Breaking News

ಗೋಕಾಕ

ದಾಸ ಶ್ರೇಷ್ಠ, ಸಂತ ಕನಕದಾಸರ 533ನೇ ಜಯಂತಿಯನ್ನು ಧುಪದಾಳನಲ್ಲಿ ಆಚರಣೆ.

ಗೋಕಾಕ: ತಾಲೂಕಿನ ಧೂಪದಾಳ ಗ್ರಾಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಭೀಮ ಆರ್ಮಿ ಇವರ ಸಂಯುಕ್ತ ಆಶ್ರಯದಲ್ಲಿ ದಾಸ ಸಾಹಿತ್ಯದ ,ರೂವಾರಿ ಮಹಾನ್ ಸಂತ, ದಾಶ೯ನಿಕ, ಕನಕದಾಸರ ೫೩೩ ನೇ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಯಿತ್ತು. ಈ ಸಂದರ್ಭದಲ್ಲಿ ಕಾಯ೯ಕ್ರಮದಲ್ಲಿ ಭೀಮ ಆಮಿ೯ ಜಿಲ್ಲಾಧ್ಯಕ್ಷರಾದ ಸುನೀಲ ಕೊಟಬಾಗಿ ಮತ್ತು ರೆಹಮಾನ್ ಮೊಕಾಶಿ ಕ ರ ವೆ ತಾಲೂಕ ಸಂಚಾಲಕರು ಗೋಕಾಕ ತಾಲೂಕ ಪ್ರಧಾನ ಕಾಯ೯ದಶಿ೯ಯಾದ ಸುನೀಲ ಈರಗಾರ ಮತ್ತು ಧೂಪದಾಳ ಗ್ರಾಮ …

Read More »

ಕೆಪಿಸಿಸಿ ಕಾರ್ಯಧ್ಯಕ್ಷರಾದ ಸತೀಶ್ ಜಾರಕಿಹೊಳಿ ಅವರ ಕಚೇರಿಯಲ್ಲಿ ಕನಕ ಜಯಂತಿ ಆಚರಣೆ

ಗೋಕಾಕ :  ಶಾಸಕ ಸತೀಶ್ ಜಾರಕಿಹೊಳಿ ನಿವಾಸದ ಹಿಲ್ ಗಾರ್ಡನ್ ಕಚೇರಿಯಲ್ಲಿ  ದಾಸ ಶ್ರೇಷ್ಠ, ಸಂತ ಕನಕದಾಸರ ಜಯಂತಿಯನ್ನು ಬುಧವಾರ ಕಾಂಗ್ರೆಸ್ ಕಾರ್ಯಕರ್ತರು ಅದ್ದೂರಿಯಾಗಿ ಆಚರಿಸಿದರು. ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪ ಅರ್ಪಿಸಿದರು.  ಇದೇ ವೇಳೆ ಕಾಂಗ್ರೆಸ್ ಮುಖಂಡ ವಿವೇಕ ಜತ್ತಿ ಮಾತನಾಡಿ, ಕನಕದಾಸರು ಜಾತಿ, ಮತ, ಕುಲಗಳನ್ನು ಮೀರಿ ಭಕ್ತಿ ಮಾರ್ಗದಿಂದ ಭಗವಂತನನ್ನು ಒಲಿಸಿಕೊಂಡವರು. ಅಪ್ರತಿಮ ದಾರ್ಶನಿಕ ಕನಕದಾಸರ ಬೋಧನೆಗಳು ಸಮಾಜ ಸುಧಾರಣೆಗೆ ಸದಾ ಪ್ರೇರಣೆ ಎಂದು ಹೇಳಿದರು. …

Read More »

ನೆಲಸಮಗೊಳಿಸಿರುವ ಬಡವರ ಮನೆಗಳನ್ನು ಶೀಘ್ರದಲ್ಲಿ ಮರು ನಿರ್ಮಾಣ ಮಾಡಬೇಕು : ಅಶೋಕ ಪೂಜಾರಿ

ಗೋಕಾಕ : ತಾಲ್ಲೂಕಿನ ಧುಪದಾಳ ಗ್ರಾಮದಲ್ಲಿ ನೆಲಸಮ ಮಾಡಿದ ಬಡವರ ಮನೆಗಳನ್ನು ಸರ್ಕಾರದಿಂದ ಶೀಘ್ರದಲ್ಲಿ ಮರು ನಿರ್ಮಾಣ ಮಾಡಬೇಕು ಎಂದು ಜೆಡಿಎಸ್ ಮುಖಂಡ ಅಶೋಕ ಪೂಜಾರಿ ಆಗ್ರಹಿಸಿದರು. ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಧುಪದಾಳ( ನವಿಲಮಾಳ) ಸಮೀಪದಲ್ಲಿರುವ ಸರ್ವೆ ನಂ.173/1ರಲ್ಲಿ 140 ಎಕರೆ ಜಮೀನು ಪಾಳು ಬಿದ್ದಿದೆ. ಈ ಜಾಗದಲ್ಲಿ ವಸತಿ ರಹಿತ ಬಡವರು, ಕೂಲಿ ಕಾರ್ಮಿಕರು , ಗೋಕಾಕ್ ಮಿಲ್ ಕಾರ್ಮಿಕರು ಸುಮಾರು 8 ವರ್ಷಗಳಿಂದ ಮನೆ ಕಟ್ಟಿಕೊಂಡಿದ್ದಾರೆ. ಇಲ್ಲಿ …

Read More »

ವಿಕಲಚೇತನರಿಗೆ ತ್ರಿಚಕ್ರ ವಾಹನ ವಿತರಿಸಿದ ಸಚಿವ ರಮೇಶ್ ಜಾರಕಿಹೊಳಿ.

ಗೋಕಾಕ : ವಿಕಲಚೇತನ ಫಲಾನುಭವಿಗಳಿಗೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಮಂಗಳವಾರ ತಮ್ಮ ಕಾರ್ಯಾಲಯದಲ್ಲಿ ತ್ರಿಚಕ್ರ ವಾಹನಗಳನ್ನು ವಿತರಿಸಿದರು. ಜಿ.ಪಂ ಸದಸ್ಯ ಟಿ.ಆರ್.ಕಾಗಲ್, ಮಡೆಪ್ಪ ತೋಳಿನವರ, ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ಉಪಾಧ್ಯಕ್ಷ ಬಸವರಾಜ ಅರೆನ್ನವರ, ಪೌರಾಯುಕ್ತ ಶಿವಾನಂದ ಹಿರೇಮಠ, ಸದಸ್ಯರುಗಳಾದ ಅಬ್ಬಾಸ ದೇಸಾಯಿ, ಪ್ರಕಾಶ ಮುರಾರಿ, ಸಂತೋಷ ಮಂತ್ರಣವರ , ಸಿದ್ದಪ್ಪ ಹುಚ್ಚರಾಯಪ್ಪಗೋಳ, ಶ್ರೀಶೈಲ ಯಕ್ಕುಂಡಿ, ಮುಖಂಡರುಗಳಾದ ಅಬ್ದುಲವಹಾಬ ಜಮಾದಾರ, ದಾದಾಪೀರ ಶಾಬಾಶಖಾನ, ದುರ್ಗಪ್ಪ ಶಾಸ್ತ್ರಿಗೋಲ್ಲರ, ಬಸವರಾಜ ದೇಶನೂರ, …

Read More »

ಮೂಡಲಗಿ ತಹಶೀಲ್ದಾರ ಕಛೇರಿ ಮೇಲೆ ಎಸಿಬಿ ದಾಳಿ: ಗ್ರಾಮ ಲೆಕ್ಕಾಧಿಕಾರಿ ಈಗ ಎಸಿಬಿ ಅತಿಥಿ!

ಮೂಡಲಗಿ : ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರಾಮ ಲೆಕ್ಕಾಧಿಕಾರಿ ಅಶೋಕ ತಳವಾರ ಎಂಬುವವರ ಮೇಲೆ ಸೋಮವಾರ ಸಾಯಂಕಾಲ ನಾಲ್ಕು ಗಂಟೆಗೆ ಎಸಿಬಿ ದಾಳಿಯಲ್ಲಿ ಸಿಕ್ಕಿ ಬಿದ್ದಿದ್ದಾನೆ. ಮಳೆಯ ಅನಾವೃಷ್ಟಯಿಂದ ಮನೆಗಳು ಬಿದ್ದಿರುವುದರಿಂದ ಸರ್ಕಾರ ಸಂತ್ರಸ್ತರಿಗೆ ಐದು ಲಕ್ಷ ರೂ, ಗಳ ಮನೆ ನಿರ್ಮಾಣಕ್ಕೆ ಹಣ ಘೋಷಣೆ ಹಿನ್ನೆಲೆಯಲ್ಲಿ ಫಲಾನುಭವಿಗಳ ನೋಂದಣಿ ಕಾರ್ಯಚರಣೆಯನ್ನು ಸ್ಥಳೀಯ ತಹಶೀಲ್ದಾರ ಕಚೇರಿಯಲ್ಲಿ ಪ್ರಾರಂಭಿಸಲಾಗಿತ್ತು. ಹೊಸ ತಾಲೂಕಿನ ಕಚೇರಿಯಲ್ಲಿ ಸಿಬ್ಬಂದಿಗಳ ಕೊರತೆಯಿಂದ ಈ ಫಲಾನುಭವಿಗಳ ನೋಂದಣಿ …

Read More »

ಶೂನ್ಯ ಸಂಪಾದನ ಮಠದ ವಾಣಿಜ್ಯ ಸಂಕೀರ್ಣಗಳನ್ನು ಉದ್ಘಾಟಿಸಿದ ಸಚಿವ ರಮೇಶ್ ಜಾರಕಿಹೊಳಿ

ಗೋಕಾಕ : ನಗರದ ಬ್ಯಾಳಿಕಾಟ ಸಮೀಪದಲ್ಲಿ ನೂತನವಾಗಿ ನಿರ್ಮಿಸಿರುವ ಶೂನ್ಯ ಸಂಪಾದನ ಮಠದ ವಾಣಿಜ್ಯ ಸಂಕೀರ್ಣಗಳನ್ನು ಸೋಮವಾರ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶೂನ್ಯ ಸಂಪಾದನ ಮಠದ ಮುರುಘರಾಜೇಂದ್ರ ಸ್ವಾಮೀಜಿ, ಸುಣದೋಳಿಯ ಶಿವಾನಂದ ಸ್ವಾಮೀಜಿ, ಜಿಪಂ.ಸದಸ್ಯ ಟಿ.ಆರ್.ಕಾಗಲ್, ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ಪೌರಾಯುಕ್ತ ಶಿವಾನಂದ ಹಿರೇಮಠ, ಮುಖಂಡರಾದ ಅಬ್ದುಲ್ ರಹೇಮಾನ್ ದೇಸಾಯಿ, ಹುಸೇನ ಫನಿಬಂದ್, ದುರ್ಗಪ್ಪ ಶಾಸ್ತ್ರಿಗೊಲ್ಲರ, ಆಡಳಿತಾಧಿಕಾರಿ ಅಡಿವೇಶ ಗವಿಮಠ, ಬಸವರಾಜ ಹಿರೇಮಠ, ಬಸವನಗೌಡ …

Read More »

ಗುರು ಮೌನ ಮಾತನ್ನು ಶಿಷ್ಯ ಜ್ಞಾನದಿಂದ ಅರಿಯಬೇಕು: ಶ್ರೀ ಸಿದ್ದಲಿಂಗ ಸ್ವಾಮೀಜಿ

ಗೋಕಾಕ : ಸ್ತ್ರೀಯರನ್ನು ತಾಯಿ ಪಾರ್ವತಿ ಸಮಾನವಾಗಿ ಕಾಣುವ ಮನೋಭಾವ ಬೆಳೆಸಿಕೊಳ್ಳಬೇಕು. ಮಹಿಳೆಯರನ್ನು ಗೌರವದಿಂದ ಕಾಣಬೇಕು ಎಂದು ನದಿ ಇಂಗಳಗಾವ ಗುರುಲಿಂಗ ದೇವರಮಠದ ಸಿದ್ದಲಿಂಗ ಸ್ವಾಮೀಜಿ ಹೇಳಿದರು. ನಗರದ ಶೂನ್ಯ ಸಂಪಾದನ ಮಠದ ಆವರಣದಲ್ಲಿ ಹಮ್ಮಿಕೊಂಡಿದ್ದ ೧೪೩ನೇ ಮಾಸಿಕ ಶಿವಾನುಭವ ಗೊಷ್ಠಿಯಲ್ಲಿ ಮಾತನಾಡಿದರು.  ಸತಿಯನ್ನು ಬಿಟ್ಟು ಉಳಿದೆಲ್ಲ ಸ್ತ್ರೀಯರು ಮಹಾತಾಯಿ ಪಾರ್ವತಿ ಸಮಾನರು ಎಂಬ ಭಾವನೆಯಿಂದ ಬಾಳಿ ಬದುಕಿದರೆ ಸಮಾಜವನ್ನು ಸದೃಢಗೋಳಿಸಲು ಸಾಧ್ಯ . ಆ ನಿಟ್ಟಿನಲ್ಲಿ ನಾವೆಲ್ಲರೂ ಬದುಕಬೇಕು. ಗುರು …

Read More »

ವಾ.ಕ.ರ.ಸಾ.ಸಂಸ್ಥೆಯ ಮೂಡಲಗಿ ಬಸ್ ಘಟಕ ನಿರ್ಮಾಣಕ್ಕೆ ಮೂರು ಎಕರೆ ನಿವೇಶನವನ್ನು ನೀಡಲಾಗುವುದು: ಬಾಲಚಂದ್ರ ಜಾರಕಿಹೊಳಿ

ಮೂಡಲಗಿ: ಮೂಡಲಗಿ ಹೊಸ ತಾಲೂಕಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಅಗತ್ಯವಿರುವ ಎಲ್ಲ ಸರ್ಕಾರಿ ಕಚೇರಿಗಳನ್ನು ಪ್ರಾರಂಭಿಸಲಾಗುವುದು. ಅಲ್ಲದೆ ವಾ.ಕ.ರ.ಸಾ.ಸಂಸ್ಥೆಯ ಮೂಡಲಗಿ ಬಸ್ ಘಟಕ ನಿರ್ಮಾಣಕ್ಕೆ ಮೂರು ಎಕರೆ ನಿವೇಶನವನ್ನು ನೀಡಲಾಗುವುದು ಎಂದು ಶಾಸಕ ಮತ್ತು ಕೆಎಮ್‍ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು. ತಾಲೂಕಿನ ಕುಲಗೋಡ ಗ್ರಾಮದಲ್ಲಿ ಪ್ರಾದೇಶಿಕ ಹಿಂದುಳಿದ ಪ್ರದೇಶಾಭಿವೃದ್ದಿ ಇಲಾಖೆಯಿಂದ (ನಂಜುಂಡಪ್ಪ ಆಯೋಗ) 95 ಲಕ್ಷ ರೂ.ಗಳ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿದ ಬಸ್ ನಿಲ್ದಾಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮೂಡಲಗಿ …

Read More »

ಕರ್ನಾಟಕ ನೀರಾವರಿ ನಿಗಮದಿಂದ ಸಮುದಾಯ ಭವನಕ್ಕೆ ಅನುದಾನ ಬಿಡುಗಡೆ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಗೋಕಾಕ : ಈ ಭಾಗದಲ್ಲಿ ಮನ್ನಿಕೇರಿ ಮಹಾಂತಲಿಂಗೇಶ್ವರ ದೇವಸ್ಥಾನವು ಇತಿಹಾಸದಿಂದ ಕೂಡಿದ್ದು, ಅಪಾರ ಭಕ್ತ ಸಮೂಹವನ್ನು ಆಕರ್ಷಿಸುತ್ತಿರುವ ಮಠವಾಗಿದೆ. ಸಮುದಾಯ ಭವನ ನಿರ್ಮಾಣದಿಂದಾಗಿ ಮದುವೆ, ಮುಂಜೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳಿಗೆ ಅನುಕೂಲವಾಗಲಿದೆ ಎಂದು ಶಾಸಕ ಮತ್ತು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ತಾಲೂಕಿನ ಮನ್ನಿಕೇರಿ ಗ್ರಾಮದ ಹೊರವಲಯದಲ್ಲಿರುವ ಮಹಾಂತಲಿಂಗೇಶ್ವರ ದೇವಸ್ಥಾನದ ಬಳಿ ಬುಧವಾರ ದಂದು ಕರ್ನಾಟಕ ನೀರಾವರಿ ನಿಗಮದ 50 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಿರುವ ಸಮುದಾಯ …

Read More »

ಲೋಕಸಭಾ ಕ್ಷೇತ್ರದ ಉಪಚುನಾವಣೆ ಕುರಿತು,ಸ್ಪರ್ಧೆಗೆ ವೈಯಕ್ತಿಕವಾಗಿ ನನಗೆ ಆಸಕ್ತಿ ಇಲ್ಲ: ಕೆಪಿಸಿಸಿ ಕಾರ್ಯಧ್ಯಕ್ಷರಾದ ಸತೀಶ್ ಜಾರಕಿಹೊಳಿ ಹೇಳಿಕೆ ಚಿಕ್ಕೋಡಿ ಹಾಗೂ ಗೋಕಾಕ ಹೊಸ ಜಿಲ್ಲೆ ಆಗಲಿ,

ಚಿಕ್ಕೋಡಿ ಹಾಗೂ ಗೋಕಾಕ ಹೊಸ ಜಿಲ್ಲೆ ರಚನೆಯಾಗಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಯಮಕನಮರಡಿ ಕಾಂಗ್ರೆಸ್ ಶಾಸಕ ಸತೀಶ ಜಾರಕಿಹೊಳಿ ಹೇಳಿದ್ದಾರೆ. ಬೆಳಗಾವಿ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಅಭಿವೃದ್ದಿ ನಿಟ್ಟಿನಲ್ಲಿ 18 ಶಾಸಕರನ್ನು ಹೊಂದಿರುವ ದೊಡ್ಡ ಜಿಲ್ಲೆ ಬೆಳಗಾವಿ ವಿಭಜನೆಯಾಗುವುದು ಅನಿವಾರ್ಯ. ಜಿಲ್ಲೆ ವಿಭಜನೆ ಬಗ್ಗೆ ಮೊದಲಿನಿಂದಲೂ ನಾವು ಆ ಕುರಿತು ಪ್ರತಿಪಾದಿಸುತ್ತ ಬಂದಿರುವುದಾಗಿ ಹೇಳಿದರು. ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ಕುರಿತು ತಮ್ಮ ಹೆಸರು ಕೇಳಿ ಬರುತ್ತಿರುವ …

Read More »