ಕೆಪಿಸಿಸಿ ಕಾರ್ಯಾಧ್ಯಕ್ಷ ಆಗಿ ಕಾರ್ಯನಿರ್ವಹಿಸುತ್ತಿದ್ದ ಸತೀಶ್ ಜಾರಕಿಹೊಳಿ ಇಂದು 5ನೇ ಬಾರಿಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಮೌಢ್ಯತೆ ವಿರುದ್ಧ ಸಮರ ಸಾರಿ ಮಾನವ ಬಂಧುತ್ವ ವೇದಿಕೆ ಸ್ಥಾಪಿಸಿ ರಾಜ್ಯಾದ್ಯಂತ ಮೂಢನಂಬಿಕೆ ವಿರುದ್ಧ ಹೋರಾಟ ನಡೆಸುತ್ತ ಬಂದಿರುವ ಸತೀಶ್ ಜಾರಕಿಹೊಳಿ ಅಪರೂಪದ ರಾಜಕಾರಣಿ. ಸಿದ್ದರಾಮಯ್ಯ ಕಟ್ಟಾ ಶಿಷ್ಯ ಎಂದೇ ಗುರುತಿಸಿಕೊಂಡಿರುವ ಸತೀಶ್ ಜಾರಕಿಹೊಳಿ ರಾಜಕೀಯ ಜೀವನವೇ ವಿಭಿನ್ನ. 1992ರ ಗೋಕಾಕ್ ನಗರಸಭೆ ಚುನಾವಣೆಯಲ್ಲಿ ತಮ್ಮ ಬೆಂಬಲಿಗರನ್ನು ಪಕ್ಷೇತರ ಅಭ್ಯರ್ಥಿಗಳಾಗಿ ಚುನಾವಣೆಗೆ …
Read More »ವಾಲ್ಮೀಕಿ ಮೂರ್ತಿ ಪ್ರತಿಷ್ಠಾಪಣೆಗೆ ವಿರೋಧಿಸಿದ ಸಂಸದ ಜೊಲ್ಲೆ ವಿರುದ್ಧ ಬೃಹತ್ ಪ್ರತಿಭಟನೆ!
ಹುಕ್ಕೇರಿ: ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರು ಯಮಕನಮರಡಿಯ ಶಹಾಬಂದರ ಮತ್ತು ಇಸ್ಲಾಂಪೂರ ಗ್ರಾಮಗಳ ವಾಲ್ಮೀಕಿ ವೃತ್ತದಲ್ಲಿ ಮೂರ್ತಿ ಪ್ರತಿಷ್ಠಾಪಣೆ ಮಾಡುವ ಸ್ಥಳದಲ್ಲಿ ಬಸ್ ಶೆಲ್ಟರ್ ನಿರ್ಮಾಣ ಮಾಡುತ್ತಿರುವುದನ್ನು ಖಂಡಿಸಿ ವಾಲ್ಮೀಕಿ, ರೈತ, ದಲಿತ ಸಂಘಟನೆಗಳು ವಾಲ್ಮೀಕಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ಮಾಡಿ ಬೃಹತ್ ಪ್ರತಿಭಟನೆ ನಡೆಸಿ ನಂತರ ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ವಾಲ್ಮೀಕಿ, ರೈತ, ದಲಿತ ಸಂಘಟನೆಗಳ ಮುಖಂಡರು ಸಂಸದ ಅಣ್ಣಾಸಾಹೇಬ ಜೊಲ್ಲೆ, …
Read More »*ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ 475ಕೋಟಿ ರೂ ಅನುದಾನ ಬಿಡುಗಡೆಗೆ-ರಮೇಶ ಜಾರಕಿಹೊಳಿ.!*
ಗೋಕಾಕ: ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ಗೋಕಾಕ ತಾಲೂಕಿನ 40 ಗ್ರಾಮಗಳಿಗೆ ಕುಡಿಯುವ ನೀರು ಒದಗಿಸಲು ಸರಕಾರ 475ಕೋಟಿ ರೂ ಅನುದಾನ ಬಿಡುಗಡೆಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿರುವದಾಗಿ ಶಾಸಕ ರಮೇಶ ಜಾರಕಿಹೊಳಿ ತಿಳಿಸಿದ್ದಾರೆ. ಗುರುವಾರದಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುವ ಅವರು, ಗೋಕಾಕ ಮತಕ್ಷೇತ್ರದ ತವಗ, ಕನಸಗೇರಿ, ಕೈ.ಹೊಸೂರ, ಕೈತನಾಳ, ಕಡಗಟ್ಟಿ, ಮಕ್ಕಳಗೇರಿ, ಹೀರೆಹಟ್ಟಿ, ಹನಮಾಪೂರ, ಶೀಲ್ತಭಾಂವಿ, ಪುಡಲಕಟ್ಟಿ, ಜಮನಾಳ, ಕೆ.ಬೆಣಚಿನಮರ್ಡಿ, ಪಾರನಟ್ಟಿ, ಗೊಡಚಿನಮಲ್ಕಿ, ಮೇಲ್ಮಟ್ಟಿ, ವಾಲ್ಮೀಕಿನಗರ, ಮಲೆಬೈಲ, …
Read More »ಬಸವನಗರದಲ್ಲಿರುವ ಬಡಕುಟುಂಬಗಳಿಗೆ ಮನೆ ಹಕ್ಕುಪತ್ರ ವಿತರಿಸುವಂತೆ ನಿವಾಸಿಗಳ ಪ್ರತಿಭಟನೆ
ಕಾಗವಾಡ: ಪಟ್ಟಣದ ಬಸವನಗರದಲ್ಲಿ ಸುಮಾರು ೪೦ ರಿಂದ ೪೫ ವರ್ಷದಿಂದ ೭೦೦ ರದಿಂದ ೮೦೦ ಕುಟುಂಬಗಳು ವಾಸವಾಗಿವೆ.ಈಗ ಅಲ್ಲಿಯ ನೀವಾಸಿಗಳಿಗೆ ಶಾಸಕ ಶ್ರೀಮಂತ ಪಾಟೀಲ್ ರು ಬಡಕುಟುಂಬಗಳಿಗೆ ಆಸರೆಯಾಗಲಿ ಎಂದು ಸುಮಾರು 50 ಮನೆಗಳನ್ನ ಮಂಜೂರು ಮಾಡಿಸಿದ್ದಾರೆ.ಆ ಮನೆಗಳನ್ನ ಕಟ್ಟಿಕೊಳ್ಳಬೇಕಾದರೆ ಮನೆಯ ಹಕ್ಕುಪತ್ರಗಳು ಬೇಕು ಆದರೆ ಅಲ್ಲಿರುವ ಕೆಲ ಕುಟುಂಬಗಳಿಗೆ ಮನೆಹಕ್ಕುಪತ್ರ ಇದ್ದರೆ ಇನ್ನೂ ಕೆಲ ಕುಟುಂಬಗಳ ಮನೆಯ ಹಕ್ಕುಪತ್ರಗಳಿಲ್ಲ ಇದರ ಬೆನ್ನಲ್ಲೆ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಹೊಸ ವರಸೆ …
Read More »*ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಪ್ರಯತ್ನದ ಫಲ.*
*ಡಿಸೆಂಬರ್. 20 ರಂದು ಮೂಡಲಗಿಯಲ್ಲಿ ಕಂದಾಯ ಸಚಿವ ಆರ್ ಅಶೋಕ್ ಅವರಿಂದ ಉಪ ನೋಂದಣಿ ಕಛೇರಿಯಲ್ಲಿ ನೋಂದಣಿ ಕಾರ್ಯಕ್ಕೆ ಚಾಲನೆ.* *ಮೂಡಲಗಿ ತಾಲ್ಲೂಕಿನ ಜನತೆಗೆ ಗುಡ್ ನ್ಯೂಸ್ ಕೊಟ್ಟ ಬಾಲಚಂದ್ರ ಜಾರಕಿಹೊಳಿ.* *ಮೂಡಲಗಿ*-ಮೂಡಲಗಿ ತಾಲ್ಲೂಕಿನ ಸಾರ್ವಜನಿಕರ ಬಹು ನಿರೀಕ್ಷಿತ ಉಪ ನೋಂದಣಿ ಕಛೇರಿಯಲ್ಲಿ ನೋಂದಣಿ ಕಾರ್ಯವನ್ನು ಆರಂಭಿಸಲಿಕ್ಕೆ ಇಲಾಖೆಯು ಅನುಮತಿ ನೀಡಿದ್ದರ ಹಿನ್ನೆಲೆಯಲ್ಲಿ ಕಂದಾಯ ಸಚಿವ ಆರ್.ಅಶೋಕ್ ಅವರು ಇದೇ ಡಿ. 20 ರಂದು ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ಅರಭಾವಿ ಶಾಸಕ …
Read More »ಗೋಕಾಕ ನಗರದಲ್ಲಿ ಆರು ಜನರಿಗೆ ನಾಯಿ ಕಡಿತ; ಗಂಭೀರ ಗಾಯ! ಆಸ್ಪತ್ರೆಗೆ ದಾಖಲು.
ಗೋಕಾಕ : ನಾಯಿಗಳ ಹಾವಳಿಯಿಂದ ರಸ್ತೆಯಲ್ಲಿ ಚಿಕ್ಕ ಮಕ್ಕಳು, ವಯೋವೃದ್ಧರು ಸಂಚಾರ ಮಾಡಲು ಹಿಂದೇಟು ಹಾಕುವಂತಾಗಿದೆ. ರಾತ್ರಿ ವೇಳೆ ವಾರ್ಡ್, ಕಾಲೊನಿ ನಿವಾಸಿಗಳ ನಿದ್ದೆಗೆಡಿಸುತ್ತಿರುವ ನಾಯಿಗಳ ಉಪಟಳ ಹೆಚ್ಚಾಗಿದೆ. ನಗರದ ಗುರುವಾರ ಪೇಟೆಯ ನಾಯಕ್ ಗಲ್ಲಿ ಯಲ್ಲಿ ನಾಯಿಗಳ ಕಾಟ ಹೆಚ್ಚಾಗಿದ್ದು, ಬೆಳ್ಳಂ ಬೆಳಿಗ್ಗೆ ಆರು ಜನರಿಗೆ ನಾಯಿ ಕಡಿದು ಗಂಭೀರ ಗಾಯವಾಗಿವೆ. ಗೋಕಾಕ ನಗರದಲ್ಲಿ ನಾಯಿಗಳ ಉಪಟಳದಿಂದ ನಾಗರಿಕರು ಬೇಸತ್ತಿದ್ದಾರೆ. ಇನ್ನು ನಾಯಿ ಕಡಿತದಿಂದ ಗಾಯಗೊಂಡವರನ್ನು ಗೋಕಾಕ ಸಾರ್ವಜನಿಕ …
Read More »ಕುರ್ಚಿ, ಸೌಂಡ್ ಸಿಸ್ಟಮ್ ವಿತರಿಸಿದ ಯುವ ನಾಯಕ ರಾಹುಲ್ ಜಾರಕಿಹೊಳಿ!
ಗೋಕಾಕ : ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಗೋಕಾಕ ಮತ ಕ್ಷೇತ್ರದ ಹಲವು ಸಮುದಾಯ ಭವನಗಳಿಗೆ , ಮಂದಿರಗಳಿಗೆ , ಚರ್ಚ, ಮಸಿದಿಗಳಿಗೆ ಕುರ್ಚಿ, ಸೌಂಡ್ ಸಿಸ್ಟಮ್ ವಿತರಿಸಿದರು. ಇಲ್ಲಿನ ಹಿಲ್ ಗಾಡರ್ನ್ ಕಚೇರಿಯಲ್ಲಿ ಸತೀಶ ಜಾರಕಿಹೊಳಿ ಫೌಂಡೇಶನ್ ವತಿಯಿಂದ ಗೋಕಾಕ ನಗರದ ಗೌಳಿ ಗಲ್ಲಿ ವಿಠ್ಠಲ ಮಂದಿರ, ಕುರುಬರ ದಡ್ಡಿ ಶ್ರೀ ರಾಘವೇಂದ್ರ ಮಠ, ಶಿಂಗಲಾಪುರ ನವಜೀವನ ಚರ್ಚ, ಉಪ್ಪಾರಟ್ಟಿ ಗ್ರಾಮದ ಶ್ರೀ ವಿಠ್ಠಲ ದೇವಸ್ಥಾನ, ಗೋಕಾಕ …
Read More »6ನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ಎಸ್ಎಸ್ ಬಿಸಿಎ ವಿಧ್ಯಾರ್ಥಿಗಳ ಸಾಧನೆ!
ಗೋಕಾಕ : ನಗರದ ಶ್ರೀ ಶೂನ್ಯ ಸಂಪಾದನ ಮಠದ ಶ್ರೀ ಸಿದ್ಧಲಿಂಗೇಶ್ವರ ಬಿಸಿಎ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಬಿಸಿಎ 6ನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಹರೀಶ್ ವನ್ನಲ್ಲಿ (92.19%) ಪ್ರಥಮ, ಅಮೃತಾ ತಡಸಳಮಠ(86.31%) ದ್ವಿತೀಯ, ಹಾಗೂ ಮಾಯವ್ವಾ ನಂದಿ (85.50%) ತೃತೀಯ ಸ್ಥಾನ ಗಳಿಸಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಜೀಗಳು, ಆಡಳಿತ ಮಂಡಳಿ, ಪ್ರಾಚಾರ್ಯರು, ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿದರು.
Read More »ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಮಾಡಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಪದವಿಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು
ಗೋಕಾಕ : ನಗರದ ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಪದವಿಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಪದವಿಪೂರ್ವ ಶಿಕ್ಷಣ ಇಲಾಖೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಮಾಡಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಬಾಸ್ಕೆಟಬಾಲನಲ್ಲಿ ವಿನೋದ್ ಗೌಡರ, ವಿಕಾಸಗೌಡರ, ಆರ್ಯನ್ ಉಪ್ಪಿನ ದ್ವಿತೀಯ ಸ್ಥಾನ, ಮಂಜುನಾಥ್ ಕಿಲಾರಿ ಸೈಕಲಿಂಗನಲ್ಲಿ ದ್ವಿತೀಯ ಸ್ಥಾನ, ವಿಠಲ ಜಾಲಿಗಾರ ಕುಸ್ತಿಯಲ್ಲಿ ದ್ವಿತೀಯ ಸ್ಥಾನ, ವಿಶಾಲ ಜುಗಳಿ ಭಾವಗೀತೆಯಲ್ಲಿ ಪ್ರಥಮ ಸ್ಥಾನ, ಆಕಾಶ ಗೇಜರಾಯ ಬ್ಯಾಟಮೆಂಟನಲ್ಲಿ ದ್ವಿತೀಯ ಸ್ಥಾನ, …
Read More »ಸಿಸಿ ಟಿವಿ ಕ್ಯಾಮರಾ ಕಣ್ಗಾವಲು ಇಲ್ಲದೇ ಕಂಗಾಲಾದ ಗೋಕಾಕ ನಗರದ ಜನತೆ!
ಗೋಕಾಕ : ಈಗಂತೂ ಕಳ್ಳರ ಕಾಟ ಹೆಚ್ಚಾಗಿ ಕಂಡುಬರುತ್ತಿವೆ. ಕೈಚಳಕ ತೋರಿಸಿ ಕದ್ದು ರಾತ್ರೋರಾತ್ರಿ ಪರಾರಿಯಾಗುವ ಅನೇಕ ಘಟನೆಗಳನ್ನು ಕೇಳಿರುತ್ತೇವೆ ಮತ್ತು ನೋಡಿರುತ್ತೇವೆ. ಅದೇ ರೀತಿ ಗೋಕಾಕ ನಗರದಲ್ಲಿ ಸಾಕಷ್ಟು ಕಳ್ಳತನ ಪ್ರಕರಣಗಳು ಹೆಚ್ಚುತ್ತಿವೆ ಕಾರಣ ಇಲ್ಲಿ ಸಿಸಿ ಟಿವಿ ಕ್ಯಾಮೆರಾ ಕೊರತೆಯಿಂದ ಕಳ್ಳರು ತಮ್ಮ ಕೈಚಳಕ ತೋರಿಸುತ್ತಿದ್ದಾರೆ. ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಿ ಅವಶ್ಯಕತೆ ಇದೆ ಮುಖ್ಯವಾಗಿದ್ದು ರಸ್ತೆ ಅಪಘಾತ, ಕಳ್ಳತನ ಪ್ರಕರಣಗಳ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ನೆರವಾಗುತ್ತಿದ್ದ …
Read More »