Breaking News

ಕೋವಿಡ್ ನಿರ್ಮೂಲನೆಗಾಗಿ ಸರ್ಕಾರದ ನಿರ್ದೇಶನಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿ : ಶಾಸಕ ಬಾಲಚಂದ್ರ ಜಾರಕಿಹೊಳಿ


ಮೂಡಲಗಿ : ಕೋವಿಡ್ ಸೋಂಕಿನ ಸಂರಕ್ಷಣೆಗಾಗಿ ಅರಭಾಂವಿ ವಿಧಾನಸಭಾ ಮತಕ್ಷೇತ್ರದಲ್ಲಿ ಶೇ.60ರಷ್ಟು ಲಸಿಕೆಗಳನ್ನು ನೀಡಲಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

ಶುಕ್ರವಾರದಂದು ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅವರು, ನಿಗದಿತ ಗುರಿ ತಲುಪಲು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿರುವದಾಗಿ ಹೇಳಿದರು. ಅರಭಾವಿ ಕ್ಷೇತ್ರದಾದ್ಯಂತ 2.95 ಲಕ್ಷ ಜನರಿಗೆ ಲಸಿಕೆ ಗುರಿಯನ್ನು ಹೊಂದಿದ್ದು, ಇಲ್ಲಿಯವರಿಗೆ ಸುಮಾರು 1.60 ಲಕ್ಷ ಜನರಿಗೆ ಲಸಿಕೆಗಳನ್ನು ಹಾಕಲಾಗಿದ್ದು, ಕೊವೀಡ್ ಹೊಗಲಾಡಿಸಲು ನಾವೆಲ್ಲರೂ ಪಣ ತೊಡಬೇಕಿದೆ, ಲಸಿಕೆ ಹಾಕುವ ಅಭಿಯಾನ ಇನ್ನೂ ಪ್ರಗತಿಯಲ್ಲಿದ್ದು, ಒಟ್ಟಾರೆ 18 ವರ್ಷ ಮೇಲ್ಪಟ್ಟ ನಾಗರಿಕರಿಗೆ ಶೇ.100 ರಷ್ಟು ಲಸಿಕೆ ಹಾಕಿಸುವ ಗುರಿಯನ್ನು ತಲುಪುವದಾಗಿ ಅವರು ಹೇಳಿದರು.

ಕೊವೀಡ್ ಮಹಾಮಾರಿ ದೊಡ್ಡ ಸವಾಲಾಗಿದ್ದು, ಇದನ್ನು ಸಮರ್ಥವಾಗಿ ಎದುರಿಸಲು ರಾಜ್ಯ ಹಾಗೂ ಕೇಂದ್ರ ಸರಕಾರಗಳು ಹಲವಾರು ಕಾರ್ಯಕ್ರಮಗಳನ್ನು ರೂಪಿಸಿವೆ, ಭಾರತವನ್ನು ಕೊವಿಡ್‍ದಿಂದ ನಿರ್ಮೂಲನೆ ಮಾಡಲು ಪ್ರಧಾನಿ ನರೇಂದ್ರ ಮೋದಿ  ಅವರು ಅವಿರತವಾಗಿ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.

ಲಸಿಕಾ ಮೇಗಾ ಮೇಳ ಯಶಸ್ವಿ: ನವಭಾರತ ನಿರ್ಮಾಣದ ಭಗೀರಥ, ಭಾರತೀಯರ ಆಶಾಕಿರಣ ಪ್ರಧಾನಿ ನರೇಂದ್ರ ಮೋದಿ ಅವರು  ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಅರಭಾವಿ ಮತ್ತ ಕ್ಷೇತ್ರದಲ್ಲಿ ಸುಮಾರು 25123 ಜನರಿಗೆ ಲಸಿಕೆಗಳನ್ನು ನೀಡಲಾಗಿದೆ, 27 ಸಾವಿರ ಜನರಿಗೆ ಕೊವಿಡ್ ಲಸಿಕೆಗಳನ್ನು ನೀಡುವ ಗುರಿ ಹೊಂದಲಾಗಿತ್ತು, ಸುಮಾರು 123 ಲಸಿಕಾ ಕೇಂದ್ರಗಳನ್ನು ಕ್ಷೇತ್ರದ್ಯಾಂತ ತೆರೆಯಲಾಗಿದ್ದು, ಲಸಿಕಾ ಮೇಳ ಯಶಸ್ವಿಯಾಗಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ವಿಶ್ವದ ಅಗ್ರ ನಾಯಕ ಮೋದಿ : ವಿಶ್ವದ ಅಗ್ರಗಣ್ಯ ನಾಯಕರಲ್ಲಿ ಭಾರತದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರು ಸೇರಿದ್ದು, ವಿಶ್ವಕಂಡ ಶ್ರೇಷ್ಠ ಪ್ರಧಾನಿ ಮೋದಿ ಅವರೆಂದು  ಕೆ.ಎಂ.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಬಣ್ಣಿಸಿದರು.

ಶುಕ್ರವಾರದಂದು 71ನೇ ಜನ್ಮ ದಿನಕ್ಕೆ ಕಾಲಿಟ್ಟ ಪ್ರಧಾನಿಗಳಿಗೆ ಶುಭ ಕೋರಿರುವ ಅವರು, ದಿನಕ್ಕೆ 18 ತಾಸು ಕರ್ತವ್ಯ ನಿರ್ವಹಿಸುವ ಕ್ರಿಯಾಶೀಲ ಗುಣವನ್ನು ಪ್ರಧಾನಿಗಳು ಹೊಂದಿದ್ದಾರೆ, ಜಾಗತಿಕ ಮಟ್ಟದಲ್ಲಿ ಭಾರತವನ್ನು ಹೊಸ ದಿಕ್ಕಿಗೆ ಒಯ್ದಿದ್ದಾರೆ. ಜಗತ್ತಿನ ಅತೀ ದೊಡ್ಡ ಹಾಗೂ ವೇಗದ ಲಸಿಕೆಯಲ್ಲಿ ಇದುವರಿಗೂ ಸುಮರು 75 ಕೋಟಿಗೂ ಅಧಿಕ ಜನರಿಗೆ ಲಸಿಕೆ ಹಾಕಿದ್ದು ಇದೊಂದು ದಾಖಲೆಯಾಗಿದೆ ಎಂದು ಹೇಳಿರುವ ಅವರು ಭಾರತವನ್ನು ಅಭಿವೃದ್ಧಿಶೀಲ ರಾಷ್ಟ್ರವನ್ನಾಗಿ ಮಾಡುವ ಸಂಕಲ್ಪಕ್ಕೆ ನಾವೆಲ್ಲರೂ ಕೈ ಜೊಡಿಸಬೇಕು, ಜೊತೆಗೆ ಕೊವಿಡ್ ನಿರ್ಮೂಲನೆಗಾಗಿಯು ಸರಕಾರದ ನಿರ್ದೇಶನಗಳನ್ನು ಕಟ್ಟು ನಿಟ್ಟಾಗಿ ಜಾರಿಗೆ ತರಬೇಕಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

ಝಣ ಝಣ ಕಾಂಚಾಣ… ಉಪತಹಸೀಲ್ದಾರ್ ಎಸಿಬಿ ಬಲೆಗೆ!

ಬೆಂಗಳೂರು : ಬೆಂಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಎಸಿಬಿ ಲಂಚಬಾಕ ಅಧಿಕಾರಿಯನ್ನು ಬಲೆಗೆ ಕೆಡವಿದೆ. ಜಿಲ್ಲಾಧಿಕಾರಿ ಮಂಜುನಾಥ್ ಜೊತೆಯಲ್ಲಿ ಕರ್ತ್ಯವ್ಯವನ್ನು ನಿರ್ವಹಿಸುತ್ತಿದ್ದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ