Breaking News

ಬೆಳಗಾವಿಯಲ್ಲೊಂದು ಮನಕಲಕುವ ಘಟನೆ: ಸರ್ಕಾರಿ ನೌಕರಿಯಲ್ಲಿದ್ರೂ ತಾಯಿಯನ್ನ ಅನಾಥ ಮಾಡಿದ ಮಗ


ಮದುವೆಯಾದ ನಂತರ ಬಸವಂತ ತಾಯಿಯನ್ನು ತ್ಯಜಿಸಿ, ಆಕೆಯ 120 ಗ್ರಾಂ ಚಿನ್ನ ಮತ್ತು 10 ಎಕರೆ ಜಮೀನನ್ನು ಕಬಳಿಸಿದ್ದಾನೆ. ಇದೀಗ ಬಾಳವ್ವ ವೃದ್ಧಾಶ್ರಮದಲ್ಲಿ ಆಶ್ರಯ ಪಡೆದಿದ್ದಾರೆ.

ಬೆಳಗಾವಿ : ಮಗ ನಾಲ್ಕು ವರ್ಷ ಇದ್ದಾಗ ಗಂಡ ಮೃತಪಟ್ಟಿದ್ದ. ಕಷ್ಟಪಟ್ಟು ದುಡಿದು ಆತನನ್ನ ಸಾಕಿ ಸಲುಹಿದ್ದಳು ತಾಯಿ (mother). ಮೇಲಾಗಿ ಗಂಡನ ನೌಕರಿಯನ್ನ ಅನುಕಂಪದ ಆಧಾರದ ಮೇಲೆ‌ ಕೊಡಿಸಿ ಮುಪ್ಪಿನ ಕಾಲಕ್ಕೆ ಅನುಕೂಲ ಆಗ್ತಾನೆ ಅಂದುಕೊಂಡಿದ್ದಳು. ಆದರೆ ಆ ಮಗ ಮದುವೆ ಆಗ್ತಿದ್ದಂತೆ ಉಲ್ಟಾ ಹೊಡೆದಿದ್ದು, ಹೆಂಡತಿ ಮಾತು ಕೇಳಿ ತಾಯಿಯನ್ನೇ ಹೊರ ಹಾಕಿರುವಂತಹ ಘಟನೆ ನಡೆದಿದೆ.

ಈ ಹೆತ್ತಮ್ಮನ ಸ್ಥಿತಿ ಮತ್ಯಾರಿಗೂ ಬಾರದಿರಲಿ

ವೃದ್ಧೆಯ ಹೆಸರು ಬಾಳವ್ವ ಗೌಡರ್. 77 ವರ್ಷದ ಇವರಿಗೆ ಇದೀಗ ವೃದ್ಧಾಶ್ರಮವೇ ಆಧಾರವಾಗಿದೆ. ಊರಲ್ಲಿ ಮಹಾರಾಣಿಯಂತೆ ಬದುಕು ಕಳೆದವಳು ಮುಪ್ಪಿನ ಕಾಲದಲ್ಲಿ ಊಹೆ ಮಾಡಿಕೊಳ್ಳದ ಮರ್ಮಾಗಾತ ಮಗನಿಂದ ತಾಯಿಗೆ ಆಗಿದೆ. ಬೆಳಗಾವಿ ಜಿಲ್ಲೆಯ ದೇಸೂರ ಗ್ರಾಮದ ಬಾಳವ್ವನಿಗೆ ಓರ್ವ ಮಗನಿದ್ದು ಕೆಎಸ್‌ಆರ್‌ಟಿಸಿ ಇಲಾಖೆಯಲ್ಲಿ ಜೂನಿಯರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಅವರು ಹೆಸರು ಬಸವಂತ ಗೌಡರ್.

ಮಗ ಬಸವಂತ ನಾಲ್ಕು ವರ್ಷದವನಿದ್ದಾಗ ತಂದೆ ತೀರಿ ಹೋಗ್ತಾರೆ. ಈ ವೇಳೆ ಬಾಳವ್ವ ಕಷ್ಟಪಟ್ಟು ಮಗನನ್ನ ಬೆಳಸಿ ಒಳ್ಳೆ ವಿದ್ಯಾಭ್ಯಾಸ ಕೂಡ ಕೊಡಿಸಿದ್ದಾರೆ. ಇದರ ಜೊತೆಗೆ ಗಂಡನ ಸರ್ಕಾರಿ ನೌಕರಿಯನ್ನ ಅವರಿವರ ಕಾಲು ಹಿಡಿದು ಅನುಕಂಪದ ಆಧಾರದ ಮೇಲೆ ಮಗನಿಗೆ ಕೆಲಸ ಕೊಡಿಸಿದ್ದರು. ಊರಲ್ಲಿ ತಾಯಿಯನ್ನ ಚೆನ್ನಾಗಿ ನೋಡಿಕೊಳ್ತಿದ್ದ ಮಗನಿಗೆ ಮದುವೆ ಕೂಡ ಮಾಡ್ತಾಳೆ ಹೆತ್ತಮ್ಮ.

ಆರಂಭದಲ್ಲಿ ಅತ್ತೆ ಜೊತೆಗೆ ಸೊಸೆ ಕೂಡ ಚೆನ್ನಾಗಿ ಇರ್ತಾಳೆ. ಆದರೆ ಕ್ರಮೇಣ ಅತ್ತೆಯನ್ನ ದ್ವೇಷ ಮಾಡ್ತಾ ಹಳ್ಳಿ ಬಿಟ್ಟು ಬೆಳಗಾವಿ ನಗರಕ್ಕೆ ಬಂದು ಸೆಟ್ಲ್ ಆಗ್ತಾರೆ. ತಾಯಿಯನ್ನ ಊರಲ್ಲಿ ಬಿಟ್ಟು ಹೆಂಡತಿ ಸಮೇತ ಬೆಳಗಾವಿ ಬಂದು ಹೊಸ ಮನೆ ಕಟ್ಟಿ ಅಲ್ಲೇ ಉಳಿದುಕೊಳ್ತಾರೆ. ಹೀಗೆ ಬಂದ ಮೇಲೆ ತಾಯಿ ಬಗ್ಗೆ, ಆಕೆಯ ಆರೈಕೆ ಬಗ್ಗೆ ಕಾಳಜಿ ಕೂಡ ಮಗ ಮಾಡಲ್ಲ. ವಯಸ್ಸಿದ್ದಾಗ ಹೇಗೋ ತನ್ನ ಜೀವನ ಮಾಡುತ್ತಿದ್ದ ತಾಯಿ ಕೊನೆಗೆ ಎನೂ ಮಾಡದೇ ತುತ್ತು ಅನ್ನಕ್ಕೆ ಪರದಾಡುವ ಸ್ಥಿತಿ ಬರುತ್ತೆ. ಇದನ್ನ ನೋಡಿ ಸಂಬಂಧಿಕರು ಸಾಕಷ್ಟು ಬಾರಿ ಮಗ ಬಸವಂತನಿಗೆ ಹೇಳಿದ್ರೂ ಕೆರ್ ಮಾಡಲ್ಲ. ಇದರಿಂದ ಅನಿವಾರ್ಯವಾಗಿ ಇದೀಗ ಬಾಳವ್ವ ಸಂಬಂಧಿಕರು ವೃದ್ಧಾಶ್ರಮಕ್ಕೆ ಸೇರಿಸಿದ್ದಾರೆ.

ಇನ್ನೂ ಇಪ್ಪತ್ತು ದಿನದಿಂದ ವೃದ್ಧಾಶ್ರಮದಲ್ಲಿರುವ ಬಾಳವ್ವ, ಎಲ್ಲಿ ಹೋಗಿದ್ದಾರೆ, ಏನು ಮಾಡ್ತಿದ್ದಾರೆ, ಹೇಗಿದ್ದಾರೆ ಅನ್ನೋದನ್ನ ಕೂಡ ಮಾಹಿತಿ ಪಡೆದುಕೊಂಡಿಲ್ಲ ಮಗ. ಇತ್ತ ವೃದ್ಧಾಶ್ರಮದಲ್ಲಿ ಸಿದ್ಧಾರೂಢರ ಜಪ ಮಾಡುತ್ತಾ ನೆಮ್ಮದಿಯಿಂದ ಕಾಲ ಕಳೆಯುತ್ತಿದ್ದಾರೆ. ಆದರೆ ಪಾಪಿ ಮಗ ಮಾತ್ರ ಆಕೆಯನ್ನ ಒಬ್ಬಂಟಿಯಾಗಿ ಬಿಟ್ಟಿದ್ದಲ್ಲದೇ ತಾಯಿ ಬಳಿ ಇದ್ದ 120ಗ್ರಾಂ ಚಿನ್ನ, ಹತ್ತು ಎಕರೆ ಜಮೀನು ಬರೆಯಿಸಿಕೊಂಡಿದ್ದಾನೆ. ಮಾತ್ರೆಗೂ ಒಂದು ರೂಪಾಯಿ ಕೂಡ ಕೊಡದೇ ಆಕೆ ಬಳಿ ಇದ್ದ ಎಲ್ಲವನ್ನೂ ಕಸಿದುಕೊಂಡು ಹೊರ ಹಾಕಿದ್ದಾನೆ.

ಇಷ್ಟೆಲ್ಲಾ ಆದ್ರೂ ತಾಯಿ ಮಾತ್ರ ಮಗ ಚೆನ್ನಾಗಿರಲಿ. ಆತ ಬಂದು ಕರೆದರೂ ಹೋಗಲ್ಲ. ಸೊಸೆ ಕಿರಿಕಿರಿ ಮಾಡುತ್ತಾಳೆ. ನೆಮ್ಮದಿ ಇಲ್ಲ ಅಲ್ಲಿ ಎಂದು ತಾಯಿ ಬಾಳವ್ವ ಹೇಳಿದ್ದಾರೆ. ಇನ್ನೊಂದು ಕಡೆ ತಂದೆ ತಾಯಿಯನ್ನ ನೋಡಿಕೊಳ್ಳದ ಮಕ್ಕಳ ವಿರುದ್ಧ ವೃದ್ಧಾಶ್ರಮದವರು ಆಕ್ರೋಶ ಹೊರ ಹಾಕುತ್ತಿದ್ದಾರೆ.

ಒಂಬತ್ತು ತಿಂಗಳು ಹೊತ್ತು ಹೆತ್ತು ಸಲುಹಿದ ತಾಯಿಯನ್ನೇ ಹೆಂಡ್ತಿ ಮಾತು ಕೇಳಿ ಮಗ ತಬ್ಬಲಿ‌ ಮಾಡಿದ್ದಾನೆ. ಚಿನ್ನ, ಆಸ್ತಿ ಬರೆಸಿಕೊಂಡ್ರು ಮಗನ ಮೇಲಿನ ಪ್ರೀತಿ ಮಾತ್ರ ಕಮ್ಮಿಯಾಗಿಲ್ಲ. ಇಂತಹ ಮಗನ ಕೃತ್ಯದಿಂದ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಾಗಿದೆ. ಸಂಬಂಧಿಕರು, ವೃದ್ಧಾಶ್ರಮ‌ ಆಸರೆ ಆಗಿದ್ದರಿಂದ ಇಳಿ ವಯಸ್ಸಿನಲ್ಲೂ ಮೂರು ಹೊತ್ತು ಹೊಟ್ಟೆ ಅನ್ನಾ ಸಿಗುತ್ತಿದ್ದರು. ಆ ತಾಯಿಗೆ ತನ್ನ ಕರುಳ ಬಳ್ಳಿಗೆ ನಾ ಬೇಡಾವಾದನಾ ಅನ್ನೋ ನೋವು ಕಾಡುತ್ತಿದೆ.


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

ಶ್ರೀ ಹನುಮಾನ ಮತ್ತು ಶ್ರೀ ಬಸವೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಆರಂಭ ; ಎಪಿಎಂಸಿ ಸದಸ್ಯ ಬಸವರಾಜ ಸಾಯನ್ನವರ ಅವರಿಂದ ಭೂಮಿ ಪೂಜೆ

ಗೋಕಾಕ : ಮಾರ್ಕಂಡೇಯ ನಗರದ ಶ್ರೀ ಹನುಮಾನ ಮತ್ತು ಶ್ರೀ ಬಸವೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಸಭಾ ಭವನ ಕಟ್ಟಡದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ