ಮನ್ನಿಕೇರಿಯಲ್ಲಿ ಗುರುದೇವ ದತ್ತ ಯೋಗ ಫೌಂಡೇಷನ್ ಆಶ್ರಯದಲ್ಲಿ ನಿರ್ಮಾಣವಾಗುತ್ತಿರುವ ಎಸ್‍ಎಸ್‍ವೈ ನೂತನ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ
ಗೋಕಾಕ : ಯೋಗ ಹಾಗೂ ಪ್ರಾಣಾಯಾಮದಿಂದ ಮಾತ್ರ ಎಲ್ಲ ದೀರ್ಘ ವ್ಯಾದಿಗಳನ್ನು ಬೇರು ಸಮೇತ ತೆಗೆದು ಹಾಕಲು ಸಾಧ್ಯವಿದೆ ಕರ್ನಾಟಕ ಹಾಲು ಮಹಾಮಂಡಳಿ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.
ತಾಲ್ಲೂಕಿನ ಮನ್ನಿಕೇರಿ ಗ್ರಾಮದ ಹೊರವಲಯದಲ್ಲಿರುವ ಗುರುದೇವ ದತ್ತ ಯೋಗಾ ಫೌಂಡೇಷನ್ ಆಶ್ರಯದಲ್ಲಿ ಸಿದ್ಧ ಸಮಾಧಿ ಯೋಗ(ಎಸ್‍ಎಸ್‍ವೈ) ತರಬೇತಿ ಕೇಂದ್ರದ ನೂತನ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಮನ್ನಿಕೇರಿಯಲ್ಲಿ ನಿರ್ಮಾಣ ಮಾಡಲು ಉದ್ಧೇಶಿಸಿರುವ ಸಿದ್ಧ ಸಮಾಧಿ ಯೋಗ ತರಬೇತಿ ಕೇಂದ್ರಕ್ಕೆ 6 ಲಕ್ಷ ರೂ.ಗಳನ್ನು ನೀಡಲಾಗಿದೆ. ಧ್ಯಾನ, ಪ್ರಾಣಾಯಮ, ಆಸನಗಳು, ವ್ಯಕ್ತಿತ್ವ ವಿಕಸನ, ಕರ್ಮಯೋಗ ಮತ್ತು ಜ್ಞಾನ ಯೋಗಗಳನ್ನೊಳಗೊಂಡ ಸಿದ್ಧ ಸಮಾಧಿ ಯೋಗವು ಪ್ರತಿಯೊಬ್ಬರ ಜೀವನದಲ್ಲಿ ಸಂಜೀವಿನಿಯಾಗಿದೆ ಎಂದರು.
ಹರಿಹರ ತಾಲ್ಲೂಕಿನ ಕೊಂಡಜ್ಜಿ ಗ್ರಾಮದ ಹನಮಂತ ಗುರುಗಳು ಎರಡು ದಶಕಗಳ ಜ್ಞಾನವನ್ನು ಸಿದ್ಧ ಸಮಾಧಿ ಯೋಗದಲ್ಲಿ ಕಳೆದಿದ್ದು, ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳ ಜನರಿಗೆ ಮನ ಮುಟ್ಟುವಂತೆ ಪ್ರಾಮಾಣಿಕ ಸೇವೆ ಮಾಡುತ್ತಿದ್ದಾರೆ.
ಗೋಕಾಕ ತಾಲೂಕಿನಲ್ಲಿ ಸಿದ್ಧ ಸಮಾಧಿ ಯೋಗ ಜ್ಞಾನವನ್ನು ನೀಡುತ್ತಿರುವ ಅವರು, ಮನ್ನಿಕೇರಿ ಗ್ರಾಮದಲ್ಲಿ ಸಮಾಧಿ ಯೋಗದ ಆಶ್ರಮ ಮಾಡಲು ಸಂಕಲ್ಪ ತೊಟ್ಟಿರುವ ಅವರ ಕಾರ್ಯ ಶ್ಲಾಘನೀಯವಾಗಿದೆ. ತಮ್ಮ ಶಿಷ್ಯ ಬಾಂಧವರಿಂದ 4 ಲಕ್ಷ ರೂ.ಗಳನ್ನು ಸಂಗ್ರಹಿಸಿರುವ ಗುರುಗಳಿಗೆ ವೈಯಕ್ತಿಕವಾಗಿ 6 ಲಕ್ಷ ರೂ.ಗಳನ್ನು ದೇಣಿಗೆಯನ್ನಾಗಿ ನೀಡುತ್ತಿದ್ದೇನೆ ಎಂದು ಹೇಳಿದರು.
ಹನಮಂತ ಗುರು ಮಾತನಾಡಿ, ಗೋಕಾಕ ಹಾಗೂ ಮೂಡಲಗಿ ತಾಲೂಕಿನ ಶಿಷ್ಯಂದಿರರು ಮನ್ನಿಕೇರಿ ಗ್ರಾಮದಲ್ಲಿ ಶಿಬಿರದ ಕಾರ್ಯಚಟುವಟಿಕೆ ನಡೆಸಲು ಆಶ್ರಮ ಆರಂಭಕ್ಕೆ ಸಹಕಾರ ನೀಡಿದರು. ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಮನವಿ ಮಾಡಿಕೊಂಡೆವು. ಸಕಾರಾತ್ಮಕವಾಗಿ ಸ್ಪಂದಿಸಿ, ಅಗತ್ಯವಿರುವ 1.30 ಎಕರೆ ಜಮೀನನ್ನು ಕೊಡಿಸಲು ಕಾರಣೀಕರ್ತರಾದರು.
ಇದೇ ವೇಳೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಹನಮಂತ ಹಾಗೂ ಗುರುಸಿದ್ದ ಗುರುಗಳು ಸತ್ಕರಿಸಿದರು. ಗುರುಸಿದ್ಧ ಗುರು, ಪ್ರಮುಖರಾದ ಶಿದ್ಲಿಂಗ ಕಂಬಳಿ, ರವಿ ಪರುಶೆಟ್ಟಿ, ಶಾಂತಪ್ಪ ಹಿರೇಮೇತ್ರಿ, ಸುಭಾಸ ಕೌಜಲಗಿ, ಮುದಕಪ್ಪ ಗೋಡಿ, ಸತ್ತೆಪ್ಪ ಗಡಾದ, ಬಾಳಪ್ಪ ಗೌಡರ, ಕೆಂಪಣ್ಣಾ ಚೌಕಾಶಿ, ಲಕ್ಷ್ಮಣ ಸಂಕ್ರಿ, ಲಕ್ಷ್ಮಣ ಗಡಾದ, ಪುಂಡಲೀಕ ದಳವಾಯಿ, ಗುರುಪಾದ ರಾಮಣ್ಣಿ, ಬಸು ನಾಯ್ಕರ, ಲಕ್ಕಪ್ಪ ಕೊರಕಪೂಜೇರಿ, ಮಹಾಂತಯ್ಯಾ ಹಿರೇಮಠ, ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.