ಬೆಂಗಳೂರು : ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದ ಹಿನ್ನೆಲೆ ಖಚಿತ ಮಾಹಿತಿಯ ಆಧಾರದ ಮೇಲೆ ಭ್ರಷ್ಟಾಚಾರ ನಿಗ್ರಹ ದಳ.ಅಧಿಕಾರಿಗಳು ಇಬ್ಬರು ಸರಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಏಕಾಏಕಿ ದಾಳಿ ನಡೆಸಿ 15 ಲಕ್ಷ ರೂ.ನಗದು ಮತ್ತು ಮೂರು ಕೆಜಿಯಷ್ಟು ಚಿನ್ನಾಭರಣ ವಶಪಡಿಸಿಕೊಂಡು, ದಾಖಲೆ ಪರಿಶೀಲನೆ ಕಾರ್ಯ ಮುಂದುವರಿಸಿದ್ದಾರೆ.
ಬೆಂಗಳೂರು ಕೊಳಚೆ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಎಂಎಸ್‍ಎನ್ ರಾಜು ಅವರಿಗೆ ಸೇರಿದ ತುಮಕೂರಿನ ವಾಸದ ಮನೆ, ಬೆಂಗಳೂರು ನಗರದ ಯಶವಂತಪುರ ಗೋಲ್ಡನ್ ಗ್ರಾಂಡ್ ಅಪಾರ್ಟ್ ಮೆಂಟ್ ಮೇಲೆ ದಾಳಿ ನಡೆಸಿದ್ದಾರೆ.
ಮತ್ತೊಬ್ಬ ಮೈಸೂರು ಮಹಾನಗರ ಪಾಲಿಕೆ ಅಭಿವೃದ್ಧಿ ಅಧಿಕಾರಿ ಎಚ್.ನಾಗರಾಜು ಅವರಿಗೆ ಸೇರಿದ ಮೈಸೂರು ನಗರದಲ್ಲಿರುವ ವಾಸದ ಮನೆ, ಇವರ ಅಣ್ಣ ವಾಸವಾಗಿರುವ ಮಾಗಡಿ ಪಟ್ಟಣದಲ್ಲಿರುವ ವಾಸದ ಮನೆ,ಸಂಬಂಧಿಕರು ವಾಸವಾಗಿರುವ ಮೈಸೂರು ನಗರದಲ್ಲಿರುವ ವಾಸದ ಮನೆ, ಕಾರ್ಯನಿರ್ವಹಿಸುತ್ತಿದ್ದ ಮೈಸೂರು ಮಹಾನಗರ ಪಾಲಿಕೆ ಕಚೇರಿ ಮೇಲೆ ದಾಳಿ ನಡೆಸಿ ನಗದು, ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಎಂಎಸ್‍ಎನ್ ಬಾಬು ಬೆಂಗಳೂರು ಹುದ್ದೆಗೆ ವರ್ಗಾವಣೆ ಆದೇಶದಲ್ಲಿರುವವರು, ಈ ಹಿಂದೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಉಪ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದವರು.
ಎಸಿಬಿ ಪೊಲೀಸ್ ಠಾಣೆಯ ವಿವಿಧ ತಂಡಗಳಿಂದ ಆರೋಪಿತ ಸರಕಾರಿ ನೌಕರರ ವಿರುದ್ಧ ದಾಳಿ ಮುಂದುವರಿದಿದೆ.
ಎಂಎಸ್‍ಎನ್ ಬಾಬು ಅವರ ನಿವಾಸದಲ್ಲಿ 1.5 ಕೆಜಿ ಚಿನ್ನಾಭರಣ ಹಾಗೂ 5 ಲಕ್ಷ ರೂ.ನಗದು ಸಿಕ್ಕಿದೆ. ನಾಗರಾಜ್ ನಿವಾಸದಲ್ಲಿ 9 ಲಕ್ಷ ರೂ.ನಗದು ಮತ್ತು 1.3 ಕೆಜಿ ಚಿನ್ನಾಭರಣ ಸೇರಿ ಅಪಾರ ಮೊತ್ತದ ಆಸ್ತಿ ದಾಖಲೆ ಪತ್ರಗಳು ಪತ್ತೆಯಾಗಿದ್ದು ಎಂದು ಮೂಲಗಳು ತಿಳಿಸಿವೆ, ಪರಿಶೀಲನೆ ಕಾರ್ಯ ಮುಂದುವರಿದಿದೆ