ಒಂದು ಕಿಮೀ ರಸ್ತೆಯನ್ನು ಸುಧಾರಣೆ ಮಾಡಲು ಮುಂದಾದ ಶಾಸಕ ಬಾಲಚಂದ್ರ ಜಾರಕಿಹೊಳಿ*
*ಮೂಡಲಗಿ* ಇಲ್ಲಿಯ ಅಂಬೇಡ್ಕರ್ ವೃತ್ತದಿಂದ ಟಿಪ್ಪು ಸುಲ್ತಾನ್ ವೃತ್ತದವರೆಗೆ ರಸ್ತೆ ಸುಧಾರಣೆ ಕಾಮಗಾರಿಗೆ ಬರುವ ಸೋಮವಾರದಂದು ಗುದ್ದಲಿ ಪೂಜೆ ಜರುಗಲಿದೆ.
ಗುರುವಾರದಂದು ಹದಿಗೆಟ್ಟ ರಸ್ತೆಯನ್ನು ಪರಿಶೀಲನೆ ಮಾಡಿದ ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ ಅವರು, ಶಾಸಕ ಬಾಲಚಂದ್ರ ಜಾರಕಿಕೊಳಿ ಅವರು ತಮ್ಮ ಸ್ವಂತ ವೆಚ್ಚದಲ್ಲಿ ಸುಮಾರು 1.ಕಿ.ಮೀ. ರಸ್ತೆಯನ್ನು ಅಭಿವೃದ್ಧಿ ಮಾಡುವರು. ಇದಕ್ಕಾಗಿ ಸೋಮವಾರವೇ ರಸ್ತೆ ಕಾಮಗಾರಿಗೆ ಮುಹೂರ್ತ ಫಿಕ್ಸ್ ಆಗಿದೆ ಎಂದು ಹೇಳಿದರು.
ಮೂಡಲಗಿ ಪಟ್ಟಣದ ಸಾರ್ವಜನಿಕರು ಮತ್ತು ಮುಖಂಡರು ಖುದ್ದಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಹದಗೆಟ್ಟ ರಸ್ತಯನ್ನು ಸುಧಾರಣೆ ಮಾಡುವಂತೆ ಮನವಿ ಮಾಡಿಕೊಂಡಿದ್ದರು.
ಸಾರ್ವಜನಿಕರ ಕೋರಿಕೆಯ ಮೇರೆಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಈ ಎರಡೂ ರಸ್ತೆಯನ್ನು ಅಭಿವೃದ್ಧಿ ಮಾಡಲಿದ್ದಾರೆ. 1 ಕಿ.ಮೀ ಅಂತರದ ಅಂಬೇಡ್ಕರ್ ವೃತ್ತ- ಟಿಪ್ಪು ಸುಲ್ತಾನ್ ವೃತ್ತ ರಸ್ತೆಯನ್ನು ಅಭಿವೃದ್ಧಿಗೊಳಿಸಲು ಸ್ವತಃ ಶಾಸಕರೇ ಮುಂದೆ ಬಂದಿದ್ದು, ಇದಕ್ಕಾಗಿ ತಮ್ಮ ಸ್ವಂತ ದುಡ್ಡನ್ನು ಈ ಕಾಮಗಾರಿಗೆ ಬಳಕೆ ಮಾಡುವ ಮೂಲಕ ಸಾರ್ವಜನಿಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಿದ್ದಾರೆ.
ಈ ಸಂದರ್ಭದಲ್ಲಿ ಶಾಸಕರ ಆಪ್ತ ಸಹಾಯಕ ಸಿ.ಪಿ.ಯಕ್ಸಂಬಿ, ಗುತ್ತಿಗೆದಾರ ಬಸವರಾಜ ದಾಸನವರ, ಹಣಮಂತ ದಾಸನವರ ಉಪಸ್ಥಿತರಿದ್ದರು