ಗೋಕಾಕ: ಕೋವಿಡ್ ಹಿನ್ನಲೆ ಸಾರ್ವಜನಿಕರಿಗೆ ಸ್ಫಂಧಿಸುವ ನಿಟ್ಟಿನಲ್ಲಿ ತಾಲೂಕು ಆಡಳಿತದ ವತಿಯಿಂದ ಕೋರ್ ಕಮೀಟಿ ರಚಿಸಲಾಗಿದ್ದು, ಜನರ ಸೇವೆಗೆ ಹೆಲ್ಪ ಲೈನ್ ಹಾಗೂ ವಾರ್‌ರೂಮ್ ಸ್ಥಾಪಿಸಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ತಹಶೀಲದಾರ ಪ್ರಕಾಶ ಹೊಳೆಪ್ಪಗೋಳ ಮನವಿ ಮಾಡಿದ್ದಾರೆ. ಅವರು, ನಗರದ ಮಿನಿವಿಧಾನ ಸೌಧದಲ್ಲಿ ಪತ್ರಿಕಾಗೊಷ್ಠಿ ನಡೆಸಿ ಮಾತನಾಡಿ, ತಾಲೂಕು ಆಡಳಿತದಿಂದ ಜನರಿಗೆ ಸ್ಫಂಧಿಸಲು ದಿನದ ೨೪ ಗಂಟೆ ಸಹಾಯವಾಣಿ ತೆರೆಯಲಾಗಿದ್ದು, ಈ ಸಹಾಯವಾಣಿಯಲ್ಲಿ ಸಿಬ್ಬಂಧಿಗಳು ಮೂರು ಶಿಪ್ಟಗಳಲ್ಲಿ ಕಾರ್ಯನಿರ್ವಹಿಸಲಿದ್ದಾರೆ. …
Read More »ನಕಲಿ ಐಡಿ ತಯಾರಿಸುತ್ತಿದ್ದ ಇಬ್ಬರ ಬಂಧನ
ಬೆಳಗಾವಿ : ಕೊರೋನಾ ನಿಯಂತ್ರಣ ಮಾಡುವ ನಿಟ್ಟಿನಲ್ಲಿ 14 ದಿನಗಳ ಕಾಲ ರಾಜ್ಯಾದ್ಯಂತ ಸಂಪೂರ್ಣ ಲಾಕ್ ಡೌನ್ ಘೋಷಣೆ ಆಗಿದ್ದು ಇಂತಹ ಸಮಯದಲ್ಲಿ ತುರ್ತು ಸೇವೆಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಆದ್ದರಿಂದ ಅಂತಹ ತುರ್ತು ಸೇವೆಯ ಕೆಲಸಗಾರರೆಂದು ಬಿಂಬಿಸಿ ಲಾಕ್ ಡೌನ್ ಸಮಯದಲ್ಲಿ ಬಿಂದಾಸ್ ಆಗಿ ಸಂಚಾರಿಸುವುದಕ್ಕಾಗಿ ಹಲವರಿಗೆ ನಕಲಿ ಐಡಿ ಕಾರ್ಡ್ ಗಳನ್ನು ತಯಾರಿಸಿ ದಂಧೆ ನಡೆಯುತ್ತಿದ್ದ ಇಬ್ಬರು ಖದೀಮರನ್ನು ಡಿಸಿಪಿ ವಿಕ್ರಂ ಆಮಟೆ ಬಂಧಿಸಿದ್ದಾರೆ. ಖಚಿತ ಮಾಹಿತಿ …
Read More »ಹಿರಿಯ ಪತ್ರಕರ್ತ ಚಂದ್ರಶೇಖರ ಕೊಣ್ಣೂರ ಅವರ ಧರ್ಮಪತ್ನಿ ಶ್ರೀಮತಿ ಜಯಶ್ರೀ ಕೊಣ್ಣೂರ ನಿಧನ
ಗೋಕಾಕ: ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕಾಧ್ಯಕ್ಷ ಹಾಗೂ ತಾ.ಪಂ. ಮಾಜಿ ಸದಸ್ಯ ಶ್ರೀ ಚಂದ್ರಶೇಖರ ಕೊಣ್ಣೂರ ಅವರ ಧರ್ಮಪತ್ನಿ ಮಮದಾಪೂರ ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷೆ ಶ್ರೀಮತಿ ಜಯಶ್ರೀ ಚಂದ್ರಶೇಖರ ಕೊಣ್ಣೂರ (48) ಅವರು ಇಂದು ದಿ. 7/5/2021 ರಂದು ಸಂಜೆ ನಿಧನರಾದರೆಂದು ತಿಳಿಸಲು ವಿಷಾಧವೆನಿಸುತ್ತದೆ.. ಮೃತರು ಓರ್ವ ಪುತ್ರ , ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗ ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಮರಡಿ ಶಿವಾಪೂರ …
Read More »ಗೋಕಾಕ ರಾಮಸೇನಾ ಕರ್ನಾಟಕ ವತಿಯಿಂದ ಕೋವಿಡ ವಾರಿಯರ್ಸಗಳಿಗೆ ಉಪಹಾರದ ವ್ಯವಸ್ಥೆ.
ಗೋಕಾಕ: ಕೋವಿಡ್‌ನ ಎರಡನೇ ಅಲೆಯಿಂದ ಜನತಾ ಕರ್ಫ್ಯೂ ವಿಧಿಸಲಾಗಿದೆ. ಕೋವಿಡ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರಿಗೆ ಮತ್ತು ಕೋವಿಡ್ ಸಂದರ್ಭದಲ್ಲಿ ಕರ್ತವ್ಯದಲ್ಲಿರುವ ಪೋಲಿಸ್ ಸಿಬ್ಬಂದಿಗಳಿಗೆ ಆರೋಗ್ಯ ಸಿಬ್ಬಂದಿಗಳಿಗೆ ನೀರಿನ ಬಾಟಲಿ, ಉಪಹಾರ ವ್ಯವಸ್ಥೆಯನ್ನು ರಾಮಸೇನೆ ಕರ್ನಾಟಕ, ಗೋಕಾಕ ಘಟಕದಿಂದ ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ. ನಗರದಲ್ಲಿ ರಾಮಸೇನಾ ಕರ್ನಾಟಕ, ಗೋಕಾಕ ಮುಖ್ಯಸ್ಥರು ಮಾತನಾಡಿ ಕೋವಿಡ ಸಮಯದಲ್ಲಿ ಹಗಲಿರುಳು ನಮಗಾಗಿ ದುಡಿಯುತ್ತಿರುವ ಕೊರೋನಾ ವಾರಿಯರ್ಸಗಳು ತಮ್ಮ ಕುಟುಂಬವನ್ನು ಲೆಕ್ಕಿಸದೆ ನಮಗಾಗಿ ಕೆಲಸ ಮಾಡುತ್ತಿದ್ದಾರೆ, ಅದಕ್ಕಾಗಿ ನಮ್ಮದೊಂದು …
Read More »ಪಶ್ಚಿಮಬಂಗಾಲದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಹಿಂಸಾಚಾರ ಖಂಡಿಸಿ ಗೋಕಾಕ ಬಿಜೆಪಿಯಿಂದ ಮೌನ ಪ್ರತಿಭಟನೆ.!
ಗೋಕಾಕ: ಪಶ್ಚಿಮ ಬಂಗಾಲದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿರುವ ಟಿಎಮ್‌ಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಹಾಗೂ ಟಿಎಮ್‌ಸಿ ಪಕ್ಷದ ಕಾರ್ಯಕರ್ತರಿಗೆ ಕಠೀಣ ಶಿಕ್ಷೆ ನೀಡುವಂತೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಮೌನ ಪ್ರತಿಭಟನೆ ಮೂಲಕ ಶುಕ್ರವಾರದಂದು ತಹಶೀಲದಾರರಿಗೆ ಮನವಿ ಸಲ್ಲಿಸಿದರು. ಪಶ್ಚಿಮ ಬಂಗಾಲ ರಾಜ್ಯದಲ್ಲಿ ಮೇ.೨ ರಂದು ವಿಧಾನಸಭಾ ಫಲಿತಾಂಶದ ನಂತರ ಆರು ಜನ ಬಿಜೆಪಿ ಕಾರ್ಯಕರ್ತರ ಹತ್ಯೆಯಾಗಿದೆ. ನೂರಾರು ಬಿಜೆಪಿ ಕಾರ್ಯಕರ್ತರ ಮನೆಗಳಿಗೆ ತೆರಳಿ ಹಲ್ಲೆ ಮಾಡಿದ್ದು, …
Read More »ಮೇ.7 ರಿಂದ ಮೇ.16ರ ವರೆಗೂ ಸಂಪೂರ್ಣ ಮೂಡಲಗಿ ಪಟ್ಟಣ ಸಂಪೂರ್ಣ ಲಾಕ್‌ಡೌನ್!
ಮೂಡಲಗಿ: ಪಟ್ಟಣದಲ್ಲಿ ಹದ್ದು ಮಿರುತ್ತಿರುವ ಕೊರೋನಾ ಎರಡನೇ ಅಲೆಯನ್ನು ತಡೆಗಟ್ಟಲು ಅರಭಾವಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿಯವರ ಮಾರ್ಗದರ್ಶನದಲ್ಲಿ ಗುರುವಾರದಂದು ಪುರಸಭೆ ಆವರಣದಲ್ಲಿ ಆಯೋಜಿಸದ ಸಭೆಯಲ್ಲಿ ಮೇ.7ರ ಮಧ್ಯಾಹ್ನದಿಂದ ಮೇ.16ರ ವರೆಗೂ ಸಂಪೂರ್ಣ ಮೂಡಲಗಿ ಪಟ್ಟಣವನ್ನು ಲಾಕ್‌ಡೌನ್ ಮಾಡಲು ನಿರ್ಧರಿಸಿದರು. ಈ ಸಂದರ್ಭದಲ್ಲಿ ಕಹಾಮ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಅಧಿಕಾಗಳ ಹಾಗೂ ಜನಪ್ರತಿನಿಧಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ, ಕೊರೋನಾ ಎರಡನೇ ಅಲೆಯ ಅರ್ಭಟಕ್ಕೆ ತತ್ತರಿಸುತ್ತಿರುವ ಹಿನ್ನೆಲೆಯಲ್ಲಿ …
Read More »ಗೋಕಾಕ ತಾಲೂಕಿಗೆ ಕೋವಿಡ್ ಸೋಂಕಿತರಿಗಾಗಿ ಆಕ್ಸಿಜನ್ ಪ್ಲಾಂಟ್ ಮಂಜೂರು: ಶಾಸಕ ಬಾಲಚಂದ್ರ ಜಾರಕಿಹೊಳಿ
ಗೋಕಾಕ: ಕೋವಿಡ್ ಸೋಂಕಿತರ ಅನುಕೂಲಕ್ಕಾಗಿ ಗೋಕಾಕ ತಾಲೂಕಿಗೆ ಆಕ್ಸಿಜನ್ ಪ್ಲಾಂಟ್ ಮಂಜೂರಾಗಿದ್ದು, ಇದರಿಂದ ಗೋಕಾಕ ಹಾಗೂ ಮೂಡಲಗಿ ತಾಲೂಕಿನ ಸೋಂಕಿತರಿಗೆ ತ್ವರಿತಗತಿಯಲ್ಲಿ ಸೌಲಭ್ಯ ಸಿಗಲಿದೆ ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಇಲ್ಲಿಯ ಎನ್.ಎಸ್.ಎಫ್. ಅತಿಥಿಗೃಹದ ಆವರಣದಲ್ಲಿ ಕೋವಿಡ್ ಸಂಬಂಧ ಗೋಕಾಕ್ ಮತ್ತು ಮೂಡಲಗಿ ತಾಲೂಕುಗಳ ಟಾಸ್ಕ್ ಪೋರ್ಸ್ ಸಭೆಯನ್ನು ದೂರವಾಣಿ ಮೂಲಕ ನಡೆಸಿದ ಅವರು, ಕೊರೊನಾ ನಿಯಂತ್ರಣಕ್ಕೆ ಎಲ್ಲರೂ ಶ್ರಮಿಸಬೇಕು. ಕೊರೊನಾ ಹರಡದಂತೆ …
Read More »ಕೋವಿಡ್ ಸೊಂಕಿತರಿಗೆ ಕೆಎಂಎಫ್‍ನಿಂದ ಉಚಿತವಾಗಿ 200 ಆಕ್ಸಿಜನ್ ಬೆಡ್‍ಗಳ ಪೂರೈಕೆ: ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ
ಬೆಂಗಳೂರು: “ಕೋವಿಡ್ ಎರಡನೇ ಅಲೆಯನ್ನು ಕರಾಳಗೊಳಿಸಿರುವ ಆಕ್ಸಿಜನ್ ಕೊರತೆ ಜನರ ಉಸಿರುಗಟ್ಟಿಸುತ್ತಿರುವ ನಡುವೆಯೇ ರೈತರ ಜೀವನಾಡಿ ಆಗಿರುವ ಕರ್ನಾಟಕ ಹಾಲು ಮಹಾಮಂಡಳಿಯು ಸುಮಾರು 1 ಕೋಟಿ ರೂ. ವೆಚ್ಚದಲ್ಲಿ 200 ಹಾಸಿಗೆಗಳಿಗೆ ಆಕ್ಸಿಜನ್ ಪೂರೈಕೆ ಮಾಡುವ ನಿರ್ಧಾರ ತೆಗೆದುಕೊಂಡಿದೆ” ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದ್ದಾರೆ. ಮಂಗಳವಾರ ಕೆಎಂಎಫ್ ಪ್ರಧಾನ ಕಛೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಈ ವಿಷಯ ತಿಳಿಸಿದ ಅವರು, “ಆಕ್ಸಿಜನ್ ಕೊರತೆಯಿಂದಾಗಿ ಬಹಳಷ್ಟು ಕೊರೋನಾ …
Read More »ವೈದ್ಯೋ ನಾರಾಯಣ ಹರಿ ಎಂಬ ಮಾತಿಗೆ ಗೋಕಾಕ ವೈದ್ಯರೊಬ್ಬರು ಸಾಕ್ಷಿ.
ಗೋಕಾಕ : ವೈದ್ಯೋ ನಾರಾಯಣ ಹರಿ ಎಂಬ ಮಾತಿದೆ ಎಂದರೇ ವೈದ್ಯನಾದವರು ದೇವರಂತೆ ಒಂದು ಜೀವವನ್ನು ಬದುಕಿಸಬಲ್ಲ ಸಾಮರ್ಥ್ಯ ಹೊಂದಿರುವ ವ್ಯಕ್ತಿ ಎಂದು. ಸದ್ಯದ ಪರಿಸ್ಥಿತಿಯಲ್ಲಿ ನಮ್ಮ ಕಣ್ಣೆದುರಿಗಿರುವ ದೇವರು ಎಂದರೇ ಈಗ ವೈದ್ಯರೇ ಆಗಿದ್ದಾರೆ. ಕೊರೋನಾ ವಿರುದ್ಧ ಹೋರಾಟದಲ್ಲಿ ಜನರ ಜೀವ ಉಳಿಸಲು ವೈದ್ಯರು ಸೇರಿದಂತೆ ಮುಂಚೂಣಿ ಕಾರ್ಯಕರ್ತರು ಜೀವವನ್ನೇ ಪಣಕ್ಕಿಟ್ಟು ಹೋರಾಡುತ್ತಿದ್ದಾರೆ. ಮನೆ ಮಕ್ಕಳನ್ನು, ತಂದೆ ತಾಯಿಯನ್ನು ಮರೆತು ಜನಸೇವೆಯಲ್ಲಿ ತೊಡಗಿರುವ ಅವರ ಕಾರ್ಯ ಶ್ಲಾಘನಾರ್ಹವಾಗಿದೆ. ಇದಕ್ಕೆ …
Read More »ಬೆಳಗಾವಿಗೆ ನೂತನ ಉಸ್ತುವಾರಿ ಸಚಿವರಾಗಿ ಗೋವಿಂದ ಕಾರಜೋಳ ನೇಮಕ.
ಉಪಮುಖ್ಯಮಂತ್ರಿಯೂ ಆಗಿರುವ ಗೋವಿಂದ ಕಾರಜೋಳ ಅವರನ್ನು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಿ ಆದೇಶ ಹೊರಡಿಸಲಾಗಿದೆ. ಉಮೇಶ ಕತ್ತಿ ಅವರಿಗೆ ಬಾಗಲಕೋಟೆಯ ಉಸ್ತುವಾರಿ ,ಅರವಿಂದ ಲಿಂಬಾವಳಿ ಬೀದರ್, ಎಂಟಿಬಿ ನಾಗರಾಜ ಕೋಲಾರ, ಮುರುಗೇಶ ನಿರಾಣಿ ಕಲಬುರಗಿ, ಎಸ್.ಅಂಗಾರ ಚಿಕ್ಕಮಗಳೂರು ಉಸ್ತುವಾರಿ ಸಚಿವರಾಗಿದ್ದಾರೆ.
Read More »