ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಮೂರ್ನಾಲ್ಕು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಬೆಳಗಾವಿ ಜಿಲ್ಲೆಯಲ್ಲಿಯೂ ಮಳೆಯ ಪ್ರಮಾಣ ಹೆಚ್ಚಾಗಿದ್ದು, ವಿಪರೀತ ಹಾನಿ ಸಂಭವಿಸಿದೆ. ಈ ಕುರಿತು ಚರ್ಚಿಸಲು *ನಾಳೆ ಉನ್ನತ ಮಟ್ಟದ ಸಭೆ* ಕರೆದಿರುವುದಾಗಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಜಲಸಂಪನ್ಮೂಲ ಸಚಿವ *ಶ್ರೀ ರಮೇಶ್ ಜಾರಕಿಹೊಳಿ* ತಿಳಿಸಿದ್ದಾರೆ. “ಬೆಳಗಾವಿ ಜಿಲ್ಲೆಯ ಮಳೆಯ ಹಾನಿಯ ಕುರಿತು ಈಗಾಗಲೇ ಅಧಿಕಾರಿಗಳಿಂದ ವರದಿ ಪಡೆದಿದ್ದೇನೆ. ನಾಳೆ ಸಭೆ ಕರೆದು ಚರ್ಚಿಸುತ್ತೇನೆ. ಕಲಬುರಗಿ …
Read More »ಲಂಚ ಪಡೆಯುತ್ತಿದ್ದ ರೇಷ್ಮೆ ತಾಂತ್ರಿಕ ಸೇವಾ ಕೇಂದ್ರದ ಭ್ರಷ್ಟ ನಿರೀಕ್ಷಕ ಸಿಕ್ಕಿ ಬಿದ್ದ!
ಚಿಕ್ಕಬಳ್ಳಾಪುರ: ರೇಷ್ಮೆ ಹುಳು ಸಾಕಾಣಿಕೆ ಮನೆ ಮತ್ತು ಹನಿ ನೀರಾವರಿಯ ಸಹಾಯಧನ ಬಿಡುಗಡೆ ಮಾಡಲು 12,500 ರೂಗಳು ಲಂಚ ಸ್ವೀಕರಿಸಿದ ಶಿಡ್ಲಘಟ್ಟ ತಾಲೂಕಿನ ಮೇಲೂರು ರೇಷ್ಮೆ ತಾಂತ್ರಿಕ ಸೇವಾ ಕೇಂದ್ರದ ನಿರೀಕ್ಷಕರೊಬ್ಬರು ಭ್ರಷ್ಟಚಾರ ನಿಗ್ರಹದಳ(ಎಸಿಬಿ) ಬಲೆಗೆ ಸಿಕ್ಕಿಬಿದ್ದಿದ್ದಾರೆ. ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಮೇಲೂರು ರೇಷ್ಮೆ ತಾಂತ್ರಿಕ ಸೇವಾ ಕೇಂದ್ರದ ರೇಷ್ಮೆ ನಿರೀಕ್ಷಕ ಪ್ರವೀಣ್ ಅವರು ಲಂಚ ಸ್ವೀಕರಿಸುವಾಗ ಎಸಿಬಿ ಪೋಲಿಸರು ಹಣದ ಸಮೇತ ಬಂಧಿಸಿದ್ದಾರೆ. ಶಿಡ್ಲಘಟ್ಟ ತಾಲೂಕಿನ ಮೇಲೂರಿನ ಶ್ರೀನಿವಾಸರೆಡ್ಡಿ ಅವರು …
Read More »ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟ|| ಗೋಕಾಕ ನಗರ ಸಭೆಗೆ ಯಾರಾಗ್ತಾರೇ ಅಧ್ಯಕ್ಷ ಉಪಾಧ್ಯಕ್ಷ || ಸಚಿವ ರಮೇಶ ಜಾರಕಿಹೊಳಿ ಅವರ ಕೃಪಾಕಟಾಕ್ಷ ಯಾರ ಮೇಲೆ?
ಚೇತನ ಖಡಕಭಾಂವಿ , ಸಂಪಾದಕರು CK NEWS KANNADA. ಗೋಕಾಕ : ಗೋಕಾಕ ನಗರ ಸಭೆ ಸದಸ್ಯರಾಗಿ ಕಳೆದ ಎರಡು ವರ್ಷಗಳಾದರು ಇನ್ನೂ ಅಧಿಕಾರ ವಹಿಸಿಕೊಂಡಿಲ್ಲ, ಮೊನ್ನೆ ಸರ್ಕಾರದಿಂದ ಪರಿಷ್ಕ್ರತ ಮೀಸಲಾತಿ ಪ್ರಕಟಣೆ ಹೊರಡಿಸಿ ಆದೇಶಿಸಿದಾಗ ಸದಸ್ಯರಲ್ಲಿ ಮಂದಹಾಸ ಒಂದು ಕಡೆ ಆದರೇ , ಇನ್ನೊಂದೆಡೆ ಅಧ್ಯಕ್ಷ, ಉಪಾಧ್ಯಕ್ಷ ಯಾರಾಗ್ತರೇ ಎಂಬ ಕುತೂಹಲ, ಇದ್ದಕ್ಕೇಲ್ಲ ಶೀಘ್ರದಲ್ಲಿ ವಿರಾಮವಾಗಲಿದೆ. ಗೋಕಾಕ ನಗರ ಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗ ,ಉಪಾಧ್ಯಕ್ಷ ಸ್ಥಾನಕ್ಕೆ …
Read More »ರಾಜ್ಯೋತ್ಸವ ಪ್ರಶಸ್ತಿ ; ಸಚಿವ ರಮೇಶ ಜಾರಕಿಹೊಳಿ ಅವರಿಗೆ ಮನವಿ ನೀಡಿದ ಇಂಜಿನಿಯರ್ಸ್.*
ಕರ್ನಾಟಕ ರಾಜ್ಯದ ಪ್ರಖ್ಯಾತ ಮುಖ್ಯ ಅಭಿಯಂತರರಾದ (ನಿವೃತ್ತ) *ಕ್ಯಾಪ್ಟನ್ ರಾಜಾರಾವ್* ಅವರಿಗೆ ಈ ಬಾರಿಯ ಪ್ರತಿಷ್ಠಿತ *ರಾಜ್ಯೋತ್ಸವ* ಪ್ರಶಸ್ತಿಯನ್ನು ನೀಡುವಂತೆ ಜಲಸಂಪನ್ಮೂಲ ಇಂಜಿನಿಯರ್ ಗಳ ಸಂಘ, ಜಲಸಂಪನ್ಮೂಲ ಸಚಿವರಾದ *ಶ್ರೀ ರಮೇಶ್ ಜಾರಕಿಹೊಳಿ* ಅವರಿಗೆ ಮನವಿ ಮಾಡಿದೆ. ವಿಧಾನಸೌಧದಲ್ಲಿಂದು ಸಚಿವರನ್ನು ಭೇಟಿ ಮಾಡಿದ ಅಭಿಯಂತರರು, ಈ ಬಾರಿ *ರಾಜ್ಯೋತ್ಸವ ಪ್ರಶಸ್ತಿಗೆ ತಾಂತ್ರಿಕ ಕ್ಷೇತ್ರ* ವನ್ನೂ ಪರಿಗಣಿಸುವಂತೆ ಒತ್ತಾಯಿಸಿದರು. ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಅಭಿಯಂತರರು ಸದಾ ಶ್ರಮಿಸುತ್ತಿರುವುದನ್ನು ನಾನು ಗಮನಿಸಿದ್ದೇನೆ. 6 …
Read More »ಮೇಕೆದಾಟು ಯೋಜನೆ ; ಮತ್ತೆ ಕೇಂದ್ರ ಸಚಿವರನ್ನು ಭೇಟಿ ಮಾಡಲಿರುವ ಸಚಿವ ಜಾರಕಿಹೊಳಿ
ಮೇಕೆದಾಟು ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಪರಿಸರ ಮತ್ತು ಅರಣ್ಯ ಇಲಾಖೆಯ ಅನುಮತಿ ಪಡೆಯಲು ಒತ್ತಾಯಿಸಿ ರಾಜ್ಯದ ಜಲಸಂಪನ್ಮೂಲ ಸಚಿವರಾದ *ಶ್ರೀ ರಮೇಶ್ ಜಾರಕಿಹೊಳಿ* ಅವರು ನವದೆಹಲಿಗೆ ತೆರಳಲಿದ್ದಾರೆ. ಜಲಸಂಪನ್ಮೂಲ ಇಲಾಖೆಯ ಹಲವಾರು ಯೋಜನೆಗಳಿಗೆ ಅರಣ್ಯ ತೀರುವಳಿ ನೀಡುವ ಉನ್ನತ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಸಚಿವರು, ಮೇಕೆದಾಟು ಸೇರಿದಂತೆ ಹಲವು ಯೋಜನೆಗಳ ಬಗ್ಗೆ ಅನುಮತಿ ಪಡೆಯಲು ಕೇಂದ್ರದ ಸಚಿವರನ್ನು ಒತ್ತಾಯಿಸಲಾಗುವುದು. ಅದಕ್ಕಾಗಿ ಶೀಘ್ರದಲ್ಲಿ ನವದೆಹಲಿಗೆ ತೆರಳಲು ಯೋಚಿಸಿರುವುದಾಗಿ …
Read More »KMF ನಿರ್ದೇಶಕರಾದ ಶ್ರೀ ಅಮರ್ ನಾಥ್ ರಮೇಶ್ ಜಾರಕಿಹೊಳಿ ಅವರ ಹೇಳಿಕೆ
ನಾನು ವಯಸ್ಸಿನಲ್ಲಿ ತುಂಬಾ ಚಿಕ್ಕವನು. ಇತ್ತೀಚೆಗಷ್ಟೇ ಭಾರತೀಯ ಜನತಾ ಪಾರ್ಟಿಯನ್ನು ಸೇರಿದ್ದೇನೆ. ಪಕ್ಷದ ಕಾರ್ಯಕರ್ತನಾಗಿ ಇನ್ನೂ ಸಾಕಷ್ಟು ಕೆಲಸ ಮಾಡುವ ಮನಸ್ಸಿದೆ. ನನ್ನ ತಂದೆಯವರು ರಾಜ್ಯ ಸರ್ಕಾರದಲ್ಲಿ ಸಚಿವರಾಗಿದ್ದಾರೆ. ಗೋಕಾಕ್ ಕ್ಷೇತ್ರದ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿ ; ಸಮಸ್ಯೆಗಳನ್ನು ಪರಿಹರಿಸುವ ಗುರುತರ ಜವಾಬ್ದಾರಿ ನನ್ನ ಮೇಲಿದೆ. ಸನ್ಮಾನ್ಯ ಕೇಂದ್ರ ಸಚಿವರಾಗಿದ್ದ ದಿವಂಗತ ಸುರೇಶ್ ಅಂಗಡಿಯವರು ಸಾಕಷ್ಟು ಜನೋಪಯೋಗಿ ಕಾರ್ಯಗಳನ್ನು ಮಾಡಿದ್ದಾರೆ. ಅವುಗಳನ್ನು ಮುಂದುವರೆಸಿಕೊಂಡು ಹೋಗುವ ಸಲುವಾಗಿ ಈ ಲೋಕಸಭಾ …
Read More »ಖ್ಯಾತ ಸಂಗೀತ ನಿರ್ದೇಶಕ ಶ್ರೀ ರಾಜನ್ ಅವರು ನಿಧನ:ಸಚಿವ ರಮೇಶ್ ಜಾರಕಿಹೊಳಿ ಸಂತಾಪ.
ಕನ್ನಡ ಚಲನಚಿತ್ರ ರಂಗದ ಹೆಸರಾಂತ ಹಿರಿಯ ಸಂಗೀತ ನಿರ್ದೇಶಕ *ಶ್ರೀ ರಾಜನ್* ಅವರು ನಿಧನರಾದ ಸುದ್ದಿ ನನ್ನ ಮನಸ್ಸಿಗೆ ತೀವ್ರ ನೋವನ್ನು ಉಂಟುಮಾಡಿದೆ. ಅನೇಕ ಜನಪ್ರಿಯ ಕನ್ನಡ ಚಲನಚಿತ್ರಗಳಿಗೆ ಸಂಗೀತ ನೀಡಿದ್ದ ರಾಜನ್ ಅವರ ನಿಧನದಿಂದಾಗಿ ಕನ್ನಡ ಚಲನಚಿತ್ರರಂಗವು ಅನಾಥವಾಗಿದೆ. ತಮ್ಮ ಸಹೋದರರಾಗಿದ್ದ ಮತ್ತೊಬ್ಬ ಪ್ರಖ್ಯಾತ ಸಂಗೀತ ನಿರ್ದೇಶಕ ಶ್ರೀ ನಾಗೇಂದ್ರ ಅವರೊಂದಿಗೆ *’ರಾಜನ್-ನಾಗೇಂದ್ರ’* ಹೆಸರಿನಲ್ಲಿ ಜಂಟಿಯಾಗಿ ನೂರಾರು ಕನ್ನಡ ಚಲನಚಿತ್ರಗಳಿಗೆ ಈ ಜೋಡಿ ಸಂಗೀತ ನಿರ್ದೇಶನ ಮಾಡಿದ್ದರು. ಕನ್ನಡ ಚಲನಚಿತ್ರ ರಸಿಕರು …
Read More »ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಲಂಚಾವತಾರ!
ಬಳ್ಳಾರಿ : ಬಳ್ಳಾರಿ ಮಹಾನಗರ ಪಾಲಿಕೆ ಕಚೇರಿಗೆ ಇಂದು ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಅಲ್ಲಿನ ಲಂಚಾವತರವನ್ನು ಬಯಲಿಗೆಳಿದ್ದಾರೆ. ಅದರಲ್ಲೂ ಪಾಲಿಕೆ ಆಯುಕ್ತೆ ತುಷಾರಮಣಿಯ ಆಪ್ತ ಸಹಾಯಕ ಮಲ್ಲಿಕಾರ್ಜುನ ತಮ್ಮ ಕಚೇರಿಯ ಜವಾನ ಭಾಷಾ ಮೂಲಕ ಲಂಚ ಪಡೆಯುತ್ತಿರುವಾಗ ದಾಳಿ ನಡೆಸಿ ಆರೋಪಿಗಳಿಬ್ಬರನ್ನು ವಶಕ್ಕೆ ಪಡೆದಿದ್ದಾರೆ. 50 ಸಾವಿರ ರುಪಾಯಿ ಲಂಚದ ಹಣದ ಸಮೇತ ಆರೋಪಿಗಳು ಸಿಕ್ಕಿ ಬಿದ್ದಿದ್ದು, ಫಾರಂ-2 ನೀಡಲು ತಿಂಗಳಗಟ್ಟಲೆ ಈ ನೌಕರರು ಸತಾಯಿಸುತ್ತಿದ್ದರಂತೆ. ಬಳ್ಳಾರಿ ನಗರದಲ್ಲಿನ …
Read More »ಮೂಡಲಗಿ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟ: ಅಧ್ಯಕ್ಷ ಸ್ಥಾನಕ್ಕೆ ಭಾರಿ ಪೈಪೋಟಿ
ಮೂಡಲಗಿ : ಅಂತು ಇಂತು ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿ ಪ್ರಕಟವಾಗಿದ್ದು, ಅಧ್ಯಕ್ಷ ಸ್ಥಾನ ಹಿಂದೂಳಿದ ವರ್ಗ(ಅ) ಉಪಾಧ್ಯಕ್ಷ ಸ್ಥಾನ ಎಸ್.ಸಿ ಮಹಿಳೆಗೆ ಎಂದು ಸರ್ಕಾರದ ಸುತ್ತೋಲೆಯಲ್ಲಿ ಪ್ರಕಟವಾಗಿದೆ. ರಾಜ್ಯದಲ್ಲಿ ಪುರಸಭೆ ಮೀಸಲಾತಿ ಪ್ರಕಟವಾಗುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ಪುರಸಭೆಗೆ ಆಯ್ಕೆಯಾದ 23 ಸ್ಥಾನಗಳಲ್ಲಿ ಆಡಳಿತರೊಢ ಬಿಜೆಪಿ ಪಕ್ಷವು ನಾಲ್ಕು ಪಕ್ಷೇತರ ಬೆಂಬಲದಿoದ 15 ಸ್ಥಾನಗಳಲ್ಲಿದೆ. ವಿರೋಧಿ ಜೆಡಿಎಸ್ ಪಕ್ಷದಲ್ಲಿ 8 ಸ್ಥಾನಗಳಿವೆ. ಉಪಾಧ್ಯಕ್ಷ ಸ್ಥಾನವು ಎಸ್.ಸಿ ಮಹಿಳೆಗೆ …
Read More »ಬೆಳಗಾವಿ ಲೋಕಸಭಾ ಉಪಚುನಾವಣೆಗೆ ಕೆಎಂಎಫ್ ನಿರ್ದೇಶಕ ಅಮರನಾಥ ಜಾರಕಿಹೊಳಿ ಎಂಟ್ರಿ ಕೊಡ್ತಾರಾ!
ಬೆಳಗಾವಿ: ಬೆಳಗಾವಿ ಲೋಕಸಭಾ ಉಪಚುನಾವಣೆಯ ದಿನಾಂಕ ನಿಗದಿ ಆಗದಿದ್ದರು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಆಕಾಂಕ್ಷೆಗಳು ಹೆಚ್ಚಾಗುತ್ತಿದ್ದಾರೆ. ಬಿಜೆಪಿಯಲ್ಲಿ ಆಕಾಂಕ್ಷೆಗಳ ದಂಡೆ ಇದೆ. ವಿಶೇಷ ಏನೆಂದರೆ ಬೆಳಗಾವಿ ಜಿಲ್ಲೆಯಲ್ಲಿ ತಮ್ಮದೇ ಆದಂತ ಪ್ರತಿಷ್ಠೆ ಹೊಂದಿರುವ ಕುಟುಂಬದವೆಂದರೆ ಅದು ಜಾರಕಿಹೊಳಿ ಕುಟುಂಬ.ಜಾರಕಿಹೊಳಿ ಕುಟುಂಬದವರ ತಾವು ಹಿಡಿದ ಹಠವನ್ನು ಸಾಧಿಸದೆ ಬಿಡದ ಕುಟುಂಬ ಎಂದು ಹೆಸರುವಾಸಿಯಾಗಿದೆ. ಕರ್ನಾಟಕದಲ್ಲಿ ರಾಜಕಾರಣದಲ್ಲಿ ಹಠವಾದಿ ಎಂದೇ ಖಾತ್ಯಿಯಾಗಿರುವ ಜಲಸಂಪನ್ಮೂಲ ಸಚಿವ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ …
Read More »