Breaking News

ಗದಗ

ಲಂಚ ಪಡೆಯುತ್ತಿದ್ದ ನಗರಸಭೆ ಎಇಇ ಎಸಿಬಿ ಬಲೆಗೆ!

ಗದಗ: ಗುತ್ತಿಗೆದಾರರೊಬ್ಬರಿಂದ ಲಂಚ ಪಡೆಯುತ್ತಿದ್ದ ಗದಗ -ಬೆಟಗೇರಿ ನಗರಸಭೆ ಸಹಾಯಕ ಕಾರ್ಯಪಾಲಕ ಅಭಿಯಂತರ ವರ್ಧಮಾನ ಎಸ್. ಹುದ್ದಾರ ಬುಧವಾರ ಎಸಿಬಿ ಬಲೆಗೆ ಬಿದ್ದಿದ್ದಾರೆ. ನಗರಸಭೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವರ್ಧಮಾನ ಎಸ್. ಹುದ್ದಾರ ಅವರು ಸಿಕ್ಕಿಬಿದ್ದಿದ್ದಾರೆ. ಘನತ್ಯಾಜ್ಯ ವಿಲೇವಾರಿಗೆ ಗುತ್ತಿಗೆ ಪಡೆದಿದ್ದ ಗುತ್ತಿಗೆದಾರನಿಗೆ ಅನುದಾನ ಬಿಡುಗಡೆ ಮಾಡಲು 25 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಗುತ್ತಿಗೆದಾರ ಅಬ್ದುಲ್ ಸಲಾಂ ಮನಿಯಾರ್ ಎಂಬುವವರು ಎಸಿಬಿ ಅಧಿಕಾರಿಳಿಗೆ ದೂರು ನೀಡಿದ್ದರು. …

Read More »

ಪ್ರೀತಿಗಾಗಿ ತಾಯಿ ವಿರುದ್ಧವೇ ಎಸ್ಪಿಗೆ ದೂರು ಕೊಟ್ಟ ಮಗಳು.

ಗದಗ​: ಮಹಿಳಾ ಪೊಲೀಸ್​ ಸಬ್ ​ಇನ್​ಸ್ಪೆಕ್ಟರ್​ ಮಗಳೊಬ್ಬಳು ಪ್ರಿಯಕರನೊಂದಿಗೆ ಮನೆ ಬಿಟ್ಟು ಹೋಗಿ ಮದುವೆ ಮಾಡಿಕೊಂಡ ಪ್ರಕರಣವೀಗ ಎಸ್ಪಿ ಅಂಗಳಕ್ಕೆ ಬಂದಿದೆ. ನಾವಿಬ್ಬರೂ 7 ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದೆವು. ನಮ್ಮಿಬ್ಬರ ಮದುವೆಗೆ ಮನೆಯಲ್ಲಿ ಒಪ್ಪಿಗೆ ಇರಲಿಲ್ಲ. ಹಾಗಾಗಿ ನಾವು ಬೇರೆಡೆ ಹೋಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದೇವೆ. ಪಿಎಸ್​ಐ ಆಗಿರುವ ನನ್ನ ತಾಯಿಯೇ ಕೊಲೆ ಬೆದರಿಕೆ ಹಾಕುತ್ತಿದ್ದಾರೆ. ಅವರು ನಮ್ಮನ್ನು ಬದುಕಲು ಬಿಡಲ್ಲ. ನಮಗೆ ರಕ್ಷಣೆ ಕೊಡಿ ಎಂದು ತಾಯಿ ವಿರುದ್ಧವೇ ಯುವತಿ …

Read More »

ಎಗ್ಗಿಲ್ಲದೇ ನಡೆಯುತ್ತಿದೆ ಅಕ್ರಮ ಮದ್ಯ ಮಾರಾಟ;ಕಣ್ಣ್ಮುಚ್ಚಿ ಕುಳಿತ ಅಬಕಾರಿ ಇಲಾಖೆ.

ಗದಗ : ಡಂಬಳ ಹೋಬಳಿ ಗ್ರಾಮಗಳಲ್ಲಿ ಎಗ್ಗಿಲ್ಲದೇ ನಡೆಯುತ್ತಿದೆ ಅಕ್ರಮ ಮದ್ಯ ಮಾರಾಟ. ಸ್ಥಳೀಯರು ಸಾಕಷ್ಟು ಬಾರಿ ದೂರು ನೀಡಿದರೂ ಅಬಕಾರಿ ಇಲಾಖೆ, ಪೊಲೀಸ್‌ ಇಲಾಖೆಯವರು ಇತ್ತ ಕಣ್ಣೆತ್ತಿ ನೋಡದಿರುವುದು ಜನತೆಯನ್ನು ಆತಂಕಕ್ಕೀಡು ಮಾಡಿದೆ. ಡಂಬಳ, ಮೇವುಂಡಿ, ಪೇಠಾಆಲೂರ, ಕದಾಂಪೂರ, ಜಂತ್ಲಿ- ಶಿರೂರ, ಡೋಣಿ, ಹಳ್ಳಿಕೇರಿ, ಹಿರೇವಡ್ಡಟ್ಟಿ, ಮುರಡಿ ತಾಂಡ, ಹಳ್ಳಿಗುಡಿ ಗ್ರಾಮಗಳಲ್ಲಿ ಸರ್ಕಾರದ ಪರವಾನಿಗೆ ಇಲ್ಲದೆ ಅಕ್ರಮ ಮದ್ಯ ಮಾರಾಟ ಹಲವು ದಿನಗಳಿಂದ ನಡೆದು ಬಂದಿದೆ. ಹಲವು ಗ್ರಾಮಗಳ …

Read More »

ರೈತರ ಬಳಿ ಲಂಚ ಪಡೆಯುತ್ತಿದ್ದ ಭ್ರಷ್ಟ ಅಧಿಕಾರಿ ಎಸಿಬಿ ಬಲೆಗೆ….!

ಗದಗ : ಮುಂಡರಗಿ ರೈತರಿಗೆ ಸಹಾಯಧನ ಬಿಡುಗಡೆ ಲಂಚ ಪಡೆಯುತ್ತಿದ್ದ ತೋಟಗಾರಿಕೆ ಇಲಾಖೆಯ ಅಧಿಕಾರಿಯೊಬ್ಬರು ಮಂಗಳವಾರ ಎಸಿಬಿ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಮುಂಡರಗಿ ತಾಲೂಕು ತೋಟಗಾರಿಕೆ ಸಹಾಯಕ ಅಧಿಕಾರಿ ಸುರೇಶ್ ಹನುಮಂತಪ್ಪ ಬಾರಕೇರ್ ಎಂಬುವವರು ತಮ್ಮ ಕಚೇರಿಯಲ್ಲಿ ರೈತರೊಬ್ಬರಿಂದ 15 ಸಾವಿರ ರೂ. ಲಂಚ ಪಡೆಯುತ್ತಿದ್ದಾಗ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು, ಆರೋಪಿಯನ್ನು ಬಂಧಿಸಿದ್ದಾರೆ. ತಾಲೂಕಿನ ರೈತರೊಬ್ಬರು ತಮ್ಮ ಎರಡು ಹೆಕ್ಟರ್ ಜಮೀನಿನಲ್ಲಿ ಪೊಪ್ಪಾಯಿ ಬೆಳೆ ಬೆಳೆದಿದ್ದರು. ಅದಕ್ಕೆ ಸರಕಾರದಿಂದ ಪ್ರತಿ ಹೆಕ್ಟರ್‌ಗೆ …

Read More »

ಲಂಚ ಪ್ರಕರಣ: ಮುಂಡರಗಿ ತಾಲೂಕಿನ ಮುರಡಿ ಗ್ರಾಮ ಪಂಚಾಯತಿ ಪಿಡಿಓ ಎಸಿಬಿ ಬಲೆಗೆ.

ಗದಗ: ಗದಗ ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ ಬೆಳಗ್ಗೆ ಎಸಿಬಿ ಅಧಿಕಾರಿಗಳ ದಾಳಿಯಲ್ಲಿ ಲಂಚ ಪಡೆಯುವಾಗ ಪಿಡಿಓ ಮತ್ತು ಅಕೌಂಟೆಂಟ್ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ. ಮುಂಡರಗಿ ತಾಲೂಕಿನ ಮುರಡಿ ಗ್ರಾಮ ಪಂಚಾಯತಿ ಪಿಡಿಓ ಸಿದ್ದಪ್ಪ ಡಂಬಳ, ಅಕೌಂಟೆಂಟ್ ಪ್ರದೀಪ್ ಕದಮ್‌ ಎಂಬವವರು 41 ಕಂಪ್ಯೂಟರ್ ಉತಾರ ನೀಡಲು 41 ಸಾವಿರ ಬೇಡಿಕೆ ಇಟ್ಟಿದ್ದಾರೆ. 41 ಸಾವಿರ ಹಣ ಪಡೆಯುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮುಂಡರಗಿ ಪಟ್ಟಣದ ಅಕೌಂಟೆಂಟ್ …

Read More »