ಗೋಕಾಕ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಜತ್ತ-ಜಾಂಬೋಟಿ ರಾಜ್ಯ ಹೆದ್ದಾರಿಯಲ್ಲಿರುವ ಲೋಳಸೂರ ಸೇತುವೆ ಕಾಮಗಾರಿಯನ್ನು ಇಂದು ಪರಿಶೀಲಿಸಿದರು. ಕಾಮಗಾರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸತೀಶ ಅವರು, ಆದಷ್ಟು ಬೇಗ ಕಾಮಗಾರಿ ಮುಗಿಸಿ ಸೇತುವೆಯನ್ನು ಸಂಚಾರ ಮುಕ್ತಗೊಳಿಸಬೇಕು ಎಂದು ಸ್ಥಳದಲ್ಲಿದ್ದ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ತಿಳಿಸಿದರು. ಕೆಲ ದಿನಗಳ ಹಿಂದೆ ಘಟಪ್ರಭಾ ನದಿ ಪ್ರವಾಹದಿಂದಾಗಿ ಜತ್ತ-ಜಾಂಬೋಟಿ ರಸ್ತೆಯಲ್ಲಿರುವ ಲೋಳಸೂರ ಸೇತುವೆ ಮುಳುಗಡೆಯಾಗಿ ಸಂಪರ್ಕ ಕಡಿತಗೊಂಡಿತ್ತು. ಇದರಿಂದ ಮಹಾರಾಷ್ಟ್ರ, ವಿಜಯಪುರ ಸಂಚಾರ …
Read More »*ಸಚಿವ ಸಂಪುಟ ರಚನೆ; ಬೆಳಗಾವಿ ಲೋಕಸಭಾ ವ್ಯಾಪ್ತಿಯಲ್ಲಿರುವ ಕ್ಷೇತ್ರಗಳಿಗೆ ಅನ್ಯಾಯ*
ಮತ್ತೆ ಬಂಡಾಯ ಬಾವುಟ ಹಾರುತ್ತಾ? ಬೆಳಗಾವಿ: ಜಿಲ್ಲೆಯಲ್ಲಿ 18 ವಿಧಾನಸಭಾ ಕ್ಷೇತ್ರಗಳಿದ್ದು, ಅವುಗಳಲ್ಲಿ ಪ್ರಸ್ತುತ 13 ಮಂದಿ ಬಿಜೆಪಿ ಶಾಸಕರಿದ್ದಾರೆ. ಅವರಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟಕ್ಕೆ ಸೇರುವ ಭಾಗ್ಯ ಸಿಕ್ಕಿರುವುದು ಇಬ್ಬರಿಗೆ ಮಾತ್ರ. ಹಿರಿಯ ಶಾಸಕ ಹುಕ್ಕೇರಿಯ ಉಮೇಶ ಕತ್ತಿ ಹಾಗೂ ನಿಪ್ಪಾಣಿ ಕ್ಷೇತ್ರದಿಂದ 2ನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಶಶಿಕಲಾ ಜೊಲ್ಲೆ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಎರಡು ಸ್ಥಾನಗಳೂ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ …
Read More »ಅಂತರಾಷ್ಟ್ರೀಯ ಕಬಡ್ಡಿ ಪಂದ್ಯಾವಳಿಗೆ ಆಯ್ಕೆಯಾದ ವಿದ್ಯಾರ್ಥಿಗೆ ರಾಹುಲ್ ಜಾರಕಿಹೊಳಿ ಪ್ರೋತ್ಸಾಹ
ಗೋಕಾಕ: ಅಗಸ್ಟ್ 10 ರಂದು ನೇಪಾಳದಲ್ಲಿ ನಡೆಯಲಿರುವ 19 ವರ್ಷದೊಳಗಿನ ಇಂಡೋ-ನೇಪಾಳ ಅಂತರಾಷ್ಟ್ರೀಯ ಕಬಡ್ಡಿ ಪಂದ್ಯಾವಳಿಯಲ್ಲಿ ದೇಶವನ್ನು ಪ್ರತಿನಿಧಿಸಲು ಹೊರಟಿರುವ ವಿದ್ಯಾರ್ಥಿಗಳಿಗೆ ಕಾಂಗ್ರೆಸ್ ಯುವ ನಾಯಕ ರಾಹುಲ್ ಜಾರಕಿಹೊಳಿ ಧನಸಹಾಯ ಮಾಡಿದರು. ಯಮಕನಮರಡಿ ಕ್ಷೇತ್ರ ವ್ಯಾಪ್ತಿಯ ದಡ್ಡಿ ಗ್ರಾಮದ ಸಚೀನ ಅಜೀತ ಸಾಲಗೋಡೆ, ಅಲದಾಳದ ಲಗಮೇಶ ಗಣಪತಿ ಸನದ ಎಂಬ ವಿದ್ಯಾರ್ಥಿಗಳಿಗೆ ರಾಹುಲ್ ಜಾರಕಿಹೊಳಿ ಅವರು ಪ್ರವೇಶ ಶುಲ್ಕ ಹಾಗೂ ಪ್ರಯಾಣ ಖರ್ಚುನ್ನು ನೀಡಿ, ಸಹಾಯ ಒದಗಿಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ …
Read More »ಅಂತರಾಷ್ಟ್ರೀಯ ಕಬ್ಬಡ್ಡಿ ಕ್ರೀಡಾ ಪಟುವಿಗೆ ಯುವ ನಾಯಕಿ ಪ್ರೀಯಾಂಕಾ ಜಾರಕಿಹೊಳಿ ಪ್ರೋತ್ಸಾಹ.
ಗೋಕಾಕ : ನೇಪಾಳ ದೇಶದಲ್ಲಿ ದಿ.10/08/2020 ರಂದು ನಡೆಯಲಿರುವ 19 ವರ್ಷ ಒಳಗಿನ ಇಂಡೋ-ನೇಪಾಳ ಅಂತರಾಷ್ಟ್ರೀಯ ಕಬ್ಬಡ್ಡಿ ಪಂದ್ಯಾವಳಿಯಲ್ಲಿ ಭಾರತ ದೇಶವನ್ನು ಪ್ರತಿನಿಧಿಸಲು ಹೊರಟಿರುವ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಮೆಳವಂಕಿ ಗ್ರಾಮದ ಸಿದ್ದಪ್ಪಾ ರಾ ಹಂಜಿ, ಹಾಗೂ ತಪಸಿ ಗ್ರಾಮದ ಮಲ್ಲಪ್ಪಾ ನಾ ನಾಯಕ ಈ ವಿದ್ಯಾರ್ಥಿಗಳಿಗೆ ಕಾಂಗ್ರೆಸ್ ಯುವ ನಾಯಕಿ ಪ್ರೀಯಾಂಕಾ ಜಾರಕಿಹೊಳಿ ಅವರು ಪ್ರವೇಶ ಶುಲ್ಕ ಹಾಗು ಪ್ರಯಾಣ ಖರ್ಚುನ್ನು ನೀಡಿ ಸಹಾಯ ಮಾಡಿದರು. ಇಲ್ಲಿನ …
Read More »ನೈಟ್ ಕರ್ಫ್ಯೂ ಜಾರಿ, ರಸ್ತೆಗೆ ಬರೋ ಮುನ್ನ ಎಚ್ಚರ!
ಬೆಂಗಳೂರು: ನಗರದಲ್ಲಿ ಕರೊನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾತ್ರಿ ಕರ್ಫ್ಯೂವನ್ನು ಬಿಗಿಗೊಳಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಂದಾಗಿದೆ. ನೈಟ್ ಕರ್ಫ್ಯೂ ಈಗ ಜಾರಿಯಲ್ಲಿ ಇದ್ದರೂ ಬೆಂಗಳೂರಿಗರು ಡೋಂಟ್ ಕೇರ್ ಎನ್ನುತ್ತಿರುವ ಹಿನ್ನೆಲೆಯಲ್ಲಿ ಕರೊನಾ ಸೋಂಕಿನ ಪ್ರಮಾಣ ಹೆಚ್ಚುತ್ತಲೇ ಸಾಗಿದೆ. ಇದೆ ಕಾರಣಕ್ಕೆ ಕಠಿಣ ನಿಯಮವನ್ನು ರೂಪಿಸಲು ಹಾಗೂ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಸರ್ಕಾರ ಮುಂದಾಗಿದೆ. ಆದ್ದರಿಂದ ಇಂದು (ಮಂಗಳವಾರ- ಜುಲೈ 3) ರಾತ್ರಿ 10 ಗಂಟೆಯಿಂದ ರಾತ್ರಿ ಕರ್ಫ್ಯೂ …
Read More »ನೂತನ ಪದಾಧಿಕಾರಿಗಳಿಗೆ ಆದೇಶ ಪತ್ರ ವಿತರಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ
ಬೆಂಗಳೂರು: ಕರ್ನಾಟಕ ವಾಲ್ಮೀಕಿ ಯುವ ವೇದಿಕೆಗೆ ನೇಮಿಸಲಾದ ರಾಜ್ಯಮಟ್ಟದ ನೂತನ ಪದಾಧಿಕಾರಿಗಳಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಬೆಂಗಳೂರಿನಲ್ಲಿ ಇಂದು ಆದೇಶ ಪತ್ರಗಳನ್ನು ವಿತರಿಸಿದರು. ನಂತರ ಮಾತನಾಡಿದ ಅವರು, ನೂತನ ಪದಾಧಿಕಾರಿಗಳು ಪಕ್ಷಾತೀತ ಹಾಗೂ ಜಾತ್ಯಾತೀತವಾಗಿ ಕಾರ್ಯ ನಿರ್ವಹಿಸಬೇಕು. ಸಂಘಟನೆಯ ಮೂಲಕ ಎಲ್ಲ ವರ್ಗದ ಜನರ ನೆರವಿಗೂ ಧಾವಿಸಬೇಕು ಎಂದು ಸಲಹೆ ನೀಡಿದರು. ಪದಾಧಿಕಾರಿಗಳಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಯುವ ವೇದಿಕೆಯ ಉಪಾಧ್ಯಕ್ಷರಾದ ಮಧು ಮದಕರೆ, ಕಾರ್ಯದರ್ಶಿ …
Read More »ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಕಾಂಗ್ರೆಸ್ ಯುವ ನಾಯಕ ರಾಹುಲ್ ಜಾರಕಿಹೊಳಿ
ಯಮಕನಮರಡಿ: ಮತಕ್ಷೇತ್ರದ ಚಿಕ್ಕಲದಿನ್ನಿ, ಗುಟಗುದ್ದಿ ಹಾಗೂ ಶಾಬಾಂದರ್ ಗ್ರಾಮಗಳಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ 80 ಲಕ್ಷ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಕಾಂಗ್ರೆಸ್ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಇಂದು ಭೂಮಿಪೂಜೆ ನೆರವೇರಿಸಿದರು. ನಂತರ ಇಸ್ಲಾಂಪುರ ಗ್ರಾಮದಲ್ಲಿ ಶಾಸಕ ಸತೀಶ ಜಾರಕಿಹೊಳಿ ಅವರ ಅನುದಾನದಡಿ ನೂತನವಾಗಿ ನಿರ್ಮಿಸಿದ ಮಸೀದಿ ಹಾಗೂ ಶಾಲಾ ಕೊಠಡಿಯನ್ನು ರಾಹುಲ್ ಉದ್ಘಾಟನೆ ಮಾಡಿದರು. ಸಮಾಜದ ಮುಖಂಡರಾದ ಮೌಲಾಸಾಬ ದೇಸಾಯಿ ಸೇರಿ ಇನ್ನಿತರರು ಹಾಜರಿದ್ದರು. ಗ್ರಾಮದಲ್ಲಿ …
Read More »ಡ್ರಗ್ಸ್ ಪ್ರಕರಣ; ಆಫ್ರೀಕನ್ ಪ್ರಜೆಗಳ ಗುಂಡಾ ವರ್ತನೆ: ಲಾಠಿ ಚಾರ್ಜ್.
ಬೆಂಗಳೂರು : ಜೆಸಿ ನಗರ ಪೊಲೀಸ್ ಠಾಣೆಯಲ್ಲಿ ಡ್ರಗ್ಸ್ ಪ್ರಕರಣದಲ್ಲಿ ಬಂಧಿತನಾಗಿದ್ದಂತ ಆಫ್ರೀಕನ್ ಪ್ರಜೆಯೊಬ್ಬ ಸಾವನ್ನಪ್ಪಿದ್ದನು. ಈ ಪ್ರಕರಣ ಸಂಬಂಧ ಠಾಣೆಯ ಮುಂದೆ ಅನೇಕ ಆಫ್ರೀಕನ್ ಪ್ರಜೆಗಳು ಪೊಲೀಸರ ಹಲ್ಲೆಯಿಂದ ಸಾವನ್ನಪ್ಪಿರೋದಾಗಿ ಪ್ರತಿಫಟನೆ ನಡೆಸುತ್ತಿದ್ದರು. ಪ್ರತಿಭಟನೆ ವಿಕೋಪಕ್ಕೆ ತಿರುಗಿ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದರಿಂದಾಗಿ, ಸ್ಥಳದಲ್ಲಿ ಬಿಗುವಿನ ವಾತಾವರಣ ಕೂಡ ಉಂಟಾಗಿತ್ತು. ಹೀಗಾಗಿ ಪೊಲೀಸರು ಲಾಠಿ ಚಾರ್ಜ್ ಮೂಲಕ, ಪ್ರತಿಭಟನಾ ನಿರತರನ್ನು ಚದುರಿಸಿದ ಘಟನೆ ನಡೆದಿದೆ. 5 ಗ್ರಾಂ ಎಂಡಿಎಂ …
Read More »ದಡ್ಡಿ ಜಿಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಮಳೆಯಿಂದಾನ ಹಾನಿ ಪರಿಶೀಲಿಸಿದ ಪ್ರಿಯಾಂಕಾ ಜಾರಕಿಹೊಳಿ
ಬೆಳಗಾವಿ: ಕಾಂಗ್ರೆಸ್ ಯುವ ನಾಯಕಿ ಪ್ರಿಯಾಂಕಾ ಜಾರಕಿಹೊಳಿ ಅವರು ಯಮಕನಮರಡಿ ಮತಕ್ಷೇತ್ರದ ದಡ್ಡಿ ಜಿಪಂ ವ್ಯಾಪ್ತಿಯ ದಡ್ಡಿ, ಮೋದಗಾ, ಶೆಟ್ಟಿಹಳ್ಳಿ, ಧೋಂಡಗಟ್ಟಿ, ಕೋಟ ಹಾಗೂ ಸಲಾಮವಾಡಿ ಗ್ರಾಮಗಳಿಗೆ ತೆರಳಿ ಮಳೆ ಹಾಗೂ ಪ್ರವಾಹದಿಂದ ಹಾನಿಯನ್ನು ಪರಿಶೀಲಿಸಿದರು. ಈ ಗ್ರಾಮಗಳಲ್ಲಿ ಮಳೆಯಿಂದಾಗಿ ಹಾನಿಗೀಡಾದ ಮನೆಗಳನ್ನು ಪರಿಶೀಲನೆ ಮಾಡಿ, ಸಂತ್ರಸ್ತರಿಗೆ ಸಾಂತ್ವನ ಹೇಳಿದರು. ಹೊಲ-ಗದ್ದೆಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿರುವುದನ್ನು ವೀಕ್ಷಿಸಿ, ರೈತರಿಗೆ ಧೈರ್ಯ ತುಂಬಿದರು. ಹದಗೆಟ್ಟಿರುವ ರಸ್ತೆ ಹಾಗೂ ಸೇತುವೆಗಳನ್ನು ಪರಿಶೀಲನೆ …
Read More »ಸಚಿವ ಸಂಪುಟ ರಚನೆ ಕಸರತ್ತು; ಹೊರಬಿತ್ತು ಸಂಭಾವ್ಯ ಪಟ್ಟಿ
ಬೆಂಗಳೂರು : ಸಚಿವ ಸಂಪುಟ ರಚನೆಗೆ ಸಂಬಂಧಿಸಿ ಪಕ್ಷದ ವರಿಷ್ಠರ ಭೇಟಿಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದಿಲ್ಲಿಗೆ ತೆರಳಿರುವ ಬೆನ್ನಲ್ಲೆ ಸಚಿವರ ಸಂಭಾವ್ಯ ಪಟ್ಟಿಯೊಂದು ಹರಿದಾಡುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು -ಗೃಹ ಖಾತೆಯನ್ನು ತನ್ನಲ್ಲೆ ಉಳಿಸಿಕೊಳ್ಳಲಿದ್ದರೆ ಎನ್ನಲಾಗುತ್ತಿದ್ದು, ಉಪ ಮುಖ್ಯಮಂತ್ರಿಗಳಾಗಿ ಆರ್.ಅಶೋಕ್, ಬಿ.ಶ್ರೀರಾಮುಲು ಸ್ಥಾನ ಪಡೆಯಲಿದ್ದಾರೆ. ಗೋವಿಂದ ಕಾರಜೋಳ ಡಿಸಿಎಂ ಸ್ಥಾನ ಕಳೆದುಕೊಳ್ಳಲಿದ್ದಾರೆ. ಅದೇರೀತಿ ಕೋಟ ಶ್ರೀನಿವಾಸ ಪೂಜಾರಿ, ಎಸ್.ಅಂಗಾರ ಸಚಿವ ಸ್ಥಾನ ಉಳಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದ್ದು, ರೇಣುಕಾಚಾರ್ಯ, ಎಸ್.ರಾಮದಾಸ್ …
Read More »