ಬಹುಜನ ಸಮಾಜ ಪಾರ್ಟಿಯಿಂದ ಗೋಕಾಕದಲ್ಲಿ ಪತ್ರಿಕಾಗೋಷ್ಠಿ.
ಬಿ,ಎಸ್,ಪಿ,ಯಿಂದ ಗೋಕಾಕದಲ್ಲಿ ಪತ್ರಿಕಾಗೊಷ್ಟಿ,
ನೀರಿಕ್ಷಣಾ ಮಂದಿರದಲ್ಲಿ ಬಹುಜನ ಸಮಾಜ ಪಾರ್ಟಿ ಗೋಕಾಕ ವಿದಾನಸಭಾ ಮತಕ್ಷೇತ್ರದ ಬಿ,ಎಸ್,ಪಿ,ಮುಖಂಡರಿಂದ ಪತ್ರಿಕಾಗೋಷ್ಠಿ ಕರೆಯಲಾಗಿತ್ತು,
ಈ ಸಂದರ್ಭದಲ್ಲಿ ಬಹುಜನ ಸಮಾಜ ಪಾರ್ಟಿಯ ಬೆಳಗಾವಿ ಪ್ರದಾನ ಕಾರ್ಯದರ್ಶಿಯಾದ ಲೋಹಿತ ಗೌಡ ಇವರು ಮಾತನಾಡಿ ಉತ್ತರಪ್ರದೇಶದಲ್ಲಿ ನಾಲ್ಕು ಬಾರಿ ಮುಖ್ಯಮಂತ್ರಿಯಾದ ಅಕ್ಕ ಮಾಯಾವತಿಯವರ ಹುಟ್ಟು ಹಬ್ಬವನ್ನು ಆಚರಿಸುವುದಾಗಿ ಹೇಳಿ.
ರಾಷ್ಟ್ರದಲ್ಲಿ ಬಹುಜನ ಸಮಾಜ ಪಾರ್ಟಿ ರಾಷ್ಟ್ರದಲ್ಲಿ ಮೂರನೆ ದೊಡ್ಡ ಪಕ್ಷ ಅಷ್ಟೆ ಅಲ್ಲದೆ ಜನರಪರವಾಗಿ ಇರುವ ಬಡವರ ಪಕ್ಷ ಎಂದರು.ಆದರೆ
ಜನರ ಬಗ್ಗೆ ಕಾಳಜಿ ಇರದೆ ಇರುವ ಪಕ್ಷವನ್ನು ಇವತ್ತು ಜನ ಆರಿಸಿ ಕಳಿಸಿ ತಪ್ಪು ಮಾಡಿದ್ದಾರೆ,ಯಾಕೆಂದರೆ
ನೊಟ ಬ್ಯಾನ್, ಎನ್,ಆರ್,ಸಿ, ತಂದು ದೇಶದ ಜೊತೆಯಲ್ಲಿ ಜನತೆಯನ್ನು ದುಸ್ಥಿತಿಗೆ ತಂದಿದೆ. ಅದಲ್ಲದೆ ಈಗಿನ ಸರಕಾರ ಎಸ್,ಸಿ,/ಎಸ್,ಟಿ ವಿದ್ಯಾರ್ಥಿ ವೇತನಗಳಂತಹ ಸೌಲಬ್ಯ ಖಡಿತಗೋಳಿಸಿ, ಮತ್ತೆ ಮನುಸ್ಮೃತಿ ತರಲಿಕ್ಕೆ ಸರಕಾರ ಮಾಡುತ್ತಲಿದೆ ಎಂದು ಆರೋಪಿಸಿದರು.
ಆದರೆ ಬಿ,ಎಸ್,ಪಿ, ಬಡವರ ಪಕ್ಷ, ಮುಂದಿನ ದಿನಮಾನಗಳಲ್ಲಿ ಜನವಿರೋದಿ ಅದಿಕಾರದ ವಿರುದ್ದ ಹೋರಾಟ ಮಾಡುತ್ತೆವೆ.ಸಾಮಾನ್ಯ ವ್ಯಕ್ತಿಯ ಸಹ ಗೌರವಿಸೋ,ಪ್ರಜೆಗಳನ್ನು ಕಾಪಾಡುವ ಎಕೈಕ ಪಕ್ಷ ಇದು ಎಂದರು.ಅದಕ್ಕಾಗಿ ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯಾದಂತ ಪಕ್ಷ ಸಂಘಟನೆ ಮಾಡಲಾಗುತ್ತದೆ ಹಾಗೂ ಬರುವ ಬೆಳಗಾವಿ ಉಪಚುನಾವಣೆಯಲ್ಲಿ ಬಿ,ಎಸ್,ಪಿ, ಹೈಕಮಾಂಡಿನಿಂದ ಒಂದು ವೇಳೆ ಆದೇಶ ಬಂದರೆ ಉಪಚುನಾವಣೆಯಲ್ಲಿ ಸ್ಪರ್ದಿಸುತ್ತೇವೆ ಇಲ್ಲದಿದ್ದರೆ ಇಲ್ಲ ಎಂದು ಮಾದ್ಯಮದವರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ
ಬಿ,ಎಸ್,ಪಿ,ಬೆಳಗಾವಿ ಜಿಲ್ಲಾ ಅದ್ಯಕ್ಷರಾದ ಯಮನಪ್ಪ ತಳವಾರ,ಬೆಳಗಾವಿ ಜಿಲ್ಲಾ ಬಿಎಸ್ಪಿ,ಉಪಾದಕ್ಷರದ ಸಂಜೀವ ಚಿಂಚಲಿ
ಬಿ,ಎಸ್,ಪಿ,ಯ ಗೋಕಾಕ ನಗರ ಘಟಕ ಅದ್ಯಕ್ಷರಾದ ಅರುಣ ಪ್ರೇಮಕುಮಾರ,
ವೀರಬದ್ರ ತಳವಾರ, ಇನ್ನೂಳಿದ ಕಾರ್ಯಕರ್ತರು ಉಪಸ್ಥಿತರಿದ್ದರು.