ಗದಗ : ಮುಂಡರಗಿ ರೈತರಿಗೆ ಸಹಾಯಧನ ಬಿಡುಗಡೆ ಲಂಚ ಪಡೆಯುತ್ತಿದ್ದ ತೋಟಗಾರಿಕೆ ಇಲಾಖೆಯ ಅಧಿಕಾರಿಯೊಬ್ಬರು ಮಂಗಳವಾರ ಎಸಿಬಿ ಬಲೆಗೆ ಸಿಕ್ಕಿಬಿದ್ದಿದ್ದಾರೆ.
ಮುಂಡರಗಿ ತಾಲೂಕು ತೋಟಗಾರಿಕೆ ಸಹಾಯಕ ಅಧಿಕಾರಿ ಸುರೇಶ್ ಹನುಮಂತಪ್ಪ ಬಾರಕೇರ್ ಎಂಬುವವರು ತಮ್ಮ ಕಚೇರಿಯಲ್ಲಿ ರೈತರೊಬ್ಬರಿಂದ 15 ಸಾವಿರ ರೂ. ಲಂಚ ಪಡೆಯುತ್ತಿದ್ದಾಗ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು, ಆರೋಪಿಯನ್ನು ಬಂಧಿಸಿದ್ದಾರೆ.

ತಾಲೂಕಿನ ರೈತರೊಬ್ಬರು ತಮ್ಮ ಎರಡು ಹೆಕ್ಟರ್ ಜಮೀನಿನಲ್ಲಿ ಪೊಪ್ಪಾಯಿ ಬೆಳೆ ಬೆಳೆದಿದ್ದರು. ಅದಕ್ಕೆ ಸರಕಾರದಿಂದ ಪ್ರತಿ ಹೆಕ್ಟರ್‌ಗೆ 1.75 ಲಕ್ಷ ರೂ. ಗಳಂತೆ ಎರಡು ಹೆಕ್ಟರ್‌ಗೆ 3.50 ಲಕ್ಷ ರೂ. ಸಹಾಯಧನ ಮಂಜೂರಾಗಿತ್ತು.
ಈ ಹಣವನ್ನು ನೀಡಲು 14 ಸಾವಿರ ರೂ. ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದಾರೆ ಎಂದು ಎಸಿಬಿ ಅಧಿಕಾರಿಗಳಿಗೆ ದೂರು ನೀಡಲಾಗಿತ್ತು.
ಖಚಿತ ಮಾಹಿತಿಯ ಮೇರೆಗೆ ACB ಡಿವೈಎಸ್ಪಿ ವಾಸುದೇವರಾಮ್ ನೇತೃತ್ವದ ತಂಡ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ
CKNEWSKANNADA / BRASTACHARDARSHAN CK NEWS KANNADA