ಬೆಳಗಾವಿ, ಆಗಸ್ಟ್ 30: ರಾಜ್ಯದ ಕಲಬುರಗಿ, ಬೆಳಗಾವಿ ಹಾಗೂ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಗಳಿಗೆ ಚುನಾವಣೆ ಘೋಷಣೆಯಾಗಿದ್ದು, ಸೆ. 3ರಂದು ಮತದಾನ ನಡೆಯಲಿದೆ. ಸೆ. 3ರಂದು ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ಬಿಜೆಪಿಯಿಂದ ಉಚಿತ ಶವಸಂಸ್ಕಾರಕ್ಕೆ ವ್ಯವಸ್ಥೆ ಮಾಡಿರುವ ವಿಚಾರವಾಗಿ ಮಾತನಾಡಿದ ಸಚಿವ ಗೋವಿಂದ ಕಾರಜೋಳ, “ಬಡವರು, ನಿರ್ಗತಿಕರು ಶವಸಂಸ್ಕಾರಕ್ಕೆ ಹಣ ಇಲ್ಲದವರು ಇದ್ದಾರೆ. ಕೆಲವರು ಶವಸಂಸ್ಕಾರದ ಹಣಕ್ಕೆ ಕೈವೊಡ್ಡಿದವರು ಇದ್ದಾರೆ. ಅವರಿಗೆ …
Read More »ಕೈ ಅಭ್ಯರ್ಥಿಗಳ ಪರ ಸತೀಶ್ ಜಾರಕಿಹೊಳಿ, ಎಂ ಬಿ ಪಾಟೀಲ್ ಬಿರುಸಿನ ಪ್ರಚಾರ.
ಬೆಳಗಾವಿ : ಬೆಳಗಾವಿ ಪಾಲಿಕೆ ಚುನಾವಣೆಗೆ ವಾರ್ಡ್ ನಂ.55ರಿಂದ ಸ್ಪರ್ಧಿಸಿದ ಕಾಂಗ್ರೆಸ್ ಅಭ್ಯರ್ಥಿ ಮುತ್ಯಾನಟ್ಟಿಯ ಸೋನಲ ಸಂಜಯ ಸುಂಟಕರ, ಖಾಸಬಾಗದ ವಾರ್ಡ ನಂ 21 ಅಭ್ಯರ್ಥಿ ಸರಳಾ ಸಾತಪುತೆ, ವಾರ್ಡನಂ 22 ಅಭ್ಯರ್ಥಿ ಸಲೀಂ ಸನದಿ, ವಾರ್ಡ ನ. 52ರ ಅನಗೋಲ ಕುರಶಿದ ಮುಲ್ಲಾ ಪರ ಮಾಜಿ ಸಚಿವ ಎಂ.ಬಿ.ಪಾಟೀಲ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಸೋಮವಾರ ಬಿರುಸಿನ ಪ್ರಚಾರ ನಡೆಸಿದರು. ಇದೇ ವೇಳೆ ಎಂ.ಬಿ.ಪಾಟೀಲ ಮಾತನಾಡಿ, ರಾಜ್ಯದ ಪ್ರಭಾವಿ …
Read More »ಕಾಂಗ್ರೆಸ್ ಅಭ್ಯರ್ಥಿಗಳ ಪರ ಸತೀಶ ಜಾರಕಿಹೊಳಿ, ಎಂ.ಬಿ. ಪಾಟೀಲ್ ಪ್ರಚಾರ
ಬೆಳಗಾವಿ: ಬೆಳಗಾವಿ ಉತ್ತರ ವಿಧಾನಸಭಾ ಮತಕ್ಷೇತ್ರದ ವಿವಿಧ ವಾರ್ಡ್ ಗಳಲ್ಲಿ ಮಹಾನಗರ ಪಾಲಿಕೆ ಚುನಾವಣೆಯ ಪಕ್ಷದ ಅಭ್ಯರ್ಥಿಗಳ ಪರ ಇಂದು (ಭಾನುವಾರ) ಸಂಜೆ ಕಾಂಗ್ರೆಸ್ ಮುಖಂಡರು ಬಿರುಸಿನ ಪ್ರಚಾರ ನಡೆಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಮಾಜಿ ಸಚಿವ ಎಂ.ಬಿ. ಪಾಟೀಲ, ಶಾಸಕಿ ಅಂಜಲಿ ನಿಂಬಾಳಕರ್ ನೇತೃತ್ವದಲ್ಲಿ ಇಲ್ಲಿನ ಮಹಾಂತೇಶ ನಗರ ಹಾಗೂ ರಾಮತೀರ್ಥ ನಗರದಲ್ಲಿ ಮತಯಾಚನೆ ಮಾಡಿದ ಮುಖಂಡರು, ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬಹುಮತದಿಂದ ಗೆಲ್ಲಿಸುವಂತೆ ಮನವಿ …
Read More »ಬೇರೆಯವರ ಯೋಜನೆಗಳ ಹೆಸರು ಬದಲಾಯಿಸುವುದೇ ಬಿಜೆಪಿಯವರ ಹವ್ಯಾಸ: ಸತೀಶ ಜಾರಕಿಹೊಳಿ.
ಬೆಳಗಾವಿ: 200 ರೂ. ಬಾಂಡ್ ಮೇಲೆ ಖರೀದಿ ಮಾಡಿ ನಿರ್ಮಿಸಿದ ಮನೆಗಳನ್ನು ಸಕ್ರಮಗೊಳಿಸುವುದು 20 ವರ್ಷಗಳ ಹಳೆಯ ಸಮಸ್ಯೆಯಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯವರು ಅದನ್ನು ಈಗ ಮತ್ತೆ ಪ್ರಸ್ತಾಪಿಸುತ್ತಿದ್ದಾರೆ. ಇಷ್ಟು ದಿನ ಅವರು ಏನು ಮಾಡುತ್ತಿದ್ದರು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಪ್ರಶ್ನಿಸಿದರು. ಇಲ್ಲಿನ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಂಡ್ ಗಳ ಮೇಲೆ ನಿರ್ಮಿಸಿದ ಮನೆಗಳನ್ನು ಸಕ್ರಮಗೊಳಿಸವುದು ಹೇಳಿದಷ್ಟು ಸುಲಭವಲ್ಲ. ಮನೆಗಳ ಸಕ್ರಮವನ್ನು …
Read More »ಪಾಲಿಕೆ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಪರ ಸತೀಶ್ ಜಾರಕಿಹೊಳಿ ಹಾಗೂ ಮುಖಂಡರಿಂದ ಬಿರುಸಿನ ಪ್ರಚಾರ
ಬೆಳಗಾವಿ ನಗರದ ಸಮಗ್ರ ಅಭಿವೃದ್ಧಿಯೇ ಕಾಂಗ್ರೆಸ್ ಧ್ಯೇಯ; ಪಕ್ಷದ ಅಭ್ಯರ್ಥಿಗಳನ್ನು ಬಹುಮತದಿಂದ ಗೆಲ್ಲಿಸುವಂತೆ ಮನವಿ ಬೆಳಗಾವಿ: ಬೆಳಗಾವಿ ದಕ್ಷಿಣ ವಿಧಾನಸಭಾ ಮತಕ್ಷೇತ್ರದ ವಿವಿಧ ವಾರ್ಡ್ ಗಳಲ್ಲಿ ಮಹಾನಗರ ಪಾಲಿಕೆ ಚುನಾವಣೆಯ ಪಕ್ಷದ ಅಭ್ಯರ್ಥಿಗಳ ಪರ ಇಂದು (ಶನಿವಾರ) ಸಂಜೆ ಕಾಂಗ್ರೆಸ್ ಮುಖಂಡರು ಬಿರುಸಿನ ಪ್ರಚಾರ ನಡೆಸಿದರು. ಬೆಳಗಾವಿ ಕಾಂಗ್ರೆಸ್ ಚುನಾವಣಾ ವೀಕ್ಷಕರಾದ ಗುಜರಾತ್ ರಾಜ್ಯಸಭಾ ಸದಸ್ಯೆ ಅಮೀ ಯಜನಿಕ್ , ಮಹಾರಾಷ್ಟ್ರ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಸತ್ಯಜೀತ್ ಪಾಂಬೆ …
Read More »ಶ್ರೀಘದಲ್ಲಿ ಗೋಕಾಕ ಸರಕಾರಿ ಆಸ್ಪತ್ರೆ ಮೇಲ್ದರ್ಜೆಗೆ : ರಮೇಶ ಜಾರಕಿಹೊಳಿ.
ಗೋಕಾಕ: ಸರಕಾರಿ ಆಸ್ಪತ್ರೆಯನ್ನು 100 ರಿಂದ 250 ಬೆಡ್‌ಗೆ ಹಾಗೂ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು 100 ರಿಂದ 150 ಬೆಡ್ ಗೆ ಪರಿವರ್ತಿಸಿ ಮೇಲ್ದರ್ಜೆಗೆ ಏರಿಸಲಾಗುವುದು ಎಂದು ಮಾಜಿ ಸಚಿವರು ,ಶಾಸಕ ರಮೇಶ್ ಜಾರಕಿಹೊಳಿ ಹೇಳಿದರು. ಶನಿವಾರದಂದು ನಗರದ ಶಾಸಕರ ಕಛೇರಿಯಲ್ಲಿ ನಡೆದ ವೈದ್ಯರ ಸಭೆಯಲ್ಲಿ ಅವರು ಮಾತನಾಡಿದರು. ಪ್ರಸ್ತುತ ಸರಕಾರಿ ಆಸ್ಪತ್ರೆಯಲ್ಲಿ ಆರೋಗ್ಯ ಸೇವೆ ಉತ್ತಮವಾಗಿದೆ. ಆಸ್ಪತ್ರೆಗಳು, ವೈದ್ಯಕೀಯ ಸೌಲಭ್ಯಗಳು, ಉತ್ತಮ ಪ್ರಮಾಣದಲ್ಲಿವೆ. ವೈದ್ಯರ ಸಂಖ್ಯೆಯೂ ಇದೆ. …
Read More »ರಾಜ್ಯದಲ್ಲಿ ಮತ್ತೊಂದು ಗ್ಯಾಂಗ್ ರೇಪ್!ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.
ಬೆಳಗಾವಿ: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಎಂಬಿಎ ವಿದ್ಯಾರ್ಥಿನಿ ಮೇಲೆ ಮೊನ್ನೆ ನಡೆದಿರುವ ಗ್ಯಾಂಗ್ ರೇಪ್ ಪ್ರಕರಣದ ಸುದ್ದಿ ಇನ್ನೂ ತಣ್ಣಗಾಗಿಲ್ಲ. 2 ದಿನ ಕಳೆದರೂ ಇನ್ನೂ ಆರೋಪಿಗಳು ಪತ್ತೆಯಾಗಿಲ್ಲ. ಈ ನಡುವೆ ಮತ್ತೊಂದು ಸಾಮೂಹಿಕ ಅತ್ಯಾಚಾರ ಕೇಸ್ ದಾಖಲಾಗಿದ್ದು, ರಾಜ್ಯದಲ್ಲಿ ಕಾಮುಕರ ಅಟ್ಟಹಾಸ ಮುಂದುವರಿದಿದೆ.ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನಲ್ಲಿ 16 ವರ್ಷದ ಬಾಲಕಿಯನ್ನು ಪುಸಲಾಯಿಸಿ ಕರೆದೊಯ್ದ ಐವರು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. 15 ದಿನದ ಹಿಂದೆ ಬಾಲಕಿಯನ್ನು ಪರಿಚಯಸ್ಥ ಯುವಕನೊಬ್ಬ ಬೈಕ್ ನಲ್ಲಿ …
Read More »ಗೃಹ ಸಚಿವರಿಂದ ಬೇಜವಾಬ್ದಾರಿ ಹೇಳಿಕೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ
ಗೋಕಾಕ: ಗೃಹಸಚಿವರು ಅತ್ಯಾಚಾರ ಪ್ರಕರಣದ ಬಗ್ಗೆ ಬೇಜವಾಬ್ದಾರಿಯಾಗಿ ಹೇಳಿಕೆ ನೀಡಿದ್ದಾರೆ. ಇದು ಸರಿಯಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು. ನಗರದ ಹಿಲ್ ಗಾರ್ಡನ್ ಕಚೇರಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೃಹ ಸಚಿವರ ಬಾಯಿಂದ ಈ ರೀತಿಯ ಮಾತು ಬರಬಾರದಿತ್ತು. ಅವರ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಜನರೇ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಗೃಹ ಸಚಿವರು ಅವರ ಸಾಮರ್ಥ್ಯದ ಬಗ್ಗೆ ಅವರೇ ಸವಾಲು ಎತ್ತಿದ್ದಾರೆ ಎಂದರು. …
Read More »ಶಾಶ್ವತ ಪರಿಹಾರಕ್ಕಾಗಿ ಇಲಾಖೆಯೊಂದಿಗೆ ಕೈ ಜೋಡಿಸಿ : ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ
ಗೋಕಾಕ: ಎಲ್ಲರೂ ಸಮನ್ವಯದಿಂದ ಇಲಾಖೆಯೊಂದಿಗೆ ಕೈ ಜೋಡಿಸಿ ಕಾರ್ಯನಿರ್ವಹಿಸಿದರೆ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕೊಂಡುಕೊಳ್ಳಲು ಸಾಧ್ಯ ಎಂದು ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ಹೇಳಿದರು. ಗುರುವಾರದಂದು ನಗರದ ತಾಲೂಕಾ ಪಂಚಾಯತ್ ಸಭಾಂಗಣದಲ್ಲಿ ತಾಲೂಕಾಡಳಿತ , ತಾಲೂಕಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವುಗಳ ಸಂಯುಕ್ತಾಶಯದಲ್ಲಿ ಗೋಕಾಕ ತಾಲೂಕಿನ ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗಗಳ ಜನರ ಯೋಗಕ್ಷೇಮ ಹಾಗೂ ಹಿತರಕ್ಷಣಾ ಕುಂದುಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪರಿಶಿಷ್ಟ ಜಾತಿ, ಪರಿಶಿಷ್ಟ …
Read More »ದುಪದಾಳ ನಿರೀಕ್ಷಣಾ ಮಂದಿರ ಅಭಿವೃದ್ಧಿ ಪಡಿಸುವಂತೆ ಕರವೇ ಆಗ್ರಹ!
ಗೋಕಾಕ: ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕು ಘಟಕದ ಅದ್ಯಕ್ಷರು ಹಾಗೂ ಪದಾಧಿಕಾರಿಗಳು ಮೆ,ಕಾರ್ಯನಿರ್ವಾಹಕ ಅಭಿಯಂತರರಿಗೆ ದುಪದಾಳ ನಿರೀಕ್ಷಣಾ ಮಂದಿರ ಅಭಿವೃದ್ಧಿ ಪಡಿಸಲು ವಿನಂತಿಸಿಕೊಂಡರು. ಇಲಾಖೆಗೆ ಸಂಬಂಧಿಸಿದ ದೂಪದಾಳ ನಿರೀಕ್ಷಣಾ ಮಂದಿರ ಸುಮಾರು ನೂರು ಐವತ್ತು ವರ್ಷಗಳ ಇತಿಹಾಸ ಹೊಂದಿದೆ ಬ್ರಿಟಿಷ್ ಕಾಲದಿಂದಲೂ ಅತ್ಯಂತ ಮಹತ್ವ ಪಡೆದುಕೊಂಡು ಹೆಸರುವಾಸಿಯಾಗಿದೆ ನೀರಾವರಿ ನಿಗಮ ಆಗುವುದಕ್ಕಿಂತ ಮೊದಲು ಸಾಕಷ್ಟು ಆಕರ್ಷಕ ಪ್ರವಾಸಿ ತಾಣ ಆಗಿತ್ತು ಆದರೆ ಇತ್ತಿಚೆಗೆ ಪ್ರವಾಸಿ ಮಂದಿರವು ನಿರ್ಲಕ್ಷ್ಯಕ್ಕೊಳಪ್ಪಟ್ಟಿದೆ ಇಲ್ಲಿ …
Read More »