Breaking News

ಜಿಲ್ಲೆ

ಬಸವಗೋಪಾಲ ಶಿಕ್ಷಣ ಸಂಸ್ಥೆಯ ನೂತನ ಶಾಲಾ ಕಟ್ಟಡ ಅಡಿಗಲ್ಲು ಸಮಾರಂಭ.

ಬಸವಗೋಪಾಲ ಶಿಕ್ಷಣ ಸಂಸ್ಥೆಯ ನೂತನ ಶಾಲಾ ಕಟ್ಟಡ ಅಡಿಗಲ್ಲು ಸಮಾರಂಭ. ಅರಭಾವಿ: ತಾಲೂಕಿನ ಅರಭಾಂವಿ -ದುರದುಂಡಿಯ ಸತ್ತಿಗೇರಿ ತೋಟದಲ್ಲಿ ಶ್ರೀ ಬಸವಗೋಪಾಲ ನೀಲಮಾಣಿಕ ಮಠ, ಸುಕ್ಷೇತ್ರದ ಬಂಡಿಗಣಿ ದಾಸೋಹ ರತ್ನ ಚಕ್ರವರ್ತಿ ದಾನೇಶ್ವರ ಶ್ರೀಗಳ ಆಶ್ರಯದಲ್ಲಿ ಶ್ರೀ ಬಸವಗೋಪಾಲ ಶಿಕ್ಷಣ ಸಂಸ್ಥೆಯ ನೂತನ ಶಾಲಾ ಕಟ್ಟಡ ಅಡಿಗಲ್ಲು ಸಮಾರಂಭ ಪ್ರಯುಕ್ತ ಭೂದೇವಿ ಹಾಗೂ 2000 ಕ್ಕೂ ಹೆಚ್ಚು ಮುತ್ತೈದೆಯರಿಗೆ ಉಡಿ ತುಂಬವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ತಾಲೂಕಿನ ದುರದುಂಡಿ ಗ್ರಾಮದ ಸತ್ತಿಗೇರಿ …

Read More »

“ಆದರ್ಶ ಸಮಾಜ ಭೂಷಣ” ಗೌರವ ಪ್ರಶಸ್ತಿಗೆ ಭಾಜನರಾದ ಭೀಮಶಿ ಭರಮಣ್ಣವರ.

ನಿಪ್ಪಾಣಿ: ಕೈ .ಬಸವಂತ ನಾಗು ಶಿಂಗಾಡೆ ಚೈರಟೆಬಲ ಟ್ರಸ್ಟ್ ವತಿಯಿಂದ ನಿಪ್ಪಾಣಿ ತಾಲೂಕಿನ ಬೇಡಕಿಹಾಳ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸಮಾಜ ಸೇವಕರಿಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಗೋಕಾಕ ತಾಲೂಕಿನ ಸಮಾಜ ಸೇವಕ, ಬಿಜೆಪಿ ನಗರ ಘಟಕದ ಅಧ್ಯಕ್ಷ ಭೀಮಶಿ ಭರಮಣ್ಣವರ ” ಆದರ್ಶ ಸಮಾಜ ಭೂಷಣ ಗೌರವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಗೋಕಾಕ ತಾಲೂಕಿನಲ್ಲಿ ಅನೇಕ ವರ್ಷಗಳಿಂದ ಪತ್ರಕರ್ತರಾಗಿ, ಮಾಜಿ ನಗರ ಸಭೆ ಸದಸ್ಯ ಹಾಗೂ ಗೋಕಾಕ ಬಿಜೆಪಿ ನಗರ ಘಟಕದ ಅಧ್ಯಕ್ಷರಾಗಿ …

Read More »

ಸಣ್ಣಪುಟ್ಟ ವ್ಯತ್ಯಾಸಗಳನ್ನು ಬದಿಗಿಟ್ಟು ಗ್ರಾಮದ ಅಭಿವೃದ್ಧಿಗೆ ಪಣ ತೊಡಿ: ಬಾಲಚಂದ್ರ ಜಾರಕಿಹೊಳಿ

  ಮೂಡಲಗಿ : ಚುನಾವಣೆ ಬಂದಾಗ ಮಾತ್ರ ರಾಜಕೀಯ ಮಾಡಿ. ಚುನಾವಣೆ ಮುಗಿದ ಬಳಿಕ ಎಲ್ಲರೂ ಒಂದಾಗಿ-ಒಗ್ಗಟ್ಟಾಗಿ ಗ್ರಾಮದ ಅಭಿವೃದ್ಧಿಗೆ ಪಣತೊಡಿ ಎಂದು ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಗ್ರಾಮಸ್ಥರಿಗೆ ಕಿವಿಮಾತು ಹೇಳಿದರು. ಗುರುವಾರದಂದು ತಾಲೂಕಿನ ತುಕ್ಕಾನಟ್ಟಿ ಗ್ರಾಮಕ್ಕೆ ಭೇಟಿ ನೀಡಿ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, ಚುನಾವಣೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ. ಸೋತವರು ನಮ್ಮವರೇ. ಗೆದ್ದವರು ನಮ್ಮವರೇ. ತಮ್ಮಲ್ಲಿರುವ ಸಣ್ಣಪುಟ್ಟ ವ್ಯತ್ಯಾಸಗಳನ್ನು ಮರೆತು …

Read More »

ಗೋಕಾಕ ತಾಲೂಕಿನ ಪ್ರವಾಸಿ ತಾಣಗಳ ವೀಕ್ಷಣೆಗೆ ನಿರ್ಭಂದ: ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ.

ಗೋಕಾಕ: ಕೊವಿಡ್-19 ವೈರಾಣುವಿನ ಹರಡುವಿಕೆಯನ್ನು ನಿಯಂತ್ರಿಸಲು ಹಾಗೂ ಸಾರ್ವಜನಿಕರು ಮತ್ತು ಪ್ರವಾಸಿಗರ ಆರೋಗ್ಯದ ಹಿತ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಗೋಕಾಕ ತಾಲೂಕಿನ ಗೋಕಾಕ ಫಾಲ್ಸ್, ದೂಪದಾಳ ಹಾಗೂ ಗೊಡಚಿನಮಲ್ಕಿ ಪ್ರವಾಸಿ ತಾಣಗಳಿಗೆ ವಾರಾಂತ್ಯ ಶನಿವಾರ, ರವಿವಾರ ಮತ್ತು ಸಾರ್ವಜನಿಕ ರಜೆ ದಿನಗಳಂದು ಸಾರ್ವಜನಿಕ ವೀಕ್ಷಣೆಯನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಬೆಳಗಾವಿ ಇವರು ಆದೇಶ ಹೊರಡಿಸಿದ್ದಾರೆ. ಈ ಸ್ಥಳಗಳಿಗೆ ಮಹಾರಾಷ್ಟ್ರ ರಾಜ್ಯದಿಂದ ಮತ್ತು ರಾಜ್ಯದ ಬೇರೆ ಬೇರೆ ಸ್ಥಳಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು …

Read More »

ವಿದೇಶಿಯರ ಅಡ್ಡೆಗಳ ಮೇಲೆ ಸಿಸಿಬಿ ದಾಳಿ!

ಬೆಂಗಳೂರು: ಅಪರಾಧಗಳ ರಾಜಧಾನಿಯಾಗಿ ಮಾರ್ಪಾಡು ಆಗುತ್ತಿದೆಯಾ ಅನ್ನುವಷ್ಟು ಇತ್ತೀಚೆಗೆ ರಾಜಧಾನಿ ಬೆಂಗಳೂರಿನಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಇದಕ್ಕೆ ಕಡಿವಾಣ ಹಾಕಲು ದೃಢ ಸಂಕಲ್ಪ ತೊಟ್ಟಿರುವ ಬೆಂಗಳೂರು ಪೊಲೀಸರು ಕಳೆದ ವಾರ ಸಾವಿರಾರು ರೌಡಿಗಳನ್ನು ಕರೆದು, ಕಟ್ಟೆಚ್ಚರ ನೀಡಿ ಕಳಿಸಿದ್ದಾರೆ. ಅದಾದ ಮೇಲೆ ಪಿಂಚಣಿದಾರರ ಸ್ವರ್ಗವೆಂಬ ಹೆಗ್ಗಳಿಕೆಯ ಬೆಂಗಳೂರಿಗೆ ಪಾತಕ ವಿದೇಶಿಗರು ಪೀಡೆಯಾಗಿ ಪರಿವರ್ತನೆಗೊಂಡಿದ್ದಾರೆ. ಹಾಗಾಗಿ ಇಂದು ಸಿಸಿಬಿ ಪೊಲೀಸರು ಫೀಲ್ಡಿಗೆ ಇಳಿದು ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡಿರುವ ವಿದೇಶಿಗರನ್ನು ವಿಚಾರಿಸಿಕೊಂಡಿದ್ದಾರೆ. ಸಿಸಿಬಿ …

Read More »

ಹನಿಟ್ರ್ಯಾಪ್ ಹಾಗೂ ಸುಲಿಗೆ ಮಾಡಿದ ನಾಲ್ವರಿಗೆ ಜೀವಾವಧಿ ಶಿಕ್ಷೆ!

ಹುಬ್ಬಳ್ಳಿ: ಶ್ರೀಮಂತ ವ್ಯಕ್ತಿಯೊಂದಿಗೆ ಸ್ನೇಹ ಬೆಳೆಸಿಕೊಂಡು ಅವನನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ದರೋಡೆ ಮಾಡಿದ ಯುವತಿ ಸೇರಿದಂತೆ ನಾಲ್ವರು ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾರೆ. ಹನಿಟ್ರ್ಯಾಪ್ ಹಾಗೂ ಸುಲಿಗೆ ಮಾಡಿದ ನಾಲ್ವರಿಗೆ ಹುಬ್ಬಳ್ಳಿಯ 5ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಾಲ್ವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ನೀಡಿದ್ದು, ಸುಲಿಗೆಕೋರರು ಕಂಬಿ ಪಾಲಾಗಿದ್ದಾರೆ. ಶ್ರೀಮಂತರನ್ನು ಪತ್ತೆ ಮಾಡಿ ಅವರೊಂದಿಗೆ ಸ್ನೇಹ ಬೆಳೆಸಿ ಸಲುಗೆಯಿಂದ ಹಣ ಕೀಳುವ ಉದ್ದೇಶದಿಂದ ಹುಬ್ಬಳ್ಳಿಯ ನಾಲ್ವರು …

Read More »

ನೇರ ಸಂಭಾವಣೆ ಪೌರಕಾರ್ಮಿಕರ ವೇತನ ಕಟ್ ಮಾಡಿ ಇನ್ನೊಬ್ಬರಿಗೆ ನೀಡಿದರೆ ಕಾನೂನು ಕ್ರಮ : ಹರೀಶ ನಾಯಕ

ಬೆಳಗಾವಿ : ಕರ್ನಾಟಕ ರಾಜ್ಯ ಸರ್ಕಾರ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಪೌರಕಾರ್ಮಿಕರ ನೇರ ನೇಮಕಾತಿ ಹಿನ್ನಲೆಯಲ್ಲಿ ಮೀಸಲಾತಿಯನ್ನು ಅನುಸರಿಸಿ ನೈಜ್ ಕಾರ್ಮಿಕರನ್ನು ಖಾಯಂಯಾತಿಯಿಂದ ವಂಚಿಸಿದೆ ಎಂದು ಕರ್ನಾಟಕ ರಾಜ್ಯ ಮುನಿಸಿಪಲ್ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಹರಿಶ್ ನಾಯಕ ಅವರು ಆರೋಪಿಸಿದರು. ಅವರು ಬುಧವಾರ ನಗರದಲ್ಲಿ ಮಾತನಾಡಿ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಗುತ್ತಿಗೆ/ಹೊರಗುತ್ತಿಗೆ ಹಾಗೂ ನೇರ ಸಂಭಾವಣೆಯ ಕಾರ್ಮಿಕರ ಬದುಕು ಅತಂತ್ರಸ್ಥಿತಿಯಲ್ಲಿದೆ. ಪೌರಕಾರ್ಮಿಕರು ಮತ್ತು ಲೋಡರ್, …

Read More »

ಮಳೆ ಆರ್ಭಟದಿಂದ ಕೊಡಗಿನಲ್ಲಿ ಮೊದಲ ಬಲಿ!

ಮಡಿಕೇರಿ: ಜಿಲ್ಲೆಯಲ್ಲಿ ಕಳೆದ ಎರಡು ಮೂರು ದಿನಗಳಿಂದ ಮಳೆ ಬಿರುಸು ಪಡೆದುಕೊಂಡಿದ್ದು ಮಳೆಯ ಆರ್ಭಟದಿಂದ ಹಳ್ಳಕೊಳ್ಳಗಳಲ್ಲಿ ನೀರಿನ ಪ್ರಮಾಣ ಏರಿಕೆಯಾಗುತ್ತಿದೆ. ಈ ನಡುವೆ ಕಿರು ಹೊಳೆಯನ್ನು ದಾಟಲು ಹೋಗಿ ಅಂಗವಿಕಲ ವೃದ್ಧರೊಬ್ಬರು ಕೊಚ್ಚಿ ಹೋಗಿರುವ ಘಟನೆ ಮಡಿಕೇರಿ ತಾಲೂಕಿನ ಅವಂದೂರು ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದಿದೆ. ಮೃತರನ್ನು ಅವಂದೂರು ಗ್ರಾಮದ ಬೊಮ್ಮೇಗೌಡನ ಬಾಬಿ(70) ಎಂದು ಗುರುತಿಸಲಾಗಿದೆ. ಮನೆಯ ಸಮೀಪ ಇರುವ ಕಿರುಹೊಳೆಯ ಬದಿಯಲ್ಲಿ ನಡೆದುಕೊಂಡು ಬರುತ್ತಿದ್ದ ಸಂದರ್ಭದಲ್ಲಿ ಅಯಾತಪ್ಪಿ ಕಿರುಹೊಳೆಗೆ …

Read More »

ಆಡಳಿತ ಮತ್ತು ವಿರೋಧ ಪಕ್ಷದ ನಡುವೆ ಮಾತಿನ ಚಕಮಕಿ,ಗದ್ದಲದ ಗೂಡಾದ ಚಿಕ್ಕೋಡಿ ಸಭೆ!

ಚಿಕ್ಕೋಡಿ: ನಿಪ್ಪಾಣಿ ನಗರ ಸಭೆಯಲ್ಲಿ ನಡೆದ ಎರಡನೆ ಸರ್ವಸಾಧಾರಣ ಸಭೆಯು ಆಡಳಿತ ಮತ್ತು ವಿರೋಧ ಪಕ್ಷದ ನಡುವೆ ಮಾತಿನ ಚಕಮಕಿ ಸದ್ದು-ಗದ್ದಲದೊಂದಿಗೆ ಅರ್ಧಕ್ಕೆ ಮೊಟಕುಗೊಳಿಸಲಾಯಿತು. ಮಂಗಳವಾರ ನಿಪ್ಪಾಣಿ ನಗರ ಸಭೆಯಲ್ಲಿ ಜನಪ್ರತಿನಿ ಧಿಗಳ ಸಭೆ ಕರೆಯಲಾಗಿತ್ತು. ಮೂರನೇ ವರ್ಷದಲ್ಲಿ ಕರೆದ 2ನೇ ಸರ್ವಸಾಧಾರಣ ಸಭೆ ಇದಾಗಿತ್ತು. ಸಭೆಯಲ್ಲಿ ಶಾಸಕರು ಮತ್ತು ಸಂಸದರು ಭಾಗವಹಿಸದೇ ಇರುವುದು ಭಾರಿ ಕೋಲಾಹಲಕ್ಕೆ ಕಾರಣವಾಯಿತು. ಆಡಳಿತ ಪಕ್ಷದ ಸದಸ್ಯರು ಮತ್ತು ವಿರೋಧ ಪಕ್ಷದ ಸದಸ್ಯರು ತಮ್ಮ ವೈಯಕ್ತಿಕ ವಿಚಾರಗಳೊಂದಿಗೆ …

Read More »

ಕಾರ್ಖಾನೆ ಸುಧಾರಣೆಗೆ ಎಲ್ಲರೂ ಕೈ ಜೋಡಿಸಿ,ಪ್ರಗತಿ ಪಥದತ್ತ ಸಾಗಲು ನೆರವಾಗಿ : ಶಾಸಕ ಬಾಲಚಂದ್ರ ಜಾರಕಿಹೊಳಿ.

  ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ ವಿಶೇಷ ಸಭೆಯಲ್ಲಿ ಬಾಲಚಂದ್ರ ಜಾರಕಿಹೊಳಿ ಹೇಳಿಕೆ ಗೋಕಾಕ : ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಉನ್ನತಿ ಮತ್ತು ಪ್ರಗತಿಗಾಗಿ ಸುಧಾರಣೆ ತರಲು ಅಮೂಲಾಗ್ರ ಬದಲಾವಣೆ ಮಾಡಿದ್ದು, ಇದಕ್ಕೆ ಎಲ್ಲರೂ ಸಹಕಾರ ನೀಡಿ ಕಾರ್ಖಾನೆಯ ಅಭಿವೃದ್ಧಿಗಾಗಿ ಕೈ ಜೋಡಿಸುವಂತೆ ಕಾರ್ಖಾನೆಯ ಮಾರ್ಗದರ್ಶಕರೂ ಆಗಿರುವ ಅರಭಾವಿ ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಸಲಹೆ ಮಾಡಿದರು. ಮಂಗಳವಾರ ರಾತ್ರಿ ಕಾರ್ಖಾನೆಯ ಸಭಾಗೃಹದಲ್ಲಿ ಜರುಗಿದ …

Read More »