Breaking News

ಬೆಂಗಳೂರು

ಕೆಎಲ್ ಇ ಕಾಲೇಜು ಮುಂದೆ ಪ್ರತಿಭಟನೆ!

ಬೆಂಗಳೂರು: ನಗರದ ಕರ್ನಾಟಕ ಲಿಂಗಾಯತ ಎಜುಕೇಷನ್​ ಸೊಸೈಟಿ(KLE) ಕಾಲೇಜು ಆಡಳಿತ ಮಂಡಳಿ ವಿರುದ್ಧ ಕಾಲೇಜು ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ರಾಜಾಜಿನಗರದ ಸೆಕೆಂಡ್​ ಬ್ಲಾಕ್​ನಲ್ಲಿರುವ ಕೆಎಲ್​ಇ ಕಾಲೇಜಿನ ಸಿಬ್ಬಂದಿಯನ್ನು ಆಡಳಿತ ಮಂಡಳಿ ಏಕಾಏಕಿ ಕೆಲಸದಿಂದ ವಜಾಗೊಳಿಸಿದೆ. ಕೊರೊನಾ ಸಂಕಷ್ಟದ ಸಮಯದಲ್ಲಿ ಕೆಲಸದಿಂದ ತೆಗೆದು ಹಾಕಿರುವುದನ್ನು ವಿರೋಧಿಸಿ ಸಿಬ್ಬಂದಿ ಪ್ರತಿಭಟನೆ ನಡೆಸಿದ್ದು, ವಿದ್ಯಾರ್ಥಿಗಳು ಕೂಡ ಪ್ರತಿಭಟನೆ ಸಾಥ್​ ನೀಡಿದ್ದಾರೆ.

Read More »

ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ಐಪಿಎಸ್ ಅಧಿಕಾರಿ ರವಿ ಡಿ ಚೆನ್ನಣ್ಣನವರ್?

ಬೆಂಗಳೂರು: ಕರ್ನಾಟಕದ ಸಿಂಗಂ ಎಂದೇ ಖ್ಯಾತಿ ಪಡೆದಿದ್ದ ಐಪಿಎಸ್ ಅಧಿಕಾರಿ ಅಣ್ಣಾಮಲೈ ರಾಜಕೀಯಕ್ಕೆ ಎಂಟ್ರಿ ಕೊಟ್ಟು, ಇದೀಗ ತಮಿಳುನಾಡಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಬೆನ್ನಲ್ಲೇ ಇದೀಗ ರಾಜ್ಯದ ಮತ್ತೋರ್ವ ಖಡಕ್ ಐಪಿಎಸ್ ಅಧಿಕಾರಿ ಕೂಡ ರಾಜಕೀಯಕ್ಕೆ ಪದಾರ್ಪಣೆ ಮಾಡಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಐಪಿಎಸ್ ಅಧಿಕಾರಿ ರವಿ ಡಿ ಚೆನ್ನಣ್ಣನವರ್, ಅಣ್ಣಾಮಲೈ ರೀತಿಯಲ್ಲೇ ಪಾಲಿಟಿಕ್ಸ್ ಗೆ ಎಂಟ್ರಿ ಕೊಡಲಿದ್ದಾರೆ ಎನ್ನಲಾಗುತ್ತಿದೆ. ವಿವಿಧ ಮಠಗಳಿಗೆ ಭೇಟಿ ನೀಡುತ್ತಿರುವ ರವಿ ಡಿ ಚೆನ್ನಣ್ಣನವರ್, ಹಲವು ಸ್ವಾಮೀಜಿಗಳನ್ನು …

Read More »

ನಿವೃತ್ತ ಪೋಲೀಸ್ ಅಧಿಕಾರಿ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ ಜನರಿಗೆ ವಂಚನೆ

ಬೆಂಗಳೂರು: ಅಪರಿಚಿತ ದುಷ್ಕರ್ಮಿಯೊಬ್ಬ ನಿವೃತ್ತ ಪೊಲೀಸ್ ಅಧಿಕಾರಿ ಬಿಬಿ ಅಶೋಕ್ ಕುಮಾರ್ ಅವರ ಹೆಸರಲ್ಲಿ ನಕಲಿ ಖಾತೆ ಸೃಷ್ಟಿಸಿ ಸಾಮಾಜಿಕ ಮಾಧ್ಯಮದಲ್ಲಿ ವಂಚಿಸಲು ಯತ್ನಿಸಿದ್ದಾನೆ. ಆರೋಪಿಯು ಅಧಿಕಾರಿಯ ಸಂಪರ್ಕಗಳಿಂದ ಹಣಕಾಸಿನ ಸಹಾಯವನ್ನು ಕೋರಿದ್ದಾನೆ. ಪ್ರಕರಣ ದಾಖಲಿಸಲು ಅಶೋಕ್ ಕುಮಾರ್ ಸಿಇಎನ್ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದರೂ, ಯಾವುದೇ ಎಫ್‌ಐಆರ್ ದಾಖಲಾಗಿಲ್ಲ. ಅಶೋಕ್ ಕುಮಾರ್ ಅವರು ದೂರವಾಣಿ ಮೂಲಕ ನಮ್ಮನ್ನು ಸಂಪರ್ಕಿಸಿ ಘಟನೆ ಬಗ್ಗೆ ದೂರು ನೀಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. …

Read More »

ರಾಕ್ ಲೈನ್ ವೆಂಕಟೇಶ್ ನಿವಾಸದ ಮೇಲೆ ಬಿಯರ್ ಬಾಟಲ್ ಎಸೆದು ಕಿಡಿಗೇಡಿಗಳು ದಾಳಿ

ಬೆಂಗಳೂರು : ಸಂಸದೆ ಸುಮಲತಾ ವರ್ಸಲ್ ಮಾಜಿ ಸಿಎಂ ಕುಮಾರಸ್ವಾಮಿ ವಾಗ್ವಾದ ಕೊಂಚ ತಣ್ಣಗಾದಂತ ಸಂದರ್ಭದಲ್ಲಿಯೇ, ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಂತ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರ ನಿವಾಸದ ಮೇಲೆ ಕಿಡಿಗೇಡಿಗಳು ಕಳೆದ ರಾತ್ರಿ ಬಿಯರ್ ಬಾಟಲ್ ಎಸೆದು ದಾಳಿ ನಡೆಸಿರೋದಾಗಿ ತಿಳಿದು ಬಂದಿದೆ. ಮಾಜಿ ಸಿಎಂ ಕುಮಾರಸ್ವಾಮಿ ಅವರು ಸುಮಲತಾ ಅಂಬರೀಶ್ ಬಗ್ಗೆ ಮಾತನಾಡಿದ್ದರ ಕುರಿತಂತೆ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಸಂಸದೆ ಸುಮಲತಾಗೆ ಬೆಂಬಲಿಸಿ ಮಾತನಾಡಿದ್ದರು. …

Read More »

ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಭೀಕರ ಅಗ್ನಿ ಅವಘಡ

ಬೆಂಗಳೂರು : ನಗರದ ಗಾರ್ಮೆಂಟ್ಸ್ ಕಾರ್ಖಾನೆಯೊಂದರಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಇದರಿಂದಾಗಿ ಕಾರ್ಖಾನೆಯ ಮೊದಲ ಮಹಡಿ ಧಗಧಗಿಸಿ ಹೊತ್ತಿ ಉರಿಯುತ್ತಿದೆ. ಬೆಂಗಳೂರಿನ ಕೋಣನಕುಂಟೆ ಕ್ರಾಸ್ ಬಳಿ ಇರುವಂತ ಡೈಸಿ ಡೀಡ್ ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ದಿಢೀರ್ ಕಾಣಿಸಿಕೊಂಡ ಬೆಂಕಿಯಿಂದಾಗಿ, ಕಾರ್ಖಾನೆಯ ಇತರೆ ಭಾಗಕ್ಕೂ ವ್ಯಾಪಿಸಿದ ಪರಿಣಾಮ, ಧಗಧಗಿಸಿ ಹೊತ್ತಿ ಉರಿಯುತ್ತಿದೆ. ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿರುವಂತ ಆಗ್ನಿ ಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಇದೀಗ ಬೆಂಕಿ …

Read More »

ಕನ್ನಂಬಾಡಿ ಕದನ: ಎಚ್.ಡಿ. ಕುಮಾರಸ್ವಾಮಿ, ಸುಮಲತಾ ನಡುವೆ ಮಾತಿನ ಸಿಡಿಗುಂಡುಗಳು

ಮಂಡ್ಯ, ಜು.8- ಕನ್ನಂಬಾಡಿ ಕದನ ಈಗ ತೀವ್ರಗೊಂಡಿದೆ. ಕಳೆದ ಕೆಲವು ದಿನಗಳಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತ್ತು ಮಂಡ್ಯ ಸಂಸದರಾದ ಸುಮಲತಾ ನಡುವೆ ಮಾತಿನ ಸಿಡಿಗುಂಡುಗಳು ಸಿಡಿಯುತ್ತಿದ್ದು, ಈಗ ಖುದ್ದು ಇಬ್ಬರೂ ಅಖಾಡಕ್ಕಿಳಿದಿದ್ದಾರೆ. ಇದರ ನಡುವೆ ಇಬ್ಬರ ನಡುವಿನ ಹೇಳಿಕೆ, ಪ್ರತಿ ಹೇಳಿಕೆಗಳು ಮುಂಬರುವ ಚುನಾವಣೆಗಳಿಗೆ ಪ್ರಬಲ ಅಸ್ತ್ರಗಳು ಆಗಲಿವೆ. ಚುನಾವಣೆಯಲ್ಲಿ ಸಂಸದೆ ಸುಮಲತಾ ಅವರನ್ನು ಸೋಲಿಸಲು ಎಚ್.ಡಿ.ಕುಮಾರಸ್ವಾಮಿ ಶಪಥ ಮಾಡಿದ್ದಾರೆ. ಚುನಾವಣೆಗೂ ನಾಲ್ಕು ತಿಂಗಳು ಮುನ್ನ ಆಡಿಯೋ …

Read More »

ಕೋವಿಡ್ ಮೂರನೆ ಅಲೆಯನ್ನು ರಾಜ್ಯಸರ್ಕಾರ ಯಶಸ್ವಿಯಾಗಿ ತಡೆಗಟ್ಟಲಿದೆ : ಸಿಎಂ ಯಡಿಯೂರಪ್ಪ

ಬೆಂಗಳೂರು, ಜು.7- ದೊಡ್ಡಬಳ್ಳಾಪುರದ ಸಾರ್ವಜನಿಕ ಆಸ್ಪತ್ರೆ ಆವರಣ ದಲ್ಲಿ ಖಾಸಗಿ ಕಂಪೆನಿಗಳ ಸಿಎಸ್‍ಆರ್ ಅನುದಾನದಡಿ ನೂತನವಾಗಿ ನಿರ್ಮಿಸಿದ್ದ 70 ಹಾಸಿಗೆಗಳ ಸಾಮಥ್ರ್ಯದ ಮೇಕ್‍ಶಿಫ್ಟ್ ಆಸ್ಪತ್ರೆಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಉದ್ಘಾಟಿಸಿದರು. ನಂತರ ಮಾತನಾಡಿದ ಮುಖ್ಯಮಂತ್ರಿ, ಕೋವಿಡ್- 19ರ ಮೂರನೆ ಅಲೆ ಎದುರಿಸಲು ಮುಂಜಾಗ್ರತಾ ಕ್ರಮವಾಗಿ ಈ ಆಸ್ಪತ್ರೆ ನಿರ್ಮಿಸಲಾಗಿದೆ. ದೇಶದ ಆರು ರಾಜ್ಯಗಳಲ್ಲಿ ಇಂತಹ ಮೇಕ್‍ಶಿಫ್ಟ್ ಆಸ್ಪತ್ರೆ ನಿರ್ಮಿಸಲಾಗುತ್ತಿದ್ದು, ಅತಿ ಶೀಘ್ರದಲ್ಲಿ 4 ಕೋಟಿ ರೂ. ವೆಚ್ಚದಲ್ಲಿ ಈ …

Read More »

ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಸಂಸದೆ ಸುಮಲತಾ ವಾಕ್ಸಮರ!

ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಸಂಸದೆ ಸುಮಲತಾ ವಾಕ್ಸಮರ ಮುಂದುವರೆದಿದ್ದು, ನಾನು ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ. ಕ್ಷಮೆ ಕೇಳುವಂತಹ ಪದ ಬಳಕೆ ಮಾಡಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಕೆ.ಆರ್.ಎಸ್. ಡ್ಯಾಂ ನಲ್ಲಿ ಬಿರುಕು ಬಿಟ್ಟಿದೆ ಎಂದು ಹೇಳಿರುವ ಸುಮಲತಾ ಅವರು ಮಾಧ್ಯಮ ಹಾಗೂ ಅಧಿಕಾರಿಗಳ ತಂಡವನ್ನು ಕರೆದುಕೊಂಡು ಕೆ.ಆರ್.ಎಸ್. ಗೆ ಹೋಗಿ ಪರಿಶೀಲನೆ ನಡೆಸಬೇಕು. ಅದನ್ನು ಬಿಟ್ಟು ಅಲ್ಲೆಲ್ಲೋ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯನ್ನು …

Read More »

*ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರ ನೇತ್ರತ್ವದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ.!*

ಗೋಕಾಕ: ಗೋಕಾಕ ಮತಕ್ಷೇತ್ರದ ಉಪ್ಪಾರಟ್ಟಿ ಹಾಗೂ ಮಾಲದಿನ್ನಿ ಗ್ರಾಮದಲ್ಲಿ ೧ ಕೋಟಿ ೬೦ ಲಕ್ಷ ರೂಪಾಯಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರ ನೇತ್ರತ್ವದಲ್ಲಿ ಶನಿವಾರದಂದು ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಲಾಯಿತು. ತಾಲೂಕಿನ ಉಪ್ಪಾರಟ್ಟಿ ಗ್ರಾಮದಲ್ಲಿ ನೀರಾವರಿ ಇಲಾಖೆಯಿಂದ ಎಸ್‌ಇಪಿಟಿಎಸ್‌ಪಿ ಯೋಜನೆಯಡಿಯಲ್ಲಿ ೮೫ಲಕ್ಷ ರೂಪಾಯಿ ವೆಚ್ಚದಲ್ಲಿ ಸಿಸಿ ರಸ್ತೆ, ೧೫ ಲಕ್ಷ ರೂಪಾಯಿ ವೆಚ್ಚದ ಸಮುದಾಯ ಭವನ. ೨೦ ಲಕ್ಷ ರೂಪಾಯಿ …

Read More »

*ಎತ್ತಿನಹೊಳೆ ಯೋಜನಾ ಪ್ರದೇಶ ಪರಿವೀಕ್ಷಣೆ ಮಾಡಿದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ‌.*

ಹಾಸನ : ಎತ್ತಿನಹೊಳೆ ಯೋಜನಾ ಪ್ರದೇಶವಾದ ಹಾಸನ ಜಿಲ್ಲೆ ಬೆಟ್ಟದಾಲೂರು ಗ್ರಾಮದಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಪರಿವೀಕ್ಷಣೆ ಮಾಡಿದ ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿಹೊಳಿ‌ ಅವರು, ಯೋಜನಾ ಪ್ರದೇಶದಲ್ಲಿ ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಕಾಮಗಾರಿಗಳ ಪರಿವೀಕ್ಷಣೆಯ ಸಮಯದಲ್ಲಿ ಸಣ್ಣ ನೀರಾವರಿ ಸಚಿವ ಸಿ ಪಿ ಯೋಗೇಶ್ವರ್, ಅರಸೀಕೆರೆ ಶಾಸಕರಾದ ಶಿವಲಿಂಗಯ್ಯ, ವಿಶ್ವೇಶ್ವರಯ್ಯ ಜಲನಿಗಮದ ವ್ಯವಸ್ಥಾಪಕ ನಿರ್ದೇಶಕ ಲಕ್ಷ್ಮಣರಾವ್ ಪೇಶ್ವೆ ಉಪಸ್ಥಿತರಿದ್ದರು.

Read More »