Breaking News

ಬೆಳಗಾವಿ

ಸಮಾಜದಲ್ಲಿ ಬಿಳ್ಳುವವರನ್ನು ಎತ್ತಿ ಹಿಡಿಯುವುದು ಮಾನವ ಧರ್ಮ: ಮುರುಘರಾಜೇಂದ್ರ ಶ್ರೀಗಳು

ಗೋಕಾಕ: ಹುಟ್ಟು ಸಾವು ಸೃಷ್ಟಿಯ ನಿಯಮ ಜೀವನದಲ್ಲಿ ಯಾವುದು ಶಾಶ್ವತ ವಿಲ್ಲ ಇದನ್ನು ಅರಿತು ಮನುಷ್ಯ ತಮ್ಮ ಜೀವನವನ್ನು ನಡೆಸಿದರೆ ಅದು ಸಾರ್ಥಕವಾಗುತ್ತದೆ ಎಂದು ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು. ಸಾಯಂಕಾಲ ತಾಲೂಕಿನ ಮಮದಾರಪೂರ ಗ್ರಾಮದ ಭಕ್ತರ ಮನೆಯಲ್ಲಿ ಶೂನ್ಯ ಸಂಪಾದನ ಮಠದ ವತಿಯಿಂದ ಹಮ್ಮಿಕೊಂಡ ಶ್ರೀಗಳ ನಡಿಗೆ ಭಕ್ತರ ಮನೆಗಳ ಕಡೆಗೆ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು. ಸಮಾಜದಲ್ಲಿ ಬಿಳ್ಳುವವರನ್ನು ಎತ್ತಿ ಹಿಡಿಯುವುದು ಮಾನವ ಧರ್ಮವಾಗಿದೆ. ಅಧಿಕಾರ ಶಾಶ್ವತವಲ್ಲ, …

Read More »

ಕಹಿ ಘಟನೆಗಳನ್ನು ಮರೆತು ಪರರ ಒಳಿತಿಗಾಗಿ ಬಾಳುವುದೆ ಮಾನವ ಜೀವನ : ಮುರುಘರಾಜೇಂದ್ರ ಶ್ರೀಗಳು.

ಗೋಕಾಕ : ಮನುಷ್ಯ ಜೀವನ ಹೇಗೆ ಬಂದಿದೆ ಹಾಗೆ ಹೋಗಬಾರದು, ಹುಟ್ಟು ಮತ್ತು ಸಾವಿನ ಮಧ್ಯದಲ್ಲಿರುವ ದಿನಗಳನ್ನು ನಾವು ಪರೋಪಕಾರಕ್ಕಾಗಿ ಕಳೆಯಬೇಕು ಎಂದು ಶೂನ್ಯ ಸಂಪಾದನ ಮಠದ ಪೀಠಾಧಿಪತಿ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು . ಶನಿವಾರದಂದು ನಗರದ ಶೂನ್ಯ ಸಂಪಾದನ ಮಠದ ವತಿಯಿಂದ ಉಪ ಕಾರ್ಯಾಗೃಹದಲ್ಲಿ ಶ್ರಾಶಣ ಮಾಸದ ನಿಮಿತ್ಯ ಹಮ್ಮಿಕೊಂಡ ವಿಚಾರಣಾಧೀನ ಖೈದಿಗಳ ಮನಪರಿವರ್ತನ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಆಶಿರ್ವಚನ ನೀಡಿ ಅವರು ಮಾತನಾಡಿದರು. ಸಾಕಷ್ಟು …

Read More »

ಸುವರ್ಣ ವಿಧಾನಸೌಧವನ್ನು ಆಡಳಿತಾತ್ಮಕ ಶಕ್ತಿ ಕೇಂದ್ರ ಮಾಡಿ : ಅಶೋಕ್ ಪೂಜಾರಿ ಆಗ್ರಹ.

ಬೆಳಗಾವಿ: ‘ಉತ್ತರ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಯ ಮುಂದಾಲೋಚನೆಯಿಂದ ನಿರ್ಮಿಸಿರುವ ಇಲ್ಲಿನ ಸುವರ್ಣ ವಿಧಾನಸೌಧವನ್ನು ಆಡಳಿತಾತ್ಮಕ ಶಕ್ತಿ ಕೇಂದ್ರ ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕ್ರಮ ಕೈಗೊಳ್ಳಬೇಕು’ ಎಂದು ಉತ್ತರ ಕರ್ನಾಟಕ ವಿಕಾಸ ವೇದಿಕೆಯ ಅಧ್ಯಕ್ಷ ಅಶೋಕ ಪೂಜಾರಿ ಒತ್ತಾಯಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯ ಮಟ್ಟದ ಪ್ರಮುಖ ಕಚೇರಿಗಳು ಇಲ್ಲಿಗೆ ಬಂದರೆ ಹಾಗೂ ವಿಧಾನಮಂಡಲ ಅಧಿವೇಶನವನ್ನು ನಿಯಮಿತವಾಗಿ ನಡೆಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರೆ ಮಾತ್ರ ಈ ಭಾಗದ ಸಮಗ್ರ …

Read More »

ಸರ್ಕಾರದಿಂದ ರೈತರಿಗೆ ಕಡಿಮೆ ಬಡ್ಡಿದರದಲ್ಲಿ ಯಂತ್ರೋಪಕರಣಗಳನ್ನು ವಿತರಿಸಬೇಕು: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ

ಸವದತ್ತಿ: ರೈತರಿಗೆ ಇನ್ನೂ ಕಡಿಮೆ ಬಡ್ಡಿದರದಲ್ಲಿ ಕೃಷಿ ಯಂತ್ರೋಪಕರಣಗಳು ಸಿಗಬೇಕು. ಅಂದಾಗ ರೈತರನ್ನು ಮತ್ತಷ್ಟು ಸ್ವಾವಲಂಭಿಗಳನ್ನಾಗಿಸಲು ಸಾಧ್ಯವಾಗುತ್ತದೆ. ಈ ಬಗ್ಗೆ ಸರ್ಕಾರಗಳು ಗಮನಹರಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು. ತಾಲೂಕಿನ ಮಬನೂರ ಗ್ರಾಮದಲ್ಲಿ ಇಂದು ಹಮ್ಮಿಕೊಂಡಿದ್ದ ಮಬನೂರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಕಟ್ಟಡದ ಉದ್ಘಾಟನೆ ಹಾಗೂ ಟ್ರ್ಯಾಕ್ಟರ್ ಸಾಲ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ರೈತ ಸಮುದಾಯ ದೇಶದ ದೊಡ್ಡ …

Read More »

ಕಾರ್ಮಿಕರ ಅರ್ಜಿ ವಿಲೆವಾರಿ ಮಾಡುವುದಕ್ಕೆ ಕಾರ್ಮಿಕ ಅದಾಲತ್ ಸಹಕಾರಿ : ವೆಂಕಟೇಶ ಸಿಂದಿಹಟ್ಟಿ

ಗೋಕಾಕ: ಸರಕಾರ ಕಾರ್ಮಿಕರ ಅಭಿವೃದ್ಧಿಗಾಗಿ ಜಾರಿಗೊಳಿಸಿದ ನಾನಾ ಸೌಲಭ್ಯಗಳನ್ನು ಎಲ್ಲ ನೊಂದಾಯಿತ ಕಟ್ಟಡ ಕಾರ್ಮಿಕರು ಪಡೆಯುವುದು ಅವಶ್ಯವಾಗಿದೆ ಎಂದು ಕಾರ್ಮಿಕ ಇಲಾಖೆ ವತಿಯಿಂದ ಗೋಕಾಕ ನಗರದ ಸಮುದಾಯ ಭವನದಲ್ಲಿ ರಾಜ್ಯದಲ್ಲಿ ಪ್ರಪ್ರಥಮವಾಗಿ ಹಮ್ಮಿಕೊಂಡ ಕಾರ್ಮಿಕರಿಗೆ ಸಂಬಂಧಿಸಿದ ಬಾಕಿ ಅರ್ಜಿ ವಿಲೇವಾರಿ “ಕಾರ್ಮಿಕ ಅದಾಲತ್ “ಕಾರ್ಯಕ್ರಮದಲ್ಲಿ ಕಾರ್ಮಿಕರ ಅರ್ಜಿಗಳನ್ನು ವಿಲೇವಾರಿ ಮಾಡಿ ಮಾತನಾಡಿದ ಪ್ರಾದೇಶಿಕ ಉಪಕಾರ್ಮಿಕ ಆಯುಕ್ತರಾದ ವೆಂಕಟೇಶ ಶಿಂದಿಹಟ್ಟಿಯವರು ಸರಕಾರ ಕಾರ್ಮಿಕರಿಗೆ ಹಲವಾರು ಸೌಲಬ್ಯಗಳನ್ನು ಜಾರಿಗೊಳಿಸಿದೆ ಆದರೆ ಅವುಗಳ ಉಪಯೋಗ …

Read More »

ನಾಳೆ ಹಾಲು ಶಿಥಿಲೀಕರಣ ಘಟಕ ಉದ್ಘಾಟನೆ

ಮೂಡಲಗಿ: ತಾಲೂಕಿನ ಹಳ್ಳೂರ ಗ್ರಾಮದಲ್ಲಿ ಹಳ್ಳೂರ ಹಾಲು ಉತ್ಪಾದಕರ ಸಹಕಾರಿ ಸಂಘದ ಕಾರ್ಯಾಲಯದಲ್ಲಿ ಎನ್‌ಪಿಡಿಡಿ ಯೋಜನೆಯಡಿಯಲ್ಲಿ ಹಾಲು ಶಿಥಿಲೀಕರಣ (ಬಿಎಮ್‌ಸಿ) ಘಟಕದ ಉದ್ಘಾಟನಾ ಸಮಾರಂಭದ ಆ.20ರಂದು ಮುಂಜಾನೆ 90:30ಕ್ಕೆ ಸಂಘದ ಆವರಣದಲ್ಲಿ ಜರುಗಲಿದೆ. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಅಂಕಲಗಿಯ ಶ್ರೀ ಅಡವಿಸಿದ್ದೇಶ್ವರ ಮಹಾಸ್ವಾಮಿಗಳು ಹಾಗೂ ಸಾನಿಧ್ಯವನ್ನು ಬೆಂಡವಾಡ ವಿರಕ್ತ ಮಠದ ಶ್ರೀ ಗುರುಸಿದ್ದ ಮಹಾಸ್ವಾಮಿಗಳು ವಹಿಸುವವರು. ಉದ್ಘಾಟಕರಾಗಿ ಕೆಎಮ್‌ಎಫ್ ಅಧ್ಯಕ್ಷ ಹಾಗೂ ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಮತ್ತು ಬೆಳಗಾವಿ …

Read More »

ವಿದ್ಯುತ್ ದೀಪ, ಕಾಂಕ್ರೇಟ್ ರಸ್ತೆ ಕಾಮಗಾರಿಗೆ ಕಾರ್ಮಿಕ ಮುಖಂಡರಾದ ಅಂಬಿರಾವ ಪಾಟೀಲ್ ಚಾಲನೆ !

ಗೋಕಾಕ: ವಿದ್ಯುತ್ ದೀಪ ಮತ್ತು ಕಾಂಕ್ರೇಟ್ ರಸ್ತೆ, ಪೇವರ್ಸ ಕಾಮಗಾರಿಗೆ ಕಾರ್ಮಿಕ ಮುಖಂಡರಾದ ಅಂಬಿರಾವ ಪಾಟೀಲ್ ಅವರು ಚಾಲನೆ ನೀಡಿದರು. ನಗರ ಸಭೆ ವತಿಯಿಂದ ಸನ್ 2019-20 ರ ಸಾಲಿನ ಎಸ್ ಎಫ್ ಸಿ ವಿಶೇಷ ಅನುದಾನ ಹಾಗೂ 14ನೇ ಹಣಕಾಸು ಯೋಜನೆಯಡಿಯಲ್ಲಿ ಮಂಜೂರಾದ ವಿದ್ಯುತ್ ದೀಪ ಮತ್ತು ಕಾಂಕ್ರೇಟ್ ರಸ್ತೆ, ಪೇವರ್ಸ ಕಾಮಗಾರಿಗಳಿಗೆ ಮಂಜೂರಾದ ಒಟ್ಟು ಮೊತ್ತ 22.81 ಲಕ್ಷ ರೂಗಳ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಮಾಡುವುದರ ಮೂಲಕ …

Read More »

ಗೋಕಾಕ: ಶಿಕಾರಿಪುರದಲ್ಲಿ ರಾಯಣ್ಣನ ಮೂರ್ತಿ ಮರು ಸ್ಥಾಪಿಸುವಂತೆ ಮನವಿ

ಗೋಕಾಕ : ಶಿಕಾರಿಪುರದಲ್ಲಿ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ತೆರವುಗೊಳಿಸಿರುವುದನ್ನು ಖಂಡಿಸಿ, ಮರು ಸ್ಥಾಪನೆ ಮಾಡುವಂತೆ ಒತ್ತಾಯಿಸಿ ಹಾಲುಮತ ಮಹಾಸಭಾ ವತಿಯಿಂದ ತಹಶೀಲ್ದಾರರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು. ರಾಜ್ಯ ಸರ್ಕಾರದ ಪ್ರತಿ ಇಲಾಖೆಯಲ್ಲಿ ರಾಯಣ್ಣ ಭಾವಚಿತ್ರ ಪೂಜಿಸಬೇಕೆಂದು ಆದೇಶ ನೀಡಿದೆ. ಸ್ವಾತಂತ್ರ್ಯ ದಿನ ಎಲ್ಲಾ ರಾಯಣ್ಣನ ಅಭಿಮಾನಿಗಳು ಹಾಗೂ ಸರ್ಕಾರಿ ಕಚೇರಿಗಳಲ್ಲಿ ರಾಯಣ್ಣ ಜಯಂತಿ ಆಚರಿಸಿವೆ. ಆದರೆ, ಶಿಕಾರಿಪುರಲ್ಲಿ ಅದೇ ದಿನ ರಾಯಣ್ಣನ ಮೂರ್ತಿ ತೆರವುಗೊಳಿಸಿ ಅಪಮಾನ ಮಾಡಿದ್ದಾರೆ. …

Read More »

ರೈತರ ಆರ್ಥಿಕ ಪ್ರಗತಿಯಲ್ಲಿ ಜಾನುವಾರಗಳ ಪಾತ್ರ ಪ್ರಮುಖ: ರಮೇಶ ಜಾರಕಿಹೊಳಿ

ಗೋಕಾಕ: ದೇಶದ ಬೆನ್ನೆಲುಭಾಗಿರುವ ರೈತರ ಆರ್ಥಿಕ ಪ್ರಗತಿಯಲ್ಲಿ ಜಾನುವಾರಗಳ ಪಾತ್ರ ಪ್ರಮುಖವಾಗಿದ್ದು ಅವುಗಳ ಆರೋಗ್ಯ ರಕ್ಷಣೆಗೆ ರೈತರು ಹೆಚ್ಚಿನ ಮಹತ್ವ ನೀಡಬೇಕೆಂದು ಶಾಸಕ ರಮೇಶ ಜಾರಕಿಹೊಳಿ ಅವರು ಹೇಳಿದರು. ಸೋಮವಾರದಂದು ನಗರದ ಶಾಸಕರ ಕಾರ್ಯಲಯದ ಆವರಣದಲ್ಲಿ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಿಂದ ಅಜಾದಿ ಕಾ ಅಮೃತ ಮಹೋತ್ಸವ ನಿಮಿತ್ಯ ಜಂತು ನಾಶಕ ಹಾಗೂ ಆರೋಗ್ಯ ವರ್ಧಕ ಔಷಧಿಗಳ ವಿತರಿಸಿ ಮಾತನಾಡುತ್ತಿದ್ದರು. ಸರ್ಕಾರ ರೈತರಿಗೆ ಹಲವಾರು ಯೋಜನೆಗಳ …

Read More »

ಸ್ಥಳೀಯ ಮಹಾನಗರ ಪಾಲಿಕೆ ಚುನಾವಣೆಗೆ ಬೆಳಗಾವಿಯಲ್ಲಿ ಕಾಂಗ್ರೆಸ್ ಸಿದ್ದತೆ

ಬೆಳಗಾವಿ : ಸ್ಥಳೀಯ ಮಹಾನಗರ ಪಾಲಿಕೆ ಚುನಾವಣೆಯ ಕಾಂಗ್ರೆಸ್ ಉಸ್ತುವಾರಿ ಸಮಿತಿ ಸದಸ್ಯರಾದ ಎಂ.ಬಿ.ಪಾಟೀಲ ನೇತೃತ್ವದಲ್ಲಿ ಬೆಳಗಾವಿ ಕಾಂಗ್ರೆಸ್ ಭವನದಲ್ಲಿ ಸೋಮವಾರ ಶಾಸಕರು, ಮಾಜಿ ಶಾಸಕರು, ಪಾಲಿಕೆ ಮಾಜಿ ಸದಸ್ಯರು, ಮುಖಂಡರ ಜೊತೆಗೆ ಸುದೀರ್ಘ ಎರಡು ಗಂಟೆಗಳ ಕಾಲ ಸಭೆ ನಡೆಸಲಾಯಿತು. ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಚಿಹ್ನೆ ಮೇಲೆ ಮಹಾನಗರ ಪಾಲಿಕೆ ಚುನಾವಣೆ ಮಾಡುವುದರ ಬಗ್ಗೆ ಚರ್ಚೆ ನಡೆಯಿತು. ಈ ವಿಷಯಕ್ಕೆ ಪರ ವಿರೋಧ ಅಭಿಪ್ರಾಯ ವ್ಯಕ್ತವಾದವು. ಮಾಜಿ ಶಾಸಕರು, …

Read More »