ಗೋಕಾಕ: ಹಜರತ್ ಮಹಮ್ಮದ ಪೈಗಂಬರ ಆದರ್ಶ ಮೌಲ್ಯಗಳನ್ನು ಜೀವನದಲ್ಲಿ ಅನುಸರಿಸುವುದ ರೊಂದಿಗೆ ಬದುಕು ಸಾರ್ಥಕತೆ ಪಡಿಸಿಕೊಳ್ಳಿ ಎಂದು ಅಂಜುಮನ್ ಏ ಇಸ್ಲಾಂ ಕಮೀಟಿಯ ಚೇರಮನ ಜಾವೇದ್ ಗೋಕಾಕ ಹೇಳಿದರು ಮಂಗಳವಾರದಂದು ನಗರದಲ್ಲಿ ಹಮ್ಮಿಕೊಂಡ ಹಜರತ ಮಹಮ್ಮದ ಪೈಗಂಬರ ಜಯಂತಿ ಅಂಗವಾಗಿ ಸಿಹಿ ವಿತರಿಸಿ,ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಮುಖಂಡರುಗಳಾದ ಇಸ್ಮಾಯಿಲ್ ಜಮಾದಾರ, ಮಹಾಂತೇಶ ಗವಿಮಠ, ಸಲ್ಲಿಂ ಮುಲ್ಲಾ ಇಮ್ರಾಹಿಮ ಮುಲ್ಲಾ, ರಿಯಾಜ ಗೋಕಾಕ, ಖಲೀಲ್ ಗೋಕಾಕ,ಕಯ್ಯೂಮ ಖೈರದಿ, ದಾದಾಪೀರ ಗೋಕಾಕ, …
Read More »ವಾಲ್ಮೀಕಿ ರಾಮಾಯಣ ಇಡೀ ಮನುಕುಲಕ್ಕೆ ಮಾರ್ಗದರ್ಶನ ನೀಡುವ ಗ್ರಂಥ: ರಾಹುಲ್ ಜಾರಕಿಹೊಳಿ
ನಿಪ್ಪಾಣಿ ತಾಲೂಕಿನ ಲಖನಾಪೂರದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ; ಚಿಕ್ಕೋಡಿ ತಾಲೂಕಿನ ವಾಳಕಿಯಲ್ಲಿ ಕಬಡ್ಡಿ ಪಂದ್ಯಾವಳಿಗೆ ಚಾಲನೆ ನಿಪ್ಪಾಣಿ: ತಾಲೂಕಿನ ಲಖನಾಪೂರ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಯುವಕ ಮಂಡಳ ಹಾಗೂ ಮಹರ್ಷಿ ವಾಲ್ಮೀಕಿ ಮಹಿಳಾ ಸ್ವಸಹಾಯ ಸಂಘದ ವತಿಯಿಂದ ಇಂದು ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಮಹರ್ಷಿ ವಾಲ್ಮೀಕಿ ಅವರು ರಚಿಸಿದ ರಾಮಾಯಣ ಮಹಾಕಾವ್ಯ ಇಡೀ …
Read More »ಸೌಭಾಗ್ಯಲಕ್ಷ್ಮಿ ಶುಗರ್ಸ್ ನಲ್ಲಿ ಸಕ್ಕರೆ ಉತ್ಪಾದನೆ; ಅಂಬಿಕಾ ಸಂತೋಷ ಜಾರಕಿಹೊಳಿ ಹಾಗೂ ಸುಪುತ್ರ ಸೂರ್ಯ ಶ್ರೇಷ್ಠ ಅವರಿಂದ ಪೂಜೆ
ಗೋಕಾಕ: ಯುವ ನಾಯಕ ಸಂತೋಷ ಜಾರಕಿಹೊಳಿಯವರ ನೇತೃತ್ವದ ಸೌಭಾಗ್ಯಲಕ್ಷ್ಮಿ ಶುಗರ್ಸ್ ನಲ್ಲಿ ಕೆಲ ದಿನಗಳ ಹಿಂದೆ ಕಬ್ಬು ನುರಿಸಲು ಪ್ರಾರಂಭ ಮಾಡಲಾಗಿತ್ತು. ಇಂದು ಈ ವರ್ಷದ ಮೊದಲನೇ ಸಕ್ಕರೆ ಉತ್ಪಾದನೆಯಾಗಿದ್ದು, ಇದಕ್ಕೆ ಶ್ರೀಮತಿ ಅಂಬಿಕಾ ಸಂತೋಷ ಜಾರಕಿಹೊಳಿ ಹಾಗೂ ಸುಪುತ್ರ ಸೂರ್ಯ ಶ್ರೇಷ್ಠ ಜಾರಕಿಹೊಳಿ ಅವರು ಪೂಜೆ ನೆರವೇರಿಸಿದರು. ಕಡಿಮೆ ಅವಧಿಯಲ್ಲಿ ಗರಿಷ್ಠಮಟ್ಟದ ಸಕ್ಕರೆ ಉತ್ಪಾದನೆ ಮಾಡಿದ್ದಕ್ಕೆ ಶ್ರೀಮತಿ ಅಂಬಿಕಾ ಸಂತೋಷ ಜಾರಕಿಹೊಳಿಯವರು ಮೆಚ್ಚುಗೆ ವ್ಯಕ್ತಪಡಿಸಿದರು. ಮಾಲೀಕರು ಕುಟುಂಬ ಸಮೇತ …
Read More »ಗೋಕಾಕ ತಹಶೀಲ್ದಾರ ಕಚೇರಿಯ ಆವರಣದಲ್ಲಿ ಸ್ವಚ್ಛತೆ ಕಾಪಾಡುವಂತೆ ಸತೀಶ ಜಾರಕಿಹೊಳಿ ಫೌಂಡೇಶನ್ ನಿಂದ ಮನವಿ
ಗೋಕಾಕ: ತಹಶೀಲ್ದಾರ ಕಚೇರಿಯ ಆವರಣದಲ್ಲಿ ಸಿ.ಸಿ.ಕ್ಯಾಮರಾ ಅಳವಡಿಸಿ, ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಸತೀಶ ಜಾರಕಿಹೊಳಿ ಫೌಂಡೇಶನ್ ವತಿಯಿಂದ ತಹಶೀಲ್ದಾರರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು. ಭಾನುವಾರ ತಹಶೀಲ್ದಾರರ ಕಚೇರಿಯ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೋಳ್ಳಲಾಯಿತು. ಕಚೇರಿಯ ಆವರಣದಲ್ಲಿ ಕಸ ಮತ್ತು ಗುಟಕಾ ಪಾಕೇಟ್ ಬಿಸಾಡಿ ಹೋಗಿದ್ದರು. ಇಲ್ಲಿರುವ ಅಸ್ಚಚ್ಛತೆ ( ಗಲಿಜು) ನ್ನು ಸತೀಶ ಜಾರಕಿಹೊಳಿ ಫೌಂಡೇಶನ್ ವತಿಯಿಂದ ಸ್ಚಚ್ಛಗೊಳ್ಳಿಸಲಾಗಿದೆ. ಅಧಿಕಾರಿಗಳು ತಕ್ಷಣವೇ ಕಚೇರಿಯಲ್ಲಿ ಆವರಣದಲ್ಲಿ ಸಿ.ಸಿ.ಕ್ಯಾಮರಾ ಅಳವಡಿಸಿ, ಕಿಡಿಗೇಡಿಗಳ ಉಪಟಳ ತಪ್ಪಿಸಬೇಕು. …
Read More »ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯಿಂದ ಪ್ರಸಕ್ತ ವರ್ಷ 4 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸುವ ಗುರಿ : ಶಾಸಕ ಬಾಲಚಂದ್ರ ಜಾರಕಿಹೊಳಿ
ಗೋಕಾಕ : “ಈ ಭಾಗದ ರೈತರ ಜೀವನಾಡಿಯಾಗಿರುವ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಪ್ರಸಕ್ತ ಸಾಲಿನಲ್ಲಿ 4 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸುವ ಗುರಿ ಹೊಂದಿದೆ” ಎಂದು ಕಾರ್ಖಾನೆಯ ಮಾರ್ಗದರ್ಶಕರೂ ಆಗಿರುವ ಕೆಎಂಎಫ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು. ಕಳೆದ ಗುರುವಾರದಂದು ನಗರದ ಹೊರವಲಯದಲ್ಲಿರುವ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ ನೀಡಿದ ಬಳಿಕ, ಮಾತನಾಡಿದ ಅವರು,ಕಾರ್ಖಾನೆಗೆ ಉತ್ತಮ ಇಳುವರಿ ಕಬ್ಬನ್ನು …
Read More »ನವರಾತ್ರಿ ಉತ್ಸವ;ಶ್ರೀ ದುರ್ಗಾಮಾತಾ ಮೂರ್ತಿಗೆ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ವಿಶೇಷ ಪೂಜೆ!
ಗೋಕಾಕ: ನವರಾತ್ರಿ ಉತ್ಸವದ ಕೊನೆಯ ದಿನವಾದ ಶುಕ್ರವಾರದಂದು ಆಚಾರ್ಯ ಗಲ್ಲಿ ನವರಾತ್ರಿ ಉತ್ಸವ ಕಮೀಟಿ ಹಾಗೂ ದುರ್ಗಾಮಾತಾ ದೌಡ್ ಸಂಘಟಕರು ಹಮ್ಮಿಕೊಂಡ ದುರ್ಗಾಮಾತಾ ಉತ್ಸವ ಮೂರ್ತಿಗೆ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರು ಶ್ರೀ ದುರ್ಗಾಮಾತೆಗೆ ವಿಶೇಷ ಪೂಜೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಆಚಾರ್ಯ ಗಲ್ಲಿ ನವರಾತ್ರಿ ಉತ್ಸವ ಕಮೀಟಿ ಹಾಗೂ ದುರ್ಗಾಮಾತಾ ದೌಡ್ ಸಂಘಟಕರು ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರನ್ನು ಸತ್ಕರಿಸಿದರು. ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳ, …
Read More »ದುಷ್ಟ ಶಕ್ತಿಯ ಸಂಹಾರದ ಪ್ರತೀಕವಾಗಿ ವಿಜಯ ದಶಮಿ- ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ!
ಗೋಕಾಕ: ದುಷ್ಟ ಶಕ್ತಿಯ ಸಂಹಾರದ ಪ್ರತೀಕವಾಗಿ ವಿಜಯ ದಶಮಿಯನ್ನು ಆಚರಿಸುತ್ತಿದ್ದು, ನಮ್ಮಲ್ಲಿರುವ ದುಷ್ಟ ಆಲೋಚನೆ ಹಾಗೂ ದುಶ್ಚಟಗಳಿಂದ ದೂರವಿದ್ದು, ದೇವಿಯ ಕೃಪೆಗೆ ಪಾತ್ರರಾಗೋಣ ಎಂದು ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಹೇಳಿದರು. ಶುಕ್ರವಾರದಂದು ನಗರದ ಮರಾಠಗಲ್ಲಿಯಲ್ಲಿ ನವರಾತ್ರಿ ಉತ್ಸವ ಮಂಡಳಿಯವರು ಆಯೋಜಿಸಿದ್ದ ನವರಾತ್ರಿ ಮಹೋತ್ಸವದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಾ ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳಿಗೆ ವಿಶೇಷ ಸ್ಥಾನವಿದೆ. ಅವುಗಳು ಪ್ರೀತಿ ವಿಶ್ವಾಸದ ಸಂದೇಶವನ್ನು ನಮಗೆ ನೀಡುತ್ತವೆ. ಇವುಗಳ ಆಚರಣೆಯಿಂದ ನಾವೆಲ್ಲರೂ ದೇವರ …
Read More »ಸತೀಶ ಶುಗರ್ಸ್: ಪ್ರಸಕ್ತ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ
ಗೋಕಾಕ: ಸಮೀಪದ ಹುಣಶ್ಯಾಳ ಪಿ.ಜಿ. ಯ ಸತೀಶ ಶುಗರ್ಸ ಲಿಮಿಟೆಡ್ ಸಕ್ಕರೆ ಕಾರ್ಖಾನೆಯ 2021-22ನೇ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಶುಕ್ರವಾರ ಜಿಲ್ಲೆಯ ರೈತ ಮುಖಂಡರು, ಕಾರ್ಖಾನೆಯ ಆಡಳಿತ ಮಂಡಳಿ ಸದಸ್ಯರು ಹಾಗೂ ಅಧಿಕಾರಿ ವರ್ಗದವರು ವಿದ್ಯುಕ್ತವಾಗಿ ಚಾಲನೆ ನೀಡಿದರು. ಸಂಸ್ಥೆಯ ಚೇರಮನ್ ಹಾಗೂ ಮುಖ್ಯ ಹಣಕಾಸು ಅಧಿಕಾರಿ ಪ್ರದೀಪಕುಮಾರ ಇಂಡಿ ಅವರು ಮಾತನಾಡಿ, ಜಿಲ್ಲೆಯ ಸತೀಶ ಶುಗರ್ಸ ಕಾರ್ಖಾನೆಯ ರೈತ ಬಾಂಧವರು ಪ್ರಸಕ್ತ ಹಂಗಾಮಿನ ಮೊದಲ ದಿನವೇ 1253 …
Read More »ನಮ್ಮಿಂದ ಒಳ್ಳೆಯತ ರವಾನೆಯಾದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ-ರಮೇಶ ಜಾರಕಿಹೊಳಿ.!
ಗೋಕಾಕ: ಧಾರ್ಮಿಕ ಕಾರ್ಯಕ್ರಮ ನಡೆಸುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುವುದರ ಜೊತೆಗೆ ಶಾಂತಿ, ನೆಮ್ಮದಿ ಎಂಬ ಫಲ ಸಿಗುತ್ತದೆ ಎಂದು ಮಾಜಿ ಸಚಿವ ಹಾಗೂ ಶಾಸಕ ರಮೇಶ ಜಾರಕಿಹೊಳಿ ಹೇಳಿದರು. ಅವರು, ಶನಿವಾರದಂದು ನಗರದ ಕುರಬರ ದಡ್ಡಿಯ ಶ್ರೀ ವಿಠ್ಠಲ ದೇವರ ಹಾಗೂ ಮುರಸಿದ್ದೇಶ್ವರ ದೇವಸ್ಥಾನದ ಜಾತ್ರಾಮಹೋತ್ವ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವರ ದರ್ಶನ ಪಡೆದು, ಜಾತ್ರಾ ಕಮೀಟಿಯಿಂದ ಸತ್ಕಾರ ಸ್ವೀಕರಿಸಿ ಮಾತನಾಡಿದರು. ಭಕ್ತಿ ಎಂಬುದು ಮನುಷ್ಯನಲ್ಲಿ ಇದ್ದರೆ ಸಾಕು. ಪ್ರತಿ ದಿನ …
Read More »ವಿದ್ಯೆ ಹೆಣ್ಣುಮಕ್ಕಳಿಗೆ ಭೂಷಣವಿದ್ದಂತೆ : ಕಾರಜೋಳ
ಗೋಕಾಕ: ಶಿಕ್ಷಣಕ್ಕೆ ಶ್ರೀಮಂತ,ಬಡತನ ಅನ್ನೋದು ಗೊತ್ತಿರುವುದಿಲ್ಲ ಅದರಂತೆ ಈಗಿನ ಮಕ್ಕಳ ಪಾಲನೆಯಲ್ಲಿ ಜವಾಬ್ದಾರಿಯನ ಪಾಲಕಾರು ಮುತುರ್ವಹಿಸಿ ಜವಾಬ್ದಾರಿಯನ್ನು ನಿಬಾಯಿಸಬೇಕಾಗಿದೆ ಎಂದು ಗೋಕಾಕ ತಾಲೂಕಿನ ಖನಗಾಂವ ಕಿತ್ತೂರ ರಾಣಿ ಚೆನ್ನಮ್ಮಾ ವಸತಿ ಶಾಲೆಯಲ್ಲಿ ದಸರಾ ಹಬ್ವದ ಪ್ರಯುಕ್ತ ವಿದ್ಯಾರ್ಥಿನಿಯರಿಗೆ ರಜೆ ನೀಡಿದ ನಿಮಿತ್ಯ ನಡೆದ ಪಾಲಕರ ಸಭೆಯಲ್ಲಿ ಪಾಲಕರನ್ನು ಉದ್ದೇಶಿಸಿ ಮಾತನಾಡಿದ ಪ್ರಾಂಶುಪಾಲರಾದ ಕಾರಜೋಳ ಇವರು ಸಂಸ್ಕಾರ ನಮ್ಮಲ್ಲಿದ್ದ ಪೌರುಷವನ್ನು ಎತ್ತಿ ಹಿಡಿಯುವಂತಾಗಬೇಕು, ಅದಕ್ಕಾಗಿ ಹೆಣ್ಣು ಎಂಬ ಬೇದ ಭಾವಮಾಡದೆ ಹೆಚ್ಚಿನ …
Read More »