬ್ರಾಹ್ಮಣರು, ಒಬ್ಬನು ಓಬಿಸಿ ಇಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ಸತೀಶ ಜಾರಕಿಹೊಳಿ ಅವರ ಹೆಸರನ್ನು ಕೆಡಿಸುವ ದುರುದ್ದೇಶ ಹೊಂದಲಾಗಿದೆ. ಈ ಪೋಸ್ಟ್ ಕುರಿತು ಸೂಕ್ತ ತನಿಖೆ ನಡೆಸುವಂತೆ ಕರ್ನಾಟಕ ವಾಲ್ಮೀಕಿ …
Read More »ಹೃದಯಾಘಾತದಿಂದ ಯೋಧನ ವೀರಮರಣ!
ಗೋಕಾಕ: ಹೃದಯಾಘಾತದಿಂದ ಮಂಗಳವಾರ ನಿಧನರಾದ ಯೋಧ ಬಾಳಪ್ಪ ಯಲಿಗಾರ (33) ಅವರ ಮೃತದೇಹವನ್ನು ಬುಧವಾರ ಅವರ ಹುಟ್ಟೂರಾದ ಗೋಕಾಕ ತಾಲ್ಲೂಕಿನ ಮೇಲ್ಮಟ್ಟಿಗೆ ತರಲಾಯಿತು. ಅಪಾರ ಸಂಖ್ಯೆಯಲ್ಲಿ ಸೇರಿದ ಸುತ್ತಮುತ್ತಲಿನ ಗ್ರಾಮಗಳ ಜನ, ಯೋಧನ ಮೃತದೇಹಕ್ಕೆ ಗೌರವ ಸಲ್ಲಿಸಿದರು. ನಂತರ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ.ನಂದಗಾವಿ ಹಾಗೂ ಡಿಎಆರ್ ಎಸ್ಪಿ ವೈ.ಕೆ. ಕಾಶಪ್ಪನವರ ಅವರು ಪುಷ್ಪಗುಚ್ಛ ಸಮರ್ಪಿಸಿ ಗೌರವ ಸಲ್ಲಿಸಿದರು. ಮಹಾರಾಷ್ಟ್ರದ ಔರಂಗಾಬಾದನಲ್ಲಿ ಮಂಗಳವಾರ ಮಧ್ಯಾಹ್ನ ಕೆಲಸದಲ್ಲಿ ಇದ್ದಾಗಲೇ ಯೋಧನಿಗೆ …
Read More »ಹಿಂದಿ ದಿವಸ್ ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆ!
ಗೋಕಾಕ : ಹಿಂದಿ ದಿವಸ್ ಆಚರಣೆ ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಮನವಿ ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ವತಿಯಿಂದ ಸರ್ಕಾರ ಹಿಂದಿ ದಿವಸ ಆಚರಣೆ ಮಾಡುತ್ತಿರುವುದನ್ನು ಖಂಡಿಸಿ ಗೋಕಾಕ ತಹಶಿಲ್ದಾರರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು ಈ ಸಂಧರ್ಭದಲ್ಲಿ ಕರವೇ ರೈತ ಘಟಕದ ಜಿಲ್ಲಾಧ್ಯಕ್ಷ ರೆಹಮಾನ್ ಮೊಕಾಶಿ ಮಾತನಾಡಿ ಕನ್ನಡವು ಸುಮಾರು ಎರಡೂವರೆ ಸಾವಿರ ವರ್ಷಗಳ ಇತಿಹಾಸ ಹೊಂದಿದ್ದು ಇದು ಶಾಸ್ತ್ರೀಯ ಬಾಷೆಯ ಸ್ಥಾನಮಾನ ಪಡೆದಿದೆ ಆದರೆ ಹಿಂದಿ …
Read More »ಬೆಳಗಾವಿ ಜಿಲ್ಲೆಯಲ್ಲಿ ಮಕ್ಕಳ ಕಳ್ಳರ ವದಂತಿ; ಇದು ಸುಳ್ಳು ಸುದ್ದಿ : ಎಸ್‌ಪಿ ಡಾ.ಸಂಜೀವ ಪಾಟೀಲ್
ಮಕ್ಕಳನ್ನ ಕದ್ದು ಅವರ ದೇಹದ ಭಾಗಗಳನ್ನ ತೆಗೆದು ಮಾರಾಟ ಮಾಡ್ತಿದ್ದಾರೆ ಅನ್ನೋ ವದಂತಿ ಹಬ್ಬುತ್ತಿವೆ. ಈ ರೀತಿ ಘಟನೆಗಳು ಬೆಳಗಾವಿ ಜಿಲ್ಲೆಯಲ್ಲಿ ನಡೆದಿಲ್ಲ ಎಂದು ಬೆಳಗಾವಿ ಎಸ್‌ಪಿ ಡಾ.ಸಂಜೀವ ಪಾಟೀಲ್ ಮಾಹಿತಿ ನೀಡಿದ್ದಾರೆ. ಬೆಳಗಾವಿ : ಬೆಳಗಾವಿಯಲ್ಲಿ ಮಕ್ಕಳ ಕಳ್ಳರು ಇದ್ದಾರೆ ಎಂಬ ವದಂತಿ ಹರಿದಾಡುತ್ತಿದ್ದು ಈ ಬಗ್ಗೆ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.ಬೆಳಗಾವಿ ಜಿಲ್ಲೆಯಲ್ಲಿ ವಿವಿಧೆಡೆ ಮಕ್ಕಳು ಕಳ್ಳರು ಬಂದಿದ್ದಾರೆ ಎಂಬ ವದಂತಿ ಬಗ್ಗೆ ಬೆಳಗಾವಿ ಎಸ್‌ಪಿ ಡಾ.ಸಂಜೀವ ಪಾಟೀಲ್ …
Read More »ಮನಗುತ್ತಿ ಗ್ರಾಮಕ್ಕೆ ಸೌಂಡ್ ಸಿಸ್ಟಮ್ ,ಕುರ್ಚಿಗಳನ್ನು ವಿತರಿಸಿದ ಯುವ ನಾಯಕ ರಾಹುಲ ಜಾರಕಿಹೊಳಿ
ಯಮಕನಮರಡಿ: ಗ್ರಾಮಗಳ ಅಭಿವೃದ್ಧಿ ಕನಸು ಕಂಡಿರುವ ತಂದೆಯವರಾದ ಸತೀಶ ಜಾರಕಿಹೊಳಿ ಅವರು ವಿವಿಧ ಸಮುದಾಯಗಳಿಗೆ ಸಹಕಾರ ನೀಡುವುದರ ಜತೆ ಶಿಕ್ಷಣಕ್ಕೆ ಮಹತ್ವದ ಕೊಡುತ್ತಿದ್ದಾರೆ” ಎಂದು ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಹೇಳಿದರು. ಸತೀಶ್ ಜಾರಕಿಹೊಳಿ ಫೌಂಡೇಶನ್ ವತಿಯಿಂದ ಯಮಕನಮರಡಿ ಮತಕ್ಷೇತ್ರದ ಮನಗುತ್ತಿ ಗ್ರಾಮಕ್ಕೆ ಸೌಂಡ್ ಸಿಸ್ಟಮ್ , ಖುರ್ಚಿಗಳನ್ನು ಹಾಗೂ ಛತ್ರಪತಿ ಶಿವಾಜಿ ಸಂಘದ ಯುವಕರಿಗೆ ಜಿಮ್ ಸಲಕರಣೆಗಳನ್ನು ಯುವ ನಾಯಕ ರಾಹುಲ ಜಾರಕಿಹೊಳಿ ಅವರು ವಿತರಿಸಿ ಮಾತನಾಡಿ, …
Read More »*ಕ್ಷೀರ ಭಾಗ್ಯ ಯೋಜನೆಯಲ್ಲಿ ಚೀನಾ ಮತ್ತು ನಾರ್ವೇ ದೇಶಗಳನ್ನು ಹಿಂದಿಕ್ಕಿ ಪ್ರಶಸ್ತಿ ಮುಡಿಗೇರಿಸಿಕೊಂಡ ಕೆಎಂಎಫ್*
*ಐಡಿಎಫ್‍ನಿಂದ ಕೆಎಂಎಫ್‍ಗೆ “ಇನ್ನೋವೇಷನ್ ಇನ್ ಸ್ಕೂಲ್ ಮಿಲ್ಕ್ ಪ್ರೋಗ್ರಾಮ್ಸ್” ಪ್ರತಿಷ್ಠಿತ ಪ್ರಶಸ್ತಿ* *ನವದೆಹಲಿ*: ಶಾಲೆ ಹಾಗೂ ಅಂಗನವಾಡಿ ಮಕ್ಕಳಲ್ಲಿ ಅಪೌಷ್ಠಿಕತೆಯನ್ನು ನಿವಾರಣೆಗೊಳಿಸಿ ಆರೋಗ್ಯವಂತರನ್ನಾಗಿಸುವ ಸಾಮಾಜಿಕ ಕಳಕಳಿಯೊಂದಿಗೆ ರಾಜ್ಯ ಸರ್ಕಾರವು ಕೆಎಂಎಫ್ ಸಹಯೋಗದೊಂದಿಗೆ ಆರಂಭಿಸಲಾದ ಕ್ಷೀರಭಾಗ್ಯ ಯೋಜನೆಗೆ ಅಂತರಾಷ್ಟ್ರೀಯ ಡೇರಿ ಫೆಡರೇಷನ್ ಪ್ರತಿಷ್ಠಿತ ಪ್ರಶಸ್ತಿ ನೀಡಿ ಗೌರವಿಸಿದೆ. ಉತ್ತರ ಪ್ರದೇಶದ ಗ್ರೇಟರ್ ನೋಯಿಡಾದಲ್ಲಿ ನಿನ್ನೆಯಿಂದ ಆರಂಭಗೊಂಡಿರುವ ಅಂತರರಾಷ್ಟ್ರೀಯ ಡೇರಿ ಫೆಡರೇಷನ್ ವಿಶ್ವ ಡೇರಿ ಶೃಂಗ ಸಭೆಯಲ್ಲಿ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ …
Read More »ಪ್ರವಾಹದ ಬಗ್ಗೆ ಉಸ್ತುವಾರಿ ಸಚಿವರು ನಿರ್ಲಕ್ಷ್ಯ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ
ದುಡ್ಡು ಕೊಟ್ಟು ನೌಕರಿ ಪಡೆಯುವ ಸ್ಥಿತಿ ನಿರ್ಮಾಣಕ್ಕೆ ಕಡಿವಾಣ ಹಾಕಲು ಶಾಸಕ ಸತೀಶ್ ಜಾರಕಿಹೊಳಿ ಆಗ್ರಹ ಗೋಕಾಕ: ಜಿಲ್ಲೆಯ ಪ್ರವಾಹ ಪರಿಸ್ಥಿತಿಯ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಅಪಾರ ಮಳೆಯಿಂದ ಜನತೆಗೆ ತೊಂದರೆ ಉಂಟಾಗುತ್ತಿದ್ದರೂ ಸರಿಯಾದ ಸ್ಪಂದನೆ ದೊರೆಯುತ್ತಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಅವರು ಆರೋಪಿಸಿದರು.ನಗರದ ಹಿಲ್ಲ್ ಗಾರ್ಡನ್ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ ಭಾರೀ ಕೂಡ ಸರ್ಕಾರವಾಗಲಿ, ಸಚಿವರಾಗಲಿ ಜನತೆಗೆ …
Read More »*ಸಂಚಾರಿ ಸುರಕ್ಷತಾ ನಿಯಮಗಳನ್ನು ಪಾಲಿಸಿ : ಪಿಎಸ್ಐ ಪಿ ಎಂ ರಾಠೋಡ*
ಗೋಕಾಕ : ಪ್ರತಿಯೊಬ್ಬ ವಾಹನ ಸವಾರರು ಕಡ್ಡಾಯವಾಗಿ ಕಾನೂನು ನಿಯಮ ಪಾಲಿಸಬೇಕು ಎಂದು ಅಂಕಲಗಿ ಪಿಎಸ್ಐ ಪಿ ಎಂ ರಾಠೋಡ ತಿಳಿಸಿದರು. ತಾಲೂಕಿನ ಅಂಕಲಗಿ ಪಟ್ಟಣದಲ್ಲಿ ಸಂಚಾರಿ ಸುರಕ್ಷತಾ ಸಪ್ತಾಹ ಕಾರ್ಯಕ್ರಮ ಅಡಿಯಲ್ಲಿ ವಾಹನ ಚಾಲಕರಿಗೆ ರಸ್ತೆ ನಿಯಮಗಳನ್ನು ತಿಳಿಸಿ, ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಿದರು. ವಾಹನಗಳಿಗೆ ರಾತ್ರಿ ಹೊತ್ತಲ್ಲಿ ಕಾಣುವ ರೀತಿಯಲ್ಲಿ ರೆಡಿಯಂ ಬಳಸಿ ಮತ್ತು ಯಾವುದೇ ಕಾರಣಕ್ಕೂ ವಾಹನ ಚಲಾಯಿಸುವ ಸಂದರ್ಬದಲ್ಲಿ ಮೊಬೈಲ್ ಬಳಸಬೇಡಿ ಮತ್ತು ಮದ್ಯಪಾನ …
Read More »