ಮೂಡಲಗಿ: ಪಟ್ಟಣದಲ್ಲಿ ಹದ್ದು ಮಿರುತ್ತಿರುವ ಕೊರೋನಾ ಎರಡನೇ ಅಲೆಯನ್ನು ತಡೆಗಟ್ಟಲು ಅರಭಾವಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿಯವರ ಮಾರ್ಗದರ್ಶನದಲ್ಲಿ ಗುರುವಾರದಂದು ಪುರಸಭೆ ಆವರಣದಲ್ಲಿ ಆಯೋಜಿಸದ ಸಭೆಯಲ್ಲಿ ಮೇ.7ರ ಮಧ್ಯಾಹ್ನದಿಂದ ಮೇ.16ರ ವರೆಗೂ ಸಂಪೂರ್ಣ ಮೂಡಲಗಿ ಪಟ್ಟಣವನ್ನು ಲಾಕ್ಡೌನ್ ಮಾಡಲು ನಿರ್ಧರಿಸಿದರು.
ಈ ಸಂದರ್ಭದಲ್ಲಿ ಕಹಾಮ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಅಧಿಕಾಗಳ ಹಾಗೂ ಜನಪ್ರತಿನಿಧಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ, ಕೊರೋನಾ ಎರಡನೇ ಅಲೆಯ ಅರ್ಭಟಕ್ಕೆ ತತ್ತರಿಸುತ್ತಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಲಾಕ್ ಡೌನ್ ಒಂದೇ ಪರಿಹಾರವಾಗಿದ್ದು, ಮೊದಲ ಹಂತದಲ್ಲಿ ಮೂಡಲಗಿ ಪಟ್ಟಣವನ್ನು ಮೇ.7 ಶುಕ್ರವಾರ ಮಧ್ಯಾಹ್ನದಿಂದ 16 ರ ವರೆಗೆ ಸಂಪೂರ್ಣ ಲಾಕ್ ಡೌನ್ ಮಾಡಲು ನಿರ್ಧರಿಸಲಾಗಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದ್ದಾರೆ.
ದಿನೇ ದಿನೇ ಕೊರೋನಾ ಹಾವಳಿ ಹೆಚ್ಚುತ್ತಿದೆ. ನಿಯಂತ್ರಣಕ್ಕೆ ಎಲ್ಲ ರೀತಿಯ ಕ್ರಮಗಳನ್ನು ಕೈಕೊಳ್ಳುತ್ತಿದ್ದರೂ ಅಲೆಯ ಅರ್ಭಟ ಮುಂದುವರೆದಿದೆ. ಇದಕ್ಕೆ ಸಂಪೂರ್ಣ ಲಾಕ್ ಡೌನ್ ಯೊಂದೇ ಪರಿಹಾರವಾಗಿದ್ದು, ಸಾರ್ವಜನಿಕರು ಇದಕ್ಕೆ ಸಹಕಾರ ನೀಡುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ.
ಮೂಡಲಗಿ ಪಟ್ಟಣ ನಾಳಿನ ಶನಿವಾರದಿಂದ ಮುಂದಿನ ಭಾನುವಾರವರೆಗೆ ಸಂಪೂರ್ಣ ‘ಲಾಕ್’ ಮಾಡಲಾಗುತ್ತಿದೆ. ಯಾವುದೇ ವ್ಯಾಪಾರ ವಹಿವಾಟು ನಡೆಸುವಂತಿಲ್ಲ. ಅನಗತ್ಯವಾಗಿ ಯಾರೂ ಹೊರಗಡೆ ಬರುವಂತಿಲ್ಲ. ಸರಕಾರದ ನಿರ್ದೇಶನವನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಕೊರೋನಾ ನಿಯಂತ್ರಣಕ್ಕೆ ಎಲ್ಲರೂ ಕೈ ಜೋಡಿಸುವಂತೆ ಅವರು ಕೋರಿದ್ದಾರೆ.
ಮೂಡಲಗಿ ಲಾಕ್ ಡೌನ್ ಮಾದರಿಯಲ್ಲಿ ಇಡೀ ಅರಭಾವಿ ಮತಕ್ಷೇತ್ರವನ್ನು ಸಂಪೂರ್ಣ ಲಾಕ್ ಡೌನ್ ಮಾಡುವ ಚಿಂತನೆ ನಡೆದಿದೆ. ಇನ್ನೇರಡು ದಿನಗಳಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಕೈ ಗೊಳ್ಳಲಾಗುವುದು. ಕೊರೋನಾ ಎರಡನೇ ಅಲೆಯನ್ನು ಬ್ರೇಕ್ ಅಪ್ ಮಾಡುವುದೇ ನಮ್ಮ ಮುಂದಿರುವ ಗುರಿಯಾಗಿದೆ ಎಂದು ಅವರು ಹೇಳಿದ್ದಾರೆ.
ಆಕ್ಸಿಜನ್ ವ್ಯವಸ್ಥೆ- ಕೊರೋನಾ ಸೋಂಕಿತರ ಪಾಲಿಗೆ ಸಂಜೀವಿನಿಯಾಗಿರುವ ಆಕ್ಸಿಜನ್ ಸಿಲಿಂಡರ್ ಗಳನ್ನು ನಿಪ್ಪಾಣಿಯಲ್ಲಿ ಖರೀದಿ ಮಾಡಲಾಗಿದೆ. ಇದಕ್ಕೆ ಸ್ವಂತ ಹಣವನ್ನು ನಾನೇ ನೀಡಿದ್ದೇನೆ. ಸುಮಾರು 20 ಆಕ್ಸಿಜನ್ ಸಿಲಿಂಡರ್ ನಮ್ಮ ಕೋವಿಡ್ ಆಸ್ಪತ್ರೆಯಲ್ಲಿ ಲಭ್ಯವಿವೆ. ಸೋಂಕಿತರು ಚಿಕಿತ್ಸೆ ಪಡೆದು ಆರೋಗ್ಯವಾಗಿ ಸುರಕ್ಷಿತವಾಗಿ ಮನೆ ಸೇರಬೇಕು. ಅವರು ಗುಣಮುಖರಾಗಿ ಹೊರಬರಬೇಕೆನ್ನುವ ಆಶಯ ನಮ್ಮದಾಗಿದೆ ಎಂದು ಹೇಳಿದರು.
ಈ ಸಮಯದಲ್ಲಿ ಪುರಸಭೆ ಮುಖ್ಯಾಧಿಕಾರಿ ದೀಪಕ್ ಹರ್ದಿ ಮಾತನಾಡಿ, ಕಾರಣ ಇಲ್ಲದೆ ಓಡಾಡುವವರ ಮೇಲೆ, ಬೀದಿಗಿಳಿದ ವಾಹನಗಳ ಮೇಲೆ ಕಠಿಣ ಕ್ರಮ ಕೈಕೊಂಡು ಪ್ರಕರಣ ದಾಖಲು ಮಾಡಿಬೇಕು ಹಾಗೂ ಆಸ್ಪತ್ರೆಗಳು, ಮೆಡಿಕಲ್ ಅಂಗಡಿ, ಹಾಲು ಅಂಗಡಿಗಳಿಗೆ ಮಾತ್ರ ಅವಕಾಶ ಇದ್ದು, ಯಾರು ಕೂಡಾ ಬೀದಿಗಿಳಿಯದಂತೆ ಮತ್ತು ಬೈಕ್ ಸೀಜ್ ಮಾಡಿಬೇಕು ಎಂದು ಪೊಲೀಸ್ ಇಲಾಖೆಗೆ ತಿಳಿಸಲಾಗಿದೆ.
ಮೂಡಲಗಿ ಪಟ್ಟಣದ ಸಾರ್ವಜನಿಕರು ಮೇ.7ರಂದು ಮಧ್ಯಹ್ನದ ಒಳಗೆ ತಮ್ಮಗೆ ಬೇಕಾದ ದಿನಸಿ ವಸ್ತುಗಳನ್ನು ಖರೀದಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಇನ್ನೂ ದಿನಸಿ ಅಂಗಡಿ ಮಾಲೀಕರು ಹೂಮ್ ಡಿಲೇವರಿ ಮಾಡುವವರಿಗೆ ಪೊಲೀಸ್ ಇಲಾಖೆ ಮುಂಖಾತರ ಗುರುತಿನ ಚೀತಿ ವಿತರಿಸಲಾಗುವುದು ಆದರಿಂದ ಮೇ.17ರ ವರೆಗೂ ಮನೆ ಬಿಟ್ಟು ಹೊರಗೆ ಬರಬೇಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಹಣಮಂತ ಗುಡ್ಲಮನಿ, ಉಪಾಧ್ಯಕ್ಷೆ ರೇಣುಖಾ ಹಾದಿಮನಿ, ಆರೋಗ್ಯ ನೀರಿಕ್ಷಕ ಚಿದಾನಂದ ಮೂಗಳಖೋಡ. ಸದಸ್ಯರಾದ ಈರಣ್ಣ ಕೊಣ್ಣೂರ, ಶಿವಾನಂದ ಸಣ್ಣಕ್ಕಿ, ಅಬ್ದುಲ್ಗಫಾರ್ ಡಾಂಗೆ, ಆನಂದ ಟಪಾಲ ಹಾಗೂ ಪ್ರಮುಖರಾದ ಚನ್ನಪ್ಪ ಅಥಣಿ, ಅನ್ವರ ನದಾಫ್, ಪ್ರಕಾಶ ಮುಗಳಖೋಡ, ಸಿದ್ದು ಗಡ್ಡೇಕಾರ, ನನುಸಾಬ ಹೊಗಾರ ಉಪಸ್ಥಿತರಿದ್ದರು.