Breaking News

ನಮ್ಮ ಧರ್ಮವನ್ನು ಪ್ರೀತಿಸೋಣ* *ಅನ್ಯ ಧರ್ಮವನ್ನು ಗೌರವಿಸೋಣ ;* *ಶಾಸಕ ಬಾಲಚಂದ್ರ ಜಾರಕಿಹೊಳಿ*


ಮೂಡಲಗಿಯಲ್ಲಿ ಮೆಥೋಡಿಸ್ಟ್ ಚರ್ಚ ಆಶ್ರಯದಲ್ಲಿ ಜರುಗಿದ ಭಕ್ತಿ ಸಂಜೀವನ ಕೂಟಗಳನ್ನು ಉದ್ಘಾಟಿಸಿದ ಬಾಲಚಂದ್ರ ಜಾರಕಿಹೊಳಿ

       *ಮೂಡಲಗಿ*: ಭಾರತದಲ್ಲಿ ನಾನಾ ಜಾತಿ-ಧರ್ಮಗಳಿದ್ದರೂ ವಿವಿಧತೆಯಲ್ಲಿ ಏಕತೆಯನ್ನು ಬಿಂಬಿಸುತ್ತಿರುವ ನಮ್ಮ ದೇಶವು ಪ್ರಪಂಚದಲ್ಲಿ ಜಾತ್ಯಾತೀತ ರಾಷ್ಟ್ರವಾಗಿದ್ದು, ನಮ್ಮ ಧರ್ಮವನ್ನು ಪ್ರೀತಿಸುವುದರ ಜೊತೆಗೆ ಬೇರೆ ಧರ್ಮಗಳ ಬಗ್ಗೆ ಅಭಿಮಾನ ಹಾಗೂ ಗೌರವವನ್ನು ಹೊಂದಬೇಕೆಂದು ಶಾಸಕ, ಕೆಎಂಎಫ್ ನಿರ್ದೇಶಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

     ಶುಕ್ರವಾರ ಸಂಜೆ ಪಟ್ಟಣದ ಮೆಥೋಡಿಸ್ಟ್ ಚರ್ಚ ಆಶ್ರಯದಲ್ಲಿ ಭಕ್ತಿ ಸಂಜೀವನ ಕೂಟಗಳು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾವು ಹೊಂದಿರುವ ಧರ್ಮದ ಬಗ್ಗೆ ಪ್ರೀತಿ ಮಾಡಬೇಕು. ಜೊತೆಗೆ ಅನ್ಯ ಧರ್ಮವನ್ನು ಗೌರವಿಸುವ ಕೆಲಸ ನಡೆಯಬೇಕೆಂದು ಅವರು ಒತ್ತಿ ಹೇಳಿದರು.

ಅರಭಾವಿ-ಗೋಕಾಕ ಮತಕ್ಷೇತ್ರಗಳಲ್ಲಿ ಎಲ್ಲ ಜಾತಿಯ ಬಾಂಧವರು ಪರಸ್ಪರ ಸಹೋದರರಂತೆ ಬಾಳಿ ಬದುಕುತ್ತಿದ್ದಾರೆ. ಎಲ್ಲರೂ ಶಾಂತಿಯಿಂದ ಬಾಳುತ್ತಿದ್ದಾರೆ. ನಮ್ಮದು ಶಾಂತಿಯ ವನ ಎಂದು ಹೇಳಿದ ಅವರು, ಕ್ರೈಸ್ತ ಸಮುದಾಯದ ಬೇಡಿಕೆಗಳಿಗೆ ಸ್ಪಂದಿಸುವ ಭರವಸೆ ನೀಡಿದರು.

    ಮೂಡಲಗಿ ಪಟ್ಟಣದ ಕ್ರೈಸ್ತ ಬಾಂಧವರು ನೂತನ ಚರ್ಚ ಕಟ್ಟಡದ ಬೇಡಿಕೆಯನ್ನು ಇಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಭವ್ಯವಾದ ಚರ್ಚ ಕಟ್ಟಡ ನಿರ್ಮಾಣಕ್ಕೆ ಸರ್ಕಾರದ ಅನುದಾನವನ್ನು ಒದಗಿಸಿಕೊಡುವುದಾಗಿ ಅವರು ತಿಳಿಸಿದರು.

   ಶಿಕ್ಷಣವೊಂದೇ ಸಮಾಜದ ಬದಲಾವಣೆಗೆ ಪ್ರಮುಖ ಅಸ್ತ್ರವಾಗಿದೆ. ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸಮಾಜದ ಮುಖ್ಯವಾಹಿನಿಗೆ ತರಲು ಪ್ರಯತ್ನಿಸಬೇಕು. ಈಗಾಗಲೇ ಮೂಡಲಗಿ ಶೈಕ್ಷಣಿಕ ವಲಯವು ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

    ಅಧ್ಯಕ್ಷತೆಯನ್ನು ಮೆಥೋಡಿಸ್ಟ್ ಚರ್ಚ ಸಭಾ ಪಾಲಕ ರೇ. ವಿಜಯಕುಮಾರ ಮೂಡಲಗಿ ವಹಿಸಿದ್ದರು. ದೈವ ಸಂದೇಶಕರಾಗಿ ಬೆಂಗಳೂರು ನ್ಯೂ ಹಾರ್ವೆಸ್ಟ್ ಚರ್ಚನ ರೇ. ಪಿ.ಎಸ್. ಮಾಚಯ್ಯಾ ಮ್ಯಾಥ್ಯೂ ಆಗಮಿಸಿ ಜಾರಕಿಹೊಳಿ ಕುಟುಂಬವು ಇನ್ನೂ ಹೆಚ್ಚಿನ ಜನಸೇವೆ ಮಾಡಲಿ. ಈ ಕುಟುಂಬವು ಉತ್ತರೋತ್ತರವಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.

    ವೇದಿಕೆಯಲ್ಲಿ ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಸ ಢವಳೇಶ್ವರ, ಗಣ್ಯರಾದ ಬಸವಪ್ರಭು ನಿಡಗುಂದಿ, ರವೀಂದ್ರ ಸೋನವಾಲಕರ, ರಾಮಣ್ಣಾ ಹಂದಿಗುಂದ, ಮಲ್ಲಪ್ಪ ಗಾಣಿಗೇರ, ಈರಪ್ಪ ಬನ್ನೂರ, ಡಾ. ವೀಣಾ ಕನಕರಡ್ಡಿ, ಲೆಕ್ಕಪರಿಶೋಧಕ ಸೈದಪ್ಪ ಗದಾಡಿ, ಹುಸೇನ ಶೇಖ, ಅಜೀಜ ಡಾಂಗೆ, ರಾಮು ಝಂಡೇಕುರುಬರ, ಸತ್ತೆಪ್ಪ ಕರವಾಡಿ, ಮರೆಪ್ಪ ಮರೆಪ್ಪಗೋಳ, ರವೀಂದ್ರ ಸಣ್ಣಕ್ಕಿ, ಎಬಿನೇಜರ್ ಕರಬನ್ನವರ, ಪ್ರಭಾಕರ ಬಂಗೆನ್ನವರ, ರಮೇಶ ಸಣ್ಣಕ್ಕಿ, ಎಸ್.ವಾಯ್. ಸಣ್ಣಕ್ಕಿ, ಲಾಲಸಾಬ ಸಿದ್ದಾಪೂರ, ಹನಮಂತ ಗುಡ್ಲಮನಿ, ಅನ್ವರ ನದಾಫ, ಮಹಾದೇವ ಶೆಕ್ಕಿ, ಸಿಪಿಐ ಶ್ರೀಶೈಲ ಬ್ಯಾಕೋಡ್, ಬಿಇಓ ಅಜೀತ ಮನ್ನಿಕೇರಿ, ಪಿಎಸ್‍ಐ ಎಚ್.ವಾಯ್. ಬಾಲದಂಡಿ, ರಾಚಪ್ಪ ಬೆಳಕೂಡ, ವಿಜಯ ಮೂಡಲಗಿ, ಯಶವಂತ ಮರೆನ್ನವರ, ಹನಮಂತ ಕವಲಗೋಳ, ಸೇರಿದಂತೆ ಅನೇಕ ಪ್ರಮುಖರು ಉಪಸ್ಥಿತರಿದ್ದರು. ಶಿಕ್ಷಕ ಎ.ಪಿ. ಪರಸನ್ನವರ ಕಾರ್ಯಕ್ರಮ ನಿರೂಪಿಸಿದರು.

    ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಪಟ್ಟಣದ ಕಲ್ಮೇಶ್ವರ ವೃತ್ತದಿಂದ ಕಾರ್ಯಕ್ರಮದ ವೇದಿಕೆಯವರೆಗೆ ಪುಷ್ಪಾರ್ಪಣೆ ಮಾಡುತ್ತ ಅದ್ಧೂರಿಯಾಗಿ ಬರಮಾಡಿಕೊಳ್ಳಲಾಯಿತು.


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

ರೈತರ ಖಾತೆಗಳಿಗೆ ಪರಿಹಾರವನ್ನು ಜಮೆ ಮಾಡಿ; ಅಧಿಕಾರಿಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸೂಚನೆ

ಗೋಕಾಕ : ಕಳೆದ ಆಗಷ್ಟ್ ತಿಂಗಳಲ್ಲಿ ಸಂಭವಿಸಿದ ಅತಿವೃಷ್ಟಿ ಮತ್ತು ಪ್ರವಾಹದಿಂದ ಹಾನಿಗೀಡಾಗಿರುವ ರೈತರ ಬೆಳೆಗಳಿಗೆ ಪರಿಹಾರ ಮೊತ್ತವನ್ನು ವಿತರಿಸುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ