Breaking News

ಕೊಪ್ಪಳ

ಆಟೋ ಡಾಕ್ಟರ್ ಈಗ ಕೊಪ್ಪಳ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ….!

ದಾವಣಗೆರೆ: ಮೇಲಧಿಕಾರಿಗಳ ಕಿರುಕುಳಕ್ಕೆ ನಲುಗಿ ಹೆಚ್ಚು-ಕಡಿಮೆ ಕಳೆದೊಂದು ವರ್ಷದಿಂದ ವನವಾಸ ಅನುಭವಿಸಿದ್ದ, ಆಟೋ ಚಾಲನೆ ಮೂಲಕ ತಮಗಾದ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ್ದ ವೈದ್ಯಾಧಿಕಾರಿಯ ಹೋರಾಟಕ್ಕೆ ಕೊನೆಗೂ ಯಶಸ್ಸು ಸಿಕ್ಕಿದೆ. ವೈದ್ಯಾಧಿಕಾರಿ ಡಾ.ರವೀಂದ್ರನಾಥ್ ಅವರನ್ನು ಕೊಪ್ಪಳ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಯಾಗಿ ವರ್ಗಾವಣೆ ಮಾಡಿ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ. ದಾವಣಗೆರೆಯಲ್ಲಿ ಆಟೋ ಓಡಿಸುವ ಮೂಲಕ ಆಟೋ ಡಾಕ್ಟರ್ ಎನಿಸಿಕೊಂಡಿದ್ದ ರವೀಂದ್ರನಾಥ್ ಇದೀಗ ಮೂಲ ವೃತ್ತಿಗೆ ಮರಳಿದ್ದಾರೆ. ಮತ್ತೆ ಜಿಲ್ಲಾಮಟ್ಟದ …

Read More »

20 ಜಿಂಕೆ ಚರ್ಮ ವಶಕ್ಕೆ: ಜಿಂಕೆ ಚರ್ಮ ಮಾರಾಟಗಾರರ ಜಾಲ ಬೇಧಿಸಿದ ಅರಣ್ಯ ಇಲಾಖೆ.

ಕೊಪ್ಪಳ: ಜಿಲ್ಲೆಯಿಂದ 20 ಜಿಂಕೆಗಳ ಚರ್ಮವನ್ನು ಬೆಂಗಳೂರು, ಮಂಗಳೂರು ಭಾಗಕ್ಕೆ ಮಾರಾಟ ಮಾಡುತ್ತಿದ್ದ ಜಾಲವೊಂದನ್ನು ಖರೀದಿದಾರರ ವೇಷದಲ್ಲಿ ತೆರಳಿದ್ದ ಅರಣ್ಯ ಅಧಿಕಾರಿಗಳ ತಂಡವು ಬೇಧಿಸಿ, ಏಳು ಜನರನ್ನು ಬಂಧಿಸಿದೆ. ಯಲಬುರ್ಗಾ ತಾಲೂಕಿನ ಗುನ್ನಾಳ ಗ್ರಾಮದಲ್ಲಿ ಕಳೆದ 2 ವರ್ಷದ ಹಿಂದೆ ಜಿಂಕೆ ಚರ್ಮ ಮಾರಾಟದ ಕುರಿತಂತೆ ಕೇಸ್ ದಾಖಲಾಗಿತ್ತು. ಕೇಸ್ ದಾಖಲಾದ ವ್ಯಕ್ತಿಯ ಮೊಬೈಲ್ ನಂಬರನ್ನು ಒಂದು ವರ್ಷದಿಂದ ಟ್ರ್ಯಾಕ್ ಮಾಡುತ್ತಿದ್ದ ಬೆಂಗಳೂರು ಹಾಗೂ ಮಂಗಳೂರು ಮೊಬೈಲ್ ಫಾರೆಸ್ಟ್‌ ಸ್ಕ್ವಾಡ್ ತಂಡವು …

Read More »

ಲಂಚ ಸ್ವೀಕರಿಸುವಾಗ ತಹಶೀಲ್ದಾರ್‌ ಕಚೇರಿಯ ಸರ್ವೇ ಇಲಾಖೆ ಮೇಲ್ವಿಚಾರಕ ಎಸಿಬಿ ಬಲೆಗೆ….!

ಕೊಪ್ಪಳ: ಗಂಗಾವತಿ ಸರ್ವೇ ಮೇಲ್ವಿಚಾರಕ ಗಂಗಾಧರ ತೇಜಪ್ಪ ಎಸಿಬಿ ಬಲೆಗೆ ಬಿದ್ದಿದ್ದಾರೆ. ಗಂಗಾವತಿ ತಾಲೂಕು ಹೆಬ್ಬಾಳ ಕ್ಯಾಂಪ್‌ನ ರಾಜು.ಪಿ. ಅವರಿಂದ 4 ಸಾವಿರ ಲಂಚ ಪಡೆಯುತ್ತಿದ್ದಾಗ ದಾಳಿ ಮಾಡಿದ ಎಸಿಬಿ ಅವರನ್ನು ಹಣದ ಸಮೇತ ಬಂದಿಸಿದೆ. ತಾಯಿಯ ಆಸ್ತಿಯ 11ಬಿ/ಇ ನಕ್ಷೆ ನೀಡಲು ಗಂಗಾವತಿ ತಾಲೂಕಿನ ಹೆಬ್ಬಾಳ ಕ್ಯಾಂಪ್‌ನ ರಾಜು.ಪಿ. ಅವರಿಂದ 4 ಸಾವಿರ ಲಂಚ ಪಡೆಯುತ್ತಿದ್ದ ಗಂಗಾವತಿ ತಹಶೀಲ್ದಾರ್‌ ಕಚೇರಿಯ ಸರ್ವೇ ಮೇಲ್ವಿಚಾರಕ ಗಂಗಾಧರ ತೇಜಪ್ಪ ಅವರನ್ನು ಎಸಿಬಿ …

Read More »