ಗೋಕಾಕ : ಮೇ 7 ರಂದು ವಿದ್ಯುತ್ ಅವಘಡದಲ್ಲಿ ಮೃತಪಟ್ಟ ಮೂಡಲಗಿ ತಾಲ್ಲೂಕಿನ ಅರಭಾವಿ ಪಟ್ಟಣದ ಕುತುಬಸಾಬ್ ಬಾಗವಾನ ಅವರ ಕುಟುಂಬಕ್ಕೆ ಬುಧವಾರ ಇಲ್ಲಿನ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಶಾಸಕ, ಕೆಎಮ್‍ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ 5 ಲಕ್ಷ ರೂ. ಚೆಕ್ ವಿತರಿಸಿದರು.
ಇದೇ ವೇಳೆ ಮಾತನಾಡಿ, ಇಂಧನ ಇಲಾಖೆಯಿಂದ ಮಂಜೂರಾದ ಪರಿಹಾರ ಧನವನ್ನು ಕುಟುಂಬದವರು ಸದ್ಭಳಕೆ ಮಾಡಿಕೊಳ್ಳಬೇಕು. ಈ ಹಣವನ್ನು ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಬ್ಯಾಂಕ್‍ನಲ್ಲಿ ಠೇವಣಿಯಾಗಿಟ್ಟು , ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಕುಟುಂಬದವರು ಮುಂದಾಗಬೇಕು ಎಂದು ಸಲಹೆ ನೀಡಿದರು.
ಜಮೀನು ಕೆಲಸ ಮಾಡುತ್ತಿರುವ ವೇಳೆ ಕುತುಬಸಾಬ್ ಅವರು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದಾರೆ. ಕುಟುಂಬಕ್ಕೆ ದುಃಖ ಬರಿಸುವ ಶಕ್ತಿಯನ್ನು ಆ ದೇವರು ನೀಡಲಿ. ಜೀವ ಅಮೂಲ್ಯವಾದದ್ದು, ಆದ್ದರಿಂದ ಇಲಾಖೆಯ ಅಧಿಕಾರಿಗಳು ಹಾಗೂ ಸಾರ್ವಜನಿಕರು ವಿದ್ಯುತ್ ಅವಘಡಗಳು ಸಂಭವಿಸದಂತೆ ಜಾಗೃತಿ ವಹಿಸಬೇಕು ಎಂದರು
ಘಟಪ್ರಭಾ ಹೆಸ್ಕಾಂನ ಕಾರ್ಯ ನಿರ್ವಾಹಕ ಅಭಿಯಂತರ ಕಿರಣ ಸಣ್ಣಕ್ಕಿ, ಮೂಡಲಗಿ ಹೆಸ್ಕಾಂನ ಎಇಇ ಎಂ.ಎಸ್.ನಾಗನ್ನವರ, ಅರಭಾವಿ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷೆ ಪದ್ಮಾವತಿ ದೇವುಗೋಳ, ಸದಸ್ಯ ಕುಮಾರ ಪೂಜೇರಿ, ಜಿ.ಪಂ.ಮಾಜಿ ಸದಸ್ಯ ಪರಮೇಶ್ವರ ಹೊಸಮನಿ, ಅರಭಾವಿ ಬಿಜೆಪಿ ಮಂಡಲ ಅಲ್ಪ ಸಂಖ್ಯಾತ ಮೋರ್ಚಾ ಅಧ್ಯಕ್ಷ ಇಕ್ಬಾಲ ಸರ್ಕಾವಸ್, ರಮೇಶ ಬಿಲಕುಂದಿ, ಮಹಾದೇವ ಝಲ್ಲಿ, ಬಸು ಈಳಿಗೇರ ಹಾಗೂ ಬಾಗವಾನ ಕುಟುಂಬದವರು ಉಪಸ್ಥಿತರಿದ್ದರು.