Breaking News

ಗೋಕಾಕ

ಶ್ರೀ ಲಕ್ಷ್ಮಣರಾವ್ ಜಾರಕಿಹೊಳಿ ಕನ್ನಡ ಮಾಧ್ಯಮ ಶಾಲೆಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನತ ಜಾರಕಿಹೊಳಿ ಅವರಿಂದ ಸತ್ಕಾರ!

ಗೋಕಾಕ : ಲಕ್ಷ್ಮೀ ಎಜುಕೇಶನ್ ಟ್ರಸ್ಟ್‌ನ ಶ್ರೀ ಲಕ್ಷ್ಮಣರಾವ್ ಜಾರಕಿಹೊಳಿ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ದಾಮಿನಿ ಚುಂಚನೂರ ಎಸ್‌ಎಸ್‌ಎಲ್‌ಸಿಯಲ್ಲಿ ಗೋಕಾಕ ತಾಲೂಕಿಗೆ 619/625 ಅಂಕಗಳಿಸಿ ಪ್ರಥಮ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ ಅದೇ ರೀತಿ ಸ್ನೇಹಾ ಕರೋಶಿ 615/625 ಹಾಗೂ ಶಾಲಿನಿ ಸಸಾಲಟ್ಟಿ 599/625 ದ್ವಿತೀಯ ತೃತೀಯ ಸ್ಥಾನ ಪಡೆದಿದ್ದಾರೆ. ಶಾಲೆಯಲ್ಲಿ. ಈ ಸಂತೋಷದ ಕ್ಷಣದಲ್ಲಿ ಲಕ್ಷ್ಮಿ ಎಜುಕೇಶನ್ ಟ್ರಸ್ಟ್‌ನ ವ್ಯವಸ್ಥಾಪಕ ನಿರ್ದೇಶಕ ಸನತ್ ಜಾರಕಿಹೊಳಿ ಅವರ …

Read More »

ನಾಯಕ ಸ್ಟುಡೆಂಟ್ ಫೆಡರೇಷನ್ ವಸತಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ 100 ಕ್ಕೆ 100 ಫಲಿತಾಂಶ

ಗೋಕಾಕ: ನಗರದ ನಾಯಕ ಸ್ಟುಡೆಂಟ್ ಫೆಡರೇಷನ್ ವಸತಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಕಳೆದ ತಿಂಗಳು ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇಕಡಾ 100ಕ್ಕೆ 100 ರಷ್ಟು ಫಲಿತಾಂಶ ಪಡೆದು A ಶ್ರೇಣಿ ಯೊಂದಿಗೆ ಉತ್ತೀರ್ಣರಾಗಿದ್ದಾರೆ. ಪರೀಕ್ಷೆಗೆ ಬರೆದ ಎಲ್ಲಾ 41 ವಿದ್ಯಾರ್ಥಿಗಳು ಉತ್ತೀರ್ಣರಾಗಿ ದಾಖಲೆ ನಿರ್ಮಿಸಿದ್ದಾರೆ. A + ಶ್ರೇಣಿಯೊಂದಿಗೆ 5 ವಿದ್ಯಾರ್ಥಿಗಳು, A ಶ್ರೇಣಿಯೊಂದಿಗೆ 30 ವಿದ್ಯಾರ್ಥಿಗಳು ಹಾಗೂ B+ ಶ್ರೇಣಿಯೊಂದಿಗೆ 6 ವಿದ್ಯಾರ್ಥಿಗಳು ಉರ್ತಿರ್ಣರಾಗಿದ್ದಾರೆ. ವಿದ್ಯಾರ್ಥಿಗಳು ಈ ಸಾಧನೆಗೆ ಸಂಸ್ಥೆಯ …

Read More »

ರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆದ ಗೋಕಾಕದ ಅಪೇಕ್ಷಾ ಸಾಂಗ್ಲಿಕರ!

ಗೋಕಾಕ ತಾಲೂಕಿನ ಹಿರೇನಂದಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿ ಅಪೇಕ್ಷಾ ಗುರುಪ್ರಸಾದ್ ಸಾಂಗ್ಲಿಕರ ಅವರು ರಾಜ್ಯಕ್ಕೆ ನಾಲ್ಕನೇ ಸ್ಥಾನ ಹಾಗೂ ವಲಯಕ್ಕೆ ಎರಡನೇ ಸ್ಥಾನ ಪಡೆದಿದ್ದಾರೆ. ಕನ್ನಡದಲ್ಲಿ 125 ಕ್ಕೆ 124 ಅಂಕ, ಇಂಗ್ಲಿಷ್, ಹಿಂದಿ, ಸಮಾಜ- ವಿಜ್ಞಾನದಲ್ಲಿ ತಲಾ 100 ಕ್ಕೆ ನೂರರಷ್ಟು ಅಂಕ, ಗಣಿತ ಹಾಗೂ ವಿಜ್ಞಾನದಲ್ಲಿ 99 ರಷ್ಟು ಅಂಕ , ಒಟ್ಟು 625 ಅಂಕಗಳಿಗೆ 622 ಅಂಕ ಪಡೆದು ಶೇಕಡಾ 99.5% …

Read More »

SSLC ಫಲಿತಾಂಶ : ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಗೋಕಾಕ ವಲಯಕ್ಕೆ ದ್ವಿತೀಯ ಸ್ಥಾನ : ಶಾಸಕ ರಮೇಶ ಜಾರಕಿಹೊಳಿ ಹರ್ಷ

ಗೋಕಾಕ : ಕಳೆದ ಮಾರ್ಚ-ಎಪ್ರೀಲ್ ತಿಂಗಳಲ್ಲಿ ಜರುಗಿದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಗೋಕಾಕ ಶೈಕ್ಷಣಿಕ ವಲಯ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗೆ ದ್ವಿತೀಯ ಸ್ಥಾನ ಲಭಿಸಿರುವುದಕ್ಕೆ ಮಾಜಿ ಸಚಿವ, ಶಾಸಕ ರಮೇಶ್ ಜಾರಕಿಹೊಳಿ ಹರ್ಷ ವ್ಯಕ್ತಪಡಿಸಿದ್ದಾರೆ. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಗೋಕಾಕ ಶೈಕ್ಷಣಿಕ ವಲಯ ಈ ಬಾರಿಯೂ ದ್ವಿತೀಯ ಸ್ಥಾನ ಗಳಿಸಿದ್ದು, ಶೇ ಶೇಕಡಾ 94.58 ರಷ್ಟು ಫಲಿತಾಂಶ ಬಂದಿದೆ. ಗೋಕಾಕ ವಲಯ ದ್ವಿತೀಯ ಸ್ಥಾನ ಗಿಟ್ಟಿಸಲು ಕಾರಣೀಕರ್ತರಾದ ಎಲ್ಲ ವಿದ್ಯಾರ್ಥಿ ಬಳಗಕ್ಕೆ …

Read More »

ಎಸ್.ಎಸ್.ಎಲ್.ಸಿ ಫಲಿತಾಂಶ: ಗೋಕಾಕ ವಲಯ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗೆ ದ್ವಿತೀಯ ಸ್ಥಾನ : ಬಿಇಒ ಜಿ.ಬಿ.ಬಳಗಾರ

ಗೋಕಾಕ: ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶದಲ್ಲಿ ಗೋಕಾಕ ವಲಯವು ಶೇಕಡಾ 94.58 ಪಡೆದು, A+ ಶ್ರೇಣಿಯೊಂದಿಗೆ ( ಎ+) ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದುಕೊಂಡಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ತಿಳಿಸಿದ್ದಾರೆ.   ಪರೀಕ್ಷೆ ಬರೆದ 4517 ವಿದ್ಯಾರ್ಥಿಗಳಲ್ಲಿ 4272 ವಿದ್ಯಾರ್ಥಿಗಳು ಉತ್ತಿರ್ಣರಾಗಿದ್ದಾರೆ. 230 ವಿದ್ಯಾರ್ಥಿಗಳು 600ಕ್ಕಿಂತ ಹೆಚ್ಚಿನ ಅಂಕ ಪಡೆದಿದ್ದಾರೆ. ನಾಲ್ಕು ವಿದ್ಯಾರ್ಥಿಗಳು ರಾಜ್ಯಕ್ಕೆ ಮೂರನೇ ಹಾಗೂ ವಲಯಕ್ಕೆ ಪ್ರಥಮ ಸ್ಥಾನ ಪಡೆಯುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. …

Read More »

ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಮೂಡಲಗಿ ಶೈಕ್ಷಣಿಕ ವಲಯಕ್ಕೆ ಮತ್ತೇ ಅಗ್ರ ಸ್ಥಾನ: ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹರ್ಷ

ಮೂಡಲಗಿ: ಕಳೆದ ಮಾರ್ಚ-ಎಪ್ರೀಲ್ ತಿಂಗಳಲ್ಲಿ ಜರುಗಿದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಮೂಡಲಗಿ ಶೈಕ್ಷಣಿಕ ವಲಯ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗೆ ಪ್ರಥಮ ಸ್ಥಾನ ಲಭಿಸಿರುವುದಕ್ಕೆ ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿಯೇ ಮೂಡಲಗಿ ಶೈಕ್ಷಣಿಕ ವಲಯ ಈ ಬಾರಿಯೂ ಪ್ರಥಮ ರ್ಯಾಂಕ್ ಗಳಿಸಿದ್ದು, ಶೇ 93.70 ರಷ್ಟು ಫಲಿತಾಂಶ ಬಂದಿದೆ. ಮೂಡಲಗಿ ವಲಯ ಪ್ರಥಮ ಸ್ಥಾನ ಗಿಟ್ಟಿಸಲು ಕಾರಣೀಕರ್ತರಾದ ಎಲ್ಲ ವಿದ್ಯಾರ್ಥಿ ಬಳಗಕ್ಕೆ …

Read More »

ಗೋಕಾಕ ಶೈಕ್ಷಣಿಕ ವಲಯದಲ್ಲಿ ಬಳಕೆಗೆ ಯೋಗ್ಯವಲ್ಲದ ಶಾಲಾ ಕೊಠಡಿಗಳನ್ನು ದುರುಸ್ಥಿಗೊಳಿಸುವಂತೆ ಆಗ್ರಹಿಸಿ ಕರವೇ ಮನವಿ

ಗೋಕಾಕ ಮೇ 12 : ಗೋಕಾಕ ಶೈಕ್ಷಣಿಕ ವಲಯದಲ್ಲಿ ಬಳಕೆಗೆ ಯೋಗ್ಯವಲ್ಲದ ಶಾಲಾ ಕೊಠಡಿಗಳನ್ನು ಗುರುತಿಸಿ ಅವುಗಳನ್ನು ದುರುಸ್ಥಿ ಮಾಡಿ, ಪ್ರಾಥಮಿಕ ತರಗತಿಗಳಲ್ಲಿಯೂ ಸಹ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಗುರುವಾರದಂದು ನಗರದಲ್ಲಿ ಪ್ರತಿಭಟನೆ ನಡೆಸಿ ದೈಹಿಕ ಶಿಕ್ಷಣ ಪರಿವೀಕ್ಷಕ ಎಲ್.ಕೆ ತೋರನಗಟ್ಟಿ ಅವರಿಗೆ ಮನವಿ ಅರ್ಪಿಸಿದರು. ಇದೇ ತಿಂಗಳು 15 ರಂದು ರಾಜ್ಯಾದ್ಯಂತ ಶಾಲಾ ಪ್ರಾರಂಭೋತ್ಸವ ನಡೆಯಲಿದ್ದು, ಸರಕಾರ ಪ್ರಸ್ತುತ ಶೈಕ್ಷಣಿಕ ವರ್ಷದ …

Read More »

ರಾಜಋಷಿ ಮಹರ್ಷಿ ಭಗೀರಥ ಅವರ ಪ್ರಯತ್ನ, ಛಲ ಯುವ ಜನತೆಗೆ ಸ್ಪೂರ್ತಿ: ಯುವ ನಾಯಕಿ ಪ್ರಿಯಾಂಕಾ ಜಾರಕಿಹೊಳಿ

ಗೋಕಾಕ: ನಗರದ ಹಿಲ್ ಗಾರ್ಡನ್ ಕಛೇರಿಯಲ್ಲಿ ಯುವ ನಾಯಕಿ ಪ್ರಿಯಾಂಕಾ ಜಾರಕಿಹೊಳಿ ಅವರ ನೇತೃತ್ವದಲ್ಲಿ ರಾಜಋಷಿ ಮಹರ್ಷಿ ಭಗೀರಥ ಜಯಂತಿ ಆಚರಿಸಿದರು. ಈ ವೇಳೆ ಯುವ ನಾಯಕಿ ಪ್ರಿಯಾಂಕಾ ಜಾರಕಿಹೊಳಿ ಅವರು ಮಾತನಾಡಿ ಶ್ರೀ ರಾಜಋಷಿ ಮಹರ್ಷಿ ಭಗೀರಥ ಅವರು ತನ್ನ ಪೂರ್ವಜರಿಗೆ ಮೋಕ್ಷ ನೀಡುವ ಉದ್ದೇಶದಿಂದ, ಗಂಗೆಯನ್ನು ಭೂಮಿಗೆ ತರಲು ತಪಸ್ಸು ಕೈಗೊಂಡರು. ತಮ್ಮ ಸತತ ಪ್ರಯತ್ನ, ತಪಸ್ಸು ಹಾಗೂ ಛಲದಿಂದ ಗಂಗೆಯನ್ನು ಭೂಮಿಗೆ ತಂದರು. ಅಂತಹ ರಾಜಋಷಿ …

Read More »

ವಿಶ್ವ ಗುರು ಜಗಜ್ಯೋತಿ ಬಸವೇಶ್ವರ- ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ ಸಮಾರಂಭದಲ್ಲಿ ಯುವ ನಾಯಕರು ಭಾಗಿ!

ಗೋಕಾಕ: 12ನೇ ಶತಮಾನದ ವಿಷಮ ಪರಿಸ್ಥಿತಿಯಲ್ಲಿ ಜಾತ್ಯಾತೀತ ಸಮಾಜ ನಿರ್ಮಾಣ, ಮಹಿಳೆಯರಿಗೆ ಸಮಾನತೆ ನೀಡಿ ಸಾಮಾಜಿಕ ಬದಲಾವಣೆ ತರಲು ಶ್ರಮಿಸಿದ ವ್ಯಕ್ತಿ ಬಸವಣ್ಣನವರು. ಪ್ರಸ್ತುತ ಸಮಾಜದಲ್ಲಿ ಬಸವಣ್ಣನವರ ಚಿಂತನೆ, ಆಚಾರ-ವಿಚಾರಗಳು, ತತ್ತ್ವಾದರ್ಶಗಳ ಪಾಲನೆ ಆಗಬೇಕು ಎಂದು ಯುವ ನಾಯಕ ರಾಹುಲ್‌ ಜಾರಕಿಹೊಳಿ ಹೇಳಿದರು. ತಾಲೂಕಿನ ರಡೇರಟ್ಟಿ ಗ್ರಾಮದಲ್ಲಿ ವಿಶ್ವ ಗುರು ಜಗಜ್ಯೋತಿ ಬಸವೇಶ್ವರ ಪ್ರತಿಮೆ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ ಸಮಾರಂಭದಲ್ಲಿ ಮಾತನಾಡಿದ ಅವರು, ಬಸವಣ್ಣನವರು ಸುಂದರ …

Read More »

ಕರ್ನಾಟಕ ರಕ್ಷಣಾ ವೇದಿಕೆ ಗಜಸೇನೆ ವತಿಯಿಂದ ಅಪ್ಪು ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಹಾಗೂ ಪುಷ್ಪಾರ್ಚನೆ!

ಗೋಕಾಕ : ಮೊನ್ನೆಯ ದಿನ ತಿರುಪತಿ ತಿಮ್ಮಪ್ಪನ ದೇವಸ್ಥಾನದ ಹತ್ತಿರ ನಮ್ಮ ಸಂಘಟನೆಯ ರಾಜ್ಯಾಧ್ಯಕ್ಷರಾದ ಬಿವಿ ರಾಘವೇಂದ್ರ ಅವರು ಹೋದಾಗ ಅಲ್ಲಿ ಅಲ್ಲಿಯ ಕೆಲ ಭದ್ರತಾ ಸಿಬ್ಬಂದಿಗಳು ಡಾಕ್ಟರ್ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ವಾಹನದ ಮೇಲೆ ಇರುವ ಸ್ಪೀಕರನ್ನು ತೆಗೆದುಹಾಕಿದರೆ ಮಾತ್ರ ನಿಮ್ಮ ವಾಹನವನ್ನು ಮೇಲೆ ಹೋಗಲು ಬಿಡುತ್ತೇವೆ ಇಲ್ಲವಾದರೆ ಬಿಡುವುದಿಲ್ಲ ಎಂದು ಹಾಗೂ ಕನ್ನಡ ಶಲ್ಯ ಡೆಪಾಸಿಟ್ ಮಾಡಿದರೆ ಮಾತ್ರ ವಾಹನ ಬಿಡುತ್ತೇವೆ ಎಂದು ಪವರ್ …

Read More »