Breaking News

ಧಾರವಾಡ

ಕುಡಿಯಲು ಹಣಕ್ಕಾಗಿ ಪೀಡಿಸುತ್ತಿದ್ದ ಮಗನನ್ನೇ ಕೊಂದ ಅಪ್ಪ!

ಧಾರವಾಡ: ಮದ್ಯಪಾನ ಮಾಡಲು ಹಣ ನೀಡುವಂತೆ ಪದೇ ಪದೇ ಪೀಡಿಸುತ್ತಿದ್ದ ಮಗನನ್ನು ತಂದೆ ಭೀಕರವಾಗಿ ಕೊಲೆ ಮಾಡಿದ ಘಟನೆ ನಗರದ ತೆಲುಗರ ಓಣಿಯಲ್ಲಿ ನಡೆದಿದೆ. ತಂದೆ ಫಕೀರಪ್ಪ ಹಿರೇಕುಂಬಿ ತನ್ನ ಮಗ ಬಸವರಾಜ ಹಿರೇಕುಂಬಿ (36)ಯನ್ನು ಕೊಲೆ ಮಾಡಿದ್ದಾನೆ. ಕುಡಿಯಲು ಹಣ ನೀಡುವಂತೆ ನಿತ್ಯ ಮಗ ಪೀಡಿಸುತ್ತಿದ್ದ ಎನ್ನಲಾಗಿದ್ದು, ಕಳೆದ ರಾತ್ರಿ ಇದೇ ವಿಚಾರಕ್ಕೆ ತಂದೆ ಮಗನ ನಡುವೆ ಜಗಳ ಆರಂಭವಾಗಿದೆ. ಕೊಲೆಯಾದ ಮಗ ಬಸವರಾಜ್, ತಾಯಿಯ ಮೇಲೆ ಹಲ್ಲೆ …

Read More »

ಹನಿಟ್ರ್ಯಾಪ್ ಹಾಗೂ ಸುಲಿಗೆ ಮಾಡಿದ ನಾಲ್ವರಿಗೆ ಜೀವಾವಧಿ ಶಿಕ್ಷೆ!

ಹುಬ್ಬಳ್ಳಿ: ಶ್ರೀಮಂತ ವ್ಯಕ್ತಿಯೊಂದಿಗೆ ಸ್ನೇಹ ಬೆಳೆಸಿಕೊಂಡು ಅವನನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ದರೋಡೆ ಮಾಡಿದ ಯುವತಿ ಸೇರಿದಂತೆ ನಾಲ್ವರು ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾರೆ. ಹನಿಟ್ರ್ಯಾಪ್ ಹಾಗೂ ಸುಲಿಗೆ ಮಾಡಿದ ನಾಲ್ವರಿಗೆ ಹುಬ್ಬಳ್ಳಿಯ 5ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಾಲ್ವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ನೀಡಿದ್ದು, ಸುಲಿಗೆಕೋರರು ಕಂಬಿ ಪಾಲಾಗಿದ್ದಾರೆ. ಶ್ರೀಮಂತರನ್ನು ಪತ್ತೆ ಮಾಡಿ ಅವರೊಂದಿಗೆ ಸ್ನೇಹ ಬೆಳೆಸಿ ಸಲುಗೆಯಿಂದ ಹಣ ಕೀಳುವ ಉದ್ದೇಶದಿಂದ ಹುಬ್ಬಳ್ಳಿಯ ನಾಲ್ವರು …

Read More »

ಕಾಲೇಜುಗಳ ಆರಂಭಕ್ಕೆ ಯಾವುದೇ ಚರ್ಚೆ ನಡೆಸಿಲ್ಲ : ಡಿಸಿಎಂ ಅಶ್ವಥ್ ನಾರಾಯಣ.

ಹುಬ್ಬಳ್ಳಿ : ರಾಜ್ಯದಲ್ಲಿ ಉನ್ನತ ಶಿಕ್ಷಣ ವ್ಯಾಪ್ತಿಯ ಕಾಲೇಜುಗಳು ಯಾವಾಗ ಓಪನ್ ಆಗುತ್ತವೆ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇವೆ. ಸದ್ಯ ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಮಾಣ ತಗ್ಗಿದ್ದು, ಇನ್ನೇನು ಕಾಲೇಜುಗಳು ತೆರೆದುಕೊಳ್ಳುತ್ತವೆ ಎಂದು ಹೇಳಲಾಗುತ್ತಿದೆ. ಆದ್ರೆ ಈ ಬಗ್ಗೆ ಸರ್ಕಾರ ಈವರೆಗೂ ಯಾವುದೇ ಸ್ಪಷ್ಟನೆ ಕೊಟ್ಟಿಲ್ಲ. ಬದಲಾಗಿ ವಿದ್ಯಾರ್ಥಿಗಳಿಗೆ ಲಸಿಕೆ ಹಾಕಿಸಿಕೊಳ್ಳುವಂತೆ ಸೂಚನೆ ನೀಡಿದೆ. ಮೂಲಗಳ ಪ್ರಕಾರ ಶೇಕಡಾ 80 ರಷ್ಟು ವಿದ್ಯಾರ್ಥಿಗಳು ಲಸಿಕೆ ಹಾಕಿಸಿಕೊಂಡರೇ ತರಗತಿಗಳನ್ನು ಆರಂಭಿಸಲು …

Read More »

ಈ ಬಾರಿ ಉತ್ತರ ಕರ್ನಾಟಕ ಭಾಗಕ್ಕೆ ಸಿಎಂ ಸ್ಥಾನ ಸಿಕ್ಕೇ ಸಿಗುತ್ತದೆ : ಉಮೇಶ್ ಕತ್ತಿ.

ಧಾರವಾಡ: ಬಿಜೆಪಿ ಪಾಳೆಯದಲ್ಲಿ ಸಿಎಂ ಬದಲಾವಣೆ ವಿಚಾರ ಇನ್ನೂ ಮುಗಿದಂತೆ ಕಾಣುತ್ತಿಲ್ಲ. ಸಚಿವ ಉಮೇಶ ಕತ್ತಿ ಕೂಡ ಇದೀಗ ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಮಾತನಾಡಿದ್ದಾರೆ. ಧಾರವಾಡದಲ್ಲಿ ಮಾತನಾಡಿದ ಅವರು, ನಾನೂ ಎಂಟು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಆರು ಇಲಾಖೆಗಳಲ್ಲಿ ಸಚಿವನಾಗಿ ಕೆಲಸ ಮಾಡಿರುವ ಅನುಭವವಿದೆ. ಮುಖ್ಯಮಂತ್ರಿ ಆಗುವ ಯೋಗ್ಯತೆ ನನಗೆ ಇದೆ. ಯಾವುದೇ ಕಪ್ಪು ಚುಕ್ಕೆ ನನಗಿಲ್ಲ. ಮುಖ್ಯಮಂತ್ರಿಯಾಗಲು ಆಸೆ ನನಗೂ ಇದ್ದೇ ಇದೆ ಎಂದಿದ್ದಾರೆ. ಸಿಎಂ ಬಳಿಕ ಪ್ರಧಾನಮಂತ್ರಿ …

Read More »

ಕೊರೊನಾ ಹೆಚ್ಚಾದ್ರೆ ಕಾಲೇಜು ಬಂದ್ ಅನಿವಾರ್ಯ: ಕೆ. ಸುಧಾಕರ್

ಧಾರವಾಡ : ಕಾಲೇಜು ಆರಂಭವಾದ ದಿನದಿಂದ 120 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಬಗ್ಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಾತನಾಡಿ, ರಾಜ್ಯದಲ್ಲಿ ಕೋವಿಡ್ 19 ಕೇಸ್ ಗಳು ಹೆಚ್ಚಾದರೆ ಕಾಲೇಜುಗಳನ್ನು ಬಂದ್ ಮಾಡುವುದು ಅನಿವಾರ್ಯ ಎಂದು ಹೇಳಿದ್ದಾರೆ. ದೇಶದಲ್ಲಿ ಕೊರೊನಾ ಎರಡನೇ ಅಲೆ ಹಾಗೂ ಕೊರೊನಾ ಮಧ್ಯೆ ಕಾಲೇಜು ಆರಂಭದ ಬಗ್ಗೆ ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಕೆ.ಸುಧಾಕರ್, ದಿಲ್ಲಿ ಮತ್ತು ಅಹಮದಾಬಾದ್ ನಲ್ಲಿ ಕೊರೊನಾ ಎರಡನೇ ಅಲೆ ಪ್ರಾರಂಭವಾಗಿದೆ. …

Read More »

ಮಾಜಿ ಸಚಿವ ವಿನಯ ಕುಲಕರ್ಣಿ ಬಂಧನಕ್ಕೆ ಜಯಮೃತ್ಯುಂಜಯ ಸ್ವಾಮೀಜಿ ಆಕ್ರೋಶ

ತುಮಕೂರು : ಮಾಜಿ ಸಚಿವ ವಿನಯ ಕುಲಕರ್ಣಿಯವರನ್ನ ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದ ಹಿನ್ನೆಲೆಯಲ್ಲಿ ಜಯಮೃತ್ಯುಂಜಯ ಸ್ವಾಮೀಜಿ ಪ್ರತಿಕ್ರಿಯಿಸಿದ್ದು,  ಏಕಾಏಕಿ ವಶಕ್ಕೆ ಪಡೆಯುವ ಮೂಲಕ ವಿನಯ್ ಕುಲಕರ್ಣಿಗೆ ಅವಮಾನ ಮಾಡಲಾಗಿದೆ ಎಂದಿದ್ದಾರೆ. ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಧಾರವಾಡದಲ್ಲಿ ದ್ವೇಷದ ರಾಜಕೀಯ ತುಂಬಿ ತುಳುಕುತ್ತಿದೆ. ಸಹ ಸಮಾಜದ ನಾಯಕರು, ಸಮಾಜದ ಮುಖಂಡರನ್ನು ಈ ರೀತಿ ನಡೆಸಿಕೊಳ್ಳುವುದು ಸರಿಯಲ್ಲ. ಸಿಎಂ ಯಡಿಯೂರಪ್ಪನವರು ಇದ್ದನ್ನು ಸರಿಪಡಿಸಬೇಕು ಎಂದಿದ್ದಾರೆ. ಪ್ರಾಥಮಿಕ ವರದಿಯಲ್ಲೂ ಅವರ ಹೆಸರು …

Read More »

ಶಾಲೆಗಳು ಕೊರೋನಾ ಹೆಸರಿನಲ್ಲಿ ಹೆಚ್ಚಿನ ಶುಲ್ಕ ಪಡೆದರೆ ಶಿಸ್ತುಕ್ರಮ : ಸಚಿವ ಎಸ್. ಸುರೇಶ್‌ಕುಮಾರ್

ಧಾರವಾಡ: ‘ಶಾಲಾ ಶುಲ್ಕ ಭರಿಸಿಕೊಳ್ಳುವುದರ ಜತೆಗೆ ಸ್ಯಾನಿಟೈಸೇಷನ್‌ ನೆಪದಲ್ಲಿ ಕೊರೊನಾ ಶುಲ್ಕವನ್ನು ಪಾಲಕರಿಂದ ವಸೂಲು ಮಾಡಿದ್ದು ಕಂಡುಬಂದರೆ, ಅಂಥ ಶಾಲಾ ಆಡಳಿತ ಮಂಡಳಿಗಳ ವಿರುದ್ಧ ಕೋವಿಡ್ ಕಾನೂನಿನಡಿ ಶಿಸ್ತುಕ್ರಮ ಜರುಗಿಸಲಾಗುವುದು’ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್ ಹೇಳಿದರು. ‘ವಿದ್ಯಾಗಮ’ ಅನುಷ್ಠಾನ ಕುರಿತು ಜಿಲ್ಲೆಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಶಾಲಾ ಶುಲ್ಕ ವಿಚಾರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಯ ಶಾಲೆಗಳ …

Read More »

ರೈತರ ಸಮಸ್ಯೆ ಪರಿಹಾರಕ್ಕೆ ಚಕ್ಕಡಿ ಏರಿ ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ್ ಜಾರಕಿಹೊಳಿ ಪ್ರತಿಭಟನೆ

ಧಾರವಾಡ: ಅತಿವೃಷ್ಟಿಯಿಂದ ರೈತರು ಸಮಸ್ಯೆ ಅನುಭವಿಸುತ್ತಿದ್ದಾರೆ. ಸರ್ಕಾರ ರೈತರ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಆಗ್ರಹಿಸಿ ಯಮಕನಮರಡಿ ಕ್ಷೇತ್ರ ಶಾಸಕ ಸತೀಶ್ ಜಾರಕಿಹೊಳಿ ನಗರದಲ್ಲಿ ಚಕ್ಕಡಿ ಏರಿ ಶುಕ್ರವಾರ ಪ್ರತಿಭಟನೆ ನಡೆಸಿದರು. ಇಲ್ಲಿನ ಗಾಂಧಿನಗರದಿಂದ ನವಲೂರು ಸೇತುವೆವರೆಗೂ ಚಕ್ಕಡಿ ಏರಿ ಪ್ರತಿಭಟನಾ ಮೆರವಣಿಗೆ ಕೈಗೊಂಡರು.  ಖಾನಾಪುರ ಕ್ಷೇತ್ರದ ಶಾಸಕಿ ಅಂಜಲಿ ನಿಂಬಾಳ್ಕರ್ ಕೂಡ ಪಾಲ್ಗೊಂಡಿದ್ದರು. ರಾಜ್ಯದ ರೈತರು  ಅತಿವೃಷ್ಟಿಯಿಂದ ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಬೆಳೆ ಹಾನಿಗೊಳಗಾದ ರೈತರಿಗೆ ಸರ್ಕಾರ ಕೂಡಲೇ ಪರಿಹಾರ ನೀಡಬೇಕು ಎಂದು …

Read More »

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಖಂಡಿಸಿ : ಹಿಂದೂ ಜಾಗರಣ ವೇದಿಕೆ ಹಾಗೂ ಹಿಂದೂ ಪರ ಸಂಘಟನೆಗಳ ಪ್ರತಿಭಟನೆ

ಧಾರವಾಡ ಜಿಲ್ಲಾ ಬೆಗುರು ಗ್ರಾಮದಲ್ಲಿ ನಡೆದ ಅಪ್ರಾಪ್ತ ಹಿಂದೂ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಕುರಿತು, ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ ಮೇಲ್ಕಾಣಿಸಿದ ವಿಷಯ ಅನ್ವಯ ಧರ್ಮಾಂದ ಹಾಗೂ ಕಾಮಾಂದ ಬಸಿರ ಎನ್ನುವ ವಿಕೃತ ಮನಸ್ಥಿತಿವುಳ್ಳ ದುಷ್ಠನ ಅತ್ಯಾಚಾರಕ್ಕೆ ಒಳಗಾದ ಬಾಲಕಿ ಮನನೊಂದ ಆತ್ಮಹತ್ಯೆ ಮಾಡಿಕೊಂಡು ಇಡಿ ಮನುಕುಲಕ್ಕೆ ತಲೆತಗ್ಗಿಸುವ ಸಂಗತಿ ಆಗಿದ್ದು ಇಂತಹ ದುರ್ಜನರಿಗೆ ಬಹಿರಂಗವಾಗಿ ಗಲ್ಲು ಶಿಕ್ಷೆಯನ್ನು ನೀಡಿ ಇಂತಹ ಘಟನೆಗಳು ಮರುಕಳಿಸದಂತೆ ಕಾನೂನು ಜಾರಿಗೆಗೊಳಿಸಬೇಕೆಂದು ಗೋಕಾಕ …

Read More »