Breaking News

ಜಿಲ್ಲೆ

ಘಟಪ್ರಭಾದಲ್ಲಿ ನೂತನ ಬಸ್ ನಿಲ್ದಾಣ ನಿರ್ಮಿಸುವಂತೆ ಕನ್ನಡ ಪರ ಸಂಘಟನೆಗಳ ಒಕ್ಕೂಟದಿಂದ ಶಾಸಕ ರಮೇಶ್ ಜಾರಕಿಹೊಳಿ ಅವರಿಗೆ ಮನವಿ!

ಗೋಕಾಕ : ತಾಲೂಕಿನ ಘಟಪ್ರಭಾ ಪಟ್ಟಣದಲ್ಲಿ ನೂತನವಾಗಿ ಬಸ ನಿಲ್ದಾಣ ನಿರ್ಮಿಸುವಂತೆ ಕನ್ನಡ ಪರ ಸಂಘಟನೆಗಳ ಒಕ್ಕೂಟದ ತಾಲೂಕು ಘಟಕ ವತಿಯಿಂದ ಗುರುವಾರದಂದು ನಗರದಲ್ಲಿ ಶಾಸಕ ರಮೇಶ್ ಜಾರಕಿಹೊಳಿ ಅವರಿಗೆ ಮನವಿ ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಕೆಂಪಣ್ಣ ಚೌಕಾಶಿ, ಪ್ರಶಾಂತ್ ಅರಳಿಕಟ್ಟಿ , ಸಂತೋಷ ಖಂಡ್ರಿ, ಮಲಿಕಜಾನ ತಲವಾರ, ಶೆಟ್ಟೆಪ್ಪ ಗಾಡಿವಡ್ಡರ, ಅಪ್ಟಸಾಬ ಮುಲ್ಲಾ, ಬಸವರಾಜ ಬೆಡರಟ್ಟಿ, ಮಾರುತಿ ಚೌಕಾಶಿ, ರಾಜು ದೊಡ್ಡಮನಿ, ತಮ್ಮಣ್ಣ ಅರಬಾಂವಿ ಸೇರಿದಂತೆ ಅನೇಕರು ಇದ್ದರು

Read More »

*ಪ್ರವಾಹ ಮತ್ತು ಅತೀವೃಷ್ಟಿ ನಿಯಂತ್ರಣ ಸಲುವಾಗಿ ಗೋಕಾಕ ತಹಶೀಲ್ದಾರ್ ಕಚೇರಿಯಲ್ಲಿ ಪೂರ್ವಭಾವಿ ಸಭೆ*

ಗೋಕಾಕ: ನಿರಂತರ ಮಳೆ ಹಾಗೂ ಮುಂದೆ ಬರಬಹುದಾದ ಪ್ರವಾಹ ಭೀತಿಯನ್ನು ಎದುರಿಸುವ ಸಲುವಾಗಿ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವಂತೆ ತಾಲೂಕಾ ನೋಡಲ್ ಅಧಿಕಾರಿ ಹಾಗೂ ಜಿಲ್ಲಾ ಪರಿಶಿಷ್ಟ ಪಂಗಡ ಕಲ್ಯಾಣಾಧಿಕಾರಿಗಳಾದ ಬಸವರಾಜ ಕುರಿಹುಲಿ ಅವರು ತಾಲೂಕಾ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇಂದು ತಹಶೀಲ್ದಾರ ಕಛೇರಿಯಲ್ಲಿ ಅತಿವೃಷ್ಟಿ ಮತ್ತು ಪ್ರವಾಹ ನಿಯಂತ್ರಣದ ಬಗ್ಗೆ ಕರೆಯಲಾದ ಪೂರ್ವಭಾವಿ ಸಭೆಯಲ್ಲಿ ಪಂಚಾಯತ ಮಟ್ಟದ ನೋಡಲ್ ಅಧಿಕಾರಿಗಳು ಮತ್ತು ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳನ್ನು ಉದ್ದೇಶಿಸಿ …

Read More »

*ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ನೇತೃತ್ವದಲ್ಲಿ ಮಹಾಮಂಡಳಕ್ಕೆ ಅವಿರೋಧ ಆಯ್ಕೆ

*ಹಿಡಕಲ್ ಡ್ಯಾಂ ನೀರು ಬಳಕೆದಾರರ ಸಂಘದ ನೂತನ ಅಧ್ಯಕ್ಷರಾಗಿ ಅಶೋಕ ಖಂಡ್ರಟ್ಟಿ, ಉಪಾಧ್ಯಕ್ಷರಾಗಿ ಮಲ್ಲಿಕಾರ್ಜುನ ಹುಂಡೇಕರ* *ಗೋಕಾಕ :* ಹಿಡಕಲ್ ಡ್ಯಾಂ ಘಟಪ್ರಭಾ ಯೋಜನಾ ಮಟ್ಟದ ನೀರು ಬಳಕೆದಾರರ ಸಹಕಾರಿ ಸಂಘಗಳ ಮಹಾಮಂಡಳದ ನೂತನ ಅಧ್ಯಕ್ಷರಾಗಿ ಗೋಕಾಕ ತಾಲೂಕಿನ ದುರದುಂಡಿ ಗ್ರಾಮದ ಅಶೋಕ ಶಿವಪುತ್ರ ಖಂಡ್ರಟ್ಟಿ ಹಾಗೂ ಉಪಾಧ್ಯಕ್ಷರಾಗಿ ಮುಗಳಖೋಡ ಗ್ರಾಮದ ಮಲ್ಲಿಕಾರ್ಜುನ ಪರಮಾನಂದ ಹುಂಡೇಕರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಗುರುವಾರದಂದು ಹಿಡಕಲ್ ಡ್ಯಾಂನ ಮಹಾಮಂಡಳದ ಪ್ರಧಾನ ಕಛೇರಿಯಲ್ಲಿ ಜರುಗಿದ …

Read More »

*ಬಕ್ರೀದ್ ಹಬ್ಬ; ಗೋಕಾಕ ಗ್ರಾಮಿಣ ಪೋಲಿಸ್ ಠಾಣೆಯಲ್ಲಿ ಶಾಂತಿ ಸಭೆ!*

ಗೋಕಾಕ : ನಗರದ ಗ್ರಾಮಿಣ ಪೊಲೀಸ್ ಠಾಣೆಯಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ಶಾಂತಿ ಸಭೆ ನಡೆಸಲಾಯಿತು. ಜುಲೈ 10ರಂದು ನಡೆಯಲಿರುವ ಬಕ್ರೀದ್ ಹಬ್ಬದ ನಿಮಿತ್ತ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ತಹಶೀಲ್ದಾರ್ ಪ್ರಕಾಶ್ ಹೋಳಪ್ಪಗೋಳ, ಸಿಪಿಐ ಗೋಪಾಲ ರಾಠೋಡ, ನಗರಸಭೆ ಸ ಕಾ ಅ ಪರಿಸರ ಎಂ ಗಜಕೋಶ, ಪಸು ಸಂಗೋಪನಾ ಇಲಾಖೆ ಅಧಿಕಾರಿ ಮೋಹನ ಕಮತ್, ಪಿಎಸ್ಐ ಎನ್ ಕಿಲಾರಿ, ತೌಸಿಪ್ ಘೋರಿ ರವರ ನೇತೃತ್ವದಲ್ಲಿ ಶಾಂತಿಃ ಸಭೆ ನಡೆಸಲಾಗಿದ್ದು, …

Read More »

ಪತ್ರಕರ್ತರು ವೃಕ್ಷದ ಹಾಗೆ ಎಲ್ಲರಿಗೂ ಒಳ್ಳೆಯ ಮಾಡುವಲ್ಲಿ ಕಾರ್ಯಪ್ರವೃತ್ತವಾಗಬೇಕು : ಸರ್ವೋತ್ತಮ ಜಾರಕಿಹೊಳಿ

ಬೆಳಗಾವಿ : ಪತ್ರಕರ್ತರು ಸಮಾಜದ ಮೂರನೇ ಕಣ್ಣು ಎಂದು ಗೋಕಾಕನ ಎಲ್.ಆರ್.ಜೆ ಪದವಿಪೂರ್ವ ಮಹಾವಿದ್ಯಾಲಯ ನಿರ್ದೇಶಕ ಸರ್ವೋತ್ತಮ ಜಾರಕಿಹೊಳಿ ಹೇಳಿದರು ಮಂಗಳವಾರದಂದು ನಗರದ ಜೀರಗೆ ಸಭಾಂಗಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆ ಬೆಳಗಾವಿ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಪತ್ರಿಕಾ ದಿನಾಚರಣೆ ಹಾಗೂ ಗುರುವಂದನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಪತ್ರಕರ್ತರು ವೃಕ್ಷದ ಹಾಗೆ ಎಲ್ಲರಿಗೂ ಒಳ್ಳೆಯ ಮಾಡುವಲ್ಲಿ ಕಾರ್ಯಪ್ರವೃತ್ತವಾಗಬೇಕು. ಪತ್ರಕರ್ತರ ತಮ್ಮ …

Read More »

*ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ ಹಾಗೂ ಗುರುವಂದನೆ ಕಾರ್ಯಕ್ರಮ*

ಬೆಳಗಾವಿ : ಪತ್ರಿಕೆಗಳು ಮಾನವ ಜೀವನದ ಅವಿಭಾಜ್ಯ ಅಂಗವಾಗಿವೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದರು ಮಂಗಳವಾರದಂದು ನಗರದ ಜೀರಗೆ ಸಭಾಂಗಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆ ಬೆಳಗಾವಿ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಪತ್ರಿಕಾ ದಿನಾಚರಣೆ ಹಾಗೂ ಗುರುವಂದನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರಸ್ತುತ ವಿದ್ಯಾಮಾನಗಳನ್ನು ವಿವರಿಸಲು ಪತ್ರಿಕೆಗಳ ಪಾತ್ರ ಬಹುಮುಖ್ಯ. ದೇಶದಲ್ಲಿ ಮತ್ತು ರಾಜ್ಯದಲ್ಲಿ ಪತ್ರಿಕೆಗಳು ಸಮಾಜದಲ್ಲಿ …

Read More »

ಕ್ರೂಸರ್ ಅಪಘಾತ; ಮೃತರ ಕುಟುಂಬಸ್ಥರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಭೇಟಿ-ಸಾಂತ್ವಾನ

ಬೆಳಗಾವಿ: ಜುಲೈ 26ರಂದು ಬೆಳಗಾವಿ ತಾಲೂಕಿನ ಕಣಬರ್ಗಿ ರಸ್ತೆಯ ಕಲ್ಯಾಳ ಗ್ರಾಮದ ಬ್ರೀಜ್‌ ಬಳಿ ಸಂಭವಿಸಿದ ಅಪಘಾತದಲ್ಲಿ ಗೋಕಾಕ ತಾಲೂಕಿನ ಅಕ್ಕತಂಗೇರಹಾಳ, ಎಂ. ಮಲ್ಲಾಪುರ, ದಾಸನಟ್ಟಿ ಗ್ರಾಮಗಳ ಏಂಟು ಜನ ಮೃತಪಟ್ಟ ಕುಟುಂಬಸ್ಥರನ್ನು ಇಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್‌ ಜಾರಕಿಹೊಳಿ ಅವರು ಭೇಟಿ ನೀಡಿ ಸಾಂತ್ವಾನ ಹೇಳಿದರು.   ಈ ಸಂದರ್ಭದಲ್ಲಿ ಮುಖಂಡರಾದ ಮುನಿರ್‌ ಅಹ್ಮದ್‌ ದೇಸಾಯಿ, ರಾಜಕುಮಾರ ಪಾಟೀಲ್‌, ಬಸನಗೌಡ ಹೊಳೆಯಾಚೆ, ಪಾಂಡು ಮನ್ನಿಕೇರಿ, ಪಜಲ್‌ ಮಕಾಂದರ್‌, …

Read More »

ದೇಶಾದ್ಯಂತ ಪ್ಲಾಸ್ಟಿಕ್ ಬಳಕೆ ನಿಷೇಧ: ಗೋಕಾಕ್ ನಗರಸಭೆ ವತಿಯಿಂದ ಕಾರ್ಯಾಚರಣೆ.

ಗೋಕಾಕ: ಗೋಕಾಕ್ ನಗರಸಭೆ ಸ.ಕಾ.ಅ.ಪರಿಸರ ಎಮ್ ಎಚ್ ಗಜಕೋಶ,ಹಿರಿಯ ಅರೋಗ್ಯ ನಿರೀಕ್ಷಕರಾದ ಜಯೇಶ ತಾಂಬೋಳೆ ರವರ ತಂಡ ನಗರದ ಪ್ರಮುಖ ಹೋಲ್ಸೇಲ್ ಅಂಗಡಿ ಹಾಗೂ ಕಿರಾಣಿ ಅಂಗಡಿಗಳಿಗೆ ಭೇಟಿ ನೀಡಿ ಕಾರ್ಯಾಚರಣೆ ನಡೆಸಿ ಅಂದಾಜು 15ಕ್ಕೂ ಹೆಚ್ಚು ಕೆಜಿ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳು ಜಪ್ತಿ ಮಾಡಿಕೊಂಡಿದ್ದಾರೆ.ಹಾಗೂ ನಾಲ್ಕು ಅಂಗಡಿಗಳಿಗೆ 2000 ದಂಡವನ್ನು ವಿಧಿಸಿದ್ದಾರೆ. ದೇಶಾದ್ಯಂತ ಪ್ಲಾಸ್ಟಿಕ್ ಬಳಕೆ ನಿಷೇಧ: ಗೋಕಾಕ್ ನಗರಸಭೆ ವತಿಯಿಂದ ಕಾರ್ಯಾಚರಣೆ. ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ …

Read More »

ಕುಟುಂಬ ಪ್ರಬೋಧನ ಕಾರ್ಯಕ್ರಮ!

ಘಟಪ್ರಭಾ: ಕುಟುಂಬ ಪ್ರಬೋಧನ- ಕರ್ನಾಟಕ ಉತ್ತರ (ರಾಷ್ಟ್ರೀಯ ಸ್ವಯಂಸೇವಕ ಸಂಘದ ಗತಿ ವಿಧಿ) ಕುಟುಂಬ ಮಿತ್ರ ಅಧ್ಯಕ್ಷ ಹರೀಶ್ ಕಾಳೆ ಅವರ ನೇತೃತ್ವದಲ್ಲಿ ಮತ್ತು ಅವರ ಸಂಗಡಿಗರಿಂದ ಕನ್ನಡ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಕೆಂಪಣ್ಣ ಚೌಕಶಿ ಮತ್ತು ಸಹೋದರರ ಫಾರ್ಮ್ ಹೌಸದಲ್ಲಿ ಕಾರ್ಯಕ್ರಮ ನೆರವೇರಿತು. ಈ ಕಾರ್ಯಕ್ರಮದಲ್ಲಿ ಜೀವನದಲ್ಲಿ ಅತ್ಯಂತ ಮುಖ್ಯವಾದ ಉದ್ದೇಶ ಶರೀರ ಮತ್ತು ಜ್ಞಾನ, ಯೋಗಾಸನದ ಬಗ್ಗೆ ಮಕ್ಕಳಿಗೆ ಒಳ್ಳೆಯ ಜ್ಞಾನ ಕೊಡಬೇಕು ಮನೆಯ ಕುಟುಂಬದಲ್ಲಿ ಸೌಹಾರ್ದತೆಗೆಯಿಂದ …

Read More »

ರೈತರು ಕೃಷಿಯಲ್ಲಿ ಆಧುನಿಕತೆಯನ್ನು ಅಳವಡಿಸಿಕೊಂಡರೆ ಆರ್ಥಿಕ ಪ್ರಗತಿ ಸಾಧ್ಯ: ಶಾಸಕ ರಮೇಶ್ ಜಾರಕಿಹೊಳಿ

ಗೋಕಾಕ: ರೈತರು ಕೃಷಿಯೊಂದಿಗೆ ಹೈನುಗಾರಿಕೆ, ಕುರಿ ಸಾಕಾಣಿಕೆಯನ್ನು ಅಳವಡಿಸಿಕೊಂಡು ಆರ್ಥಿಕವಾಗಿ ಸದೃಢರಾಗುವಂತೆ ಶಾಸಕ ರಮೇಶ ಜಾರಕಿಹೊಳಿ ಹೇಳಿದರು. ಅವರು, ನಗರದ ತಮ್ಮ ಗೃಹ ಕಚೇರಿಯಲ್ಲಿ ಪಶು ಪಾಲನೆ ಮತ್ತು ಪಶು ವೈದ್ಯ ಸೇವಾ ಇಲಾಖೆ ಹಾಗೂ ಕುರಿ ಮತ್ತು ಉಣ್ಣೆ ಅಭಿವೃದ್ಧಿ ಮಂಡಳಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಕುರಿಗಾಹಿಗಳಿಗೆ ಜಂತು ನಾಶಕ ಹಾಗೂ ಆರೋಗ್ಯ ವರ್ಧಕ ಔಷಧಗಳು ಮತ್ತು ಕೃತಕ ಗರ್ಭಧಾರಣೆ ಕಾರ್ಯಕರ್ತರಿಗೆ ದ್ರವಸಾರ ಜನಕ ಜಾಡಿ ವಿತರಿಸಿ ಮಾತನಾಡಿದರು. …

Read More »