Breaking News

ಚಿಕ್ಕ ಬಳ್ಳಾಪುರ

KSRTC ಟ್ರಾಫಿಕ್ ಕಂಟ್ರೋಲರ್​ನ ಎಸಿಬಿ ಬಲೆಗೆ.

ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ಡಿಪೋದ ಕೆಎಸ್‌ಆರ್​ಟಿಸಿ ಟ್ರಾಫಿಕ್ ಕಂಟ್ರೋಲರ್​ನ ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಟ್ರಾಫಿಕ್ ಕಂಟ್ರೋಲರ್ ಬಿ.ಎಸ್.ವೆಂಕಟಾಚಲಪತಿ ಸ್ವಯಂ ನಿವೃತ್ತಿ ಪ್ರಮಾಣ ಪತ್ರ ನೀಡಲು ಸುಮಾರು 50.000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಡ್ರೈವರ್ ಕಂ ಕಂಡಕ್ಟರ್ ಜಿ.ಎನ್.ವೆಂಕಟಾಚಲಪತಿಯಿಂದ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. 50.000 ರೂ. ನಲ್ಲಿ ಇಂದು (ಜುಲೈ 21) 40,000 ರೂ. ಲಂಚ ಸ್ವೀಕರಿಸುತ್ತಿದ್ದಾಗ ಬಿ.ಎಸ್.ವೆಂಕಟಾಚಲಪತಿ ಎಸಿಬಿ ಬಲೆಗೆ ಬಿದ್ದಿದ್ದಾರೆ. ಕೋಲಾರದ ಎಸಿಬಿ ಅಧಿಕಾರಿಗಳು ಬಿ.ಎಸ್.ವೆಂಕಟಾಚಲಪತಿಯನ್ನು …

Read More »

ಲಂಚ ಪಡೆಯುವ ಪ್ರಕರಣದಲ್ಲಿ ಕಂದಾಯ ಇಲಾಖೆ ನಂ 1.

ಚಿಕ್ಕಬಳ್ಳಾಪುರ : ಜಿಲ್ಲೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳ ಘಟಕದಲ್ಲಿ ದಾಖಲಾಗಿರುವ ಇದುವರೆಗಿನ ಒಟ್ಟಾರೆ ಲಂಚ ಪಡೆದ ಪ್ರಕರಣಗಳ ಪೈಕಿ ಸರ್ಕಾರದ ವಿವಿಧ ಇಲಾಖೆಗಳಿಗೆ ಮಾತೃ ಇಲಾಖೆ ಎನಿಸಿಕೊಂಡಿರುವ ಕಂದಾಯ ಇಲಾಖೆ ಮೊದಲ ಸ್ಥಾನದಲ್ಲಿದೆ. ಹೌದು, ಜಿಲ್ಲೆಯಲ್ಲಿ 2016 ರಿಂದ ತನ್ನ ಕಾರ್ಯಾರಂಭ ಮಾಡಿರುವ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ದಲ್ಲಿ ದಾಖಲಾಗಿರುವ ಅಂಕಿ, ಅಂಶಗಳೇ ಜಿಲ್ಲೆಯಲ್ಲಿ ಇತರೇ ಸರ್ಕಾರಿ ಇಲಾಖೆಗಳಗಿಂತ ಸಾರ್ವಜನಿಕ ಸಂಪರ್ಕ ಹೆಚ್ಚಿರುವ ಕಂದಾಯ ಇಲಾಖೆಯಲ್ಲಿ ಮೀತಿ ಮೀರಿದ ಭ್ರಷ್ಟಾಚಾರ …

Read More »

ಲಂಚ ಪಡೆಯುತ್ತಿದ್ದ ರೇಷ್ಮೆ ತಾಂತ್ರಿಕ ಸೇವಾ ಕೇಂದ್ರದ ಭ್ರಷ್ಟ ನಿರೀಕ್ಷಕ ಸಿಕ್ಕಿ ಬಿದ್ದ!

ಚಿಕ್ಕಬಳ್ಳಾಪುರ: ರೇಷ್ಮೆ ಹುಳು ಸಾಕಾಣಿಕೆ ಮನೆ ಮತ್ತು ಹನಿ ನೀರಾವರಿಯ ಸಹಾಯಧನ ಬಿಡುಗಡೆ ಮಾಡಲು 12,500 ರೂಗಳು ಲಂಚ ಸ್ವೀಕರಿಸಿದ ಶಿಡ್ಲಘಟ್ಟ ತಾಲೂಕಿನ ಮೇಲೂರು ರೇಷ್ಮೆ ತಾಂತ್ರಿಕ ಸೇವಾ ಕೇಂದ್ರದ ನಿರೀಕ್ಷಕರೊಬ್ಬರು ಭ್ರಷ್ಟಚಾರ ನಿಗ್ರಹದಳ(ಎಸಿಬಿ) ಬಲೆಗೆ ಸಿಕ್ಕಿಬಿದ್ದಿದ್ದಾರೆ. ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಮೇಲೂರು ರೇಷ್ಮೆ ತಾಂತ್ರಿಕ ಸೇವಾ ಕೇಂದ್ರದ ರೇಷ್ಮೆ ನಿರೀಕ್ಷಕ ಪ್ರವೀಣ್ ಅವರು ಲಂಚ ಸ್ವೀಕರಿಸುವಾಗ ಎಸಿಬಿ ಪೋಲಿಸರು ಹಣದ ಸಮೇತ ಬಂಧಿಸಿದ್ದಾರೆ. ಶಿಡ್ಲಘಟ್ಟ ತಾಲೂಕಿನ ಮೇಲೂರಿನ ಶ್ರೀನಿವಾಸರೆಡ್ಡಿ ಅವರು …

Read More »