ಭಾರತೀಯ ವಿಜ್ಞಾನಿಗಳ ಕಾರ್ಯಕ್ಕೆ ಇಡೀ ವಿಶ್ವವೇ ಹೆಮ್ಮೆ ಪಡುತ್ತಿದೆ!!
ಮೂಡಲಗಿ: ದೇಶದ ವಿಜ್ಞಾನಿಗಳು ತಯಾರಿಸಿರುವ ಕೋವಿಡ್ ಲಸಿಕೆಗೆ ಇಡೀ ವಿಶ್ವವೇ ಹೆಮ್ಮೆಪಡುತ್ತಿದೆ. ಕೋವಿಡ್-19 ಯಶಸ್ವಿಯಾಗಲೇಂದು ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಆರೋಗ್ಯ ಇಲಾಖೆಯ ಸಿಬ್ಬಂದಿವರಿಗೆ ಕೋವಿಡ್ ಲಸಿಕೆ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೋವಿಡ್ ಲಸಿಕೆಯಿಂದ ಯಾರೂ ಭಯಭೀತರಾಗಬಾರದು, ಮೊದಲ ಹಂತದಲ್ಲಿ ಕೊರೋನಾ ವಾರಿಯರ್ಸಗಳಿಗೆ ಲಸಿಕೆ ಹಾಕಲಾಗುತ್ತಿದೆ. ಲಸಿಕೆ ಹಾಕಿಸಿಕೊಳ್ಳುವದರಿಂದ ಯಾವುದೇ ಅಡ್ಡ ಪರಿಣಾಮಗಳು ಬೀರುವುದಿಲ್ಲ. ಉತ್ತಮ ಆರೋಗ್ಯಕ್ಕಾಗಿ ಲಸಿಕೆ ಹಾಕಿಸಿಕೊಳ್ಳಿ, ಭಯಭೀತರಾಗಬೇಡಿ ಇದರಲ್ಲಿ ಕೆಲವರು ವದಂತಿಗಳನ್ನು ಹಬ್ಬಿಸುತ್ತಿದ್ದಾರೆ. ಇದಕ್ಕೆ ಕಿವಿಗೊಡಬೇಡಿ ಎಂದು ಹೇಳಿದರು.
ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿದರ.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಹಣಮಂತ ಗುಡ್ಲಮನಿ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಸ ಢವಳೇಶ್ವರ, ಮುಖಂಡ ಎನ್.ಟಿ.ಪಿರೋಜಿ, ತಹಶೀಲ್ದಾರ ಡಿ.ಜಿ.ಮಹಾತ್, ತಾ.ಪಂ ಎಓ ಬಸವರಾಜ ಹೆಗ್ಗನಾಯಿಕ, ನಿವೃತ್ತ ಆರೋಗ್ಯ ಅಧಿಕಾರಿ ಡಾ: ಆರ್.ಎಸ್.ಬೆನಚನಮರಡಿ, ಡಿವಾಯ್‍ಎಸ್‍ಪಿ ಜಾವೇದ ಇನಾಮದಾರ್, ಬಿಇಒ ಅಜೀತ ಮನ್ನಕೇರಿ, ಸಿಪಿಐ ವೆಂಕಟೇಶ ಮುರನ್ನಾಳ, ಟಿ.ಎಚ್.ಒ ಡಾ: ಎಮ್.ಎಸ್.ಕೊಪ್ಪದ, ಗೋಕಾಕ ಸರಕಾರಿ ಆಸ್ಪತ್ರೆಯ ಮುಖ್ಯವೈಧ್ಯಾಧಿಕಾರಿ ರವೀಂದ್ರ ಅಂಟಿನ, ಮೂಡಲಗಿ ಸಮುದಾಯ ಆರೋಗ್ಯ ಕೇಂದ್ರದ ವೈಧ್ಯಾಧಿಕಾರಿ ಡಾ: ಭಾರತಿ ಕೋಣಿ, ಮುಖ್ಯಾಧಿಕಾರಿ ದೀಪಕ ಹರ್ದಿ ಸೇರಿದಂತೆ ಹಲವು ಗಣ್ಯರು ಇದ್ದರು.