ಮೂಡಲಗಿ- ಸಾಮಾಜಿಕವಾಗಿ, ಧಾರ್ಮಿಕವಾಗಿ ಸಮಾಜದ ವಿವಿಧ ಚಟುವಟಿಕೆಗಳಿಗೆ ಸುಸಜ್ಜಿತವಾದ ಅಂಬೇಡ್ಕರ ಭವನವನ್ನು ಸಧ್ಭಳಕೆ ಮಾಡಿಕೊಳ್ಳುವಂತೆ ಶಾಸಕ ಮತ್ತು ಜಿಲ್ಲಾ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಒಕ್ಕೂಟದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಕಳೆದ ರವಿವಾರದಂದು ತಾಲ್ಲೂಕಿನ ಕಮಲದಿನ್ನಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಡಾ. ಬಿ.ಆರ್. ಅಂಬೇಡ್ಕರ ಭವನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜಕ್ಕೆ ಅನುಕೂಲವಾಗಲು ಈ ಭವನವನ್ನು ನಿರ್ಮಿಸಿದ್ದು, ಸ್ವಚ್ಛತೆಯ ಜತೆಗೆ ಉತ್ತಮ ಕಾರ್ಯಗಳಿಗೆ ಇದನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಬಾಂಧವರಲ್ಲಿ ಕೋರಿದರು.
ದಲಿತರ ಕಾಲನಿ ಜತೆಗೂ ಇಡೀ ಕಮಲದಿನ್ನಿ ಅಭಿವೃದ್ಧಿಗಾಗಿ ಸರಕಾರದ ವಿವಿಧ ಯೋಜನೆಗಳನ್ನು ಒದಗಿಸಲಾಗಿದೆ. ಅಭಿವೃದ್ಧಿ ಕಾರ್ಯಗಳಲ್ಲಿ ಎಂದಿಗೂ ಪಕ್ಷಪಾತ ಮಾಡಿಲ್ಲ. ಕಳೆದ ಮೂರು ದಶಕಗಳಿಂದ ಅರಭಾವಿ ಮತಕ್ಷೇತ್ರದ ಸರ್ವಾಂಗೀಣ ಪ್ರಗತಿಗಾಗಿ ಶ್ರಮಿಸಲಾಗುತ್ತಿದೆ. ಎಲ್ಲ ಸಮಾಜಗಳನ್ನು ಒಗ್ಗೂಡಿಸುವ ಮೂಲಕ ಆಯಾ ಸಮಾಜಗಳ ಪ್ರಮುಖರಿಗೆ ವಿವಿಧ ಕ್ಷೇತ್ರಗಳಲ್ಲಿ ಸ್ಥಾನ ಮಾನ ನೀಡಲಾಗಿದೆ. ಮುಂದಿನ ದಿನಗಳಲ್ಲಿಯೂ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಅಭಿವೃದ್ಧಿಗೆ ಆದ್ಯತೆ ನೀಡುವ ಮೂಲಕ ಸಮಾಜಗಳ ಪ್ರಗತಿಗಾಗಿ ವಿಶೇಷ ಆದ್ಯತೆ ನೀಡಲಾಗುವುದು ಎಂದು ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ರೂ.೨೦ ಲಕ್ಷ ವೆಚ್ಚದ ಅಂಬೇಡ್ಕರ ಭವನ ಮತ್ತು ರೂ. ೧೬ ಲಕ್ಷ ವೆಚ್ಚದ ಮೆಥೋಡಿಸ್ಟ ಚರ್ಚನ ಕಂಪೌAಡ ಕಟ್ಟಡವನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಉದ್ಘಾಟಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೇ. ಅಬ್ರಾಹಂ ಎಚ್ ಮತ್ತು ಫಾ. ಮ್ಯಾಥ್ಯೂ ಎಚ್ ವಹಿಸಿದ್ದರು.
ಈ ಸಂದರ್ಭದಲ್ಲಿ ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ, ಮುಖಂಡರಾದ ಲಕ್ಷ್ಮಣ್ ಹುಚ್ಚರೆಡ್ಡಿ, ಬಸಪ್ಪ ಸಂಕನ್ನವರ, ರಾಮಪ್ಪ ಕೆಂಚರೆಡ್ಡಿ, ಮುತ್ತೆಪ್ಪ ಕೊಪ್ಪದ, ಗುರುಪುತ್ರ ದಡ್ಡಿಮನಿ, ಗ್ಯಾನಪ್ಪ ಮಾರಾಪೂರ, ರಾಮಪ್ಪ ಅವರಾದಿ, ಯಾಕೂಬ ಹಾದಿಮನಿ,ಯೋಹಾನ ಹಾದಿಮನಿ, ಯೋಹನಾ ಮಾರಾಪೂರ, ಸುಂದರ ಹಾದಿಮನಿ, ಯಶವಂತ ನಡುವಿನಮನಿ, ಶಿವಲಿಂಗ ಹಾದಿಮನಿ, ರಾಜೇಶ ದಡ್ಡಿಮನಿ, ಉದಯ ಸನದಿ, ಈರಪ್ಪ ಜಿನಗನ್ನವರ, ನಾಗಪ್ಪ ಪೂಜೇರಿ, ಅಶೋಕ ಮಾಚಕನೂರ, ವಿದ್ಯಾ ಪೂಜೇರಿ, ದಲಿತ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.