ಬೆಳಗಾವಿ : ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಬೆಳಗಾವಿ ಜಿಲ್ಲಾ ಘಟಕದ ವಾರ್ಷಿಕ ಸಾಮಾನ್ಯ ಸಭೆ ನಡೆಯಿತು.
ಬೆಳಗಾವಿಯ ಸದಾಶಿವ ನಗರದ ಚೌಗುಲೆ ಬಿಲ್ಡಿಂಗ್‍ನಲ್ಲಿ ಶನಿವಾರ ಇಂದು ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಸಭೆ ನಡೆಯಿತು. ಈ ಸಭೆಯಲ್ಲಿ ಕೋವಿಡ್ ಸಂದರ್ಭದಲ್ಲಿ ಸಾವನ್ನಪ್ಪಿದ ಪತ್ರಕರ್ತರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಇನ್ನು ಇದೇ ಸಂದರ್ಭದಲ್ಲಿ ಮಾತನಾಡಿದ ಡಾ॥ ಭೀಮಶಿ ಜಾರಕಿಹೊಳಿರವರು, ರಾಜ್ಯದಲ್ಲಿ ಹೇಗೆ ವಿಧಾನ ಸೌಧವಿದೇಯೋ ಅದೇ ರೀತಿಯಲ್ಲಿ ರಾಜ್ಯಕ್ಕೇ ಮಾದರಿಯಾದ ಒಂದು ಪತ್ರಕರ್ತರ ಭವನ ನಿರ್ಮಾಣವಾಗಬೇಕು.ಅದಕ್ಕಾಗಿ ನಾವು ಈಗಾಗಲೇ ನಿವೇಶನವನ್ನು ಹುಡುಕುತ್ತಿದ್ದೇವೆ. ಇನ್ನು ಈಗಾಗಲೇ ಸುಮಾರು 5 ಸಾವಿರ ಭಾರತೀಯರನ್ನು ವಿದೇಶದಲ್ಲಿ ಕರೆಸಿ ಕಾರ್ಯಕ್ರಮವೊಂದನ್ನು ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಇದು ಅಂತರಾಷ್ಟ್ರಯ ಮಟ್ಟದಲ್ಲಿಯೇ ಮಾದರಿಯಾಗಲಿದೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಪತ್ರಕರ್ತರಾದ ದಿಲೀಪ್ ಕುರುಂದವಾಡೆ, ನಾವು ನಮ್ಮ ಸಂಸ್ಥೆಯ ವತಿಯಿಂದ ಸಮಾಜಕ್ಕಾಗಿ ಏನನ್ನಾದರೂ ಮಾಡಬೇಕು. ಈ ನಿಟ್ಟಿನಲ್ಲಿ ನಾವು ಏನನ್ನೂ ಹೊರಗಡೆ ಹೇಳಿಕೊಂಡಿಲ್ಲ. ಹಾಗಾಗಿ ಯಾರಿಗೂ ಈ ಕುರಿತಂತೆ ತಿಳಿದಿಲ್ಲ. ನಾವು ಪತ್ರಿಕಾ ಭವನವೊಂದನ್ನು ಮಾಡಬೇಕೆಂಬ ಗುರಿ ಹೊಂದಿದ್ದೇವೆ. ಆದರೆ ಸರಕಾರ ಈಗಾಗಲೇ ತನ್ನದೇ ಆದ ಖರ್ಚಿನಲ್ಲಿ ಪತ್ರಿಕಾ ಭವನ ನಿರ್ಮಾಣಕ್ಕೆ ಸಹಾಯ ನೀಡಿದೆ. ಆದರೆ ನಾವು ಸುಮಾರು 5ಕೋಟಿ ರೂ ವೆಚ್ಚದಲ್ಲಿ ರೆಡ್ಡಿ ಭವನದಂತೆ ವಿದ್ಯಾರ್ಥಿನಿಲಯ ಆಧಾರಿತ ಪತ್ರಿಕಾ ಭವನಕ್ಕೆ ಈಗಾಗಲೇ ಚಿಂಚನೆ ಮಾಡುತ್ತಿದ್ದೇವೆ ಎಂದರು.
ಪತ್ರಕರ್ತರ ಸಂಘದ ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀ ಭೀಮಶಿ ಜಾರಕಿಹೊಳಿ, ಶ್ರೀ ರಾಜಶೇಖರ್ ಪಾಟೀಲ್, ಪುಂಡಲೀಕ ಬಾಳೋಜಿ, ಯಲ್ಲಪ್ಪ ತಳವಾರ್, ಸುಕುಮಾರ್ ಬನ್ನೂರೆ, ಸುರೇಶ್ ಪಾಟೀಲ್, ಕಾರ್ಯದರ್ಶಿಗಳಾದ ದಿಲೀಪ್ ಕುರುಂಡವಾಡೆ ಮೊದಲಾದ ಪತ್ರಕರ್ತ ಬಾಂಧವರು ಉಪಸ್ಥಿತರಿದ್ದರು.