Breaking News

ಅಂತರಾಷ್ಟ್ರೀಯ

ಕೆಎಂಎಫ್‍ನಿಂದ ರೈತರಿಗೆ ಹಲವು ಪ್ರಯೋಜನ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ .

ಬೆಂಗಳೂರು : ಬೆಂಗಳೂರು ದಕ್ಷಿಣ ತಾಲೂಕಿನಲ್ಲಿ ಸರ್ಕಾರದಿಂದ ಕೆಎಂಎಫ್‍ಗೆ 32 ಎಕರೆ ಜಮೀನನ್ನು ನೀಡುತ್ತಿದ್ದು, ಇದರ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಈ ಜಮೀನಿನಲ್ಲಿ ಅತ್ಯಾಧುನಿಕ ಉತ್ಪನ್ನಗಳ ಮತ್ತು ಪ್ಯಾಕಿಂಗ್ ಸಾಮಗ್ರಿಗಳನ್ನು ತಯಾರಿಸುವ ಘಟಕವನ್ನು ಸ್ಥಾಪಿಸಲು ಉದ್ಧೇಶಿಸಲಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಶುಕ್ರವಾರ ಕೆಎಂಎಫ್ ಪ್ರಧಾನ ಕಛೇರಿಯಲ್ಲಿ ಜರುಗಿದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರದಿಂದ ಕೆಎಂಎಫ್‍ಗೆ ಜಾಗೆ ನೀಡುವ ಸಂಬಂಧ ಸಹಕಾರ …

Read More »

ಅಸ್ಸಾಂ* – *ಶಕ್ತಿ ಪೀಠ ಕಾಮಾಕ್ಯ ದೇಗುಲದಲ್ಲಿ ಪೂಜೆ ಸಲ್ಲಿಸಿದ ಸಚಿವ ರಮೇಶ್ ಜಾರಕಿಹೊಳಿ*

  ಹೊಸ ಕ್ಯಾಲೆಂಡರ್ ವರ್ಷದ ಪ್ರಾರಂಭಿಕ ದಿನವಾದ ಇಂದು, ಅಸ್ಸಾಂ ರಾಜ್ಯದ ಗುವಾಹಟಿ ನಗರದ ಪಶ್ಚಿಮ ಭಾಗದಲ್ಲಿರುವ ನೀಲಾಚಲ ಬೆಟ್ಟದ ಮೇಲೆ ನೆಲಸಿರುವ ಶಕ್ತಿಪೀಠ *ಶ್ರೀ ಕಾಮಾಕ್ಯ ದೇವಾಲಯ* ಕ್ಕೆ ಭೇಟಿ ನೀಡಿದ ಕರ್ನಾಟಕ ರಾಜ್ಯದ ಜಲಸಂಪನ್ಮೂಲ ಸಚಿವರಾದ *ಶ್ರೀ ರಮೇಶ್ ಜಾರಕಿಹೊಳಿ*, *ಕಾಮಾಕ್ಯ ದೇವಾಲಯ* ದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಭುವನೇಶ್ವರಿ, ಬಾಗಲಮುಖಿ, ಚಿನ್ನಮಸ್ತ, ತ್ರಿಪುರ ಸುಂದರಿ ಮತ್ತು ತಾರ ಅವರನ್ನು ಒಳಗೊಂಡಂತೆ ವಿವಿಧ ರೂಪಗಳಲ್ಲಿ ಕಂಗೊಳಿಸುವ *ಜಗನ್ಮಾತೆ ತಾಯಿ* ಗೆ ಪೂಜೆ ಸಲ್ಲಿಸಿದ ಸಚಿವ *ರಮೇಶ್ ಜಾರಕಿಹೊಳಿ*, ಮಾರಕ ಕೊರೋನಾ ಸೋಂಕು …

Read More »

ರಾಹುಲ ,ಪ್ರಿಯಾಂಕಾ ಜಾರಕಿಹೊಳಿ ಸಮ್ಮುಖದಲ್ಲಿ ಕಾಂಗ್ರೆಸ್ ಗೆ ಸೇರ್ಪಡೆಯಾದ ಬಿಜೆಪಿ ಕಾರ್ಯಕರ್ತರು!

ಬೆಳಗಾವಿ: ಯಮಕನಮರಡಿ ಕ್ಷೇತ್ರ ವ್ಯಾಪ್ತಿಯ  ಪಾಶ್ಚಾಪೂರ ಪಂಚಾಯಿತಿಯಿಂದ ನಿನ್ನೇಯಷ್ಟೇ ಆಯ್ಕೆಯಾಗಿದ್ದ  ಬಿಜೆಪಿ ಬೆಂಬಲಿತ ಸದಸ್ಯೆ ಬಿಜೆಪಿ  ಪಕ್ಷ ತೊರೆದು  ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಶಾಸಕ  ಸತೀಶ ಜಾರಕಿಹೊಳಿ ಅವರ ಪುತ್ರ ರಾಹುಲ್,  ಪ್ರಿಯಾಂಕಾ ಜಾರಕಿಹೊಳಿ  ಅವರ  ಸಮ್ಮುಖದಲ್ಲಿ  ಬಿಜೆಪಿ  ಕಾರ್ಯಕರ್ತರೆ ಹಾಗೂ ಪಂಚಾಯಿತಿ ಸದಸ್ಯೆ ಮನಿಷಾ ಸಿಂಧೆ ಎಂಬುವವರು 10 ಕ್ಕೂ ಹೆಚ್ಚು ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಪಾಶ್ಚಾಪೂರ ಪಂಚಾಯಿತಿ 5 ನೇ ವಾರ್ಡ್ ನಿಂದ ಮನಿಷಾ ಸದಸ್ಯರಾಗಿ ಆಯ್ಕೆಯಾಗಿದ್ದರು.  …

Read More »

ಕೃಷ್ಣ -ಕಾವೇರಿ ಕಣಿವೆ ರೈತರ ಅನುಕೂಲಕ್ಕೆ ವಿಶಿಷ್ಠ ಯೋಜನೆಗಳ ಅನುಷ್ಠಾನಕ್ಕೆ ಚಿಂತನೆ ; ಭೂಪೇಂದ್ರ ಯಾದವ್ ಜತೆ ಸಚಿವ ರಮೇಶ್ ಜಾರಕಿಹೊಳಿ ಸಮಾಲೋಚನೆ

ಬೆಂಗಳೂರು, ಡಿ. 31, 2020: ರಾಜ್ಯದ ಕೃಷ್ಣ ಮತ್ತು ಕಾವೇರಿ ಕೊಳ್ಳದ ರೈತರಿಗೆ ಹೆಚ್ಚಿನ ಅನುಕೂಲ ಆಗುವಂತಹ ಯೋಜನೆಗಳನ್ನು ಜಾರಿಗೆ ತರಲು ಉತ್ಸುಕರಾಗಿರುವ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ರಾಜ್ಯಸಭಾ ಸದಸ್ಯ ಭೂಪೆಂದ್ರ ಯಾದವ್ ಅವರೊಂದಿಗೆ ಸಮಾಲೋಚನೆ ನಡೆಸಿದರು. ಮಹತ್ವದ ಬೆಳವಣಿಗೆಯಲ್ಲಿ ಅಸ್ಸಾಂನ ರಾಜಧಾನಿ ಗೌಹಾಟಿಯಲ್ಲಿ ಭೂಪೆಂದ್ರ ಅವರನ್ನು ಭೇಟಿ ಮಾಡಿದ್ದ ಸಚಿವರು, ಬ್ರಹ್ಮಪುತ್ರ ನದಿ ಕಣಿವೆಯ ಇಕ್ಕೆಲಗಳಲ್ಲಿ ವಿಶ್ವದ ಪ್ರತಿಷ್ಠಿತ ಮಲ್‌ಬರಿ ಮತ್ತು ಗೋಲ್ಟನ್ ಮೋಘಾ …

Read More »

ಸಾಹಸಸಿಂಹ ಡಾ.ವಿಷ್ಣುವರ್ಧನ್ ಪುಣ್ಯತಿಥಿ ; ಶ್ರೇಷ್ಠ ಕಲಾವಿದನನ್ನು ಸ್ಮರಿಸಿದ ಸಚಿವ ರಮೇಶ್ ಜಾರಕಿಹೊಳಿ‌

ಕನ್ನಡ ಚಲನಚಿತ್ರ ರಂಗದ ಧೃವತಾರೆಯಾಗಿ ಮಿಂಚಿದ *ಸಾಹಸಸಿಂಹ ಡಾ.ವಿಷ್ಣುವರ್ಧನ್* ಅವರ ಪುಣ್ಯತಿಥಿಯ ದಿನವಾದ ಇಂದು ಈ ಮೇರುನಟನನ್ನು ಗೌರವಪೂರ್ವಕವಾಗಿ ಸ್ಮರಿಸೋಣ. ಬಹುಭಾಷಾ ತಾರೆಯಾಗಿ ಕಲಾ ರಸಿಕರ ಮನದಲ್ಲಿ ಶಾಶ್ವತ ಸ್ಥಾನ ಪಡೆದಿರುವ *ಡಾ. ವಿಷ್ಣುವರ್ಧನ್* ಅವರ ಕಲಾ ಪ್ರೌಢಿಮೆ, ನಟನಾ ಶ್ರೀಮಂತಿಕೆ ಹಾಗೂ ಸರ್ವಶ್ರೇಷ್ಠ ವ್ಯಕ್ತಿತ್ವದ ಪ್ರಭಾವ ಸದಾ ಜೀವಂತವಾಗಿದೆ. ಸಾಮಾಜಿಕ ಸಂದೇಶಗಳನ್ನು ಸಾರುವ ಚಲನಚಿತ್ರಗಳಲ್ಲಿ ನಟಿಸುವ ಮೂಲಕ ರಾಜ್ಯದ ಜನಮನಗೆದ್ದ ಡಾ. ವಿಷ್ಣುವರ್ಧನ್ ಅವರು ಇಂದಿಗೂ ನಮ್ಮ ಮನೆ, …

Read More »

ಉಪ ಸಭಾಪತಿ ಎಸ್.ಎಲ್ ಧರ್ಮೇಗೌಢ ನಿಧನಕ್ಕೆ ಶಾಸಕ ಸತೀಶ ಜಾರಕಿಹೊಳಿ ಸಂತಾಪ

ಬೆಳಗಾವಿ: ವಿಧಾನ ಪರಿಷತ್ ಉಪ ಸಭಾಪತಿ ಎಸ್.ಎಲ್ ಧರ್ಮೇಗೌಢ ನಿಧನಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಸಂತಾಪ ಸೂಚಿಸಿದ್ದಾರೆ. ಧರ್ಮೇಗೌಡರು  ತುಂಬ ಆತ್ಮೀಯರು, ಮುಂಚೆ ಜೆಡಿಎಸ್ ನಲ್ಲಿ  ನಾನು ಅವರೊಂದಿಗೆ ಕೆಲಸ ಮಾಡಿದ್ದೇನೆ.  ಜೀವನದಲ್ಲಿ ಸಮಸ್ಯೆಗಳು ಬರುವುದು ಸಹಜ. ಅವರು  ಹೋರಾಟ ಮಾಡಬೇಕಿತ್ತು.  ಅನಿವಾರ್ಯವಾಗಿ ನಮ್ಮನ್ನೆಲ್ಲ  ಅಗಲಿದ್ದಾರೆ. ಅವರ ಕುಟುಂಬಕ್ಕೆ ದುಃಖ  ಸಹಿಸಿಕೊಳ್ಳುವ ಶಕ್ತಿ ಬರಲಿ ಎಂದು ಕಂಬನಿ ಮಿಡಿದರು. ಚಿಕ್ಕಮಗಳೂರಿನಲ್ಲಿ  ಸಹಕಾರ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಧರ್ಮೇಗೌಡರು  …

Read More »

ಧರ್ಮೇಗೌಡರ ಹಠಾತ್ ನಿಧನ ; ಸಹಕಾರಿ ಕ್ಷೇತ್ರವೂ ಬಡವಾಗಿದೆ – ಸಂತಾಪ ಸೂಚಿಸಿದ ಸಚಿವ ರಮೇಶ್ ಜಾರಕಿಹೊಳಿ‌

ಕರ್ನಾಟಕ ವಿಧಾನಪರಿಷತ್ತಿನ ಉಪ ಸಭಾಪತಿಯಾಗಿದ್ದ *ಶ್ರೀ ಎಸ್ ಎಲ್ ಧರ್ಮೇಗೌಡ* ರ ಹಠಾತ್ ನಿಧನಕ್ಕೆ ಜಲಸಂಪನ್ಮೂಲ ಸಚಿವರಾದ *ಶ್ರೀ ರಮೇಶ್ ಜಾರಕಿಹೊಳಿ‌* ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಸಜ್ಜನ ವ್ಯಕ್ತಿಯಾಗಿದ್ದ *ಧರ್ಮೇಗೌಡ* ರು ಬೀರೂರು ಕ್ಷೇತ್ರದ ಶಾಸಕರಾಗಿಯೂ ಈ ಹಿಂದೆ ಕಾರ್ಯನಿರ್ವಹಿಸಿದ್ದರು. ಸಹಕಾರಿ ರಂಗದ ಹಿರಿಯ ಧುರೀಣರಾಗಿದ್ದರು. ಇತ್ತೀಚಿಗೆ ವಿಧಾನ ಪರಿಷತ್ ಗೆ ಆಯ್ಕೆಯಾಗಿ ಉಪ ಸಭಾಪತಿಗಳಾಗಿ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುತ್ತಿದ್ದರು. ಸೂಕ್ಷ್ಮ ಮನಸ್ಸಿನ ರಾಜಕಾರಿಣಿಯನ್ನು ಕಳೆದುಕೊಂಡ ನಾಡು ಬಡವಾಗಿದೆ ಎಂದು …

Read More »

ಸರ್ಕಾರಿ ಶಾಲೆಗಳ ದತ್ತು ಸ್ವೀಕಾರ ; ಮಾನವೀಯತೆ ಮೆರೆದ ಸಚಿವ ರಮೇಶ್ ಜಾರಕಿಹೊಳಿ‌.

ಭಾರತದ ಯುವಕರಿಗೆ ಗುಣಮಟ್ಟದ ಶಿಕ್ಷಣ ಒದಗಿಸುವುದು ಸರ್ಕಾರಗಳಿಗೆ ಸವಾಲಾಗಿರುವ ಈ ಸಂದರ್ಭದಲ್ಲಿ ಸರ್ಕಾರಿ ಶಾಲೆಗಳನ್ನು ದತ್ತು ಪಡೆಯುವ ಮೂಲಕ ರಾಜ್ಯದ ಜಲಸಂಪನ್ಮೂಲ ಸಚಿವರಾದ *ರಮೇಶ್ ಜಾರಕಿಹೊಳಿ‌* ಅವರು ಮಾನವೀಯತೆಯನ್ನು ಮೆರೆದಿದ್ದಾರೆ. ಕೋವಿಡ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಈ ಕಾಲದಲ್ಲಿ ಸರ್ಕಾರಿ ಶಾಲೆಗಳಿಗೆ ಮೂಲಸೌಕರ್ಯ ಒದಗಿಸುವುದು ತುಂಬಾ ಕಷ್ಟಕರವಾಗಿದೆ ಎಂದು ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಾದ *ಶ್ರೀ ಬಿ ಎಸ್ ಯಡಿಯೂರಪ್ಪ* ಅವರು ಎಲ್ಲಾ ಜನಪ್ರತಿನಿಧಿಗಳಿಗೆ ಮತ್ತು ಕಾರ್ಪೊರೇಟ್ ಸಂಸ್ಥೆಗಳಿಗೆ ಸರ್ಕಾರಿ ಶಾಲೆಗಳನ್ನು …

Read More »

FDA, SDA ಅಭ್ಯರ್ಥಿಗಳ ನೇಮಕಾತಿಗೆ ಆದೇಶಕ್ಕೆ ಒಪ್ಪಿಗೆ ಸೂಚಿಸಲು ಅಭ್ಯರ್ಥಿಗಳಿಂದ ಸಚಿವರಿಗೆ ಮನವಿ

ಗೋಕಾಕ :ಸನ್ 2017 ನೇ ಸಾಲಿನ ಎಸ್.ಡಿ.ಎ.ಹಾಗೂ ಎಫ್, ಡಿ,ಎ ಹುದ್ದೆಗಳಿಗೆ ನೇಮಕಾತಿ ಆದೇಶ ನೀಡಲು ಆರ್ಥಿಕ ಇಲಾಖೆಗೆ ಒಪ್ಪಿಗೆ ಸೂಚಿಸುವಂತೆ ಸಚಿವ ರಮೇಶ ಜಾರಕಿಹೊಳಿ ಅವರಿಗೆ SDA ಹಾಗೂ FDA ಅಭ್ಯರ್ಥಿಗಳು ಮನವಿ ಮಾಡಿಕೊಂಡರು. 2017 ನೇ ಸಾಲಿನ SDA ಹಾಗೂ FDA ಪರೀಕ್ಷೆಯಲ್ಲಿ ಆಯ್ಕೆಗೊಂಡಿದ್ದು ಎಲ್ಲ ಮೂಲ ದಾಖಲಾತಿ ಪರಿಶೀಲನೆ ಪ್ರಕ್ರಿಯೆ ಮುಗಿದಿದ್ದು, ಹಾಗೂ ಆರ್ಥಿಕ ಇಲಾಖೆಯು ನೇಮಕ ಪ್ರಕ್ರಿಯೆಯನ್ನು ತಡೆಹಿಡಿದಿದೆ. ಆದರೇ ಇದೇ ಅಧಿಸೂಚನೆಯಲ್ಲಿ ಆಯ್ಕೆಯಾದ …

Read More »

ರಾಜ್ಯದಲ್ಲಿ ನೈಟ್ ಕರ್ಫ್ಯೂ ಅವಧಿ ದಿಢೀರ್ ಬದಲಾವಣೆ!

ಬೆಂಗಳೂರು: ಹೊಸ ಬಗೆಯ ಕೊರೊನಾ ವೈರಸ್ ಹರಡುತ್ತಿರುವ ಕಾರಣದಿಂದ ರಾಜ್ಯದಲ್ಲಿ ಬುಧವಾರ (ಡಿ.23) ಜ. 2ರವರೆಗೆ ವಿಧಿಸಲಾಗಿದ್ದ ರಾತ್ರಿ ಕರ್ಫ್ಯೂವಿನಲ್ಲಿ ಬದಲಾವಣೆ ಮಾಡಲಾಗಿದೆ. ಈ ಬಗ್ಗೆ ಸಿಎಂ ಕಚೇರಿ ಟ್ವೀಟ್‌ ಮಾಡಿದೆ. ರಾಜ್ಯದಲ್ಲಿ ಇಂದಿನಿಂದ (ಡಿ.23ರಿಂದ) ಜಾರಿ ಮಾಡಲು ಉದ್ದೇಶಿಸಿದ್ದ ರಾತ್ರಿ ಕರ್ಫ್ಯೂವನ್ನು ನಾಳೆಯಿಂದ, ಅಂದರೆ ದಿನಾಂಕ 24.12.2020 ರಿಂದ ಜನವರಿ 01, 2021 ರವರೆಗೆ ಜಾರಿ   ರಾತ್ರಿ 10 ಗಂಟೆಯಿಂದ ಬೆಳಗ್ಗೆ 6ರ ವರೆಗೆ ಕರ್ಫ್ಯೂ ಜಾರಿಯಲ್ಲಿ ಇರಲಿದೆ …

Read More »