ಮೂಡಲಗಿ: ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಪ್ರಯತ್ನದಿಂದಾಗಿ ಅವರಾದಿ-ತಿಮ್ಮಾಪೂರ ರಸ್ತೆ ಅಭಿವೃದ್ಧಿಗೆ 18 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಅವರಾದಿ ಗ್ರಾಪಂ ಅಧ್ಯಕ್ಷೆ ಸವಿತಾ ಚಂದ್ರಶೇಖರ ನಾಯಿಕ ತಿಳಿಸಿದರು.
ತಾಲೂಕಿನ ಅವರಾದಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಮಂಜೂರಾದ 18 ಕೋಟಿ ರೂ ವೆಚ್ಚದ ಅವರಾದಿ-ತಿಮ್ಮಾಪೂರ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಈ ರಸ್ತೆ ಕಾಮಗಾರಿಯಿಂದ ಅವರಾದಿಯಿಂದ ಹಳೇಯರಗುದ್ರಿ, ಹೊಸಯರಗುದ್ರಿ ಮೂಲಕ ತಿಮ್ಮಾಪೂರ ರಸ್ತೆ ಅಭಿವೃದ್ಧಿಯಾಗಲಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ಎಂ.ಎಂ. ಪಾಟೀಲ, ಜಿಪಂ ಮಾಜಿ ಸದಸ್ಯ ಗೋವಿಂದ ಕೊಪ್ಪದ, ನಿಂಗಪ್ಪಗೌಡ ನಾಡಗೌಡ, ಗ್ರಾಪಂ ಉಪಾಧ್ಯಕ್ಷ ಸಂಜುಗೌಡ ಪಾಟೀಲ, ನ್ಯಾಯವಾದಿ ಮಲ್ಲನಗೌಡ ಪಾಟೀಲ, ಕಲ್ಲಪ್ಪ ರಂಜಣಗಿ, ಶ್ರೀಶೈಲ ಭಜಂತ್ರಿ, ಮಾರುತಿ ಹರಿಜನ, ಪ್ರಭಾಶುಗರ ನಿರ್ದೇಶಕ ಗಿರೀಶ ಹಳ್ಳೂರ, ಸಿದ್ಧಾರೂಢ ಮಬನೂರ, ಎಚ್.ಎಸ್. ಪಾಟೀಲ, ಅರ್ಜುನಗೌಡ ಪಾಟೀಲ, ತಮ್ಮಾಣೆಪ್ಪ ಬಿ.ಪಾಟೀಲ, ರಾಮಣ್ಣಾ ಕಾಳಶೆಟ್ಟಿ, ಶಂಕರ ಹವಳೆಪ್ಪಗೋಳ, ಹನಮಂತಗೌಡ ಚನ್ನಾಳ, ಭೀಮಶಿ ಬಿ.ಪಾಟೀಲ, ಸಂಗಪ್ಪ ಕಂಟಿಕಾರ, ಹನಮಂತ ಡೊಂಬರ, ಚತ್ರಪ್ಪ ಮೇತ್ರಿ, ಪಿಡಿಓ ಶಿವಲೀಲಾ ದಳವಾಯಿ, ಗುತ್ತಿಗೆದಾರ ಸುಧಾಕರ ಶೆಟ್ಟಿ ಸೇರಿದಂತೆ ಅವರಾದಿ, ಹಳೇಯರಗುದ್ರಿ, ಹೊಸಯರಗುದ್ರಿ ಮತ್ತು ತಿಮ್ಮಾಪೂರ ಗ್ರಾಮಗಳ ಮುಖಂಡರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.