ಕಲಘಟಗಿ: ಮಳೆಗೆ ಕುಸಿದಿದ್ದ ಮನೆಗೆ ಪ್ರಾಕೃತಿಕ ವಿಕೋಪ ಪರಿಹಾರ ನಿಧಿ ಪರಿಹಾರಕ್ಕೆ ಶಿಫಾರಸು ಮಾಡಲು ಸಂತ್ರಸ್ತ ಮಿಶ್ರಿಕೋಟಿ ಗ್ರಾಮದ ಅಶೋಕ ಗಂಗಪ್ಪ ಕಾಶಿಬಡಿಗೇರ
ಅವರಿಂದ ₹20 ಸಾವಿರ ಲಂಚ ಪಡೆಯುತ್ತಿದ್ದ ದುಮ್ಮವಾಡದ ಕಂದಾಯ ನಿರೀಕ್ಷಕ ರಾಘವೇಂದ್ರ ಬೊಮ್ಮನಾಳ ಎಂಬಾತನನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಸಿಬ್ಬಂದಿ ಬಂಧಿಸಿದ್ದಾರೆ.

ಕಳೆದ ಆಗಸ್ಟ್ ತಿಂಗಳಲ್ಲಿ ಸುರಿದ ಮಳೆಗೆ ಅಶೋಕ ಅವರ ಮನೆ ಕುಸಿದಿತ್ತು. ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ₹30 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪಿ ಕೊನೆಗೆ ₹20 ಸಾವಿರಕ್ಕೆ ಒಪ್ಪಿಕೊಂಡಿದ್ದ. ಈ ಬಗ್ಗೆ ಎಸಿಬಿಗೆ ಅಶೋಕ ದೂರು ನೀಡಿದ್ದರು.
ಎಸಿಬಿ ಉತ್ತರವಲಯದ ಎಸ್ಪಿ ಬಿ.ಎಸ್. ನೇಮಗೌಡ ಹಾಗೂ ಧಾರವಾಡ ಎಸಿಬಿಯ ಡಿವೈಎಸ್ಪಿ ಎಲ್. ವೇಣುಗೋಪಾಲ್ ಅವರ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ಬಿ.ಎ.
ಜಾಧವ, ಮಂಜುನಾಥ ಹಿರೇಮಠ, ಸಿಬ್ಬಂದಿ ಗಿರೀಶ್ ಮನಸೂರ, ಲೊಕೇಶ ಬೆಂಡಿಕಾಯಿ, ಜೆ.ಜಿ. ಕಟ್ಟಿ, ಶಿವಾನಂದ ಕೆಲವಡಿ, ಕಾರ್ತಿಕ ಹುಯಿಲಗೋಳ, ಗಣೇಶ ಶಿರಹಟ್ಟಿ, ವಿರೇಶ, ರವೀಂದ್ರ ಯರಗಟ್ಟಿ, ಶಂಕರ ನರಗುಂದ ಅವರ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು
CKNEWSKANNADA / BRASTACHARDARSHAN CK NEWS KANNADA