ಕೊಪ್ಪಳ: ಗಂಗಾವತಿ ಸರ್ವೇ ಮೇಲ್ವಿಚಾರಕ ಗಂಗಾಧರ ತೇಜಪ್ಪ ಎಸಿಬಿ ಬಲೆಗೆ ಬಿದ್ದಿದ್ದಾರೆ. ಗಂಗಾವತಿ ತಾಲೂಕು ಹೆಬ್ಬಾಳ ಕ್ಯಾಂಪ್ನ ರಾಜು.ಪಿ. ಅವರಿಂದ 4 ಸಾವಿರ ಲಂಚ ಪಡೆಯುತ್ತಿದ್ದಾಗ ದಾಳಿ ಮಾಡಿದ ಎಸಿಬಿ ಅವರನ್ನು ಹಣದ ಸಮೇತ ಬಂದಿಸಿದೆ.
ತಾಯಿಯ ಆಸ್ತಿಯ 11ಬಿ/ಇ ನಕ್ಷೆ ನೀಡಲು ಗಂಗಾವತಿ ತಾಲೂಕಿನ ಹೆಬ್ಬಾಳ ಕ್ಯಾಂಪ್ನ ರಾಜು.ಪಿ. ಅವರಿಂದ 4 ಸಾವಿರ ಲಂಚ ಪಡೆಯುತ್ತಿದ್ದ ಗಂಗಾವತಿ ತಹಶೀಲ್ದಾರ್ ಕಚೇರಿಯ ಸರ್ವೇ ಮೇಲ್ವಿಚಾರಕ ಗಂಗಾಧರ ತೇಜಪ್ಪ ಅವರನ್ನು ಎಸಿಬಿ ತಂಡ್ ರೆಡಹ್ಯಾಂಡ್ ಆಗಿ ಹಿಡಿದಿದೆ. ಲಂಚದ ಮೊತ್ತವನ್ನು ಎಜಿಬಿ ಗಂಗಾಧರ ಅವರಿಂದ ಪಡೆಯಲಾಗಿದ್ದು, ಸದ್ಯ ವಿಚಾರಣೆ ನಡೆಸಲಾಗುತ್ತಿದೆ. ಬಳ್ಳಾರಿಯ ಎಸಿಬಿ ಎಸ್ಪಿ ಗುರುನಾಥ ಮತ್ತೂರು ಮಾರ್ಗದರ್ಶನದಲ್ಲಿ ಕೊಪ್ಪಳ ಎಸಿಬಿ ಡಿವೈಎಸ್ಪಿ ಆರ್.ಎಸ್. ಉಜ್ಜನಕೊಪ್ಪ ನೇತೃತ್ವದಲ್ಲಿ ಎಸಿಬಿ ಪೊಲೀಸ್ ಇನ್ಸ್ಪೆಕ್ಟರ್ ಎಸ್.ಎಸ್.ಬೀಳಗಿ ಹಾಗೂ ಕೊಪ್ಪಳ ಎಸಿಬಿ ಕಚೇರಿ ಸಿಬ್ಬಂದಿ ಸಿದ್ದಯ್ಯ, ಶಿವಾನಂದ್ ಆನಂದ್ ಬಸ್ತಿ, ರಮೇಶ್, ಕಲ್ಲೇಶಗೌಡ್, ರಂಗನಾಥ್, ಬಸವರಾಜ್, ಯಮುನಾ ನಾಯಕ್ ದಾಳಿ ನಡೆಸಿದ್ದರು.