*ಮೂಡಲಗಿ* : ಸಾರ್ವಜನಿಕರ ಸುಗಮ ಸಂಚಾರಕ್ಕೆ ತುಕ್ಕಾನಟ್ಟಿಯಿಂದ ಕಲ್ಲೋಳಿವರೆಗಿನ ರಸ್ತೆ ಸುಧಾರಣಾ ಕಾಮಗಾರಿಯನ್ನು ಗುಣಮಟ್ಟದಿಂದ ಕೈಗೊಂಡು ಎರಡು ತಿಂಗಳೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಸೂಚಿಸಿದರು.
ಗುರುವಾರದಂದು ಲೋಕೋಪಯೋಗಿ ಇಲಾಖೆಯಿಂದ 9.60 ಕೋಟಿ ರೂ. ವೆಚ್ಚದ ತುಕ್ಕಾನಟ್ಟಿ-ಕಲ್ಲೋಳಿ ರಸ್ತೆ ಸುಧಾರಣೆಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಈ ರಸ್ತೆ ಅಭಿವೃದ್ಧಿಯಿಂದ ಕಲ್ಲೋಳಿಯಿಂದ ಸಂಚರಿಸುವ ತುಕ್ಕಾನಟ್ಟಿ ಮತ್ತು ರಾಯಬಾಗ ತಾಲೂಕಿನ ಗ್ರಾಮಗಳಿಗೆ ಅನುಕೂಲ ಕಲ್ಪಿಸಿದಂತಾಗುತ್ತದೆ ಎಂದು ತಿಳಿಸಿದರು.
ರಸ್ತೆಗಳ ಅಭಿವೃದ್ಧಿಗಾಗಿ ಕ್ಷೇತ್ರದಲ್ಲಿ ಈಗಾಗಲೇ ವಿವಿಧ ರಸ್ತೆ ಕಾಮಗಾರಿಗಳನ್ನು ತೆಗೆದುಕೊಂಡಿದ್ದೇವೆ. ಇದೇ ಡಿಸೆಂಬರ್ ಅಂತ್ಯದೊಳಗೆ ಬಹುತೇಕ ಎಲ್ಲ ಕಾಮಗಾರಿಗಳು ಪೂರ್ಣಗೊಳ್ಳಲಿವೆ.
ಕಲ್ಲೋಳಿಯಿಂದ ತುಕ್ಕಾನಟ್ಟಿ(ತಾಲೂಕಾ ಹದ್ದಿ)ವರೆಗಿನ 6.50 ಕಿ.ಮೀ ರಸ್ತೆ ಸಹ ಸುಧಾರಣೆಯಾಗಲಿದೆ. ಸಾರ್ವಜನಿಕರು ಸಹ ರಸ್ತೆ ಕಾಮಗಾರಿಗೆ ಸಹಕರಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಅಧ್ಯಕ್ಷ ಬಸಗೌಡ ಪಾಟೀಲ, ತುಕ್ಕಾನಟ್ಟಿ ಗ್ರಾಪಂ ಅಧ್ಯಕ್ಷ ಪುಂಡಲೀಕ ಬಾಗೇವಾಡಿ, ಶಿವಪ್ಪ ಬೆಳಕೂಡ, ಸಿದ್ದಪ್ಪ ಹಮ್ಮನ್ನವರ, ಸುಭಾಸ ಕುರಬೇಟ, ಶಿವಪ್ಪ ಮರ್ದಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ನೀಲಕಂಠ ಕಪ್ಪಲಗುದ್ದಿ, ಅಜ್ಜಪ್ಪ ಮನ್ನಿಕೇರಿ, ಮಲ್ಲಪ್ಪ ಹೆಬ್ಬಾಳ, ವಸಂತ ತಹಶೀಲ್ದಾರ, ಬಿ.ಬಿ. ದಾಸನವರ, ಕುಮಾರ ಮರ್ದಿ, ಪರಪ್ಪ ಕಡಾಡಿ, ಮಹಾಂತೇಶ ಕಪ್ಪಲಗುದ್ದಿ, ಸೋಮು ಹುಲಕುಂದ, ವಸಂತ ಹಮ್ಮನ್ನವರ, ಯಮನಪ್ಪ ಗದಾಡಿ, ವಸಂತ ನಾಯ್ಕವಾಡಿ, ಬಸು ಯಾದಗೂಡ, ಗುತ್ತಿಗೆದಾರ ವಿ.ಎಸ್. ವಾಲಿ, ಅಧಿಕಾರಿಗಳು ಸೇರಿದಂತೆ ಕಲ್ಲೋಳಿ ಮತ್ತು ತುಕ್ಕಾನಟ್ಟಿ ಗ್ರಾಮಗಳ ಮುಖಂಡರು ಉಪಸ್ಥಿತರಿದ್ದರು.