ಮೂಡಲಗಿ:ಕೋವಿಡ್ ಎರಡನೆಯ ಅಲೆಯ ವಿರುದ್ದ ಹೋರಾಟ ಮಾಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿರುವ ಕೊರೋನಾ ವಾರಿಯರ್ಸ್‍ಗಳ ಕಾರ್ಯ ಶ್ಲಾಘನೀಯವಾದದ್ದು. ದುಡಿದ ಎಲ್ಲ ವಾರಿಯರ್ಸ್‍ಗಳಿಗೆ ಕೆಎಮ್‍ಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕೃತಜ್ಞತೆ ಸಲಿಸಿದರು.
ಸೋಮವಾರದಂದು ಪಟ್ಟಣದ ಈರಣ್ಣ ದೇವಸ್ಥಾನದ ಸಭಾಭವನದಲ್ಲಿ ಕೋವಿಡ್-19 ಟಾಸ್ಕಪೋರ್ಸ ಮತ್ತು ವಿವಿಧ ಇಲಾಖಾಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಸೇರದಂತೆ ಇದರಲ್ಲಿ ಭಾಗಿಯಾಗಿರುವ ಎಲ್ಲ ವಾರಿಯರ್ಸ್‍ಗಳ ಕಾರ್ಯಕ್ಕೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ರೋಗಿಗಳಿಗೆ ತುರ್ತು ಸಂದರ್ಭದಲ್ಲಿ ಅನುಕೂಲ ಕಲ್ಪಿಸಿಕೊಡಲು ಈಗಾಗಲೇ ಮೂಡಲಗಿ ಮತ್ತು ಕುಲಗೋಡ ಪಿಎಚ್‍ಸಿಗಳಿಗೆ ತಮ್ಮ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಎರಡು ಅಂಬ್ಯೂಲೆನ್ಸ್(ರಕ್ಷಾ ಕವಚ ವಾಹನ)ಗಳನ್ನು ಲೋಕಾರ್ಪಣೆ ಮಾಡಲಾಗಿದೆ. ಕೆಲವೇ ದಿನಗಳಲ್ಲಿ ಅಗತ್ಯವಿರುವ ಅರಭಾವಿ ಕ್ಷೇತ್ರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಏಳು ಹೊಸ ಅಂಬ್ಯೂಲೆನ್ಸ್ ಸೌಲಭ್ಯಗಳನ್ನು ಒದಗಿಸಲಾಗುವುದು. ಒಟ್ಟು 9 ಅಂಬ್ಯೂಲೆನ್ಸ್‍ಗಳನ್ನು ತಾವೇ ತಮ್ಮ ಶಾಸಕರ ನಿಧಿಯಿಂದ ನೀಡುವುದಾಗಿ ಹೇಳಿದರು, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮತ್ತು ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಅವರು ತಮ್ಮ ನಿಧಿಯಿಂದ ಒಂದೊಂದು ಅಂಬ್ಯೂಲೆನ್ಸ್‍ಗಳನ್ನು ನಮ್ಮ ಪಿಎಚ್‍ಸಿಗಳಿಗೆ ನೀಡಲು ಒಪ್ಪಿಕೊಂಡಿದ್ದು, ಇದರಿಂದ ಒಟ್ಟು 11 ಅಂಬ್ಯೂಲೆನ್ಸ್‍ಗಳು ಸಾರ್ವಜನಿಕರ ಸೇವೆಗೆ ಮೀಸಲಾಗಲಿವೆ. ತುರ್ತು ಸೇವೆಗೆ ಈ ಅಂಬ್ಯೂಲನ್ಸ್‍ಗಳು ಅನುಕೂಲವಾಗಲಿವೆ. ಅಂಬ್ಯೂ¯ನ್ಸ್‍ಗಳ ಪರದಾಟ ಇನ್ನಮುಂದೆ ಜನ ಸಾಮಾನ್ಯರಿಗೆ ತಪ್ಪಲಿದೆ ಎಂದು ಹೇಳಿದರು.
ಕೊರೋನಾ ವ್ಯಾಪಕವಾಗಿ ಹರಡಲು ಇತ್ತಿಚೆಗೆ ನಡೆದಿರುವ ಜಾತ್ರೆ-ಹಬ್ಬ ಹರಿದಿನಗಳು ಮತ್ತು ಮದುವೆಗಳು ಕಾರಣವಾಗಿರಬಹುದು, ಇವುಗಳನ್ನು ಮುಂಚಿತವಾಗಿಯೇ ಹತ್ತಿಕಿದ್ದರೆ ಕೊರೋನಾ ಹೆಚ್ಚುತ್ತಿರಲಿಲ್ಲ, ಇನ್ನೂ ಮುಂದಾದರೂ ಸಾರ್ವಜನಿಕರು ಜಾಗೃತಿಯಿಂದ ಇರುವಂತೆ ಅವರು ಮನವಿ ಮಾಡಿಕೊಂಡರು.