ಮೂಡಲಗಿ: ಬಹುನಿರಕ್ಷಿತ ಕುತುಹಲಕ್ಕೆ ಕಾರಣವಾಗಿದ ಸ್ಥಳೀಯ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ, ಹಣಮಂತ ಗುಡ್ಲಮನಿ ಹಾಗೂ ರೇಣುಖಾ ಹಾದಿಮನಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಡಿ.ಜೆ. ಮಹಾತ್ ಪ್ರಕಟಣೆಯಲ್ಲಿ ತಿಳಿಸಿದರು.
ಶುಕ್ರವಾರ ಪಟ್ಟಣದ ಪುರಸಭೆಯ ಸಭಾಂಗಣದಲ್ಲಿ ಜರುಗಿದ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಆಯ್ಕೆ ಕುರಿತು ಚುನಾವಣಾ ಪ್ರಕೀಯೇಗಳು ಜರುಗಿದವು. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ತಲಾ ಒಂದರಂತೆ ಚುನಾವಣಾ ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಅವಿರೋಧವಾಗಿ ಎರಡು ಸ್ಥಾನಗಳಿಗೆ ಚುನಾವಣಾ ಆಯ್ಕೆ ಪ್ರಕೀಯೇ ಜರುಗಿತು.
ನೂತನ ಪುರಸಭೆ ಅಧ್ಯಕ್ಷರಾದ ಹಣಮಂತ ಗುಡ್ಲಮನಿ ಚುನಾವಣಾ ಪ್ರಕೀಯೇ ನಂತರ ಮಾತನಾಡಿ, ಮೂಡಲಗಿಯೂ ಶಾಂತಿ ಸೌಹಾರ್ದತೆಗೆ ಹೆಸರುವಾಸಿಯಾಗಿದ್ದು ಎಲ್ಲ ಸಮಾಜದವರು ಒಗ್ಗಟ್ಟಿನಿಂದ ಸಾಮರಸ್ಯದ ಜೀವನ ಸಾಕ್ಷಿಯಾಗಿದೆ. ಪಟ್ಟಣದ ಅಭಿವೃದ್ಧಿಯ ಸಲುವಾಗಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿಯವರು ಅನೇಕ ಯೋಜನೆಗಳನ್ನು ಮೂಡಲಗಿ ಪಟ್ಟಣದ ಅಭಿವೃದ್ಧಿಗಾಗಿ ತಂದಿರುತ್ತಾರೆ.
ಮುಂದಿನ ದಿನಗಳಲ್ಲಿಯೂ ಪಟ್ಟಣದ ಅಭಿವೃದ್ಧಿ ಮೂಲಭೂತ ಸೌಕರ್ಯ ಸಾರ್ವಜನಿಕರಿಗೆ ಉಪಯೋಕ್ತ ಶುದ್ದ ಕುಡಿಯುವ ನೀರು, ಸ್ವಚ್ಚತೆ, ಚರಂಡಿ ವ್ಯೆವಸ್ಥೆ, ವಿದುತ್ಯ ಉದ್ಯಾನವನಗಳು ಅಷ್ಟೇ ಅಲ್ಲದೆ ನಾಗರಿಕರಿಗೆ ಬಹುಮುಖ್ಯ ಸೌಕರ್ಯಗಳನ್ನು ನೀಡುವ ನಿಟ್ಟಿನಲ್ಲಿ ಎಲ್ಲರೂ ಶ್ರಮೀಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಬೆಳಗಾವಿ ಬಿಡಿಸಿಸಿ ಉಪಾಧ್ಯಕ್ಷ ಎಸ್.ಜಿ.ಢವಳೇಶ್ವರ, ಮಾಜಿ ಪುರಸಭೆ ಅಧ್ಯಕ್ಷರಾದ ವಿರಣ್ಣ ಹೊಸುರ, ಶಾಸಕರ ಆಪ್ತರಾದ ನಾಗಪ್ಪ ಶೇಖರಗೋಳ, ಶಾಸಕರ ಕಚೇರಿ ಸಿಬ್ಬಂದಿ ದಾಸಪ್ಪ ನಾಯ್ಕ, ರವೀಂದ್ರ ಸಣ್ಣಕ್ಕಿ, ಮಾಜಿ ಉಪಾಧ್ಯಕ್ಷ ರವೀಂದ್ರ ಸೋನವಾಲ್ಕರ, ಮುಖಂಡರಾದ ಎನ್.ಟಿ. ಪಿರೋಜಿ, ವಿಜಯಕುಮಾರ ಸೋನವಾಲ್ಕರ, ಭೀಮಶಿ ಮಗದುಮ್ಮ, ಸಂತೋಷ ಸೋನವಾಲ್ಕರ, ಈರಣ್ಣ ಕೊಣ್ಣೂರ, ಡಾ ಎಸ್.ಎಸ್.ಪಾಟೀಲ್, ಮರೇಪ್ಪ ಮರೇಪ್ಪಗೋಳ ಹಾಗೂ ಸದಸ್ಯರು ಪಟ್ಟಣದ ಗಣ್ಯರು ಉಪಸ್ಥಿತರಿದ್ದರು.
ಕೋಟ್ : ಒಟ್ಟು 23 ಸದಸ್ಯ ಬಲದ ಮೂಡಲಗಿ ಪುರಸಭೆಯಲ್ಲಿ ಪಕ್ಷೇತರರು ಸೇರಿ 15 ಜನ ಬಿಜೆಪಿಯವರಾಗಿದ್ದರೆ, ಉಳಿದ 8 ಜನರು ಜೆಡಿಎಸ್‍ನಿಂದ ಆಯ್ಕೆಯಾಗಿದ್ದಾರೆ. ಪುರಸಭೆಯಲ್ಲಿ ಎಲ್ಲರೂ ಪಕ್ಷಭೇಧ ಮರೆತು ಒಂದಾಗಿ ಕೊಡಿಕೊಂಡು ಕೆಲಸ ಮಾಡಬೇಕೆಂಬುದು ಅಪೇಕೆ.್ಷ ಅದರಂತೆಯೇ ಹಿಂದುಳಿದ (ಅ) ವರ್ಗಕ್ಕೆ ಮೀಸಲಿದ್ದ ಅಧ್ಯಕ್ಷ ಸ್ಥಾನವನ್ನು ಬಿಜೆಪಿಯಲ್ಲಿ ಉಳಿಸಿಕೊಂಡಿದ್ದು, ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನವನ್ನು ಜೆಡಿಎಸ್ ಗೆ ಬಿಟ್ಟುಕೊಡಲಾಗಿದೆ.
ಹಿಂದುಳಿದ ಕುರುಬ ಸಮಾಜಕ್ಕೆ ಅಧ್ಯಕ್ಷಸ್ಥಾನವನ್ನು ನೀಡುವ ಮೂಲಕ ಆ ಸಮಾಜದವರ ಆಶಯವನ್ನು ಈಡೇರಿಸಲಾಗಿದೆ. ಅಭಿವೃದ್ಧಿ ವಿಷಯ ಬಂದಾಗ ಎಲ್ಲರೂ ಸಮನ್ವಯತೆಯಿಂದ ಕೆಲಸ ಮಾಡಬೇಕು. ನಾಗರಿಕರ ಹಿತದೃಷ್ಟಿಯಿಂದ ಮತ್ತು ಪಟ್ಟಣದ ಸಮಗ್ರ ಅಭಿವೃದ್ಧಿಯ ವಿಷಯದಲ್ಲಿ ಒಂದಾಗಿ ಒಗ್ಗಟ್ಟಾಗಿ ಹೋಗಬೇಕು. ಮೂಡಲಗಿ ಪುರಸಭೆಯ ಅಭಿವೃದ್ಧಿಗಾಗಿ ಸರಕಾರದಿಂದ ಹೆಚ್ಚಿನ ಅನುದಾನ ತರಲಾಗುವುದು. ಪಟ್ಟಣದ ಸರ್ವತೋಮುಖ ಬೆಳವಣಿಗೆಗೆ ಹಲವಾರು ಯೋಜನೆಗಳನ್ನು ರೂಪಿಸಿ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವದು.