ಮೂಡಲಗಿ : ಮಸಗುಪ್ಪಿ ಮಹಾಲಕ್ಷಿ ದೇವಿ ದೇವಸ್ಥಾನವು ಭಕ್ತರ ಸಕಲ ಇಷ್ಟಾರ್ಥಗಳನ್ನು ನೆರವೇರಿಸುವ ಪುಣ್ಯಕ್ಷೇತ್ರವಾಗಿ ಬೆಳೆಯುತ್ತಿದೆ ಎಂದು ಕೆಎಂಎಫ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ತಾಲ್ಲೂಕಿನ ಮಸಗುಪ್ಪಿ ಗ್ರಾಮದ ಮಹಾಲಕ್ಷ್ಮೀದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಸುಮಾರು 5 ಕೋಟಿ ವೆಚ್ಚದಲ್ಲಿ ಮಹಾಲಕ್ಷ್ಮಿ ದೇವಿ ದೇವಸ್ಥಾನದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಿವೆ. 2.50 ಕೋಟಿ ರೂ.ವೆಚ್ಚದಲ್ಲಿ ದೇವಸ್ಥಾನದ ಹೊಸ ಕಟ್ಟಡ, 50 ಲಕ್ಷ ರೂ.ವೆಚ್ಚದಲ್ಲಿ ದೇವಸ್ಥಾನದ ಸಿಖರ , ಯಾತ್ರಾ ನಿವಾಸ, ಭಕ್ತಾಧಿಗಳಿಗೆ ಊಟದ ಅನುಕೂಲಕ್ಕೆ ಭೋಜನಾಲಯ ಸೇರಿ ಅನೇಕ ಕೆಲಸಗಳು ನಡೆದಿವೆ. ಭಕ್ತರಿಗೆ ಸಕಲ ಮೂಲ ಸೌಕರ್ಯಗಳನ್ನು ಇಲ್ಲಿ ದೇವಸ್ಥಾನದ ಆಡಳಿತ ಮಂಡಳಿಯವರು ಒದಗಿಸುತ್ತಿರುವುದು ಶ್ಲಾಘನೀಯವೆಂದು ಹೇಳಿದರು.
ಫೆ. 22 ರಿಂದ 24 ರವರೆಗೆ ಮಸಗುಪ್ಪಿಯಲ್ಲಿ ನಡೆಯಲಿರುವ ಮಹಾಲಕ್ಷ್ಮೀದೇವಿ ಹಾಗೂ ಬಸವೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ದೇವಸ್ಥಾನಕ್ಕೆ ಆಗಮಿಸಿ, ದೇವರ ದರ್ಶನ ಪಡೆದರು. ಇದೇ ವೇಳೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮಸಗುಪ್ಪಿಯ ಭಜರಂಗದಳ ಶಾಖೆಯನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಹಿರಿಯರಾದ ಕಲ್ಲಪ್ಪ ಉಪ್ಪಾರ, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಅಪ್ಪಯ್ಯಪ್ಪ ಬಡ್ನಿಂಗಗೋಳ, ಗ್ರಾಪಂ ಅಧ್ಯಕ್ಷೆ ಶಾಂತಪ್ಪ ತಿಗಡಿ, ಸಾತಪ್ಪ ಕೊಳದುರ್ಗಿ, ಕೆಂಚಪ್ಪ ಶಿಂತ್ರಿ, ಭರಮಪ್ಪ ಆಶಿರೊಟ್ಟಿ, ಸಂಜು ಹೊಸಕೋಟಿ, ಬಸವರಾಜ ಭುಜನ್ನವರ, ಭರಮಪ್ಪ ಗಂಗನ್ನವರ, ವೆಂಕಣ್ಣಾ ಮಳಲಿ, ಕಲ್ಲೋಳೆಪ್ಪ ಬಡ್ನಿಂಗಗೋಳ, ಅಶೋಕ ಮಳಲಿ, ಆನಂದ ಹೊಸಕೋಟಿ, ಬಾಳಪ್ಪ ತಿಗಡಿ, ಗ್ರಾಪಂ. ಉಪಾಧ್ಯಕ್ಷ ದುಂಡಪ್ಪ ಫಂತೋಜಿ, ಮೂಡಲಗಿಯ ಪ್ರಕಾಶ ಮಾದರ, ಭಜರಂಗದಳದ ಜಿಲ್ಲಾ ಸಂಚಾಲಕ ಲಕ್ಷ್ಮಣ ಮಾಶ್ಯಾಳೆ, ಶಿವಾನಂದ ಗೋಟೂರ, ಕುಮಾರ ಗಿರಡ್ಡಿ ಇತರರು ಇದ್ದರು.