ಬೆಂಗಳೂರು: ಅಪರಿಚಿತ ದುಷ್ಕರ್ಮಿಯೊಬ್ಬ ನಿವೃತ್ತ ಪೊಲೀಸ್ ಅಧಿಕಾರಿ ಬಿಬಿ ಅಶೋಕ್ ಕುಮಾರ್ ಅವರ ಹೆಸರಲ್ಲಿ ನಕಲಿ ಖಾತೆ ಸೃಷ್ಟಿಸಿ ಸಾಮಾಜಿಕ ಮಾಧ್ಯಮದಲ್ಲಿ ವಂಚಿಸಲು ಯತ್ನಿಸಿದ್ದಾನೆ. ಆರೋಪಿಯು ಅಧಿಕಾರಿಯ ಸಂಪರ್ಕಗಳಿಂದ ಹಣಕಾಸಿನ ಸಹಾಯವನ್ನು ಕೋರಿದ್ದಾನೆ. ಪ್ರಕರಣ ದಾಖಲಿಸಲು ಅಶೋಕ್ ಕುಮಾರ್ ಸಿಇಎನ್ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದರೂ, ಯಾವುದೇ ಎಫ್‌ಐಆರ್ ದಾಖಲಾಗಿಲ್ಲ. ಅಶೋಕ್ ಕುಮಾರ್ ಅವರು ದೂರವಾಣಿ ಮೂಲಕ ನಮ್ಮನ್ನು ಸಂಪರ್ಕಿಸಿ ಘಟನೆ ಬಗ್ಗೆ ದೂರು ನೀಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. …
Read More »ಹಣ, ಎಟಿಎಂ ಕಾರ್ಡ್ ದೋಚಿದ್ದ ಇಬ್ಬರು ಕದೀಮರನ್ನ ಬಂಧಿಸಿದ ಬೆಳಗಾವಿ ಪೋಲಿಸ್
ಬೆಳಗಾವಿ: ಇಲ್ಲಿಯ ನ್ಯೂ ಗಾಂಧಿ ನಗರ ಬಳಿ ಬೈಪಾಸ್ ರಸ್ತೆಯಲ್ಲಿ ಕಾರಿನಲ್ಲಿದ್ದ ವ್ಯಕ್ತಿಯನ್ನು ಹಿಡಿದು ಹಲ್ಲೆ ಮಾಡಿ ಜೇಬಿನಲ್ಲಿದ್ದ ನಗದು ಹಣ, ಎಟಿಎಂ ಕಾರ್ಡ್ ಹಾಗೂ ಕೈಗಡಿಯಾರ ದೋಚಿದ್ದ ಇಬ್ಬರು ಕದೀಮರನ್ನು ಕೇವಲ ಎರಡೇ ದಿನದಲ್ಲಿ ಪೊಲೀಸರು ಬಂಧಿ ಸಿದ್ದಾರೆ. ನ್ಯೂ ಗಾಂಧಿ ನಗರದ ಆದಿಲ್ ಶಾ ಗಲ್ಲಿಯ ಫರ್ವೇಜ್ ಜಮೀರ ಪಾರಿಶವಾಡಿ ಹಾಗೂ ನ್ಯೂ ಗಾಂ ಧಿ ನಗರದ ಖುದಾದಾದ ಗಲ್ಲಿಯ ಜುಬೇರ್ ಅಬ್ದುಲ್‌ರಸೀದ ದಾಲಾಯತ್ ಎಂಬುವರನ್ನು ಬಂಧಿಸಲಾಗಿದೆ. ಬಂಧಿತರಿಂದ ನಗದು ಹಣ …
Read More »ಲಂಚ ಸ್ವೀಕರಿಸುವಾಗ ಪಂಚಾಯಿತಿ ಪಿಡಿಒ ಅಧಿಕಾರಿ ಎಸಿಬಿ ಬಲೆಗೆ!
ಚಿತ್ರದುರ್ಗ: ಲಂಚ ಸ್ವೀಕರಿಸುವಾಗ ಪಂಚಾಯಿತಿ ಪಿಡಿಒ ಅಧಿಕಾರಿ ಎಸಿಬಿ ಬಲೆಗೆ ಬಿದ್ದಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಟಿ. ನುಲೇನೂರು ಗ್ರಾಮ ಪಂಚಾಯಿತಿ ಪಿಡಿಒ ಶ್ರೀನಿವಾಸ್ ಅವರು ಗುರುಶಾಂತಪ್ಪ ಅವರಿಂದ ಎರಡು ಸಾವಿರ ಲಂಚ ಸ್ವೀಕರಿಸುವ ವೇಳೆ ಎಸಿಬಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ. ಜಾಬ್ ಕಾರ್ಡ್ ನೀಡಲು ಗುರುಶಾಂತಪ್ಪ ಅವರ ಹಳೆಯ ಬ್ಯಾಲೆನ್ಸ್‌ಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಮೊದಲು ಇ-ಸ್ವತ್ತು ಮಾಡಿಸಲು 6 ಸಾವಿರ …
Read More »ಎಲೆಕ್ಷನನಲ್ಲಿ ಗೆದ್ದಿದ್ದಕ್ಕೆ ವಿರೋಧಿ ಬಣದಿಂದ ಮುಖಂಡನ ಬರ್ಬರ ಹತ್ಯೆ
ನಿನ್ನೆ ಗ್ರಾಮ ಪಂಚಾಯ್ತಿ ಚುನಾವಣೆ ಫಲಿತಾಂಶದಲ್ಲಿ ಸ್ಥಳಿಯ ಮುಖಂಡನ ಪೇನಲ್‍ನಲ್ಲಿ 10ಕ್ಕೆ 10 ಸೀಟ್‍ಗಳು ಬಂದಿದ್ದು. ಆದ್ರೆ ಇದೇ ಹೊಟ್ಟೆ ಕಿಚ್ಚಿನಿಂದ ವಿರೋಧಿ ಬಣದವರು ಆ ಮುಖಂಡನನ್ನೆ ಮರ್ಡರ್ ಮಾಡಿರುವ ಒಂದು ಧಾರುಣ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸುಲ್ತಾನ್‍ಪುರ ಗ್ರಾಮದಲ್ಲಿ ನಡೆದಿದೆ. ಶಾನುರಸಾಬ್ ದಸ್ತಗೀರ್‍ಸಾಬ್ ಮುಲ್ಲಾ ಕೊಲೆಯಾಗಿರುವ ದುರ್ದೈವಿ. ಸುಲ್ತಾನ್‍ಪುರ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಎರಡು ಬಣಗಳ ನಡುವೆ ನೇರಾನೇರ ಹಣಾಹಣಿ ಏರ್ಪಟ್ಟಿತ್ತು. ನಿನ್ನೆಯಷ್ಟೇ ಫಲಿತಾಂಶ ಹೊರ …
Read More »ಬನ್ನೂರು ಪುರಸಭೆ ಮುಖ್ಯಾಧಿಕಾರಿ ಎಸಿಬಿ ಬಲೆಗೆ
ಮೈಸೂರು,ಡಿ.23: ಲಂಚ ಪಡೆಯುತ್ತಿದ್ದ ವೇಳೆ ಜಿಲ್ಲೆಯ ಟಿ.ನರಸೀಪುರ ತಾಲೂಕು ಬನ್ನೂರು ಪುರಸಭೆ ಮುಖ್ಯಾಧಿಕಾರಿ ಎಸಿಬಿ ಬಲೆಗೆ ಬಿದ್ದಿದ್ದಾರೆ. ಬನ್ನೂರು ಪುರಸಭೆ ಮುಖ್ಯಾಧಿಕಾರಿ ಪುಷ್ಪಲತಾ 25 ಸಾವಿರ ರೂ. ಲಂಚ ಪಡೆಯುವ ವೇಳೆ ಮೈಸೂರಿನ ಭ್ರಷ್ಟಾಚಾರ ನಿಗ್ರಹದಳದ ಅಧಿಕಾರಿಗಳು ದಾಳಿ ನಡೆಸಿ ಬಂಧಿಸಿದ್ದಾರೆ. ಬನ್ನೂರು ಪಟ್ಟಣದ ಕಾಮಗಾರಿ ಸಂಬಂಧ ಬಿಲ್ ಮಾಡಿಕೊಡಲು ಗುತ್ತಿಗೆದಾರರೊಬ್ಬರಿಗೆ 25 ಸಾವಿರ ರೂ. ಲಂಚ ಬೇಡಿಕೆಯಿಟ್ಟಿದ್ದರು. ಈ ಸಂಬಂಧ ಗುತ್ತಿಗೆದಾರರು ಮೈಸೂರಿನ ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದರು. …
Read More »ಲಂಚ ಸ್ವೀಕಾರ ಆರೋಪ ಡಿವೈಎಸ್ಪಿ ವಿಜಯಲಕ್ಷ್ಮಿಗೆ 4 ವರ್ಷ ಜೈಲು ಶಿಕ್ಷೆ
ಕಲಬುರಗಿ : ಲಂಚ ಸ್ವೀಕಾರ ಆರೋಪ ಸಾಬೀತಾದ ಹಿನ್ನೆಲೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿವೈಎಸ್ಪಿ ವಿಜಯಲಕ್ಷ್ಮಿಗೆ 4 ವರ್ಷ ಜೈಲು ಶಿಕ್ಷೆ ವಿಧಿಸಿ ಜಿಲ್ಲಾ ವಿಶೇಷ ಸತ್ರ ನ್ಯಾಯಾಧೀಶ ಸತೀಶ್ ಸಿಂಗ್ ಆದೇಶ ಹೊರಡಿಸಿದ್ದಾರೆ. ವಿಜಯಲಕ್ಷ್ಮಿ 2015 ರಲ್ಲಿ ಶಹಾಬಾದ್ ಠಾಣೆ ಇನ್ಸ್ಪೆಕ್ಟರ್ ಆಗಿದ್ದ ವೇಳೆ ಲಂಚ ಸ್ವೀಕರಿಸುವಾಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದರು. ಜಪ್ತಿ ಮಾಡಿದ್ದ ವಾಹನ ಬಿಡಲು 25 ಸಾವಿರ ರೂಪಾಯಿ ಲಂಚ ಕೇಳಿದ್ದ ಆರೋಪದ ಹಿನ್ನೆಲೆ ರಾಜು ಎಂಬ …
Read More »ಚಾಲಕನಿಗೆ ಲೋ ಬಿಪಿ ; ನಿಯಂತ್ರಣ ತಪ್ಪಿ ಮನೆಗೆ ಡಿಕ್ಕಿ .
ಮಡಿಕೇರಿ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಲೈನ್ ಮನೆಗೆ ಡಿಕ್ಕಿಯಾಗಿರುವ ಘಟನೆ ಕೊಡಗಿನ ಸೋಮವಾರಪೇಟೆಯಲ್ಲಿ ನಡೆದಿದೆ. ಇಂದು ಬೆಳಗ್ಗೆ ತಾಕೇರಿಯಿಂದ ಸೋಮವಾರಪೇಟೆ ಹೋಗುವಾಗ ಮಾರ್ಗ ಮಧ್ಯೆ ದುರ್ಘಟನೆ ನಡೆದಿದ್ದು, ಪ್ರಾಣಪಾಯದಿಂದ ಚಾಲಕ ಬೋಪಯ್ಯ (47) ಪಾರಾಗಿದ್ದಾರೆ. ಚಾಲಕನಿಗೆ ಲೋ ಬಿಪಿ ಹಿನ್ನಲೆಯಲ್ಲಿ ಮಾರುತಿ ಬ್ರಿಝಾ ಕಾರು ನಿಯಂತ್ರಣ ತಪ್ಪಿ ಮನೆಗೆ ಡಿಕ್ಕಿಯಾಗಿದೆ.
Read More »ಗೋಕಾಕ ತಾಲೂಕಿನ ನಾಲ್ವರು ಪರೀಕ್ಷೆ ಬರೆಯುತ್ತಿರುವರು ನಕಲಿ ಸಹಿ ಮಾಡಿ ಸಿಕ್ಕಿ ಬಿದ್ದರು
ಬೆಳಗಾವಿ ನಗರದಲ್ಲಿ ಇಂದು 39 ಪರೀಕ್ಷಾ ಕೇಂದ್ರಗಳಲ್ಲಿ ಜರುಗಿದ ಎಸ್‌ಆರ್‌ಪಿಸಿ / ಐಆರ್‌ಬಿ / ಕೆಎಸ್‌ಆರ್‌ಪಿ ಪುರುಷ & ಮಹಿಳಾ ಕಾನ್‌ಸ್ಟೇಬಲ್ ಹುದ್ದೆಯ ಸಿ.ಇ.ಟಿ ಲಿಖಿತ ಪರೀಕ್ಷೆಯಲ್ಲಿ ಒಟ್ಟು 1921 ಅಭ್ಯರ್ಥಿಗಳ ಪೈಕಿ 8461 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅದರಲ್ಲಿ 1 ) ಜಿಐಟಿ ಕಾಲೇಜ , ಉದ್ಯಮಬಾಗ 2 ) ಲವ್‌ಡೇಲ್ ಸೆಂಟ್ರಲ್ ಸ್ಕೂಲ , ಮಾಳಮಾರುತಿ , 3 ) ಕೆಎಲ್‌ಎಸ್ ಸಂಸ್ಥೆ . ಇಂಗ್ಲೀಷ ಮಿಡಿಯಮ್ …
Read More »ರೂ.1.5 ಲಕ್ಷ ಲಂಚ ಪಡೆಯುತ್ತಿದ್ದ ಸಣ್ಣ ನೀರಾವರಿ ಭ್ರಷ್ಟ ಇಇ ಸೇರಿ ಇಬ್ಬರು ಬಂಧನ.
ಬೆಂಗಳೂರು: ಚೆಕ್ ಡ್ಯಾಮ್ ಕಾಮಗಾರಿ ನಿರ್ವಹಿಸಿದ್ದ ಗುತ್ತಿಗೆದಾರನಿಗೆ ಬಾಕಿ ಹಣ ಬಿಡುಗಡೆ ಮಾಡಲು ₹ 1.5 ಲಕ್ಷ ಲಂಚ ಪಡೆಯುತ್ತಿದ್ದ ಸಣ್ಣ ನೀರಾವರಿ ಇಲಾಖೆಯ ಬೆಂಗಳೂರು ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಎಂ.ಎನ್. ಕಿಶೋರ್ ಮತ್ತು ಅವರ ಕಚೇರಿಯ ಲೆಕ್ಕ ಅಧೀಕ್ಷಕ ದತ್ತಾತ್ರೇಯ ನಾರಾಯಣಕರ್ ಅವರನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಸೋಮವಾರ ಬಂಧಿಸಿದೆ. ದೊಡ್ಡಬಳ್ಳಾಪುರ ನಿವಾಸಿಯಾದ ಗುತ್ತಿಗೆದಾರ ವೆಂಕಟೇಶ್ ಬಾಬು ಎಂಬುವವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆ …
Read More »ನೀರು ಮತ್ತು ನೈರ್ಮಲ್ಯ ಇಲಾಖೆಯ ಬಾಗಲಕೋಟೆ ಉಪ ವಿಭಾಗದ ಸಹಾಯಕ ಎಂಜಿನಿಯರ್ ಎಸಿಬಿ ಬಲೆಗೆ!
ಬಾಗಲಕೋಟೆ : ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಬಾಗಲಕೋಟೆ ಉಪ ವಿಭಾಗದ ಸಹಾಯಕ ಅಭಿಯಂತರ ಅಶೋಕ ತೋಪಲಕಟ್ಟಿ (ಎ.ಎಸ್. ತೋಪಲಕಟ್ಟಿ) ನಿವಾಸದ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದ ವೇಳೆ 5.15 ಲಕ್ಷ ಮೊತ್ತದ ನಿಷೇಧಿತ ನೋಟು ಪತ್ತೆ ಯಾಗಿದ್ದು, ಅವುಗಳನ್ನು ನೋಡಿದ ಅಧಿಕಾರಿಗಳೂ ದಂಗಾದ ಪ್ರಸಂಗ ನಡೆದಿದೆ. ಕಳೆದ 2016ರಲ್ಲಿಯೇ ಹಳೆಯ 500 ಹಾಗೂ ಸಾವಿರ ಮುಖ ಬೆಲೆಯ ನೋಟುಗಳು ನಿಷೇಧ ಮಾಡಿದ್ದು, ಈಗ ಹಳೆಯ ನೋಟು …
Read More »