Breaking News

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್​​.ಆರ್​ ಸಂತೋಷ್ ನಿನ್ನೆ​ ಆತ್ಮಹತ್ಯೆಗೆ ಯತ್ನ


ಬೆಂಗಳೂರು: ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್​​.ಆರ್​ ಸಂತೋಷ್ ನಿನ್ನೆ​ ಆತ್ಮಹತ್ಯೆಗೆ ಯತ್ನಿಸಿದ ಬಗ್ಗೆ ಅವರ ಪತ್ನಿ ಜಾಹ್ನವಿ ಪ್ರತಿಕ್ರಿಯಿಸಿದ್ದಾರೆ. ಸಂತೋಷ್​ರ ಈ ನಿರ್ಧಾರಕ್ಕೆ ಅವರ ರಾಜಕೀಯ ವೃತ್ತಿಜೀವನದಲ್ಲಾಗ್ತಿರೋ ಬದಲಾವಣೆಗಳೇ ಕಾರಣ ಎಂದಿದ್ದಾರೆ.

ನಿನ್ನೆ ರಾತ್ರಿ ಮಾಧ್ಯಮಗಳೊಂದಿಗೆ ಮಾತನಾಡಿದ ಜಾಹ್ನವಿ, ಅವರು ಬೆಳಗ್ಗೆಯಿಂದ ಸ್ವಲ್ಪ ಬೇಜಾರಲ್ಲಿದ್ರು. ಸಂಜೆ ಹೊರಗಡೆ ಹೋಗಿ 7 ಗಂಟೆಗೆ ಮನೆಗೆ ಬಂದ್ರು. ಊಟಕ್ಕೆ ಏನ್ಮಾಡಲಿ ಅಂತ ಕೇಳಲಿಕ್ಕೆ ಹೋದಾಗ ಪ್ರಜ್ಞೆ ತಪ್ಪಿದ್ರು. ಕೂಡಲೇ ಎಂ.ಎಸ್ ರಾಮಯ್ಯ ಆಸ್ಪತ್ರೆಗೆ ದಾಖಲು ಮಾಡಿದ್ವಿ ಎಂದರು.

ಅವರ ಪೊಲಿಟಿಕಲ್ ಕರಿಯರ್ ಸ್ವಲ್ಪ ಇಂಬ್ಯಾಲೆನ್ಸ್​ ಆಗಿತ್ತು.ಅದನ್ನು ಮನಸ್ಸಿಗೆ ತೆಗೆದುಕೊಂಡಿದ್ರು. ಕೌಟುಂಬಿಕವಾಗಿ ನಾವು ತುಂಬಾನೇ ಚೆನ್ನಾಗಿದ್ದೆವು. ಸಂಜೆ 7:30ಕ್ಕೆ ವಿಚಾರ ನಮ್ಮ ಗಮನಕ್ಕೆ ಬಂತು. ವೈದ್ಯರ ಬಳಿ ಮಾತಾಡಿದ್ದೀವಿ, ಬೆಳಗ್ಗೆ ವೇಳೆಗೆ ಹುಷಾರಾಗ್ತಾರೆ ಅಂದಿದ್ದಾರೆ ಅಂತ ಅವರು ತಿಳಿಸಿದ್ರು.


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

“ಸಾಹುಕಾರ್ ಕಮಾಲ್ ಮಹಾರಾಷ್ಟ್ರದಲ್ಲಿ ಸಾಹುಕಾರ್ ಶಕ್ತಿ ಪ್ರದರ್ಶನ” ಜಾರಕಿಹೊಳಿ ಅಭಿಮಾನಿಗಳ ಪೋಸ್ಟ್ ವೈರಲ್!

  ಗೋಕಾಕ :ಮಹಾರಾಷ್ಟ್ರದ ಅಘಾಡಿ ಸರ್ಕಾರ ಪತನವಾದ ಹಿನ್ನೆಲೆಯಲ್ಲಿ 15 ರಿಂದ 20 ದಿನ ಮುಂಬೈನಲ್ಲೆ ಸಾಹುಕಾರ್ ಇದ್ದು ಬಿಜೆಪಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ