Breaking News

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ದೇಶಪ್ರೇಮ ಮೊಳಗಿಸಿದ ಸಾವಿರಾರು ಕಾರ್ಯಕರ್ತರು


*ಮೂಡಲಗಿ*: ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಅರಭಾಂವಿ ಬಿಜೆಪಿ ಮಂಡಲ ಗುರುವಾರದಂದು ಹಮ್ಮಿಕೊಂಡಿದ್ದ ಬೈಕ್ ರ್ಯಾಲಿಯು ಪಟ್ಟಣದ ಕಲ್ಮೇಶ್ವರ ವೃತ್ತದಲ್ಲಿ ಸಮಾರೋಪಗೊಂಡಿತು.


ಯುವ ಧುರೀಣ ಸರ್ವೋತ್ತಮ ಜಾರಕಿಹೊಳಿ ಅವರು ಕಲ್ಮೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಅರ್ಪಿಸಿದರು.
ಗೋಕಾಕ ಎನ್‍ಎಸ್‍ಎಫ್ ಅತಿಥಿ ಗೃಹದಿಂದ ಆರಂಭಗೊಂಡ ಬಿಜೆಪಿ ಕಾರ್ಯಕರ್ತರ ಬೈಕ್ ರ್ಯಾಲಿ ಲೋಳಸೂರು, ಕಲ್ಲೋಳಿ, ನಾಗನೂರ ಮೂಲಕ ಮೂಡಲಗಿ ಪಟ್ಟಣಕ್ಕೆ ಸುಮಾರು 2 ಸಾವಿರಕ್ಕೂ ಹೆಚ್ಚಿನ ಕಾರ್ಯಕರ್ತರು ಭಾಗಿಯಾಗಿದ್ದರು.
ಕೆಎಮ್‍ಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಅರಭಾಂವಿ ಮತಕ್ಷೇತ್ರದ ಎಲ್ಲ ಗ್ರಾಮಗಳ ಕಾರ್ಯಕರ್ತರು, ಬಾಲಚಂದ್ರ ಜಾರಕಿಹೊಳಿ ಅವರ ಅಭಿಮಾನಿಗಳು ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು. ವಂದೇ ಮಾತರಂ, ಭಾರತ ಮಾತಾ ಕೀ ಜೈ ಮುಂತಾದ ಜಯಘೋಷಗಳೊಂದಿಗೆ ಬೈಕ್ ರ್ಯಾಲಿಯಲ್ಲಿ ಕಾರ್ಯಕರ್ತರು ಅತಿ ಉತ್ಸಾಹದಿಂದ ಪಾಲ್ಗೊಂಡಿದ್ದರು.
ನಾಳೆಯಿಂದ ಆರಂಭವಾಗಲಿರುವ ಹರ ಘರ ತಿರಂಗಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಈ ಬೈಕ್ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು. ಮೂಡಲಗಿ ಪಟ್ಟಣಕ್ಕೆ ಬೈಕ್ ರ್ಯಾಲಿ ಆಗಮಿಸುತ್ತಿದ್ದಂತೆಯೇ ದೇಶಪ್ರೇಮವನ್ನು ಬಿಂಬಿಸುವ ವೇದ ಘೋಷಗಳು ಕಾರ್ಯಕರ್ತರಿಂದ ಕೂಗಿ ಬಂದವು. ಪಟ್ಟಣದಲ್ಲಿ ಎಲ್ಲಿ ನೋಡಿದರಲ್ಲಿ ರಾಷ್ಟ್ರಧ್ವಜಗಳು ಹಾರಾಡುತ್ತಿದ್ದವು. ಇಡೀ ಪಟ್ಟಣ ದೇಶಪ್ರೇಮದಲ್ಲಿ ಮುಳುಗಿತ್ತು.
ಗೋಕಾಕದ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಸರ್ವೋತ್ತಮ ಜಾರಕಿಹೊಳಿ ಭಾರತಾಂಬೆಗೆ ಪೂಜೆ ಸಲ್ಲಿಸುವ ಮೂಲಕ ಬೈಕ್ ರ್ಯಾಲಿಗೆ ಚಾಲನೆ ನೀಡಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾಶ ಪಾಟೀಲ, ಅರಭಾಂವಿ ಮಂಡಲ ಬಿಜೆಪಿ ಅಧ್ಯಕ್ಷ ಮಹಾದೇವ ಶೆಕ್ಕಿ, ಶಾಸಕರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ, ಮುಖಂಡರಾದ ರಾಜು ಬೈರುಗೋಳ, ಅಶೋಕ ಖಂಡ್ರಟ್ಟಿ, ವಿಠ್ಠಲ ಪಾಟೀಲ, ಮೂಡಲಗಿ ಪುರಸಭೆ ಅಧ್ಯಕ್ಷ ಹಣಮಂತ ಗುಡ್ಲಮನಿ, ಗಿರೀಶ ಢವಳೇಶ್ವರ, ರವಿ ಸಣ್ಣಕ್ಕಿ, ಮರೆಪ್ಪ ಮರೆಪ್ಪಗೋಳ, ಅನ್ವರ ನದಾಫ, ಬಿಜೆಪಿ ಪದಾಧಿಕಾರಿಗಳಾದ ಭೀಮಶಿ ಮಾಳೇದವರ, ಆನಂದ ಮೂಡಲಗಿ, ಮುತ್ತೆಪ್ಪ ಮನ್ನಾಪೂರ, ಪ್ರಮೋದ ನುಗ್ಗಾನಟ್ಟಿ, ಇಕ್ಬಾಲ್ ಸರ್ಕಾವಸ, ಈರಪ್ಪ ಢವಳೇಶ್ವರ, ಮಹಾಂತೇಶ ಕುಡಚಿ, ಅರಭಾಂವಿ ಮತಕ್ಷೇತ್ರದ ಹಲವಾರು ಮುಖಂಡರು, ಈ ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.
ನಾಳೆಯಿಂದ ಹರ ಘರ ತಿರಂಗಾ ಅಭಿಯಾನವನ್ನು ಯಶಸ್ವಿಗೊಳಿಸಬೇಕು. 75ನೇ ಸ್ವಾತಂತ್ರೋತ್ಸವನ್ನು ಸಡಗರ ಸಂಭ್ರಮದಿಂದ ಆಚರಿಸೋಣ. ಪ್ರತಿ ಮನೆಗಳ ಮೇಲೆ ರಾಷ್ಟ್ರಧ್ವಜವನ್ನು ಹಾರಿಸುವ ಮೂಲಕ ರಾಷ್ಟ್ರಪ್ರೇಮವನ್ನು ಎತ್ತಿ ಹಿಡಿಯೋಣ, ಈ ಆಚರಣೆಯಲ್ಲಿ ಪಾಲ್ಗೊಳ್ಳುವ ನಾವೆಲ್ಲರೂ ದೇಶದ ಅಸ್ಮಿತೆಯ ಪ್ರತಿಕವಾದ ತ್ರೀವರ್ಣ ಧ್ವಜವನ್ನು ಗೌರವ ರೀತಿಯಲ್ಲಿ ಹಾರಿಸಿ ನಂತರ ಧ್ವಜವು ಎಲ್ಲೆಂದರಲ್ಲಿ ಬೀಳದಂತೆ ನೋಡಿಕೊಂಡು ದೇಶ ಭಕ್ತಿಯನ್ನು ಮೆರೆಯೋಣ.*
*ಕೆಎಮ್‍ಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ*


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

ಶಿಗ್ಗಾವಿಯಲ್ಲಿ ಕಾಂಗ್ರೆಸ್ ಗೆದ್ದರು, ಮೈ ಮರೆಯದ ಸಂಘಟನೆಗಳು: ಹಳ್ಳಿಗಳಿಗೆ ತೆರಳಿ ಮತದಾರರಿಗೆ ಕೃತಜ್ಞತೆ

ಹಾವೇರಿ: ಶಿಗ್ಗಾವಿ-ಸವಣೂರು ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ‌ಅಭ್ಯರ್ಥಿ ಲಕ್ಷಕ್ಕೂ ಅಧಿಕ‌ ಮತಗಳನ್ನು ಪಡೆದು ಶಾಸಕರಾಗಿ ಆಯ್ಕೆಯಾಗಿದ್ದರೂ, ಸಂಘಟನೆಗಳು ಮಾತ್ರ ಮೈ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ