Breaking News

ದುಪಧಾಳ ಮೆಥೋಡಿಸ್ಟ್ ಸಭಿಕರಿಂದ ಸಂಭ್ರಮದಿಂದ ಕ್ರಿಸ್‍ಮಸ್ ಆಚರಣೆ…


ಗೋಕಾಕ: ತಾಲೂಕಿನ ದುಪಧಾಳ ಮೆಥೋಡಿಸ್ಟ್ ಸೇರಿದಂತೆ ತಾಲೂಕಾದ್ಯಂತ ಕ್ರೈಸ್ತ ಸಮುದಾಯದವರು ಕ್ರಿಸ್‍ಮಸ್ ಹಬ್ಬವನ್ನು ಶ್ರದ್ಧೆ, ಭಕ್ತಿಯಿಂದ ಡಿಸೆಂಬರ್ 25 ಶುಕ್ರವಾರ ಅಂದು ಅತಿ ವಿಜೃಂಭಣೆಯಿಂದ ಧುಪದಾಳ ಮೆಥೋಡಿಸ್ಟ್ ಚರ್ಚಿನ ಸಭಿಕರು ಆಚರಿಸಿದರು. ಇನ್ನು ಮೆಥೋಡಿಸ್ಟ್ ಕ್ರೈಸ್ತ ಸಮುದಾಯದ ಸಭಿಕರು ಮನೆ ಮನೆಗಳಲ್ಲಿ ವಿದ್ಯುತ್ ಅಲಂಕಾರ ಮಾಡಲಾಗಿದು, ಏಸು ಕ್ರಿಸ್ತನ ಹುಟ್ಟು ಹಬ್ಬದ ಸಂಭ್ರಮ ಎಲ್ಲೆಡೆಯೂ ಮನೆ ಮಾಡಿತ್ತು. ಬಂಧು, ಬಾಂಧವರ ಭೇಟಿ, ಶುಭಾಶಯ ವಿನಿಮಯ, ಕೇಕ್ ಕತ್ತರಿಸುವ ಸಂಭ್ರಮ, ಸಾಮೂಹಿಕ ಪ್ರಾರ್ಥನೆ ಸಾಮಾನ್ಯವಾಗಿತ್ತು.

ಪ್ರತಿವರ್ಷದಂತೆಯು ಈ ಬಾರಿ ಕ್ರೈಸ್ತ ಧುಪದಾಳ ಮೆಥೋಡಿಸ್ಟ್ ಕ್ರೈಸ್ತ ಬಾಂಧವರು ಕ್ರಿಸ್‍ಮಸ್ ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸಿದ್ದು, ಈ ವರ್ಷ ಕೊರೋನಾ ಸಂಕಷ್ಟದ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಎಲ್ಲ ಮುಂಜಾಗ್ರತೆ ಕೈಗೊಂಡು ಏಸು ಕ್ರಿಸ್ತನ ಸ್ಮರಣೆಯಲ್ಲಿ ಹಬ್ಬವನ್ನು ಆಚರಿಸಿದ್ದು ವಿಶೇಷವಾಗಿತ್ತು. ಕ್ರೈಸ್ತರ ಮನೆಗಳಲ್ಲಿ ಏಸು ಕ್ರಿಸ್ತನ ಚರ್ಚ್ ಎದುರು ಸೇರಿದಂತೆ ಧುಪದಾಳ ಮೆಥೋಡಿಸ್ಟ್ ಆವರಣದಲ್ಲಿರುವ ಎಲ್ಲ ಮನೆಮನೆಗಳಲ್ಲಿ ವಿದ್ಯುತ್ ಅಲಂಕಾರ ಮಾಡಲಾಗಿತ್ತು. ಇನ್ನು ಅದೇರೀತಿಯಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ಗ್ರೂಪ್‍ಗಳಲ್ಲಿ ಏಸು ಕ್ರಿಸ್ತನ ಸಂಸ್ಮರಣೆ, ಸಾಮೂಹಿಕ ಪ್ರಾರ್ಥನೆ ನಡೆದವು. ಪ್ರತಿವರ್ಷ ಮಧ್ಯರಾತ್ರಿ ಮನೆ ಮನೆಗಳಿಗೆ ಹೋಗಿ ಕ್ಯಾರಲ್ ಸಿಂಗ್ ಏಸು ಕ್ರಿಸ್ತನ ಜನ್ಮ ನಿಮಿತ್ಯವಾಗಿ ಭಾನುವಾರ ರಾತ್ರಿಯೇ ಸಭಿಕರಿಂದ ಆಚರಿಸಲಾಯಿತು.

ಈ ವೇಳೆ ಸಂದೇಶ ನೀಡಿದ ಧುಪದಾಳ ಮೆಥೋಡಿಸ್ಟ್ ಕ್ರೈಸ್ತ ಧರ್ಮಗುರುಗಳಾದ ರೆವರೆಂಡ್. ಎಚ್.ಎಸ್.ಸಲೋಮೊನ್ ಅನಾರೋಗ್ಯದ ಹಿನ್ನೆಲೆಯಲ್ಲಿ ಪಾಲ್ಗೊಳ್ಳದೆ ಇದ್ದಿದ್ದು, ಅವರ ಒಂದು ಸ್ಥಾನದಲ್ಲಿ ರಘು ಸಾಮುವೆಲ್ ಮೂಡಲಗಿ ದೇವ ಸೇವಕರು ದೈವ ಸಂದೇಶ ನೀಡಿದ್ದು, ಕ್ರಿಸ್‍ಮಸ್ ಎಂದರೆ ಪ್ರೀತಿ, ಬಾಂಧವ್ಯ, ವಿಶ್ವಾಸ, ಒಳ್ಳೆಯತನದ ಸಂಕೇತವಾಗಿದೆ. ನಮ್ಮ ಪಾಪ-ಪುಣ್ಯಗಳ ಕ್ರಿಸ್ತನ ಸಂದೇಶಗಳು ಮನುಕುಲಕ್ಕೆ ಮಾರ್ಗದರ್ಶನ ನೀಡುವಂಥವುಗಳು. ಬಡವರು, ಅನಾಥರು, ಅಶಕ್ತರು ಯಾವ ಕಾರಣದಿಂದಲೂ ಉಪವಾಸದಿಂದ ನರಳಬಾರದು. ಹಾಗೆ ಆದರೆ ಕ್ರಿಸ್‍ಮಸ್ ಪರಿಪೂರ್ಣವಾಗುವುದಿಲ್ಲ.ಕೊರೋನಾ ಸಂಕಷ್ಟದಿಂದ ಸಮಸ್ಯೆಗಳು ಬೆಟ್ಟದಷ್ಟಾಗಿವೆ. ಸಮಸ್ಯೆಗಳನ್ನು ಎದುರಿಸುವ ಧೈರ್ಯ, ಶಕ್ತಿಯನ್ನು ದಯಾಘನನಾದ ಏಸು ಪ್ರಭು ಎಲ್ಲರಿಗೂ ನೀಡಲಿ ಎಂದು ಸಂದೇಶ ನೀಡಿದರು.

ಒಟ್ಟಿನಲ್ಲಿ ಕೊರೋನಾ ಕರಿನೆರಳಿನಲ್ಲಿ, ನೈಟ್ ಕಫ್ರ್ಯೂ ಹಿಂತೆಗೆದುಕೊಂಡಿದ್ದರೂ ಕ್ರೈಸ್ತ ಸಮುದಾಯದವರು ರಾತ್ರಿ 10ರೊಳಗೆ ಕ್ರಿಸ್‍ಮಸ್ ಆಚರಿಸಿ ಮುಂಜಾಗ್ರತೆ ಸಂದೇಶ ಸಾರಿದ್ದು ಧುಪದಾಳ ಮೆಥೋಡಿಸ್ಟ್ ಚರ್ಚ್ ಸಭಿಕರಿಂದ ಗಮನ ಸೆಳೆಯಿತು.

ಇನ್ನು ಇದೇ ಸಂದರ್ಭದಲ್ಲಿ ಚರ್ಚಿನಲ್ಲಿ ಸಭಿಕರು, ಚರ್ಚಿನಲ್ಲಿ ಹಿರಿಯರು ಬಂಧು-ಬಾಂಧವರು ಅಕ್ಕಪಕ್ಕದ ಊರಿನ ವಿಶ್ವಾಸಿಗಳು ಭಾಗವಹಿಸಿದ್ದರು.

 


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

*ರೈತರು ಸಾಲಕ್ಕೆ ಹೆದರದೇ ಧೈರ್ಯವಾಗಿ ಜೀವನ ಸಾಗಿಸಿ : ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ : ಮಾನವ ಜನ್ಮ ಪವಿತ್ರವಾದದ್ದು. ಜೀವನವೆಂದ ಮೇಲೆ ಪ್ರತಿಯೊಬ್ಬರಿಗೂ ಕಷ್ಟಗಳು ಬಂದೇ ಬರುತ್ತವೆ. ಜೊತೆಗೆ ಸಾಲವೂ ಕೂಡ ಇದ್ದೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ