ಗೋಕಾಕದಲ್ಲಿರುವ ಸ್ಪಂದನಾ ಮೈಕ್ರೋ ಫೈನಾನ್ಸ್ ನಲ್ಲಿ ಕೆಲಸ ಮಾಡುವ ಸಿಬ್ಬಂದಿ ಮೂಲತ ರಾಮದುರ್ಗ ತಾಲೂಕಿನ ಪಕೀರಪ್ಪಾ ಕುರಿ ಎಂಬಾತನು ಕೊಣ್ಣೂರಲ್ಲಿನ ಇಪ್ಪತೈದು ಗ್ರಾಹಕರಿಂದ ತಿಂಗಳಿಗೊಮ್ಮೆ ತುಂಬುವ ಹಣವನ್ನು ಅಂದಾಜು 2 ಲಕ್ಷ ರೂ, ಹಣವನ್ನು ದೊಚಿಕೊಂಡು ಗೋಕಾಕದಲ್ಲಿನ ಕಚೇರಿಗೆ ಹಣ ತುಂಬದೆ ಪರಾರಿಯಾಗಿದ್ದಾನೆ,
ಪ್ರತಿ ಹದಿನೈದು ದಿನಕೊಮ್ಮೆ ಸ್ಪಂದನಾ ಮೈಕ್ರೋ ಪೈನಾನ್ಸ್ ಕಂಪನಿಯಿಂದ ತೆಗೆದುಕೊಂಡ ಹಣವನ್ನು ತುಂಬಿಸಿಕೊಳ್ಳಲು ಮ್ಯಾನೆಜರ ಕಳಿಸಿದ್ದಾರೆಂದು ಹೇಳಿದ್ದಲ್ಲದೆ ಈಗ ಕೊರಾನಾ ಹೆಚ್ಚಾಗುತಿದ್ದರಿಂದ ಯಾರು ಕಚೇರಿಗೆ ಬರಬಾರದೆಂದು ಮ್ಯಾನೆಜರ ಹೇಳಿದ್ದಾರೆಂದು ಗ್ರಾಹಕರಿಕೆ ನಂಬಿಸಿ ಅಂದಾಜು ಸುಮಾರು 2ಲಕ್ಷ ರೂ, ಹಣವನ್ನು ದೊಚಿಕೊಂಡು ಪರಾರಿಯಾಗಿದ್ದಾನೆ.
ಅದಲ್ಲದೆ ಪಕೀರಪ್ಪ ಕುರಿ ಇತನು ಇನ್ನೊಬ್ಬರ ಹೆಸರಿನ ಮೇಲೆ ಲೋನ ತೆಗೆದುಕೊಂಡಿದ್ದಲ್ಲದೆ ಹಲವಾರು ಜನರಿಗೆ ಹಣ ತುಂಬಲು ಪಿಡಿಸಿದ್ದಾನೆಂದು ಸ್ವತಃ ಸ್ಪಂದನಾ ಮೈಕ್ರೋ ಪೈನಾನ್ಸ್ ನ ಸಿಬ್ಬಂದಿಗಳು ಹೇಳುತಿದ್ದಾರೆ, ಸದರಿ ಸಿಬ್ಬಂದಿ ಮೇಲೆ ಗೋಕಾಕ ಟೌನ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆಂದು ಸ್ಪಂದನಾ ಮ್ಯಾನೆಜರ ತಿಳಿಸಿದ್ದಾರೆ.
ಇಷ್ಟಾದರೂ ಸಹ ಬಡಜನರ ಹಣ ದೊಚಿಕೊಂಡು ಹೋದ ಪಕೀರಪ್ಪ ಕುರಿ ಇತನನ್ನು ಹುಡುಕದೆ ಮತ್ತೆ ಸ್ಪಂದನಾ ಮೈಕ್ರೋ ಪೈನಾನ್ಸ್ ಕಂನಿಯಯವರು ಕೊಣ್ಣೂರಿನಲ್ಲಿನ ಬಡಜನರಿಗೆ ಹಣ ತುಂಬಲು ಪಿಡಿಸುತ್ತಿದ್ದಾರೆ,
CKNEWSKANNADA / BRASTACHARDARSHAN CK NEWS KANNADA